ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಇಲ್ಲ ಧೋನಿ ಇಲ್ಲ.. ವಾರ್ನ್ ಹೆಸರಿಸಿದ 'ಸಾರ್ವಕಾಲಿಕ ಟೀಮ್ ಇಂಡಿಯಾ'ದಲ್ಲಿ ಅಚ್ಚರಿಯೋ ಅಚ್ಚರಿ

Shane Warne Picks All-Time India Xi: Sourav Ganguly To Lead

ಆಸ್ಟ್ರೇಲಿಯಾದ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚಟುವಟಿಕೆಯಿಂದಿರವ ವ್ಯಕ್ತಿ. ನಿವೃತ್ತಿಕ ಆದ ಬಳಿಕವೂ ವಾರ್ನ್ ಯಾವಾಗಲು ಸುದ್ದಿಯಲ್ಲಿರುತ್ತಾರೆ. ಮೊನ್ನೆಯಷ್ಟೇ ಸಚಿನ್ ತೆಂಡೂಲ್ಕರ್ ಮತ್ತು ಲಾರಾ ವಿಚಾರವಾಗಿ ಹೇಳಿಕೆಯನ್ನು ನೀಡಿದ್ದ ವಾರ್ನ್ ಈಗ ಸಾರ್ವಕಾಲಿಕ ಟೀಮ್ ಇಂಡಿಯಾ ವನ್ನು ಹೆಸರಿಸಿದ್ದಾರೆ.

ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಭಾರತದ ಆಲ್‌ಟೈಮ್ ಪ್ಕೇಯಿಂಗ್ XI ತಂಡವನ್ನು ಹೆಸರಿಸಿದ್ದು ಸಾಕಷ್ಟು ಅಚ್ಚರಿಯನ್ನು ನೀಡಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ತನ್ನ ಆಲ್‌ಟೈಮ್ ಫ್ಲೇಯಿಂಗ್ xi ತಂಡವನ್ನು ಶೇನ್ ವಾರ್ನ್ ಹೆಸರಿಸಿದ್ದಾರೆ.

ಹಾಗಾದರೆ ಶೇನ್ ವಾರ್ನ್ ಹೆಸರಿಸಿದ ಸಾರ್ವಕಾಲಿಕ ಟೀಮ್ ಇಂಡಿಯಾ ತಂಡ ಹೇಗಿದೆ. ಯಾಕೆ ಈ ತಂಡ ಸಾಕಷ್ಟು ಅಚ್ಚರಿಯಿಂದ ಕೂಡಿದೆ. ಮುಂದೆ ಓದಿ

ಕೊಹ್ಲಿ, ರೋಹಿತ್‌ಗೆ ಜಾಗವಿಲ್ಲ

ಕೊಹ್ಲಿ, ರೋಹಿತ್‌ಗೆ ಜಾಗವಿಲ್ಲ

ಶೇನ್ ವಾರ್ನ್ ಹೆಸರಿಸಿದ ಈ ತಂಡವನ್ನು ನೋಡಿದರೆ ನಿಮಗೆ ದೊಡ್ಡ ಶಾಕ್ ಉಂಟಾದರೆ ಅಚ್ಚರಿಯಿಲ್ಲ. ಆದಕ್ಕೆ ಕಾರಣ ಟೀಮ್ ಇಂಡಿಯಾದಲ್ಲಿ ಸದ್ಯ ಮಿಂಚು ಹರಿಸುತ್ತಿರುವ ಆಟಗಾರ ವಿರಾಟ್ ಕೊಹ್ಲಿಯ ಹೆಸರಿಲ್ಲದಿರವುದು. ವಿರಾಟ್ ಮಾತ್ರವಲ್ಲ ಟೀಮ್ ಇಂಡಿಯಾದ ಮತ್ತೋರ್ವ ಆಟಗಾರ ರೋಹಿತ್ ಶರ್ಮಾ ಕೂಡ ಈ ತಂಡದಲ್ಲಿ ಜಾಗವನ್ನು ಪಡೆದುಕೊಂಡಿಲ್ಲ.

ವಿಕೆಟ್ ಕೀಪರ್ ಧೋನಿ ಅಲ್ಲ ನಯನ್ ಮೋಂಗಿಯಾ

ವಿಕೆಟ್ ಕೀಪರ್ ಧೋನಿ ಅಲ್ಲ ನಯನ್ ಮೋಂಗಿಯಾ

ಈ ತಂಡ ಮತ್ತೊಂದು ಅಚ್ಚರಿಯೇನೆಂದರೆ ವಿಕೆಟ್ ಕೀಪಿಂಗ್. ಟೀಮ್ ಇಂಡಿಯಾ ಕಂಡ ಅದ್ಭುತ ವಿಕೆಟ್ ಕೀಪರ್ ಫಿನಿಷರ್ ಧೋನಿ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಈ ಸ್ಥಾನವನ್ನು ಶೇನ್ ವಾರ್ನ್ ಧೋನಿಗೆ ನೀಡಿಲ್ಲ. ಧೋನಿ ಕೂಡ ಈ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿಲ್ಲ. ನಯನ್ ಮೋಂಗಿಯಾ ಈ ತಂಡದ ವಿಕೆಟ್ ಕೀಪರ್ ಆಗಿದ್ದಾರೆ.

