ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗಬ್ಬರ್ ಅಬ್ಬರ: ಐಸಿಸಿ ರ್ಯಾಂಕಿಂಗ್‌ನಲ್ಲಿ 13ನೇ ಸ್ಥಾನಕ್ಕೆ ಏರಿಕೆ, ಕೊಹ್ಲಿ ಹಾಗೂ ರೋಹಿತ್ ಸ್ಥಾನ ಕುಸಿತ

Shikhar dhawan
ವೆಸ್ಟ್ ಇಂಡೀಸ್ ನೆಲದಲ್ಲಿ ಏಕದಿನ ಸರಣಿಯನ್ನು ಗೆದ್ದ ಶಿಖರ್ ಧವನ್ ಟೀಂ | Oneindia Kannada

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾವನ್ನ ವೆಸ್ಟ್‌ ಇಂಡೀಸ್‌ನಲ್ಲಿ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಶಿಖರ್ ಧವನ್ ಐಸಿಸಿ ರ್ಯಾಂಕಿಂಗ್‌ನಲ್ಲೂ ಏರಿಕೆ ಕಾಣುವಲ್ಲಿ ಮುಂದಿದ್ದಾರೆ. ಅದೇ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಗಣನೀಯ ಕುಸಿತ ಸಾಧಿಸಿದ್ದಾರೆ.

ಟೀಂ ಇಂಡಿಯಾದ ಅನುಭವಿ ಬ್ಯಾಟರ್ ಶಿಖರ್ ಧವನ್ ಮೂರು ಪಂದ್ಯಗಳ ಏಕದಿನ ಸರಣಿಯನ್ನ ಒಂದು ಪಂದ್ಯ ಬಾಕಿ ಇರುವಂತೆಯೇ ತನ್ನದಾಗಿಸಿಕೊಂಡರು. ಅದೇ ರೀತಿಯಲ್ಲಿ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದು 13ನೇ ಸ್ಥಾನ ತಲುಪಿದ್ದಾರೆ.

ಮೊದಲ ಏಕದಿನ ಪಂದ್ಯದಲ್ಲಿ 97ರನ್ ಕಲೆಹಾಕಿದ್ದ ಶಿಖರ್ ಧವನ್

ಮೊದಲ ಏಕದಿನ ಪಂದ್ಯದಲ್ಲಿ 97ರನ್ ಕಲೆಹಾಕಿದ್ದ ಶಿಖರ್ ಧವನ್

ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅಮೋಘ ಆಟವಾಡಿದ ಶಿಖರ್ ಧವನ್ ಕೇವಲ ಮೂರು ರನ್‌ಗಳ ಅಂತರದಲ್ಲಿ ಶತಕ ಮಿಸ್‌ಮಾಡಿಕೊಂಡರು.

ಮೊದಲ ವಿಕೆಟ್‌ಗೆ ಶುಭಮನ್ ಗಿಲ್ ಜೊತೆಗೆ 119ರನ್‌ಗಳ ಜೊತೆಯಾಟವಾಡಿದ ಶಿಖರ್ ಧವನ್ ಗಿಲ್ ಔಟಾದ ಬಳಿಕ ತನ್ನ ಸೊಗಸಾದ ಆಟ ಮುಂದುವರಿಸಿದರು. ಎರಡನೇ ವಿಕೆಟ್‌ಗೆ ಶ್ರೇಯಸ್ ಜೊತೆಗೂಡಿ 94ರನ್‌ಗಳ ಜೊತೆವಾಡಿದ್ದ ಶಿಖರ್ ಧವನ್ ಶತಕದಂಚಿನಲ್ಲಿ ಎದುರಾಳಿ ತಂಡದ ಆಟಗಾರ ಬ್ರೂಕ್ಸ್‌ ಹಿಡಿದ ಕ್ಯಾಚ್‌ಗೆ ಬಲಿಯಾದರು.

