ಆ ಒಂದು ವಿಚಾರ ಮಾತ್ರ ನನಗೆ ಅರ್ಥವೇ ಆಗುತ್ತಿಲ್ಲ: ಗೊಂದಲದ ಬಗ್ಗೆ ತುಟಿ ಬಿಚ್ಚಿದ ಶಿಖರ್ ಧವನ್

ಟೀಮ್ ಇಂಡಿಯಾದ ಅನುಭವಿ ಆಟಗಾರ ಶಿಖರ್ ಧವನ್ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಇದೀಗ ಜಿಂಬಾಬ್ವೆ ಪ್ರವಾಸದಲ್ಲಿಯೂ ಏಕದಿನ ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ ಧವನ್ ಪ್ರಸ್ತುತ ಭಾರತ ಟಿ20 ತಂಡದ ಭಾಗವಾಗಿ ಉಳಿದಿಲ್ಲ. ಐಪಿಎಲ್‌ನಲ್ಲಿ ಧವನ್ ಉತ್ತಮ ಪ್ರದರ್ಶನ ನಿಡುತ್ತಿದ್ದರೂ ಆಯ್ಕೆಗಾರರು ತನ್ನನ್ನು ಚುಟುಕು ಮಾದರಿಯಲ್ಲಿ ಪರಿಗಣಿಸದಿರುವ ಬಗ್ಗೆ ಶಿಖರ್ ಧವನ್‌ಗೆ ಬೇಸರವಿದೆ.

ಶಿಖರ್ ಧವನ್ ಪ್ರಸ್ತುತ ಭಾರತ ಏಕದಿನ ಮಾದರಿಯ ಸ್ಪೆಶಲಿಸ್ಟ್ ಆಟಗಾರನಾಗಿ ಮಾತ್ರವೇ ಕಣಕ್ಕಿಳಿಯುತ್ತಿದ್ದಾರೆ. ಆದರೆ ಟಿ20 ತಂಡದಿಂದ ಯಾವ ಕಾರಣಕ್ಕಾಗಿ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು ಎಂಬುದು ನನಗಿನ್ನೂ ಅರ್ಥವೇ ಆಗಿಲ್ಲ ಎಂದು ಶಿಖರ್ ಧವನ್ ಬೇಸರದಿಂದ ಪ್ರತಿಕ್ರಿಯಿಸಿದ್ದಾರೆ.

Asia Cup 2022: ಭಾರತದಿಂದ ಮೊಹಮ್ಮದ್ ಶಮಿ ಕೈಬಿಟ್ಟಿದ್ದನ್ನು ಬೆಂಬಲಿಸಿ ಕಾರಣ ಕೊಟ್ಟ ಪಾಕ್ ಕ್ರಿಕೆಟಿಗAsia Cup 2022: ಭಾರತದಿಂದ ಮೊಹಮ್ಮದ್ ಶಮಿ ಕೈಬಿಟ್ಟಿದ್ದನ್ನು ಬೆಂಬಲಿಸಿ ಕಾರಣ ಕೊಟ್ಟ ಪಾಕ್ ಕ್ರಿಕೆಟಿಗ

