ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಕ್ರಿಕೆಟ್‌: ಬಿಗ್‌ ಬ್ಯಾಷ್‌ ಲೀಗ್‌ಗೆ ಶೇನ್‌ ವ್ಯಾಟ್ಸನ್‌ ಗುಡ್‌ ಬೈ

Shane Watson has announced his retirement from Big Bash League

ಸಿಡ್ನಿ, ಏಪ್ರಿಲ್‌ 26: ವಿಶ್ವ ಕಂಡ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಆಸ್ಟ್ರೇಲಿದ ಮಾಜಿ ಕ್ರಿಕೆಟಿಗ ಶೇನ್‌ ವ್ಯಾಟ್ಸನ್‌, ಆಸೀಸ್‌ನ ಟಿ20 ಕ್ರಿಕೆಟ್‌ ಟೂರ್ನಿ ಬಿಬ್‌ ಬ್ಯಾಷ್‌ ಲೀಗ್‌(ಬಿಬಿಎಲ್‌)ಗೆ ಶುಕ್ರವಾರ ನಿವೃತ್ತಿ ಪ್ರಕಟಿಸಿದ್ದಾರೆ.

 ಬೇರೆ ತಂಡದಲ್ಲಿ ಕಿತ್ತೊಗೆಯುತ್ತಿದ್ದರು: ಶೇನ್‌ ವ್ಯಾಟ್ಸನ್‌ ಬೇರೆ ತಂಡದಲ್ಲಿ ಕಿತ್ತೊಗೆಯುತ್ತಿದ್ದರು: ಶೇನ್‌ ವ್ಯಾಟ್ಸನ್‌

ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಸಿಡ್ನಿ ಥಂಡರ್ಸ್‌ ತಂಡವನ್ನು ಮುನ್ನಡೆಸುತ್ತಿದ್ದ ಸ್ಟಾರ್‌ ಆಲ್‌ರೌಂಡರ್‌, ಕುಟುಂಬದವರೊಂದಿಗೆ ಹೆಚ್ಚು ಸಮಯ ಕಳೆಯುವ ಉದ್ದೇಶದಿಂದ ತಮ್ಮ ಬಿಬಿಎಲ್‌ ವೃತ್ತಿ ಬದುಕಿಗೆ ತೆರೆ ಎಳೆದಿದ್ದಾರೆ.

ಐಪಿಎಲ್‌: ಪಾರ್ಥಿವ್‌ ಪಟೇಲ್‌ ಫೋರ್‌ಗೆ 'ಫ**' ಎಂದ ಕೆಎಲ್‌ ರಾಹುಲ್‌ಐಪಿಎಲ್‌: ಪಾರ್ಥಿವ್‌ ಪಟೇಲ್‌ ಫೋರ್‌ಗೆ 'ಫ**' ಎಂದ ಕೆಎಲ್‌ ರಾಹುಲ್‌

ಸದ್ಯ ಇಂಡಿಯನ್‌ ಪ್ರೀಮಿರ್‌ ಲೀಗ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡುತ್ತಿರುವ ವ್ಯಾಟ್ಸನ್‌, ಇತ್ತೀಚೆಗಷ್ಟೇ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ 96 ರನ್‌ಗಳನ್ನು ಸಿಡಿಸಿ ಮಿಂಚಿದ್ದರು. ವ್ಯಾಟ್ಸನ್‌ ಐಪಿಎಲ್‌ನಲ್ಲಿ ತಮ್ಮ ಸೇವೆ ಮುಂದುವರಿಸಲಿದ್ದಾರೆ.

 ಐಪಿಎಲ್‌ 2019: ಚೆಂಡನ್ನು ಜೇಬಲಿಟ್ಟು, ಎಲ್ಲಿಟ್ಟಿದ್ದೇನೆಂದು ಮರೆತ ಅಂಪೈರ್‌! ಐಪಿಎಲ್‌ 2019: ಚೆಂಡನ್ನು ಜೇಬಲಿಟ್ಟು, ಎಲ್ಲಿಟ್ಟಿದ್ದೇನೆಂದು ಮರೆತ ಅಂಪೈರ್‌!

