ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ತಂಡದಲ್ಲಿ ತನ್ನ ಭವಿಷ್ಯದ ಬಗ್ಗೆ ಮಾತನಾಡಿದ ಶಿಖರ್ ಧವನ್

Shikhar Dhawan statement On His Future In Indian Cricket team

ಆರಂಭಿಕ ಆಟಗಾರ ಶಿಖರ್ ಧವನ್ ಭಾರತೀಯ ಏಕದಿನ ಕ್ರಿಕೆಟ್ ತಂಡದ ಭಾಗವಾಗಿದ್ದು ಟಿ20 ಕ್ರಿಕೆಟ್‌ನಲ್ಲಿಯೂ ಭಾರತ ತಂಡಕ್ಕೆ ಇನ್ನೂ ಸಾಕಷ್ಟು ಕೊಡುಗೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಕನಿಷ್ಠ ಮೂರು ವರ್ಷಗಳ ಕಾಲ ತಾನು ಚುಟುಕು ಕ್ರಿಕೆಟ್‌ನಲ್ಲಿ ಭಾರತೀಯ ತಂಡಕ್ಕೆ ಕೊಡುಗೆ ನೀಡುವ ಸಾಮರ್ಥ್ಯವನ್ನು ಹೊಂದಿದ್ದೇನೆ ಎಂದಿದ್ದಾರೆ ಶಿಖರ್ ಧವನ್. ದೆಹಲಿ ಮೂಲದ ಅನುಭವಿ ಆಟಗಾರ ಶಿಖರ್ ಧವನ್ ಐಪಿಎಲ್‌ನಲ್ಲಿ ಸತತವಾಗಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರವಾಗಿ ಆಡಿರುವ ಧವನ್ 421 ರನ್‌ಗಳ ಕೊಡುಗೆಯನ್ನು ನೀಡಿದ್ದಾರೆ.

ಶಿಖರ್ ಧವನ್ ಐಪಿಎಲ್‌ನಲ್ಲಿ ಸತತವಾಗಿ ಸ್ಥಿರ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. ಅವರು ಆವೃತ್ತಿಯೊಂದರಲ್ಲಿ 300ಕ್ಕೂ ಕನಿಷ್ಟ ರನ್‌ಗಳಿಸಿದ್ದು 2015ಕ್ಕೂ ಹಿಂದೆ. ಇದು ಧವನ್ ಐಪಿಎಲ್‌ನಲ್ಲಿ ಎಷ್ಟು ಸ್ಥಿರ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.

IPL 2022ರ ಪ್ಲೇಆಫ್ ಅರ್ಹತೆ ಸನ್ನಿವೇಶ ಹೇಗಿದೆ?; DC ವಿರುದ್ಧ MI ಗೆಲ್ಲಲು RCB ಅಭಿಮಾನಿಗಳ ಪ್ರಾರ್ಥನೆIPL 2022ರ ಪ್ಲೇಆಫ್ ಅರ್ಹತೆ ಸನ್ನಿವೇಶ ಹೇಗಿದೆ?; DC ವಿರುದ್ಧ MI ಗೆಲ್ಲಲು RCB ಅಭಿಮಾನಿಗಳ ಪ್ರಾರ್ಥನೆ

ಭಾರತೀಯ ಕ್ರಿಕೆಟ್ ತಂಡದಲ್ಲಿ ಅವಕಾಶವನ್ನು ಪಡೆಯಲು ಸಾಕಷ್ಟು ಆಟಗಾರರು ಕಾಯುತ್ತಿದ್ದು ಪ್ರತಿ ಸ್ಥಾನಕ್ಕೂ ತೀವ್ರ ಪೈಪೀಟಿ ಏರ್ಪಡುತ್ತಿದೆ. ಹಾಗಿದ್ದರೂ ಧವನ್ ತಾನು ಟಿ20 ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಜೂನ್ 9ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಧವನ್ ಅವಕಾಶ ಗಿಟ್ಟಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

