ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಠಾಕೂರ್ ಆಲ್ ರೌಂಡರ್ ಪ್ರದರ್ಶನ ಟೆಸ್ಟ್ ಸರಣಿ ಜೀವಂತವಾಗಿರಿಸಿದೆ'

Shardul Thakurs all-round performance has kept Test series alive: Sachin Tendulkar

ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತದ ವೇಗಿಗಳಾದ ಶಾರ್ದೂಲ್ ಠಾಕೂರ್ ಮತ್ತು ಮೊಹಮ್ಮದ್ ಸಿರಾಜ್ ಅವರ ಪ್ರದರ್ಶನವನ್ನು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಶ್ಲಾಘಿಸಿದ್ದಾರೆ. ಈ ಇಬ್ಬರು ಆಟಗಾರರಿಂದ ಟೆಸ್ಟ್ ಸರಣಿ ಜೀವಂತವಾಗಿದೆ ಎಂದು ಸಚಿನ್ ಹೇಳಿದ್ದಾರೆ.

ಆ ಒಂದು ಕರೆ ನನ್ನಲ್ಲಿ ಆತ್ಮ ವಿಶ್ವಾಸ ತುಂಬಿತ್ತು: 5 ವಿಕೆಟ್ ಕಿತ್ತ ಸಿರಾಜ್ ಭಾವುಕ ಪ್ರತಿಕ್ರಿಯೆಆ ಒಂದು ಕರೆ ನನ್ನಲ್ಲಿ ಆತ್ಮ ವಿಶ್ವಾಸ ತುಂಬಿತ್ತು: 5 ವಿಕೆಟ್ ಕಿತ್ತ ಸಿರಾಜ್ ಭಾವುಕ ಪ್ರತಿಕ್ರಿಯೆ

ಬ್ರಿಸ್ಬೇನ್ ಗಬ್ಬಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ 4ನೇ ಟೆಸ್ಟ್ ಪಂದ್ಯದ ಆರಂಭಿಕ ಇನ್ನಿಂಗ್ಸ್‌ನಲ್ಲಿ ಆತಿಥೇಯ ಆಸೀಸ್ 369 ರನ್ ಗಳಿಸಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 60 ರನ್ ಬಾರಿಸಿದ್ದಾಗ ರೋಹಿತ್ ಶರ್ಮಾ (44 ರನ್) ಅರ್ಧ ಶತಕದ ಸಮೀಪ ಔಟಾಗಿದ್ದರಿಂದ ಭಾರತ ಭಾರೀ ಹಿನ್ನಡೆಯ ಭೀತಿ ಎದುರಿಸಿತ್ತು. ಆದರೆ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್ ಬ್ಯಾಟಿಂಗ್‌ ತಂಡವನ್ನು ರನ್ ಕುಸಿತದಿಂದ ಪಾರು ಮಾಡಿತು.

ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಶಾರ್ದೂಲ್ ಠಾಕೂರ್ 67, ವಾಷಿಂಗ್ಟನ್ ಸುಂದರ್ 62 ರನ್ ಬಾರಿಸಿದ್ದರಿಂದ ತಂಡ 336 ರನ್ ಬಾರಿಸಿ ಕೇವಲ 33 ರನ್‌ ಹಿನ್ನಡೆ ಕಂಡಿತು. ಆಸ್ಟ್ರೇಲಿಯಾದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಠಾಕೂರ್ 61 ರನ್‌ಗೆ 4, ವಾಷಿಂಗ್ಟನ್ 1 ವಿಕೆಟ್ ಪಡೆದರು. ಪರಿಣಾಮ ಕಾಂಗರೂ ಪಡೆ 294 ರನ್‌ಗೆ ಇನ್ನಿಂಗ್ಸ್‌ ಮುಗಿಸಿದೆ.

'ಚೆನ್ನಾಗಿ ಆಡಿದ್ದೀರಿ ಮೊಹಮ್ಮದ್ ಸಿರಾಜ್. ಶಾರ್ದೂಲ್ ಠಾಕೂರ್ ಅವರ ಆಲ್ ರೌಂಡರ್ ಪ್ರದರ್ಶನ ಟೆಸ್ಟ್ ಸರಣಿಯನ್ನು ಕುತೂಹಲಕಾರಿಯಾಗಿರಿಸಿತು, ಅಲ್ಲದೆ ಅದಕ್ಕಿಂತ ಮುಖ್ಯವಾಗಿ ಟೆಸ್ಟ್ ಸರಣಿಯನ್ನು ಜೀವಂತವಾಗಿರಿಸಿತು,' ಎಂದು ಸಚಿನ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

Story first published: Monday, January 18, 2021, 17:15 [IST]
Other articles published on Jan 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X