ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಗ್ ಬ್ಯಾಷ್ ಲೀಗ್ ನಿಯಮ ಬದಲಾವಣೆ ವಿರುದ್ಧ ಶೇನ್ ವಾಟ್ಸನ್ ಕಿಡಿ

Shane Watson slams Big Bash Leagues rule changes

ಸಿಡ್ನಿ: ಆಸ್ಟ್ರೇಲಿಯಾದ ಜನಪ್ರಿಯ ಟಿ20 ಕ್ರಿಕೆಟ್ ಟೂರ್ನಿ ಬಿಗ್ ಬ್ಯಾಷ್ ಲೀಗ್‌ನಲ್ಲಿ ನಿಯಮ ಬದಲಾಯಿಸಿರುವುದನ್ನು ಆಸ್ಟ್ರೇಲಿಯಾ ಮಾಜಿ ಆಲ್ ರೌಂಡರ್ ಶೇನ್ ವಾಟ್ಸನ್ ಟೀಕಿಸಿದ್ದಾರೆ. ಇದೊಂದು ಗಿಮಿಕ್, ದಾರಿ ತಪ್ಪಿಸುವ ಯತ್ನ ಎಂದು ಹೊಸ ನಿಯಮವನ್ನು ಕರೆದಿರುವ ವಾಟ್ಸನ್, ನಿಯಮ ಬದಲಾವಣೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಆರ್‌ಸಿಬಿಯ ನಿರಾಶಾದಾಯಕ ಆಟಗಾರನ ಹೆಸರಿಸಿದ ಆಕಾಶ್ ಚೋಪ್ರಾ! ಆರ್‌ಸಿಬಿಯ ನಿರಾಶಾದಾಯಕ ಆಟಗಾರನ ಹೆಸರಿಸಿದ ಆಕಾಶ್ ಚೋಪ್ರಾ!

10ನೇ ಆವೃತ್ತಿಯ ಬಿಗ್ ಬ್ಯಾಷ್ ಲೀಗ್‌ನಲ್ಲಿ ಮೂರು ಹೊಸ ನಿಯಮಗಳನ್ನು ತರಲು ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ನಿರ್ಧರಿಸಿತ್ತು. ಆ ಮೂರು ಹೊಸ ಬದಲಾವಣೆಗಳೆಂದರೆ ಪವರ್ ಸರ್ಜ್, ಎಕ್ಸ್ ಫ್ಯಾಕ್ಟರ್ ಪ್ಲೇಯರ್ ಮತ್ತು ಬ್ಯಾಷ್ ಬೂಸ್ಟ್. ಪಂದ್ಯದ ರೋಚಕತೆ ಹೆಚ್ಚಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಈ ನಿರ್ಧಾರ ತಾಳಿತ್ತು.

ಪವರ್ ಸರ್ಜ್ ಅಂದರೆ ಟಿ20 ಕ್ರಿಕೆಟ್‌ನ ಆರಂಭದಲ್ಲಿ 6 ಓವರ್ ಪವರ್‌ ಪ್ಲೇ ಬದಲಿಗೆ 4 ಓವರ್ ಪವರ್ ಪ್ಲೇ ನಡೆಸಿ 2 ಪವರ್‌ಪ್ಲೇ ಓವರ್‌ಗಳನ್ನು ಬ್ಯಾಟಿಂಗ್ ತಂಡ 10 ಓವರ್‌ಗಳ ಬಳಿಕ ತಮಗಿಷ್ಟ ಬಂದಾಗ ಕೇಳಿ ಪಡೆಯೋದು. ಎಕ್ಸ್ ಫ್ಯಾಕ್ಟರ್ ಅಂದರೆ 10 ಓವರ್‌ಗಳ ಬಳಿಕ ಪ್ಲೇಯಿಂಗ್‌ 11ನಲ್ಲಿ ಇಲ್ಲದ ಆಟಗಾರರು ಅಂದರೆ 12, 13ನೇ ಬ್ಯಾಟಿಂಗ್ ಕ್ರಮಾಂಕದ ಆಟಗಾರರನ್ನೂ ಬದಲಿ ಆಟಗಾರರನ್ನು ಮೈದಾನಕ್ಕಿಳಿಸಲು ಅವಕಾಶ ನೀಡೋದು. ಇನ್ನು ಬ್ಯಾಷ್ ಬೂಸ್ಟ್ ಅಂದರೆ ಚೇಸಿಂಗ್ ತಂಡ 10 ಓವರ್‌ ಒಳಗೆ ಗುರಿ ತಲುಪಿದರೆ ಗೆದ್ದಿದ್ದಕ್ಕಾಗಿ ಕೊಡುವ 3 ಪಾಯಿಂಟ್ಸ್ ಅಲ್ಲದೆ ಮತ್ತೊಂದು ಬೋನಸ್ ಅಂಕ ನೀಡೋದು.

ಭಾರತ vs ಆಸ್ಟ್ರೇಲಿಯಾ: ರಿಚರ್ಡ್ಸನ್ ಹೊರಕ್ಕೆ, ಆ್ಯಂಡ್ರ್ಯೂ ಟೈ ಒಳಕ್ಕೆಭಾರತ vs ಆಸ್ಟ್ರೇಲಿಯಾ: ರಿಚರ್ಡ್ಸನ್ ಹೊರಕ್ಕೆ, ಆ್ಯಂಡ್ರ್ಯೂ ಟೈ ಒಳಕ್ಕೆ

ಹೊಸ ನಿಯಮದ ಬಗ್ಗೆ ಮಾತನಾಡಿರುವ ವಾಟ್ಸನ್, ''ನಾನಿವತ್ತು ಬಿಬಿಎಲ್‌ಗೆ ಪರಿಚಯಿಸಿರುವ ಮೂರು ಗಿಮಿಕ್‌ಗಳ ಬಗ್ಗೆ ಓದಿದೆ. ಪವರ್ ಸರ್ಜ್, ಎಕ್ಸ್ ಫ್ಯಾಕ್ಟರ್ ಪ್ಲೇಯರ್ ಮತ್ತು ಬ್ಯಾಷ್ ಬೂಸ್ಟ್ ಇವೆಲ್ಲ ಬೆಳೆಯುತ್ತಿರುವ ಟೂರ್ನಿಯನ್ನು ಹಾದಿ ತಪ್ಪಿಸುವ ಪ್ರಯತ್ನಗಳು,' ಎಂದಿದ್ದಾರೆ.

Story first published: Wednesday, November 18, 2020, 16:29 [IST]
Other articles published on Nov 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X