ಪ್ರಾಮಾಣಿಕವಾಗಿ ಕಾರಣ ತಿಳಿದಿಲ್ಲ

ಪ್ರಾಮಾಣಿಕವಾಗಿ ಕಾರಣ ತಿಳಿದಿಲ್ಲ

ಟಿ20 ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡಿರುವ ಬಗ್ಗೆ ಶಿಖರ್ ಧವನ್ ತಮ್ಮ ಬೇಸರವನ್ನು ಹಂಚಿಕೊಂಡಿದ್ದಾರೆ. "ನಿಜವಾಗಿಯೂ ನನಗೆ ಈ ಬಗ್ಗೆ ಕಾರಣ ತಿಳಿದಿಲ್ಲ. ಅದಕ್ಕೆ ಕಾರಣ ಇರಲೂ ಬಹುದು. ಆದರೆ ನಾನು ಅದರ ಆಳಕ್ಕೆ ಇಳಿಯುವ ಪ್ರಯತ್ನ ನಡೆಸಿಲ್ಲ. ಈಗ ನಾನು ಸುದೀರ್ಘ ಕಾಲದಿಂದ ಭಾರತ ತಂಡದ ಪರವಾಗಿ ಟಿ20 ಮಾದರಿಯಲ್ಲಿ ಆಡುತ್ತಿಲ್ಲ. ನಾನು ಯಾವಾಗ ಕಾಣಿಸಿಕೊಳ್ಳಬಹುದು ಎಂಬುದು ಕೂಡ ನನಗೆ ಗೊತ್ತಿಲ್ಲ. ನಾನು ನನಗೆ ಸಿಗುವ ಎಲ್ಲಾ ಅವಕಾಶವನ್ನು ಕೂಡ ಬಳಸಿಕೊಳ್ಳುವ ಪ್ರಯತ್ನವನ್ನು ನಡೆಸುತ್ತೇನೆ" ಎಂದಿದ್ದಾರೆ ಶಿಖರ್ ಧವನ್.

ಉತ್ತಮ ಪ್ರದರ್ಶನ ನನ್ನ ಗುರಿ

ಉತ್ತಮ ಪ್ರದರ್ಶನ ನನ್ನ ಗುರಿ

ಮುಂದುವರಿದು ಮಾತನಾಡಿದ ಶಿಖರ್ ಧವನ್ ತನಗೆ ದೊರೆಯುವ ಎಲ್ಲಾ ಅವಕಾಶವನ್ನೂ ಉತ್ತಮವಾಗಿ ಬಳಸಿಕೊಳ್ಳಬೇಕು ಎಂಬುದು ನನ್ನ ಗುರಿಯಾಗಿದೆ ಎಂದಿದ್ದಾರೆ. "ಅದು ಐಪಿಎಲ್ ಆಗಿರಬಹುದು, ದೇಶೀಯ ಕ್ರಿಕೆಟ್ ಆಗಿರಬಹುದು ಅಥವಾ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಆಗಿರಬಹುದು. ಉತ್ತಮವಾಗಿ ಆಡಬೇಕು ಎಂಬುದಷ್ಟೇ ನನ್ನ ಗುರಿಯಾಗಿದೆ. ಅದು ಮಾತ್ರವೇ ನನ್ನ ನಿಯಂತ್ರಣದಲ್ಲಿ ಇರಲು ಸಾಧ್ಯವಿದೆ" ಎಂದಿದ್ದಾರೆ ಅನುಭವಿ ಆಟಗಾರ ಶಿಖರ್ ಧವನ್.

ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಸತತ ಸೋಲಿಗೆ ಕಾರಣ ಏನು? ಪಾಕ್ ಕ್ರಿಕೆಟಿಗನ ಉತ್ತರ

ಏಕದಿನ ಮಾದರಿಯ ಭವಿಷ್ಯದ ಬಗ್ಗೆ ಧವನ್ ಮಾತು

ಏಕದಿನ ಮಾದರಿಯ ಭವಿಷ್ಯದ ಬಗ್ಗೆ ಧವನ್ ಮಾತು

ಇನ್ನು ಸದ್ಯ ಚರ್ಚೆಗೆ ಕಾರಣವಾಗಿರುವ ಏಕದಿನ ಮಾದರಿಯ ಭವಿಷ್ಯದ ಬಗ್ಗೆಯೂ ಶಿಖರ್ ಧವನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. "ನಾನು ನಿಜಕ್ಕೂ ಏಕದಿನ ಮಾದರಿಯಲ್ಲಿ ಆಡುವುದನ್ನು ಆನಂದಿಸುತ್ತಿದ್ದೇನೆ. ಅದೊಂದು ಕಲೆಯಾಗಿದ್ದು ಅದರಲ್ಲಿ ಇನ್ನೂ ಕೂಡ ಮಿಂಚಿತ್ತಿದೆ. ನಾನು ಅದನ್ನು ಆಡಲು ಇಷ್ಟಪಡುತ್ತೇನೆ. ಟೆಸ್ಟ್ ಹಾಗೂ ಟಿ20 ಮಾದರಿಗಳಲ್ಲಿ ಯಾವ ರೀತಿಯ ಮೌಲ್ಯಗಳು ಇದೆಯೋ ಏಕದಿನ ಕ್ರಿಕೆಟ್‌ಗೂ ಅಂಥಾದ್ದೇ ಮೌಲ್ಯವಿದೆ" ಎಂದಿದ್ದಾರೆ ಶಿಖರ್ ಧವನ್.

