ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶಮಿಯ 'ಅಣಕು' ಸೆಲ್ಯೂಟ್ ಗೆ ಕಾಟ್ರೆಲ್ ವಿಶಿಷ್ಟ ರೀತಿಯಲ್ಲಿ ಪ್ರತ್ಯುತ್ತರ

Sheldon Cattrel replies salute imitation by Mohammed Shami

ವಿಕೆಟ್ ತೆಗೆಯುತ್ತಿದ್ದಂತೆ ಸೈನಿಕನ ರೀತಿಯಲ್ಲಿ ಸೆಲ್ಯೂಟ್ ಹೊಡೆದು ಸಂಭ್ರಮಿಸುವ ವೆಸ್ಟ್ ಇಂಡೀಸ್ ನ ವೇಗದ ಬೌಲರ್ ಶೆಲ್ಡನ್ ಕಾಟ್ರೆಲ್ ಅವರು, ಸೆಲ್ಯೂಟ್ ಹೊಡೆದು ತಮ್ಮನ್ನು ಅಣಕಿಸಿದ ಭಾರತೀಯ ಬೌಲರ್ ಮೊಹಮ್ಮದ್ ಶಮಿಗೆ ಹಾಸ್ಯ ಮತ್ತು ವ್ಯಂಗ್ಯಭರಿತ ಉತ್ತರ ನೀಡಿದ್ದಾರೆ.

"ತುಂಬಾ ತಮಾಷೆಯಾಗಿತ್ತು. ಬೌಲಿಂಗ್ ಚೆನ್ನಾಗಿತ್ತು. ಒಬ್ಬರ ಸ್ಟೈಲನ್ನು ಮತ್ತೊಬ್ಬರು ನಕಲು ಮಾಡುವುದು ಕೂಡ ಒಂದು ರೀತಿಯ ಪ್ರಶಂಸೆಯೇ" ಎಂದು ಹಿಂದಿ ಮಿಶ್ರಿತ ಟ್ವೀಟ್ ಮಾಡಿ ಶಮಿಗೆ ಉತ್ತರ ನೀಡಿದ್ದಾರೆ ಮತ್ತು ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ.

ವಿಶ್ವಕಪ್: ಶೆಲ್ಡನ್ ಕಾಟ್ರೆಲ್ ಸೆಲ್ಯೂಟ್ ನಕಲು ಮಾಡಿದ ಶಮಿ, ಕೊಹ್ಲಿ -ವಿಡಿಯೋ! ವಿಶ್ವಕಪ್: ಶೆಲ್ಡನ್ ಕಾಟ್ರೆಲ್ ಸೆಲ್ಯೂಟ್ ನಕಲು ಮಾಡಿದ ಶಮಿ, ಕೊಹ್ಲಿ -ವಿಡಿಯೋ!

ಆದರೆ, ನಕಲ್ ಕರ್ನಾ ಹೀ ಸಬ್ಸೆ ಬಡಾ ಚಪಲೂಸಿ ಹೈ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಲು ಶೆಲ್ಡನ್ ಕಾಟ್ರೆಲ್ ಅವರಿಗೆ ಸಹಾಯ ಮಾಡಿದವರು ಯಾರು ಎಂದು ಟ್ವಿಟ್ಟರ್ ನಲ್ಲಿ ತಮಾಷೆ ಮಾಡುತ್ತಿದ್ದಾರೆ. ಏಕೆಂದರೆ, ಕಾಟ್ರೆಲ್ ಅವರಿಗೆ ಹಿಂದಿಯ ಗಂಧಗಾಳಿಯೂ ಗೊತ್ತಿಲ್ಲ.

{headtohead_cricket_3_2}

ಭಾರತದ 269 ರನ್ ಬೆನ್ನತ್ತಿದ್ದ ವೆಸ್ಟ್ ಇಂಡೀಸ್, 34.2 ಓವರ್ ಗಳಲ್ಲಿ 143 ರನ್ ಮಾತ್ರ ಗಳಿಸಿ ಶರಣಾಗಿತ್ತು. ಭಾರತ 125 ರನ್ ಗಳಿಂದ ಜಯಶಾಲಿಯಾಗಿತ್ತು. ಆದರೆ, 30ನೇ ಓವರ್ ನಲ್ಲಿ ಯಜುವೇಂದ್ರ ಚಹಾಲ್ ಬೌಲಿಂಗ್ ನಲ್ಲಿ ಕಾಟ್ರೆಲ್ ಔಟಾದ ನಂತರ ಶಮಿ ಅವರು, ಅರ್ಧಂಬರ್ಧ ಸೆಲ್ಯೂಟ್ ಮಾಡಿ ತಮಾಷೆ ಮಾಡಿದ್ದರು. ಆ ಪಂದ್ಯದಲ್ಲಿ ಶಮಿ ಅವರು ಅದ್ಭುತವಾಗಿ ಬೌಲಿಂಗ್ ಮಾಡಿ 16 ರನ್ ನೀಡಿ 4 ವಿಕೆಟ್ ಕಬಳಿಸಿದ್ದಾರೆ.

