ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ರನ್‌ಔಟ್‌ಗೆ ನಿರಾಸೆ ವ್ಯಕ್ತಪಡಿಸಿದ ಶೇನ್‌ವಾರ್ನ್

Shane Warne Reaction To Virat Kohlis Run-Out In Adelaide

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಸಾಧಾರಣ ಮೊತ್ತವನ್ನು ಪೇರಿಸಲಷ್ಟೇ ಶಕ್ತವಾಗಿದೆ. ಭಾರತದ ಇನ್ನಿಂಗ್ಸ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ ಅದ್ಭುತವಾಗಿ ಇನ್ನಿಂಗ್ಸ್ ಕಟ್ಟುತ್ತಿದ್ದರು. ಅರ್ಧ ಶತಕವನ್ನು ಬಾರಿಸಿ ಮುನ್ನಗ್ಗುತ್ತಿದ್ದ ಕೊಹ್ಲಿ ಬೃಹತ್ ಮೊತ್ತ ಪೇರಿಸುವ ಸೂಚನೆ ನೀಡಿದ್ದರು. ಆದರೆ ರನ್ ಕದಿಯುವ ಗೊಂದಲದಲ್ಲಿ ಕೊಹ್ಲಿ ರನ್‌ಔಟ್‌ಗೆ ಬಲಿಯಾದರು.

ವಿರಾಟ್ ಕೊಹ್ಲಿ ರನ್‌ಔಟ್ ಆಸ್ಟ್ರೇಲಿಯಾ ಇನ್ನಿಂಗ್ಸ್‌ಗೆ ದೊಡ್ಡ ತಿರುವು ನೀಡಿತು. ಬಳಿಕ ಟೀಮ್ ಇಂಡಿಯಾ ವಿಕೆಟ್‌ಗಳನ್ನು ಕಳೆದುಕೊಳ್ಳಲು ಆರಂಬಿಸಿತು. ಹೀಗಾಗಿ ಕೊಹ್ಲಿಯನ್ನು ರನ್‌ಔಟ್ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾದ ಆಸ್ಟ್ರೇಲಿಯಾ ಆಟಗಾರರು ಸಂಭ್ರಮಿಸಿದರು. ಅತ್ತ ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಶೇನ್ ವಾರ್ನ್ ಕೊಹ್ಲಿ ರನ್‌ಔಟ್ ಆದ ಬಗ್ಗೆ ನಿರಾಸೆ ವ್ಯಕ್ತಪಡಿಸಿದರು.

ಭಾರತ vs ಆಸೀಸ್: ವಿರಾಟ್ ಕೊಹ್ಲಿ ಬೆರಳಲ್ಲಿ ರಕ್ತ ಬರಿಸಿದ ಸ್ಟಾರ್ಕ್ಭಾರತ vs ಆಸೀಸ್: ವಿರಾಟ್ ಕೊಹ್ಲಿ ಬೆರಳಲ್ಲಿ ರಕ್ತ ಬರಿಸಿದ ಸ್ಟಾರ್ಕ್

ಕ್ರಿಕೆಟ್ ಪ್ರೇಮಿಯಾಗಿ ತಾನು ಕುಡ ವಿರಾಟ್ ಕೊಹ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟುವ ಬಗ್ಗೆ ನಿರೀಕ್ಷೆಯನ್ನು ಹೊಂದಿದ್ದೆ. ಆದರೆ ವಿರಾಟ್ ಕೊಹ್ಲಿ ಶೀಘ್ರವಾಗಿ ರನ್ ಔಟ್ ಆಗಿ ವಿಕೆಟ್ ಒಪ್ಪಿಸಿರುವುದು ನಿರಾಸೆ ಮೂಡಿಸಿದೆ. ಕ್ರಿಕೆಟ್ ಪ್ರೇಮಿಯಾಗಿ ತನಗೆ ಇದು ನಿಜಕ್ಕೂ ಅಸಮಾಧಾನದ ಸಂಗತಿ ಎಂದು ಶೇನ್ ವಾರ್ನ್ ತಮ್ಮ ನಿರಾಸೆಯನ್ನು ಟ್ವೀಟ್‌ನಲ್ಲಿ ವ್ಯಕ್ತಪಡಿಸಿದ್ದಾರೆ.

ನಿಧಾನ ಗತಿಯಲ್ಲಿ ಇನ್ನಿಂಗ್ಸ್ ಆರಂಭಿಸಿದ್ದ ವಿರಾಟ್ ಕೊಹ್ಲಿ ಅದ್ಭುತವಾಗಿ ಪ್ರದರ್ಶನ ನೀಡುತ್ತಿದ್ದರು. ಸುದೀರ್ಘ ಕಾಲದ ಬಳಿಕ ಶತಕವನ್ನು ಗಳಿಸುವ ನಿರೀಕ್ಷೆಯನ್ನೂ ಹುಟ್ಟಿಸಿದ್ದರು. ಆದರೆ ರಹಾನೆ ಬಾರಿಸಿದ ಹೊಡೆತದಲ್ಲಿ ರನ್ ಕದಿಯಲು ಮುಂದಾಗಿ ವಿರಾಟ್ ವಿಕೆಟ್ ಕಳೆದು ಕೊಂಡರು.

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 244 ರನ್‌ಗಳಿಗೆ ಆಲೌಟ್ ಆಗಿದೆ. ಭಾರತದ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಏಕೈಕ ಅರ್ಧ ಶತಕವನ್ನು ಬಾರಿಸಿದ ಆಟಗಾರನಾಗಿದ್ದಾರೆ. ಅಜಿಂಕ್ಯ ರಹಾನೆ ಜಾಗೂ ಚೇತೇಶ್ವರ್ ಪೂಜಾರ 40+ ರನ್ ಬಾರಿಸಿದ್ದಾರೆ.

Story first published: Friday, December 18, 2020, 11:54 [IST]
Other articles published on Dec 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X