ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ಆರ್ಭಟ, ಮುಂಬೈಗೆ ದಾಖಲೆಯ ಗೆಲುವು!

Shardul Thakur hits 92 off 57 balls as Mumbai trounce Himachal by 200 runs

ಜೈಪುರ್: ಜೈಪುರ್‌ನ ಸವಾಯ್ ಮಾನ್‌ ಸಿಂಗ್ ಸ್ಟೇಡಿಯಂನಲ್ಲಿ ಸೋಮವಾರ (ಮಾರ್ಚ್ 1) ನಡೆದ ವಿಜಯ್ ಹಜಾರೆ ಟ್ರೋಫಿ ರೌಂಡ್-5, ಎಲೈಟ್ ಗ್ರೂಪ್ ಡಿ ಪಂದ್ಯದಲ್ಲಿ ಭಾರತದ ಮಧ್ಯಮ ವೇಗಿ ಶಾರ್ದೂರ್ ಠಾಕೂರ್ ಅಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ಠಾಕೂರ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುಂಬೈ ತಂಡ ಹಿಮಾಚಲ್ ಪ್ರದೇಶ್ ವಿರುದ್ಧ ಭರ್ಜರಿ 200 ರನ್ ಗೆಲುವು ದಾಖಲಿಸಿದೆ.

ಅಂತಾರಾಷ್ಟ್ರೀಯ ಕ್ರಿಕೆಟರ್‌ಗಳಾಗಿ ಮಿಂಚಿದ ಈ 3 ಆಟಗಾರರು ಈಗ ಆಸ್ಟ್ರೇಲಿಯಾದಲ್ಲಿ ಬಸ್ ಡ್ರೈವರ್‌ಗಳು!ಅಂತಾರಾಷ್ಟ್ರೀಯ ಕ್ರಿಕೆಟರ್‌ಗಳಾಗಿ ಮಿಂಚಿದ ಈ 3 ಆಟಗಾರರು ಈಗ ಆಸ್ಟ್ರೇಲಿಯಾದಲ್ಲಿ ಬಸ್ ಡ್ರೈವರ್‌ಗಳು!

ಭಾರತ-ಇಂಗ್ಲೆಂಡ್ ಟೆಸ್ಟ್‌ ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಶಾರ್ದೂಲ್ ಠಾಕೂರ್ ಬೆಂಚ್‌ನಲ್ಲಿದ್ದರು. ಅಲ್ಲಿ ಅವಕಾಶ ಸಿಗದಿದ್ದಾಗ ವಿಜಯ್ ಹಜಾರೆಯಲ್ಲಿ ಆಡಿದ್ದರು. ಸೋಮವಾರದ ಪಂದ್ಯದಲ್ಲಿ ಠಾಕೂರ್ ಬೌಲಿಂಗ್‌ನಲ್ಲಿ ಮಿಂಚಿಲ್ಲ, ಆದರೆ ಬ್ಯಾಟಿಂಗ್‌ನಲ್ಲಿ ಎಲ್ಲರ ಚಿತ್ತ ತನ್ನತ್ತ ಹರಿಸಿಕೊಂಡಿದ್ದಾರೆ.

ರೋಡ್ ಸೇಫ್ಟಿ ಸೀರೀಸ್: ಭಾರತ ಸೇರಿ ಎಲ್ಲಾ 6 ದೇಶಗಳ ತಂಡಗಳ/ಆಟಗಾರರ ಪಟ್ಟಿರೋಡ್ ಸೇಫ್ಟಿ ಸೀರೀಸ್: ಭಾರತ ಸೇರಿ ಎಲ್ಲಾ 6 ದೇಶಗಳ ತಂಡಗಳ/ಆಟಗಾರರ ಪಟ್ಟಿ

ಶಾರ್ದೂಲ್ ಠಾಕೂರ್ ಬ್ಯಾಟಿಂಗ್‌ ಶ್ಲಾಘಿಸಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಅವರಾಡುವ ಚೆನ್ನೈ ಸೂಪರ್ ಕಿಂಗ್ಸ್‌ ಟ್ವೀಟ್ ಮಾಡಿದೆ.

