ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರಂಭಿಕರಾಗಿ ರೋಹಿತ್-ಧವನ್ ಯಶಸ್ಸು: ಸಕ್ಸಸ್‌ಗೆ ಕಾರಣ ಬಹಿರಂಗ

 Shikhar Dhawan Opens Up On The On-field Success With Rohit Sharma

ಏಕದಿನ ಕ್ರಿಕೆಟ್‌ನಲ್ಲಿ ಶಿಖರ್ ಧವನ್ ಹಾಗೂ ರೋಹಿತ್ ಶರ್ಮ ಹಲವು ವರ್ಷಗಳಿಂದ ಟೀಮ್ ಇಂಡಿಯಾದ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ. ಈ ಜೋಡಿ ಆರಂಭಿರಾಗಿ ದೊಡ್ಡ ಯಶಸ್ಸನ್ನು ಕಂಡಿದೆ. ಟೀಮ್ ಇಂಡಿಯಾ ಬ್ಯಾಟಿಂಗ್ ಆರಂಭಕ್ಕೆ ಪ್ರತೀ ಬಾರಿಯೂ ಈ ಜೋಡಿ ಭದ್ರ ಬುನಾದಿಯನ್ನು ಹಾಕಿಕೊಡುವಲ್ಲಿ ಯಶಸ್ವಿಯಾಗುತ್ತಿದೆ.

ಈ ಯಶಸ್ವಿ ಜೋಡಿಯ ಸಕ್ಸಸ್‌ಗೆ ಕಾರಣ ಈಗ ಬಹಿರಂಗವಾಗಿದೆ. ಆರಂಭದಿಂದಲೇ ಉತ್ತಮ ಜೊತೆಯಾಟ ಸಿಗಬೇಕಾದರೆ ಉತ್ತಮ ಆಟಗಾರರು ಮಾತ್ರವೇ ಇದ್ದರೆ ಸಾಲದು. ಅಷ್ಟೇ ಮುಖ್ಯವಾಗಿ ಮತ್ತೂ ಒಂದಷ್ಟು ಅಂಶಗಳು ಅಗತ್ಯವಾಗಿರುತ್ತದೆ. ಹಾಗಾಗಿಯೇ ಜೋಡಿ ಯಶಸ್ಸು ಕಂಡಿದೆ.

ಕೊಹ್ಲಿ-ರೋಹಿತ್ ಜೋಡಿಯ ವಿಕೆಟ್ ಪಡೆಯಲು ಅಂಪೈರ್ ಬಳಿ ಸಹಾಯ ಕೇಳಿದ್ದ ಫಿಂಚ್ಕೊಹ್ಲಿ-ರೋಹಿತ್ ಜೋಡಿಯ ವಿಕೆಟ್ ಪಡೆಯಲು ಅಂಪೈರ್ ಬಳಿ ಸಹಾಯ ಕೇಳಿದ್ದ ಫಿಂಚ್

ಹಾಗಾದರೆ ಧವನ್-ಶರ್ಮಾ ಜೋಡಿ ಅದ್ಭುತ ಯಶಸ್ಸಿಗೆ ಕಾರಣ ಏನು? ಮುಂದೆ ಓದಿ

ದಾಖಲೆಯ ಜೋಡಿ

ದಾಖಲೆಯ ಜೋಡಿ

ವಿಶ್ವ ಕ್ರಿಕೆಟ್‌ನಲ್ಲಿ ಆರಂಭಕರಾಗಿ ದಾಖಲೆಯನ್ನು ಬರೆಯಲು ಈ ಜೋಡಿ ಸಿದ್ದವಾಗಿದೆ. ಶತಕದ ಜೊತೆಯಾಟದಲ್ಲಿ ಈಗ ಧವನ್ ಹಾಗೂ ರೋಹಿತ್ ಜೋಡಿ ಎರಡನೇ ಸ್ಥಾನದಲ್ಲಿದೆ. ಭಾರತದ ಈ ಬ್ಯಾಟಿಂಗ್ ಜೋಡಿ 16 ಶತಕದ ಜೊತೆಯಾಟದಲ್ಲಿ ಬಾಗಿಯಾಗಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಆರಂಭಿಕರ ಜೊತೆಗೆ ಈ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ದಿಗ್ಗಜ ಜೋಡಿಯ ದಾಖಲೆಗೆ ಸನಿಹ

ದಿಗ್ಗಜ ಜೋಡಿಯ ದಾಖಲೆಗೆ ಸನಿಹ

ಮೊದಲ ಸ್ಥಾನದಲ್ಲಿ ಸಚಿನ್-ಸೌರವ್ ಜೋಡಿಯಿದ್ದು 21 ಶತಕದ ಜೊತೆಯಾಟದ ದಾಖಲೆಯನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಆರಂಭಿಕರಾದ ಆಡಮ್ ಗಿಲ್‌ಕ್ರಿಸ್ಟ್ ಮತ್ತು ಮ್ಯಾಥ್ಯೂ ಹೇಡನ್ ಜೋಡಿ ಕೂಡ 16 ಶತಕದ ಜೊತೆಯಾಟದಲ್ಲಿ ಪಾಲ್ಗೊಂಡಿದ್ದಾರೆ.