ಮೈಖೇಲ್ ಎಕ್ಸ್‌ಕ್ಲೂಸಿವ್: ಶಮಿ 2.0; ಮತ್ತಷ್ಟು ವೇಗ, ಫಿಟ್, ಪರಿಣಾಮಕಾರಿ ಮೈಖೇಲ್ ಎಕ್ಸ್‌ಕ್ಲೂಸಿವ್: ಶಮಿ 2.0; ಮತ್ತಷ್ಟು ವೇಗ, ಫಿಟ್, ಪರಿಣಾಮಕಾರಿ

ಆದರೆ, ಶಮಿ ಮಾಡಿದ ಈ ಅಣಕವನ್ನು ಕಾಟ್ರೆಲ್ ಅವರಿಗೆ ಮಾತ್ರವಲ್ಲ, ವೆಸ್ಟ್ ಇಂಡೀಸ್ ನ ಸೈನಿಕರಿಗೆ ಕೂಡ ಮಾಡಿರುವ ಅವಮಾನ ಎಂದು ಬಣ್ಣಿಸಲಾಗುತ್ತಿದೆ. ಏಕೆಂದರೆ, ಮೂಲತಃ ಜಮೈಕಾದಲ್ಲಿ ಸೈನಿಕನಾಗಿರುವ ಶೆಲ್ಡನ್ ಕಾಟ್ರೆಲ್ ಅವರು ಪ್ರತಿಬಾರಿ ವಿಕೆಟ್ ತೆಗೆದಾಗಲೆಲ್ಲ ಸೆಲ್ಯೂಟ್ ಹೊಡೆದು ಸೈನಿಕರಿಗೆ ಗೌರವ ಸಲ್ಲಿಸುತ್ತೇನೆ ಎಂದು ಹೇಳುತ್ತಾರೆ.

ಸೆಲ್ಯೂಟ್ ಹೊಡೆದು ಅಣಕಿಸುವ ಅಗತ್ಯವಿರಲಿಲ್ಲವಾದರೂ, ಕ್ರಿಕೆಟ್ ಅಂಗಳದಲ್ಲಿ ಇದೆಲ್ಲ ಸಾಮಾನ್ಯ. ಅದರಲ್ಲಿಯೂ ವೆಸ್ಟ್ ಇಂಡೀಸ್ ಆಟಗಾರರು ಸಂಭ್ರಮಿಸುವ ರೀತಿಯೇ ಬೇರೆ. ಶೆಲ್ಡನ್ ಕಾಟ್ರೆಲ್ ಅವರ ಸೆಲ್ಯೂಟ್ ಅನ್ನು ನಕಲು ಮಾಡಿ ಶಮಿ ಆ ವಿಕೆಟ್ ಅನ್ನು ಸಂಭ್ರಮಿಸಿದ್ದಾರೆಯೇ ಹೊರತು ಅವರಿಗೆ ಅವಮಾನ ಮಾಡಲೆಂದಲ್ಲ.

ಹ್ಯಾಟ್ರಿಕ್ ಪಡೆಯಲು ಧೋನಿ ಕೊಟ್ಟ ಸಲಹೆ ಕಾರಣವಾಯ್ತು : ಶಮಿ ಹ್ಯಾಟ್ರಿಕ್ ಪಡೆಯಲು ಧೋನಿ ಕೊಟ್ಟ ಸಲಹೆ ಕಾರಣವಾಯ್ತು : ಶಮಿ

ಸಂದರ್ಶನವೊಂದರಲ್ಲಿ, ಇದು ನನ್ನ ಮಿಲಿಟರ್ ಶೈಲಿಯ ಸೆಲ್ಯೂಟ್. ನಾನು ವೃತ್ತಿಯಿಂದ ಸೈನಿಕ. ಜಮೈಕಾದ ಸೈನಿಕರಿಗೆ ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸುವ ವಿಧಾನವಿದು. ಪ್ರತಿಬಾರಿ ವಿಕೆಟ್ ಪಡೆದಾಗಲೆಲ್ಲ ನಾನು ಈ ರೀತಿ ಸೆಲ್ಯೂಟ್ ಹೊಡೆಯುತ್ತೇನೆ. ನಾನು ಸೈನ್ಯದಲ್ಲಿ 6 ತಿಂಗಳು ತರಬೇತಿ ಪಡೆಯುತ್ತಿದ್ದಾಗ ಈರೀತಿ ಪ್ರಾಕ್ಟೀಸ್ ಮಾಡುತ್ತಿದ್ದೆ ಎಂದು ಅವರು ಹೇಳಿದ್ದರು.

Story first published: Saturday, June 29, 2019, 12:19 [IST]
Other articles published on Jun 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X