"ಕಳೆದ ನಾಲ್ಕು ಆವೃತ್ತಿಗಳಲ್ಲಿ ಸಿಡ್ನಿ ಥಂಡರ್ಸ್‌ ಜೊತೆಗಿದ್ದ ಪ್ರತಿಯೊಬ್ಬರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು. ತಂಡದೊಂದಿಗೆ ಹಲವು ಅಮೋಘ ಕ್ಷಣಗಳನ್ನು ಹೊಂದಿದ್ದೇನೆ. ಇವೆಲ್ಲವನ್ನೂ ನನ್ನ ಜೀವನದುದ್ದಕ್ಕೂ ಸ್ಮರಿಸಲಿದ್ದೇನೆ. 2016ರ ಬಿಬಿಎಲ್‌ ಗೆಲುವು ಅವಿಸ್ಮರಣೀಯ. ಕ್ಲಬ್‌ ಜತೆಗಿನ ನನ್ನ ಪಯಣವನ್ನು ಸ್ಮರಣೀಯವನ್ನಾಗಿಸಿದ ನಿಕ್‌ ಕಮಿನ್ಸ್‌, ಪ್ಯಾಡಿ ಅಪ್ಟನ್‌, ಲೀ ಜರ್ಮನ್‌ ಹಾಗೂ ಶೇನ್‌ ಬಾಂಡ್‌ಗೆ ಧನ್ಯವಾದಗಳು.'' ಎಂದು ಸಿಡ್ನಿ ಥಂಡರ್ಸ್‌ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ 37 ವರ್ಷದ ಆಲ್‌ರೌಂಡರ್‌ ಹೇಳಿದ್ದಾರೆ.

 ರಹಸ್ಯ ಬಿಚ್ಚಿಟ್ಟರೆ ಸಿಎಸ್‌ಕೆ ನನ್ನನ್ನು ಖರೀದಿಸುವುದಿಲ್ಲ: ಧೋನಿ ರಹಸ್ಯ ಬಿಚ್ಚಿಟ್ಟರೆ ಸಿಎಸ್‌ಕೆ ನನ್ನನ್ನು ಖರೀದಿಸುವುದಿಲ್ಲ: ಧೋನಿ

ವ್ಯಾಟ್ಸನ್‌ ಸಿಡ್ನಿ ಥಂಡರ್ಸ್‌ ಪರ ಸಾರ್ವಕಾಲಿಕ ಅತಿ ಹೆಚ್ಚು ರನ್‌ ಗಳಿಸಿದವರ ಪೈಕಿ 2ನೇ (1,014 ರನ್‌, 42 ಪಂದ್ಯ) ಸ್ಥಾನದಲ್ಲಿದ್ದಾರೆ. ಸಿಡ್ನಿ ಥಂಡರ್ಸ್‌ ತಂಡದ ಅತ್ಯಂತ ಜನಪ್ರಿಯ ಆಟಗಾರನಾಗಿರುವ ವ್ಯಾಟ್ಸನ್‌, ಕ್ಲಬ್‌ ಪರ ಒಟ್ಟಾರೆ 19 ವಿಕೆಟ್‌ಗಳನ್ನೂ ಉರುಳಿಸಿದ್ದಾರೆ. ಅಲ್ಲದೆ ತಮ್ಮ ನಾಯಕತ್ವದಲ್ಲಿ ಸಿಡ್ನಿ ತಂಡಕ್ಕೆ 2016ರ ಬಿಬಿಎಲ್‌ ಕಿರೀಟ ಗೆದ್ದುಕೊಟ್ಟಿದ್ದರು.

Story first published: Friday, April 26, 2019, 13:43 [IST]
Other articles published on Apr 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X