ಭಾರತ vs ದ.ಆಫ್ರಿಕಾ: ಇವರಿಂದಾಗಿ ವೆಂಕಟೇಶ್ ಐಯ್ಯರ್‌ಗೆ ರಾಹುಲ್ ಬೌಲಿಂಗ್ ನೀಡಲಿಲ್ಲ ಎಂದ ಧವನ್!

ಸದ್ಯ ದಕ್ಷಿಣ ಆಫ್ರಿಕಾದ ಪ್ರವಾಸ ಕೈಗೊಂಡು ಹರಿಣಗಳ ವಿರುದ್ಧದ ಏಕದಿನ ಸರಣಿಯಲ್ಲಿ ಪಾಲ್ಗೊಂಡಿರುವ ಟೀಮ್ ಇಂಡಿಯಾ ಸರಣಿಯ ಚೊಚ್ಚಲ ಪಂದ್ಯದಲ್ಲಿಯೇ ಸೋಲುವುದರ ಮೂಲಕ ಕಳಪೆ ಆರಂಭವನ್ನು ಪಡೆದುಕೊಂಡಿದೆ. ಇದಕ್ಕೂ ಮುನ್ನ ನಡೆದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ 1-2 ಅಂತರದಲ್ಲಿ ಸರಣಿ ಸೋಲುವುದರ ಮೂಲಕ ಮುಖಭಂಗಕ್ಕೊಳಗಾಗಿತ್ತು. ಹೀಗೆ ಟೆಸ್ಟ್ ಸರಣಿಯನ್ನು ಸೋಲುವುದರ ಮೂಲಕ ಮತ್ತೊಮ್ಮೆ ದಕ್ಷಿಣ ಆಫ್ರಿಕಾ ನೆಲದ ಟೆಸ್ಟ್ ಸರಣಿಯಲ್ಲಿ ನೆಲಕಚ್ಚಿದ ಟೀಮ್ ಇಂಡಿಯಾ ಏಕದಿನ ಸರಣಿಯನ್ನು ಗೆದ್ದು ಸೇಡು ತೀರಿಸಿಕೊಳ್ಳುವ ತವಕದಲ್ಲಿತ್ತು.

ಅಂಡರ್ 19 ವಿಶ್ವಕಪ್: ನಾಯಕ ಯಶ್ ಧುಲ್ ಸೇರಿ 6 ಭಾರತೀಯ ಆಟಗಾರರಿಗೆ ತಗುಲಿದ ಕೊವಿಡ್ಅಂಡರ್ 19 ವಿಶ್ವಕಪ್: ನಾಯಕ ಯಶ್ ಧುಲ್ ಸೇರಿ 6 ಭಾರತೀಯ ಆಟಗಾರರಿಗೆ ತಗುಲಿದ ಕೊವಿಡ್

ಆದರೆ ಬಲಿಷ್ಠ ತಂಡವನ್ನು ಹೊಂದಿದ್ದರೂ ಸಹ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ 31 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿ ತನ್ನ ಸೋಲಿನ ಸರಣಿಯನ್ನು ಮುಂದುವರಿಸಿದೆ. ಪಾರ್ಲ್‌ನ ಬೊಲ್ಯಾಂಡ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತನ್ನ ಮೊದಲ 3 ವಿಕೆಟ್‍ಗಳನ್ನು ವೇಗವಾಗಿ ಕರೆದುಕೊಂಡರೂ ಸಹ ಟೆಂಬಾ ಬವುಮಾ ( 110 ರನ್ ) ಮತ್ತು ವಾನ್ ಡರ್ ಡಸನ್ ( ಅಜೇಯ 129 ರನ್ ) ಅದ್ಭುತ ಆಟದ ನೆರವಿನಿಂದ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿ ಟೀಮ್ ಇಂಡಿಯಾಗೆ ಗೆಲ್ಲಲು 297 ರನ್‌ಗಳ ಪೈಪೋಟಿಯುತ ಗುರಿಯನ್ನು ನೀಡಿತು.

ಭಾರತ vs ದ.ಆಫ್ರಿಕಾ ಪ್ರಥಮ ಏಕದಿನ: ಸಚಿನ್ ಬೃಹತ್ ದಾಖಲೆ ಮುರಿದು ಹಾಕಿದ ವಿರಾಟ್ ಕೊಹ್ಲಿಭಾರತ vs ದ.ಆಫ್ರಿಕಾ ಪ್ರಥಮ ಏಕದಿನ: ಸಚಿನ್ ಬೃಹತ್ ದಾಖಲೆ ಮುರಿದು ಹಾಕಿದ ವಿರಾಟ್ ಕೊಹ್ಲಿ