ಸಮರಾ ಬ್ರೂಕ್ಸ್‌ ಹಿಡಿದ ಅದ್ಭುತ ಕ್ಯಾಚ್‌ನಿಂದ ಶಿಖರ್ ಧವನ್ ಕೇವಲ ಮೂರು ರನ್‌ಗಳ ಅಂತರದಲ್ಲಿ ವಿಂಡೀಸ್ ವಿರುದ್ಧ ಮೊದಲ ಹಾಗೂ ಏಕದಿನ ಫಾರ್ಮೆಟ್‌ನಲ್ಲಿ 18ನೇ ಶತಕವನ್ನು ಮಿಸ್ ಮಾಡಿಕೊಂಡಿದ್ದಾರೆ.

99 ಎಸೆತಗಳಲ್ಲಿ 97 ರನ್‌ಗಳನ್ನ ಕಲೆಹಾಕಿದ್ದ ಶಿಖರ್ ಧವನ್ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು 3 ಅಮೋಘ ಸಿಕ್ಸರ್‌ಗಳಿದ್ದವು. ಆರಂಭದಲ್ಲಿ ನಿಧಾನವಾಗಿ ಬ್ಯಾಟಿಂಗ್ ಆರಂಭಿಸಿದ್ದ ಗಬ್ಬರ್ ನಂತರ ಅಬ್ಬರಿಸೋಕೆ ಶುರು ಮಾಡಿ, 97.98ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಈ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೂ ಸಹ ಭಾಜನರಾದ್ರು.

ಎರಡನೇ ಏಕದಿನ ಪಂದ್ಯದಲ್ಲಿ ಬೇಗನೆ ಔಟಾಗಿದ್ದ ಧವನ್, ಮೂರನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ್ದಾರೆ. ಬುಧವಾರ ಬಿಡುಗಡೆಗೊಂಡ ಐಸಿಸಿ ರ್ಯಾಂಕಿಂಗ್‌ನಲ್ಲಿ ಶಿಖರ್ ಧವನ್ 13ನೇ ಸ್ಥಾನ ತಲುಪಿದ್ದಾರೆ.

ಸತತ ಎರಡು ಅರ್ಧಶತಕ , ಶ್ರೇಯಸ್ ಅಯ್ಯರ್ ರ್ಯಾಂಕಿಂಗ್ ಏರಿಕೆ

ಸತತ ಎರಡು ಅರ್ಧಶತಕ , ಶ್ರೇಯಸ್ ಅಯ್ಯರ್ ರ್ಯಾಂಕಿಂಗ್ ಏರಿಕೆ

ಶಿಖರ್ ಧವನ್ ಅಷ್ಟೇ ಅಲ್ಲದೆ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಒಂದರ ಹಿಂದೆ ಮತ್ತೊಂದು ಅರ್ಧಶತಕ ದಾಖಲಿಸಿದ ಶ್ರೇಯಸ್ ಅಯ್ಯರ್ ಕೂಡ ರ್ಯಾಂಕಿಂಗ್‌ನಲ್ಲಿ ಏರಿಕೆ ದಾಖಲಿಸಿದ್ದಾರೆ. ಪುರುಷರ ಬ್ಯಾಟಿಂಗ್‌ನಲ್ಲಿ ಜಂಟಿ 54ನೇ ಸ್ಥಾನ ಹಂಚಿಕೊಂಡಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಯಿಂದಲೂ KL ರಾಹುಲ್ ಔಟ್‌: ವರದಿ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಫ್ಲಾಪ್ ಶೋ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಫ್ಲಾಪ್ ಶೋ

ಕಳೆದ ಎರಡೂವರೆ ವರ್ಷದಿಂದಲೂ ಕಳಪೆ ಫಾರ್ಮ್ ಎದುರಿಸುತ್ತಿರುವ ವಿರಾಟ್ ಕೊಹ್ಲಿ ಹಾಗೂ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಕುಸಿತ ಕಂಡಿದ್ದು ಇಬ್ಬರು ಐದು ಮತ್ತು ಆರನೇ ಸ್ಥಾನ ತಲುಪಿದ್ದಾರೆ.

