ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಭಿನ್ನ ಪರಿಸ್ಥಿತಿಗಳಿಗೆ ಬೇಗನೆ ಹೊಂದಿಕೊಳ್ಳೋದು 'ಪೃಥ್ವಿ'ಯ ಶಕ್ತಿ: ಸಚಿನ್

Shaws Ability to Adapt in Different Conditions, His Biggest Strength: Tendulkar

ರಾಜ್ ಕೋಟ್, ಅಕ್ಟೋಬರ್ 5: ದೇಸೀ ಕ್ರಿಕೆಟ್ ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮುನ್ನಡೆ ಗಿಟ್ಟಿಸಿಕೊಳ್ಳೋದು ಸುಲಭವಿಲ್ಲ. 14ರ ಹರೆಯದಲ್ಲಿ ಪೃಥ್ವಿ ಶಾ 330 ಎಸೆತಗಳಿಗೆ 546 ರನ್ ಬಾರಿಸಿದ್ದಾಗಲೇ ಕ್ರಿಕೆಟ್ ಜಗತ್ತಿಗೊಬ್ಬ ಅದ್ಭುತ ಪ್ರತಿಭೆ ಕಾಲಿಸಿರುವ ಸೂಚನೆ ಸಿಕ್ಕಿತ್ತು ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಶತಕ ಶೂರ ಪೃಥ್ವಿ ಶಾ ಫಸ್ಟ್ 'ಶೋ' ಗೆ ಟ್ವೀಟ್ ಸಲಾಂಶತಕ ಶೂರ ಪೃಥ್ವಿ ಶಾ ಫಸ್ಟ್ 'ಶೋ' ಗೆ ಟ್ವೀಟ್ ಸಲಾಂ

ರಾಜ್ ಕೋಟ್ ನಲ್ಲಿ ಅಕ್ಟೋಬರ್ 4ರಂದಿನ ಭಾರತ-ವೆಸ್ಟ್ಇಂಡೀಸ್ ಮೊದಲ ಟೆಸ್ಟ್ ನ ಮೊದಲ ದಿನದಾಟದಲ್ಲಿ ಆರಂಭಿಕ ಆಟಗಾರ ಪೃಥ್ವಿ ಶಾ ಅವರು ಅಂತಾರಾಷ್ಟ್ರೀಯ ಟೆಸ್ಟ್ ಗೆ ಪಾದಾರ್ಪಣೆ ಮಾಡಿದ್ದ ಪಂದ್ಯದಲ್ಲಿ ಶತಕ (134 ರನ್) ಸಿಡಿಸಿದ್ದರು. ಈ ಬಗ್ಗೆ ಮಾತನಾಡುತ್ತ ಸಚಿನ್ ಮೆಚ್ಚುಗೆ ವ್ಯಕ್ತಪಡಿಸಿದರು.

'ಎಲ್ಲದಕ್ಕಿಂತ ಹೆಚ್ಚಾಗಿ ನನಗನ್ನಿಸಿದಂತೆ ಪೃಥ್ವಿ ಶಾ ಅವರು ಎಲ್ಲಾ ಪರಿಸ್ಥಿಗಳಿಗೆ, ಹವಮಾನಗಳಿಗೆ ಬೇಗನೆ ಹೊಂದಿಕೊಳ್ಳುತ್ತಾರೆ. ಪೃಥ್ವಿಯ ಪ್ರತಿಭೆಯ ಅತೀ ದೊಡ್ಡ ಶಕ್ತಿಯಿದು' ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ಪೃಥ್ವಿ ಶಾ ಶತಕದ ಬಗ್ಗೆ ಅನಿಸಿಕೆ ಹಂಚಿಕೊಂಡರು.

ಆಯ್ಕೆ ಸಮಿತಿ ಮಾತೇ ಆಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಮುರಳಿ ವಿಜಯ್ಆಯ್ಕೆ ಸಮಿತಿ ಮಾತೇ ಆಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಮುರಳಿ ವಿಜಯ್

'ತನ್ನ ಮೊದಲ ಅಂತಾರಾಷ್ಟ್ರೀಯ ಟೆಸ್ಟ್ ನಲ್ಲೇ ಶತಕ ಬಾರಿಸಲು 18ರ ಹರೆಯದ ಪೃಥ್ವಿ ಶಕ್ತರು ಎಂದು ನಾನಂತೂ ಭಾವಿಸಿದ್ದೆ. ಪೃಥ್ವಿ ಆ ನಂಬಿಕೆ ಹುಟ್ಟಿಸಬಲ್ಲ ಪ್ರತಿಭಾವಂತ ಆಟಗಾರ' ಎಂದು ಮುಂಬೈ ಮೂಲದ ಯುವ ಬ್ಯಾಟ್ಸ್ಮನ್ ಶಾ ಅವರನ್ನು ಮುಂಬೈಯವರೇ ಆದ ಸಚಿನ್ ಶ್ಲಾಘಿಸಿದರು.

'ದೇಸಿ ಕ್ರಿಕೆಟ್ ನಲ್ಲಿ ಸೆಂಚುರಿ ಬಾರಿಸಬಲ್ಲ ಆಟಗಾರನೊಬ್ಬ ಪಾದಾರ್ಪಣೆ ಮಾಡಿದ ಅಂತಾರಾಷ್ಟ್ರೀಯ ಪಂದ್ಯದಲ್ಲೂ ಶತಕ ಬಾರಿಸಲು ಶಕ್ತನೆ ಎಂಬ ದೊಡ್ಡ ಪ್ರಶ್ನೆ ಕೆಲವರಲ್ಲಿರುತ್ತದೆ. ಆದರೆ ಅಪ್ಪಟ ಪ್ರತಿಭಾವಂತ ಆಟಗಾರ ನಿಜಕ್ಕೂ ಆ ಮ್ಯಾಜಿಕಲ್ ರನ್ ತೆಗೆಯಬಲ್ಲ' ಎಂದು 45ರ ಹರೆಯದ ಸಚಿನ್ ಹೇಳಿದರು.

Story first published: Friday, October 5, 2018, 11:14 [IST]
Other articles published on Oct 5, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X