"ನಾನು ಇನ್ನು ಕೂಡ ತಂಡದ ಅವಿಭಾಜ್ಯ ಅಂಗವಾಗಿ ಉಳಿದುಕೊಂಡಿದ್ದೇವೆ. ನಾನು ಚುಟುಕು ಕ್ರಿಕೆಟ್ ಮಾದರಿಯಲ್ಲಿ ಉತ್ತಮವಾಗಿ ಕೊಡುಗೆ ನೀಡುವ ಸಾಮರ್ಥ್ಯವನ್ನು ಹೊಂದಿದ್ದೇನೆ ಎಂದು ಭಾವಿಸುತ್ತೇನೆ. ಅದಕ್ಕೆ ಕಾರಣ ನನ್ನಲ್ಲಿರುವ ಅನುಭವ. ಟಿ20 ಕ್ರಿಕೆಟ್‌ಮಲ್ಲಿ ನಾನು ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದು ಯಾವ ಜವಾಬ್ಧಶರಿ ನೀಡಿದರೂ ವಹಿಸಿಕೊಳ್ಳಲು ಸಿದ್ಧನಿದ್ದೇನೆ" ಎಂದಿದ್ದಾರೆ ಶಿಖರ್ ಧವನ್.

ಕಿಂಗ್ ಇಸ್ ಬ್ಯಾಕ್: ಫಾರ್ಮ್‌ಗೆ ಮರಳಿದ ವಿರಾಟ್ ಕೊಹ್ಲಿ; ಟ್ವಿಟ್ಟರ್‌ನಲ್ಲಿ ಶ್ಲಾಘಿಸಿದ ಮಾಜಿ ಆಟಗಾರರುಕಿಂಗ್ ಇಸ್ ಬ್ಯಾಕ್: ಫಾರ್ಮ್‌ಗೆ ಮರಳಿದ ವಿರಾಟ್ ಕೊಹ್ಲಿ; ಟ್ವಿಟ್ಟರ್‌ನಲ್ಲಿ ಶ್ಲಾಘಿಸಿದ ಮಾಜಿ ಆಟಗಾರರು

ಐಪಿಎಲ್ ಅಥವಾ ದೇಶೀಯ ಮಟ್ಟದ ಕ್ರಿಕೆಟ್‌ನಲ್ಲಿ ನಾನು ಆಡುತ್ತಿರುವ ಸ್ವರೂಪಗಳಲ್ಲಿ ಸ್ಥಿರ ಪ್ರದರ್ಶಣ ನಿಡಿಕೊಂಡು ಬರಲು ನಾನು ಯಶಸ್ವಿಯಾಗಿದ್ದೇನೆ. ಹೀಗೆ ಆಡುವುದನ್ನು ನಾನು ಆನಂದಿಸುತ್ತೇನೆ. ಸ್ಈರತೆ ಎಂದರೆ ಶತಕ ಅಥವಾ ಅರ್ಧ ಶತಕಗಳಿಸುವುದು ಮಾತ್ರವಲ್ಲ. ಸ್ಕೋರ್‌ಗಳ ನಡುವಿನ ಅಂತರವನ್ನು ಕಾಪಾಡಿಕೊಳ್ಳುವುದು ಸ್ಥಿರತೆಯಾಗಿದೆ" ಎಂದಿದ್ದಾರೆ ಧವನ್.

ಶಾಕಿಂಗ್!!!Maxwell ಎಸೆತದಲ್ಲಿ ಔಟಾಗಿದ್ದಕ್ಕೆ ಮ್ಯಾಥ್ಯೂ ವೇಡ್ ಗೆ ಅಷ್ಟು ಕೋಪ‌ ಬಂತಾ? | Oneindia Kannada

ಇನ್ನು ಈ ಬಾರಿಯ ಐಪಿಎಲ್‌ನಲ್ಲಿಯೂ ಧವನ್ ತಮ್ಮ ತಂಡದ ಪರವಾಗಿ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಕೆಲ ನಿರ್ಣಾಯಕ ಪಂದ್ಯಗಳಲ್ಲಿ ಹಿನ್ನಡೆಯನ್ನು ಅನುಭವಿಸಿದ ಪರಿಣಾಮವಾಗಿ ಧವನ್ ಪ್ರತಿನಿಧಿಸುತ್ತಿರುವ ಪಂಜಾಬ್ ಕಿಂಗ್ಸ್ ಈ ಬಾರಿಯ ಆವೃತ್ತಿಯ ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆಯಲು ವಿಫಲವಾಗಿದೆ.

Story first published: Saturday, May 21, 2022, 8:49 [IST]
Other articles published on May 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X