ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'12ನೇ ಆಟಗಾರನಾಗಿ ಬಂದ್ರೂ ಕೆ.ಎಲ್ ರಾಹುಲ್ ಶತಕ ಬಾರಿಸ್ತಾನೆ !'

ರಾಹುಲ್ ಆರ್ಭಟ ನೋಡಿ ಶಿಖರ್ ಧವನ್ ಹೇಳಿದ್ದೇನು ಗೊತ್ತಾ..? | K L Rahul | Shikhar Dhawan | Oneindia Kannada

ಕೆ.ಎಲ್ ರಾಹುಲ್ ಆಟದ ಬಗ್ಗೆ ಸಾಕಷ್ಟು ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಕೊಟ್ಟ ಕರ್ತವ್ಯವನ್ನು ತಂಡಕ್ಕಾಗಿ ಅಚ್ಚುಕಟ್ಟಾಗಿ ಪೂರೈಸುವುದನ್ನು ಕೆ.ಎಲ್ ರಾಹುಲ್ ಕರಗತ ಮಾಡಿಕೊಂಡಿದ್ದಾರೆ. ಸೀಮಿತ ಓವರ್‌ಗಳಲ್ಲಿ ಕೆ.ಎಲ್ ರಾಹುಲ್ ಈಗ ತಂಡದ ಪ್ರಮುಖ ಅಸ್ತ್ರವಾಗಿ ಬದಲಾಗಿದ್ದಾರೆ.

ಯಾವ ಕ್ರಮಾಂಕದಲ್ಲಿ ಆಡಿಸಿದ್ರೂ ರಾಹುಲ್ ಉತ್ತಮವಾಗಿ ಆಡಿ ಚಾಕಚಕ್ಯತೆಯನ್ನು ಪ್ರದರ್ಶಿಸಿದ್ದಾರೆ. ಆರಂಭಿಕನಿಂದ ಹಿಡಿದೂ ಆರನೇ ಕ್ರಮಾಂಕದವರೆಗೆ ರಾಹುಲ್ ಆಡಲು ಕಣಕ್ಕಿಳಿದು ಸೈ ಎನಿಸಿಕೊಂಡಿದ್ದಾರೆ. ಕೀವಿಸ್ ವಿರುದ್ದದ ಮೂರನೇ ಏಕದಿನ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಶತಕವನ್ನೂ ಬಾರಿಸಿ ಮಿಂಚಿದ್ದರು.

ಕನ್ನಡಿಗ ಕೆಎಲ್ ರಾಹುಲ್ ಸಿಡುಕಿಗೆ ಜೇಮ್ಸ್ ನೀಶಮ್ ತಮಾಷೆಯ ಟ್ವೀಟ್!ಕನ್ನಡಿಗ ಕೆಎಲ್ ರಾಹುಲ್ ಸಿಡುಕಿಗೆ ಜೇಮ್ಸ್ ನೀಶಮ್ ತಮಾಷೆಯ ಟ್ವೀಟ್!

ಕೆ.ಎಲ್ ರಾಹುಲ್ ನೀಡುತ್ತಿರುವ ಈ ಪ್ರದರ್ಶನಕ್ಕೆ ಟೀಮ್ ಇಂಡಿಯಾದ ಪ್ರಮುಖ ಆಟಗಾರನೋರ್ವ ಮನಬಿಚ್ಚಿ ಮೆಚ್ಚುಗೆಯನ್ನಾಡಿದ್ದಾರೆ. 12ನೇ ಆಟಗಾರನಾಗಿ ಕಣಕ್ಕಿಳಿದರೂ ರಾಹುಲ್ ಶತಕ ಬಾರಿಸುತ್ತಾನೆ ಎಂದಿದ್ದಾರೆ.

12ನೇ ಆಟಗಾರನಾಗಿಯೂ ಶತಕ ಬಾರಿಸಬಲ್ಲ!

12ನೇ ಆಟಗಾರನಾಗಿಯೂ ಶತಕ ಬಾರಿಸಬಲ್ಲ!

ರಾಹುಲ್ 12ನೇ ಆಟಗಾರನಾಗಿಯೂ ಶತಕ ಬಾರಿಸಬಲ್ಲ ಎಂಬ ಮಾತು ಬಂದಿದ್ದು ಬೇರೆ ಯಾರಿಂದಲೂ ಅಲ್ಲ. ಟೀಮ್ ಇಂಡಿಯಾದ ಗಬ್ಬರ್ ಎಂದೇ ಖ್ಯಾತಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಅವರಿಂದ. ರಾಹುಲ್ ಯಾವ ಕ್ರಮಾಂಕದಲ್ಲಿ ಬಂದರೂ ಅಬ್ಬರಿಸುತ್ತಿರುವ ರೀತಿಯನ್ನು ನೊಡಿ ಈ ರೀತಿ ತಮಾಷೆಯಾಗಿ ಇನ್ಸ್ಟಾಗ್ರಾಮ್‌ನಲ್ಲಿ ರಾಹುಲ್ ಫೋಟೋವನ್ನು ಶೇರ್ ಮಾಡಿದ್ದಾರೆ ಶಿಖರ್ ಧವನ್.