ಕಾರಣ ಹೇಳಿದ ಧವನ್

ಕಾರಣ ಹೇಳಿದ ಧವನ್

ಈ ಜೋಡಿಯ ಅದ್ಭುತ ಯಶಸ್ಸಿನ ಬಗ್ಗೆ ಸ್ವತಃ ಶಿಖರ್ ಧವನ್ ಮಾತನಾಡಿದ್ದಾರೆ. ಮಾತ್ರವಲ್ಲ ತಮ್ಮ ಯಶಸ್ಸಿಗೆ ಕಾರಣ ಏನು ಎಂಬುದನ್ನು ಕೂಡ ಈ ಸಂದರ್ಭದಲ್ಲಿ ಬಹಿರಂಗ ಪಡಿಸಿದ್ದಾರೆ. ತಮ್ಮ ಯಶಸ್ಸಿಗೆ ಇಬ್ಬರ ನಡುವಿನ ಬಾಂಧವ್ಯವೇ ಕಾರಣ ಎಂದು ಹೇಳಿಕೊಂಡಿದ್ದಾರೆ ಧವನ್.

ಅಂಡರ್-19 ಕಾಲದಿಂದಲೂ ಬಲ್ಲೆ

ಅಂಡರ್-19 ಕಾಲದಿಂದಲೂ ಬಲ್ಲೆ

ರೋಹಿತ್ ಶರ್ಮಾ ಅವರನ್ನು ನಾನು ಅಂಡರ್-19 ಕಾಲದಿಂದಲೂ ಬಲ್ಲೆ. ಹಾಗಾಗಿ ಇಬ್ಬರ ನಡುವೆ ಅತ್ಯುತ್ತಮ ಗೆಳೆತನವಿದೆ. ಇದು ಆನ್‌ಫೀಲ್ಡ್‌ನಲ್ಲಿನ ಆಟಕ್ಕೆ ದೊಡ್ಡ ಕೊಡುಗೆಯನ್ನು ನೀಡಿದೆ. ಒಬ್ಬರನ್ನೊಬ್ಬರು ಅರಿತುಕೊಂಡು ಆಡಲು ಸಹಕಾರಿಯಾಗುತ್ತದೆ. ನಮ್ಮಿಬ್ಬರಿಗೂ ಪರಸ್ಪರರ ಗುಣಗಳ ಬಗ್ಗೆ ಅರಿವಿದೆ. ಆತನ ಬಗ್ಗೆ ನನಗೆ ಸಂಪೂರ್ಣ ಗೊತ್ತಿದೆ ಎಂದು ಶಿಖರ್ ಧವನ್ ಹೇಳಿದ್ದಾರೆ.

ಕುಟುಂಬದಂತಿದೆ ಟೀಮ್ ಇಂಡಿಯಾ

ಕುಟುಂಬದಂತಿದೆ ಟೀಮ್ ಇಂಡಿಯಾ

ಎಲ್ಲವೂ ಹೊಂದಾಣಿಕೆಯಾದಾಗ ಅಲ್ಲಿ ಧನಾತ್ಮಕತೆ ಸೃಷ್ಟಿಯಾಗುತ್ತದೆ. ನಾನು ಯಾವಾಗ ಬ್ಯಾಟಿಂಗ್‌ನಲ್ಲಿ ಸಮಸ್ಯೆಗೆ ಒಳಪಡುತ್ತೇನೋ ಆಗ ರೋಹಿತ್‌ ಬಳಿ ಮಾತನಾಡುತ್ತೇನೆ. ನಮ್ಮಿಬ್ರ ಮಧ್ಯೆ ಅತ್ಯುತ್ತಮ ಸಂವಹನವಿದೆ. ವರ್ಷದಲ್ಲಿ ನಾವು 230 ದಿನ ಜೊತೆಯಾಗಿ ಪ್ರಯಾಣಿಸುತ್ತೇವೆ. ಹಾಗಾಗಿ ಇಡೀ ತಂಡವೇ ಡೊಡ್ಡ ಕುಟುಂಬದಂತೆ ಆಗಿದೆ ಎಂದು ಶಿಖರ್ ಧವನ್ ಹೇಳಿದ್ದಾರೆ.

Story first published: Thursday, June 11, 2020, 21:37 [IST]
Other articles published on Jun 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X