ಠಾಕೂರ್ ಸ್ಫೋಟಕ ಬ್ಯಾಟಿಂಗ್

ಠಾಕೂರ್ ಸ್ಫೋಟಕ ಬ್ಯಾಟಿಂಗ್

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಮುಂಬೈನಿಂದ 7ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಶಾರ್ದೂರ್ ಠಾಕೂರ್, ಅಬ್ಬರದ ಬ್ಯಾಟಿಂಗ್‌ ನಡೆಸಿದ್ದಾರೆ. 57 ಎಸೆತಗಳಲ್ಲಿ 92 ರನ್ ಚಚ್ಚಿದ್ದಾರೆ. ಈ ವೇಳೆ ಠಾಕೂರ್‌ ಬ್ಯಾಟ್‌ನಿಂದ 6 ಫೋರ್ಸ್, 6 ಸಿಕ್ಸರ್‌ ಸಿಡಿದಿತ್ತು.

ಯಾದವ್, ತಾರೆ ಅರ್ಧ ಶತಕ

ಯಾದವ್, ತಾರೆ ಅರ್ಧ ಶತಕ

ಮುಂಬೈನಿಂದ ಸೂರ್ಯಕುಮಾರ್ ಯಾದವ್ ಮತ್ತು ವಿಕೆಟ್ ಕೀಪರ್ ಆದಿತ್ಯ ತಾರೆ ಕೂಡ ಅರ್ಧಶತಕದ ಕೊಡುಗೆ ನೀಡಿದ್ದಾರೆ. ಯಾದವ್ 75 ಎಸೆತಗಳಲ್ಲಿ 91 ರನ್ ಬಾರಿಸಿದ್ದರೆ, ತಾರೆ 98 ಎಸೆತಕ್ಕೆ 83 ರನ್ ಸೇರಿಸಿದ್ದರು. ಹಿಮಾಚಲ್ ಇನ್ನಿಂಗ್ಸ್‌ನಲ್ಲಿ ಮುಂಬೈಯ ಧವಳ್ ಕುಲಕರ್ಣಿ 2, ಶಮ್ಸ್ ಮುಲಾನಿ 3, ಪ್ರಶಾಂತ್ ಸೋಲಂಕಿ 4 ವಿಕೆಟ್‌ನೊಂದಿಗೆ ಗಮನ ಸೆಳೆದಿದ್ದಾರೆ.

ಫಲಿತಾಂಶ/ಸಂಕ್ಷಿಪ್ತ ಸ್ಕೋರ್

* ಮೊದಲು ಬ್ಯಾಟಿಂಗ್‌ ಮಾಡಿದ್ದ ಮುಂಬೈ ತಂಡ ಸೂರ್ಯಕುಮಾರ್ ಯಾದವ್ 91, ಆದಿತ್ಯ ತಾರೆ 83, ಶಾರ್ದೂಲ್ ಠಾಕೂರ್ 92 ರನ್‌ನೊಂದಿಗೆ 50 ಓವರ್‌ಗೆ 9 ವಿಕೆಟ್ ಕಳೆದು 321 ರನ್ ಗಳಿಸಿತು.
* ಗುರಿ ಬೆನ್ನಟ್ಟಿದ ಹಿಮಾಚಲ್ ಪ್ರದೇಶ, ಮಯಾಂಕ್ ದಾಗರ್ 38, ಪ್ರವೀಣ್ ಠಾಕೂರ್ 22, ಏಕಾಂತ್ ಸೇನ್ 21 ರನ್‌ ಸೇರ್ಪಡೆಯೊಂದಿಗೆ 24.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 121 ರನ್ ಗಳಿಸಿತು.
* ಮುಂಬೈಗೆ ಭರ್ಜರಿ 200 ರನ್‌ಗಳ ಜಯ, ಈ ಗೆಲುವಿನೊಂದಿಗೆ ಮುಂಬೈ ಲೀಗ್‌ ಹಂತದಲ್ಲಿ ಸತತ 5 ಪಂದ್ಯಗಳನ್ನು ಗೆದ್ದು ಅಜೇಯ ತಂಡವಾಗಿ ಮುಂದುವರೆದಿದೆ.

Story first published: Tuesday, March 2, 2021, 8:38 [IST]
Other articles published on Mar 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X