Sanju , DK ಹಾಗು Ashwin ಅಭಿಮಾನಿಗಳಿಗೆ ಮನರಂಜನೆ ಕೊಟ್ಟಿದ್ದು ಹೀಗೆ | *Cricket |OneIndia Kannada
ಕೊಹ್ಲಿಗೆ ಧವನ್ ಬೆಂಬಲ

ಕೊಹ್ಲಿಗೆ ಧವನ್ ಬೆಂಬಲ

ಇನ್ನು ಇದೇ ಸಂದರ್ಭದಲ್ಲಿ ಫಾರ್ಮ್ ಕಳೆದುಕೊಂಡಿರುವ ವಿರಾಟ್ ಕೊಹ್ಲಿ ಬಗ್ಗೆಯೂ ಶಿಖರ್ ಧವನ್ ಮಾತನಾಡಿದ್ದಾರೆ. "ವಿರಾಟ್ ಕೊಹ್ಲಿ ಓರ್ವ ಚಾಂಪಿಯನ್ ಆಟಗಾರನಾಗಿದ್ದು ಕೇವಲ ಒಂದು ಇನ್ನಿಂಗ್ಸ್ ದೂರವಿದ್ದಾರೆ. ಖಂಡಿತವಾಗಿಯೂ ಅವರು ಮರಳಿ ಫಾರ್ಮ್ ಕಂಡುಕೊಳ್ಳಲಿದ್ದಾರೆ. ಒಮ್ಮೆ ಅವರು ಫಾರ್ಮ್‌ಗೆ ಮರಳಿದರೆ ಅವರನ್ನು ತಡೆಯುವುದು ಅಸಾಧ್ಯ" ಎಂದಿದ್ದಾರೆ ಭಾರತ ತಂಡದ ಅನುಭವಿ ಆಟಗಾರ ಶಿಖರ ಧವನ್. ವಿರಾಟ್ ಕೊಹ್ಲಿ ಫಾರ್ಮ್‌ ಸಮಸ್ಯೆಯಿಂದ ಸುದೀರ್ಘ ಕಾಲದಿಂದ ಬಳಲುತ್ತಿದ್ದು ಇಂಗ್ಲೆಂಡ್ ವಿರುದ್ಧದ ಸರಣಿಯ ಬಳಿಕ ವಿಶ್ರಾಂತಿಯನ್ನು ಪಡೆದುಕೊಂಡಿದ್ದರು. ಇದೀಗ ಕೊಹ್ಲಿ ಏಷ್ಯಾ ಕಪ್‌ನಲ್ಲಿ ಆಡಲು ಸಜ್ಜಾಗಿದ್ದು ತಂಡಕ್ಕೆ ವಾಪಾಸಾಗಲಿದ್ದಾರೆ. ಗಾಯದಿಂದ ಸುದೀರ್ಘ ಕಾಲದಿಂದ ಹೊರಗುಳಿದಿದ್ದ ಕೆಎಲ್ ರಾಹುಲ್ ಕೂಡ ಏಷ್ಯಾಕಪ್ ಮೂಲಕ ತಂಡಕ್ಕೆ ವಾಪಾಸಾಗಲಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, August 10, 2022, 8:12 [IST]
Other articles published on Aug 10, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X