ಶತಕಕ್ಕೆ ಅಭಿನಂದಿಸಿದ ಶಿಖರ್:

ಶತಕಕ್ಕೆ ಅಭಿನಂದಿಸಿದ ಶಿಖರ್:

ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಅಂತಿಮ ಪಂದ್ಯವನ್ನೂ ಸೋತು ವೈಟ್‌ವಾಶ್ ಅನುಭವಿಸಿದರೂ ರಾಹುಲ್ ಶತಕವನ್ನು ಬಾರಿಸಿ ಮಿಂಚಿದ್ದರು. ಈ ಶತಕಕ್ಕೆ ಟೀಮ್ ಇಂಡಿಯಾ ಆರಂಭಿಕ ಆಟಗಾರ ಸದ್ಯ ಗಾಯಗೊಂಡು ತಂಡದಿಂದ ಹೊರಗುಳಿದಿರುವ ಶಿಖರ್ ಧವನ್ ಅಭಿನಂದಿಸಿ ಪೋಸ್ಟ್ ಹಾಕಿದ್ದಾರೆ.

4ನೇ ಒಡಿಐ ಶತಕ ಗಳಿಸಿ, ಕೊಹ್ಲಿ, ಧೋನಿ ದಾಖಲೆ ಮುರಿದ ರಾಹುಲ್

ಕೀವಿಸ್ ವಿರುದ್ಧ ಮಿಂಚಿದ ರಾಹುಲ್:

ಕೀವಿಸ್ ವಿರುದ್ಧ ಮಿಂಚಿದ ರಾಹುಲ್:

ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ರಾಹುಲ್ ಸದ್ಯ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಮೂರನೇ ಪಂದ್ಯದಲ್ಲಿ ರಾಹುಲ್ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದು 112 ರನ್‌ ಗಳಿಸಿದ್ದರು.

ಎಲ್ಲಾ ಕ್ರಮಾಂಕದಲ್ಲೂ ಭರ್ಜರಿ ಆಟ ಪ್ರದರ್ಶನ:

ಎಲ್ಲಾ ಕ್ರಮಾಂಕದಲ್ಲೂ ಭರ್ಜರಿ ಆಟ ಪ್ರದರ್ಶನ:

ಶಿಖರ್ ಧವನ್ ತಮಾಷೆಯಾಗಿ ಈ ಮಾತನ್ನು ಹೇಳಿದ್ದರೂ ಕೂಡ ರಾಹುಲ್ ಅವರ ಸಾಮರ್ಥ್ಯವನ್ನು ಕೊಂಡಾಡುವ ಉದ್ಧೇಶವೇ ಇದರಲ್ಲಿದೆ ಎನ್ನುವುದನ್ನು ಗಮನಿಸಬೇಕಿದೆ. ತಂಡಕ್ಕೆ ರಾಹುಲ್ ನೀಡುತ್ತಿರುವ ಕೊಡುಗೆ ಮತ್ತು ನೀಡಿದ ಎಲ್ಲಾ ಕ್ರಮಾಂಕದಲ್ಲೂ ಉತ್ಕೃಷ್ಟ ಮಟ್ಟದ ಪ್ರದರ್ಶನಕ್ಕೆ ಮೆಚ್ಚುಗೆಯ ರೀತಿಯಲ್ಲಿ ಧವನ್ ಈ ಮಾತುಗಳನ್ನು ಆಡಿದ್ದಾರೆ.

 3 ಪಂದ್ಯಗಳಲ್ಲಿ 204 ರನ್:

3 ಪಂದ್ಯಗಳಲ್ಲಿ 204 ರನ್:

ಕೆ.ಎಲ್ ರಾಹುಲ್ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳಲ್ಲಿ ಭರ್ಜರಿ 204 ರನ್‌ಗಳಿಸಿದ್ದಾರೆ. ಮೊದಲ ಪಂದ್ಯದಲ್ಲಿ ಅಜೇಯ ಸ್ಪೋಟಕ 88 ರನ್‌ಗಳಿಸಿ ತಂಡ ದೊಡ್ಡ ಮೊತ್ತಗಳಸಲು ಕಾರಣರಾದರು. ಎರಡನೇ ಪಂದ್ಯದಲ್ಲಿ ಎಡವಿದರೂ ಕೂಡ ಮೂರನೇ ಪಂದ್ಯದಲ್ಲಿ ಶತಕವನ್ನು ಗಳಿಸಿ ತಂಡಕ್ಕೆ ಮತ್ತೆ ಆಸರೆಯಾದರು. ಆದರೆ ರಾಹುಲ್ ಈ ಪ್ರಯತ್ನ ಸಂಪೂರ್ಣವಾಗಿ ವ್ಯರ್ಥವಾಯಿತು. ಟೀಮ್ ಇಂಡಿಯಾ ಏಕದಿ ಸರಣಿಯನ್ನು 0-3 ಅಂತರದಿಂದ ಕಳೆದುಕೊಂಡಿತು.

Story first published: Wednesday, February 12, 2020, 20:39 [IST]
Other articles published on Feb 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X