ಇನ್ನು ದಕ್ಷಿಣ ಆಫ್ರಿಕಾ ನೀಡಿದ್ದ ಈ ಗುರಿಯನ್ನು ಟೀಮ್ ಇಂಡಿಯಾ ಬೆನ್ನತ್ತಿ ಯಶಸ್ವಿಯಾಗಿ ಗೆಲುವು ಸಾಧಿಸಲಿದೆ ಎಂಬ ಭರವಸೆಯನ್ನು ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ವ್ಯಕ್ತಪಡಿಸಿದ್ದರು. ಆದರೆ ಈ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್ ಕಲೆಹಾಕಿ 31 ರನ್‌ಗಳ ಸೋಲನ್ನು ಅನುಭವಿಸಿತು. ಇನ್ನು ಈ ಪಂದ್ಯದಲ್ಲಿ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ ವೆಂಕಟೇಶ ಅಯ್ಯರ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆಲ್ ರೌಂಡರ್ ಆಟಗಾರನಾಗಿರುವ ಕಾರಣ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿಯೂ ವೆಂಕಟೇಶ್ ಅಯ್ಯರ್ ಕೊಡುಗೆಯನ್ನು ನಿರೀಕ್ಷಿಸಲಾಗಿತ್ತು. ಆದರೆ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಅವರಿಗೆ ಬೌಲಿಂಗ್ ಮಾಡುವ ಅವಕಾಶವನ್ನು ನೀಡದೇ ಇದ್ದದ್ದು ಇದೀಗ ಚರ್ಚಾಸ್ಪದ ವಿಷಯವಾಗಿದೆ. ಅತ್ತ ಪಂದ್ಯ ಮುಗಿದ ಬಳಿಕ ಈ ವಿಷಯದ ಕುರಿತಾಗಿ ಮಾತನಾಡಿರುವ ತಂಡದ ಪ್ರಮುಖ ಆಟಗಾರ ಶಿಖರ್ ಧವನ್ ಕೆಎಲ್ ರಾಹುಲ್ ವೆಂಕಟೇಶ್ ಅಯ್ಯರ್ ಅವರಿಗೆ ಪಂದ್ಯದಲ್ಲಿ ಬೌಲಿಂಗ್ ನೀಡದೇ ಇರಲು ಕಾರಣವೇನೆಂಬುದನ್ನು ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.

ಆತ ಬೌಲಿಂಗ್ ಮಾಡುವ ಅಗತ್ಯತೆ ಇರಲಿಲ್ಲ

ಆತ ಬೌಲಿಂಗ್ ಮಾಡುವ ಅಗತ್ಯತೆ ಇರಲಿಲ್ಲ

ವೆಂಕಟೇಶ್ ಅಯ್ಯರ್ ಅವರಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ಬೌಲಿಂಗ್ ಅವಕಾಶ ಸಿಗದೇ ಇರುವುದರ ಕುರಿತು ಮಾತನಾಡಿರುವ ಶಿಖರ್ ಧವನ್ "ತಂಡದ ಸ್ಪಿನ್ ಬೌಲರ್‌ಗಳು ಉತ್ತಮವಾಗಿ ಆಟವನ್ನು ಆಡುತ್ತಿದ್ದ ಕಾರಣ ಆತ ಬೌಲಿಂಗ್ ಮಾಡುವ ಅವಶ್ಯಕತೆ ನಮಗೆ ಇರಲಿಲ್ಲ. ಪಂದ್ಯದ ಮಧ್ಯದಲ್ಲಿ ವಿಕೆಟ್ ಬೀಳದೇ ಇದ್ದಾಗ ತಂಡದ ಪ್ರಮುಖ ವೇಗಿಗಳನ್ನು ಬಳಸಲು ಚಿಂತಿಸಿದ್ದೆವು ಆದರೆ ಅದನ್ನು ಮಾಡುವ ಹಾಗಿರಲಿಲ್ಲ. ಏಕೆಂದರೆ ತಂಡದ ಪ್ರಮುಖ ವೇಗಿಗಳನ್ನು ಪಂದ್ಯದ ಅಂತಿಮ ಓವರ್‌ಗಳಲ್ಲಿ ಬಳಸಬೇಕಾದ ಅನಿವಾರ್ಯತೆ ಇತ್ತು" ಎಂದು ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ಪಂದ್ಯದ ಮಧ್ಯದ ಓವರ್‌ಗಳಲ್ಲಿ ಸ್ಪಿನ್ ಬೌಲರ್‌ಗಳನ್ನು ಬಳಸಲಾಯಿತು ಹಾಗೂ ಪಂದ್ಯದ ಕೊನೆಯಲ್ಲಿ ಪ್ರಮುಖ ವೇಗಿಗಳನ್ನು ಬಳಸಲಾಯಿತು ಹೀಗಾಗಿ ವೆಂಕಟೇಶ್ ಅಯ್ಯರ್ ಅವರಿಗೆ ಬೌಲಿಂಗ್ ನೀಡಬೇಕೆಂಬ ಅನಿವಾರ್ಯತೆ ಇರಲಿಲ್ಲ ಎಂಬುದನ್ನು ಶಿಖರ್ ಧವನ್ ತಿಳಿಸಿದ್ದಾರೆ.