ಇಷ್ಟಲ್ಲದೆ ಯುವ ಬೌಲರ್ ಮೊಹಮ್ಮದ್ ಸಿರಾಜ್ ಮೊದಲ ಬಾರಿಗೆ 100ರ ಒಳಗೆ ಕಾಣಿಸಿಕೊಂಡಿದ್ದು, 97ನೇ ಸ್ಥಾನ ತಲುಪಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ಪರ ಎರಡನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ ಶೈ ಹೋಪ್ ರ್ಯಾಂಕಿಂಗ್ ಏರಿಕೆ ಕಂಡು 12ನೇ ಸ್ಥಾನ ತಲುಪಿದ್ದಾರೆ. ವಿಂಡೀಸ್ ಬೌಲರ್ ಅಲ್ಝಾರಿ ಜೋಸೆಫ್‌ ಎರಡು ಸ್ಥಾನ ಬಡ್ತಿ ಪಡೆದು 16ನೇ ರ್ಯಾಂಕಿಂಗ್ ಗಿಟ್ಟಿಸಿದ್ದಾರೆ.

ಇನ್ನು ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಮೂರನೇ ಏಕದಿನ ಪಂದ್ಯದಲ್ಲಿ ಮಿಂಚಿದ ಕ್ವಿಂಟನ್ ಡಿಕಾಕ್ ಏಕದಿನ ರ್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನ ತಲುಪಿದ್ದಾರೆ.

ಚೆಸ್‌ ಒಲಿಂಪಿಯಾಡ್ 2022: ಚೆನ್ನೈನಲ್ಲಿ ಭರ್ಜರಿ ತಯಾರಿ, 61 ದೇಶಗಳಲ್ಲಿ ಭಾರತ ನನ್ನ ಫೇವರಿಟ್ ಎಂದ ವಿದೇಶಿ ಪ್ಲೇಯರ್

ಐಸಿಸಿ ರ್ಯಾಂಕಿಂಗ್‌ನಲ್ಲಿ ಬಾಬರ್ ಅಜಮ್ ಅಗ್ರಸ್ಥಾನ

ಐಸಿಸಿ ರ್ಯಾಂಕಿಂಗ್‌ನಲ್ಲಿ ಬಾಬರ್ ಅಜಮ್ ಅಗ್ರಸ್ಥಾನ

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಏಕದಿನ ಮತ್ತು ಟಿ20 ರ್ಯಾಂಕಿಂಗ್‌ನಲ್ಲಿ ನಂಬರ್ ಒನ್ ಬ್ಯಾಟರ್ ಆಗಿರುವ ಬಾಬರ್ ಟೆಸ್ಟ್‌ ಕ್ರಿಕೆಟ್‌ನಲ್ಲೂ ವೃತ್ತಿ ಜೀವನದ ಬೆಸ್ಟ್‌ ಸ್ಥಾನ ತಲುಪಿದ್ದಾರೆ.

874 ಪಾಯಿಂಟ್ಸ್‌ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕನೇ ರ್ಯಾಂಕಿಂಗ್‌ ತಲುಪಿರುವ ಬಾಬರ್ ನಂಬರ್ ಒನ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ ಮಾಜಿ ನಾಯಕ ಜೋ ರೂಟ್‌ ತನ್ನ ಸ್ಥಾನ ಉಳಿಸಿಕೊಂಡಿದ್ದಾರೆ.

ಶ್ರೀಲಂಕಾ ಮತ್ತು ಪಾಕಿಸ್ತಾನ ಟೆಸ್ಟ್ ಸರಣಿಯಲ್ಲಿ ಲೀಡಿಂಗ್ ವಿಕೆಟ್ ಟೇಕರ್ ಆಗಿರುವ ಪ್ರಭಾತ್ ಜಯಸೂರ್ಯ 44ನೇ ಸ್ಥಾನಕ್ಕೆ ತಲುಪಿದ್ದು, ಅದ್ಭುತ ಫಾರ್ಮ್‌ನಲ್ಲಿರುವ ದಿನೇಶ್ ಚಾಂಡಿಮಲ್ ಬ್ಯಾಟಿಂಗ್‌ನಲ್ಲಿ 18ನೇ ಸ್ಥಾನಕ್ಕೆ ಏರಿಕೆಯಾಗಿದ್ದಾರೆ.

Story first published: Thursday, July 28, 2022, 10:47 [IST]
Other articles published on Jul 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X