ಸೆಹ್ವಾಗ್‌ಗೆ ಸಿದ್ದು ಜೊತೆಗಾರ

ಸೆಹ್ವಾಗ್‌ಗೆ ಸಿದ್ದು ಜೊತೆಗಾರ

ಆರಂಭಿಕನಾಗಿ ವೀರೆಂದ್ರ ಸೆಹ್ವಾಗ್ ಅವರಿಗೆ ವಾರ್ನ್ ನವಜೋತ್ ಸಿಂಗ್ ಸಿದ್ದು ಅವರನ್ನು ಆಯ್ಕೆ ಮಾಡಿದ್ದಾರೆ. ಅದಾದ ಬಳಿಕದ ಸ್ಥಾನವನ್ನು ಕ್ರಮವಾಗಿ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಮೊಹಮದ್ ಅಜರುದ್ದೀನ್ ಮತ್ತು ಸೌರವ್ ಗಂಗೂಲಿಗೆ ನೀಡಿದ್ದಾರೆ.

ಸೌರವ್ ಗಂಗೂಲಿ ನಾಯಕ

ಸೌರವ್ ಗಂಗೂಲಿ ನಾಯಕ

ಶೇನ್ ವಾರ್ನ್ ಹೆಸರಿಸಿದ ಈ ಸಾರ್ವಕಾಲಿಕ ತಂಡದ ನಾಯಕತ್ವವನ್ನು ಸೌರವ್ ಗಂಗೂಲಿಗೆ ನೀಡಲಾಗಿದೆ. ನಾಯಕತ್ವದಲ್ಲಿ ಸೌರವ್ ಗಂಗೂಲಿಗೆ ಜಿದ್ದಾಜಿದ್ದಿ ನೀಡಬಲ್ಲ ಮೂವರು ಆಟಗಾರರಿದ್ದಾರೆ. ಅಜರುದ್ದೀ್ ಜೊತೆಗೆ ಕಪಿಲ್ ದೇವ್ ಕೂಡ ಈ ತಂಡದಲ್ಲಿದ್ದಾರೆ.

ಬೌಲಿಂಗ್ ವಿಭಾಗ

ಬೌಲಿಂಗ್ ವಿಭಾಗ

ಬೌಲಿಂಗ್ ವಿಭಾಗದಲ್ಲಿ ಕಪಿಲ್ ದೇವ್ ಜೊತೆಗೆ ಜಾವಗಲ್ ಶ್ರೀನಾಥ್, ಹರ್ಭಜನ್ ಸಿಂಗ್ ಮತ್ತು ಅನಿಲ್ ಕುಂಬ್ಳೆಯವರನ್ನು ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಆಯ್ಕೆ ಮಾಡಿದ್ದಾರೆ.

ಕೊಹ್ಲಿ ಧೋನಿ ಕೈಬಿಡಲು ಕಾರಣವಿದೆ

ಕೊಹ್ಲಿ ಧೋನಿ ಕೈಬಿಡಲು ಕಾರಣವಿದೆ

ಈ ತಂಡವನ್ನು ನೋಡಿದರೆ ಸಹಜವಾಗಿಯೇ ಅಚ್ಚರಿಗೆ ಕಾರಣವಾಗುತ್ತದೆ. ಪ್ರಸಕ್ತ ಯಾವ ಆಟಗಾರನೂ ಈ ತಂಡದಲ್ಲಿಲ್ಲದಿರುವುದು ಅದಕ್ಕೆ ಕಾರಣ. ರನ್ ಮಷೀನ್ ಕೊಹ್ಲಿ, ಧೋನಿ ಅವರಿಗೆ ಸ್ಥಾನವಿಲ್ಲ. ಅದಕ್ಕೆ ಕಾರಣವನ್ನು ನೀಡಿದ್ದಾರೆ ಶೇನ್ ವಾರ್ನ್. ಶೇನ್ ವಾರ್ನ್ ಆಡುತ್ತಿದ್ದ ಕಾಲದ ಆಟಗಾರರನ್ನು ಮಾತ್ರವೇ ತಾನು ಈ ತಂಡದಲ್ಲಿ ಆಯ್ಕೆ ಮಾಡಿದ್ದೇನೆ ಎಂದು ಕಾರಣವನ್ನು ನೀಡಿದ್ದಾರೆ ವಾರ್ನ್.

ವಾರ್ನ್ ತಂಡ ಹೀಗಿದೆ

ವಾರ್ನ್ ತಂಡ ಹೀಗಿದೆ

ವೀರೇಂದ್ರ ಸೆಹ್ವಾಗ್, ನವಜೋತ್ ಸಿಂಗ್ ಸಿಧು, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಅಜರುದ್ದೀನ್, ಸೌರವ್ ಗಂಗೂಲಿ (ನಾಯಕ), ಕಪಿಲ್ ದೇವ್, ನಯನ್ ಮೊಂಗಿಯಾ (ವಿಕೆಟ್ ಕೀಪರ್), ಹರ್ಭಜನ್ ಸಿಂಗ್, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ.

Story first published: Wednesday, April 1, 2020, 17:43 [IST]
Other articles published on Apr 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X