ಧವನ್ ನೀಡಿದ ಈ ಹೇಳಿಕೆ ಎಷ್ಟು ಸರಿ?

ಧವನ್ ನೀಡಿದ ಈ ಹೇಳಿಕೆ ಎಷ್ಟು ಸರಿ?

ವೆಂಕಟೇಶ್ ಅಯ್ಯರ್ ಅವರಿಗೆ ಬೌಲಿಂಗ್ ಮಾಡುವ ಅವಕಾಶ ನೀಡಬೇಕೆಂಬ ಅನಿವಾರ್ಯತೆ ತಂಡಕ್ಕಿರಲಿಲ್ಲ ಎಂದು ಶಿಖರ್ ಧವನ್ ತಿಳಿಸಿದ್ದಾರೆ. ಆದರೆ ಶಿಖರ್ ಧವನ್ ಇದಕ್ಕೆ ನೀಡಿರುವ ಕಾರಣಗಳು ಪ್ರಶ್ನೆ ಹಾಕಿದವರಿಗೆ ಸಮಾಧಾನ ತಂದಂತಿಲ್ಲ. ಏಕೆಂದರೆ ಶಿಖರ್ ಧವನ್ ಹೇಳಿಕೆ ಪ್ರಕಾರ ಪಂದ್ಯದ ಮಧ್ಯದ ವೇಳೆ ಟೀಮ್ ಇಂಡಿಯಾದ ಸ್ಪಿನ್ ಬೌಲರ್‌ಗಳಾಗಲಿ ಅಥವಾ ಪಂದ್ಯದ ಕೊನೆಯ ವೇಳೆಯಲ್ಲಿ ತಂಡದ ಪ್ರಮುಖ ವೇಗಿಗಳಾಗಲಿ ವೇಗವಾಗಿ ವಿಕೆಟ್ ಪಡೆಯುವ ಮೂಲಕ ದಕ್ಷಿಣ ಆಫ್ರಿಕಾ ತಂಡದ ಮೇಲೆ ಒತ್ತಡವನ್ನು ಹೇರುವಲ್ಲಿ ಯಶಸ್ವಿಯಾಗಲಿಲ್ಲ. ಹೀಗಾಗಿ ಶಿಖರ್ ಧವನ್ ವೆಂಕಟೇಶ್ ಅಯ್ಯರ್ ಅವರಿಗೆ ಬೌಲಿಂಗ್ ನೀಡದೇ ಇರಲು ತಿಳಿಸಿರುವ ಕಾರಣಗಳು ಪೂರಕವಾಗಿಲ್ಲ ಎಂಬ ಅಭಿಪ್ರಾಯಗಳೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ.

ವಿಕೆಟ್ ಪಡೆದದ್ದು ಬುಮ್ರಾ, ಅಶ್ವಿನ್ ಮಾತ್ರ

ವಿಕೆಟ್ ಪಡೆದದ್ದು ಬುಮ್ರಾ, ಅಶ್ವಿನ್ ಮಾತ್ರ

ಇನ್ನು ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ 4 ವಿಕೆಟ್‍ಗಳನ್ನು ಕಳೆದುಕೊಂಡಿತು. ಈ ಪೈಕಿ ಏಡನ್ ಮರ್ಕ್ರಮ್ ಅವರನ್ನು ವೆಂಕಟೇಶ್ ಅಯ್ಯರ್ ರನ್ ಔಟ್ ಮಾಡಿದರೆ, ಇನ್ನುಳಿದ 3 ವಿಕೆಟ್‍ಗಳ ಪೈಕಿ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದರೆ, ರವಿಚಂದ್ರನ್ ಅಶ್ವಿನ್ 1 ವಿಕೆಟ್ ಪಡೆದರು. ಹೀಗೆ ಈ ಇಬ್ಬರು ಬೌಲರ್‌ಗಳನ್ನು ಹೊರತುಪಡಿಸಿ ಟೀಮ್ ಇಂಡಿಯಾದ ಉಳಿದ ಯಾವುದೇ ಬೌಲರ್ ಕೂಡ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಲೇ ಇಲ್ಲ.

Legends League Cricket: Virender Singh ನೇತೃತ್ವದಲ್ಲಿ ಇಂಡಿಯಾ ಮಹಾರಾಜ ತಂಡ!! | Oneindia Kannada

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, January 20, 2022, 15:00 [IST]
Other articles published on Jan 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X