ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಕ್ರಿಕೆಟ್ ತಂಡಕ್ಕೆ ಶಿವ್ ಸುಂದರ್ ದಾಸ್ ಬ್ಯಾಟಿಂಗ್ ಕೋಚ್

Shiv Sunder Das named Indian womens team batting coach

ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಬ್ಯಾಟಿಂಗ್‌ ಕೋಚ್ ಆಗಿ ಟೀಮ್ ಇಂಡಿಯಾದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಶಿವ್ ಸುಂದರ್ ದಾಸ್ ಹೆಸರಿಸಲ್ಪಟ್ಟಿದ್ದಾರೆ. ಮಹಿಳಾ ತಂಡದ ಇಂಗ್ಲೆಂಡ್ ಪ್ರವಾಸದ ವೇಳೆ ದಾಸ್ ಮಾರ್ಗದರ್ಶನ ನೀಡಲಿದ್ದಾರೆ.

ಇಂಗ್ಲೆಂಡ್ ಪ್ರವಾಸದ ಕುರಿತು ಮಾತನಾಡುತ್ತಾ ನಿವೃತ್ತಿಯ ಸುಳಿವು ನೀಡಿದ್ರಾ ಮೊಹಮ್ಮದ್ ಶಮಿ?ಇಂಗ್ಲೆಂಡ್ ಪ್ರವಾಸದ ಕುರಿತು ಮಾತನಾಡುತ್ತಾ ನಿವೃತ್ತಿಯ ಸುಳಿವು ನೀಡಿದ್ರಾ ಮೊಹಮ್ಮದ್ ಶಮಿ?

ಶಿವ್ ಸುಂದರ್ ದಾಸ್ ಭಾರತ ತಂಡದ ಪರ 2000-02ರ ವರೆಗೆ 23 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. 23 ಟೆಸ್ಟ್‌ ಪಂದ್ಯಗಳಲ್ಲಿ 34.89ರ ಸರಾಸರಿಯಂತೆ 1326 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕಗಳು ಮತ್ತು 9 ಅರ್ಧ ಶತಕಗಳು ಸೇರಿವೆ.

'ಇದೊಂದು ಒಳ್ಳೆಯ ಅನುಭವವಾಗಲಿದೆ. ನಾನು ಇದಕ್ಕಾಗಿ ಎದುರು ನೋಡುತ್ತಿದ್ದೇನೆ,' ಎಂದು 43ರ ಹರೆಯದ, ಒಡಿಶಾ ತಂಡದ ಮಾಜಿ ನಾಯಕ ಶಿವ್ ಸುಂದರ್ ಪಿಟಿಐ ಜೊತೆಗೆ ಖುಷಿ ಹಂಚಿಕೊಂಡಿದ್ದಾರೆ. ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ದಾಸ್ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ಬ್ಯಾಟಿಂಗ್‌ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಐಪಿಎಲ್ : ಪೊಲಾರ್ಡ್ ಮತ್ತು ರೈನಾ ಹೆಸರಿನಲ್ಲಿದೆ ಈ ವಿಶಿಷ್ಟ ದಾಖಲೆಐಪಿಎಲ್ : ಪೊಲಾರ್ಡ್ ಮತ್ತು ರೈನಾ ಹೆಸರಿನಲ್ಲಿದೆ ಈ ವಿಶಿಷ್ಟ ದಾಖಲೆ

'ನಾನು ಕಳೆದ 4-5 ವರ್ಷಗಳಿಂದ ಎನ್‌ಸಿಎಯಲ್ಲಿ ಬ್ಯಾಟಿಂಗ್‌ ಕೋಚ್ ಆಗಿದ್ದೇನೆ. ಈ ಅವಕಾಶ ನೀಡಿದ್ದಕ್ಕಾಗಿ ನಾನು ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ,' ಎಂದು ದಾಸ್ ಹೇಳಿದ್ದಾರೆ.

Story first published: Tuesday, May 18, 2021, 9:14 [IST]
Other articles published on May 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X