ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೌರವ್ ಗಂಗೂಲಿ ಉಲ್ಲೇಖಿಸಿ ಪಿಸಿಬಿ ಮೇಲೆ ಕಿಡಿಕಾರಿದ ಶೋಯೆಬ್ ಅಖ್ತರ್

Shoaib Akhtar cites example of Sourav Ganguly, says ‘my job was not to sit on TV shows

ಇಸ್ಲಮಾಬಾದ್, ಮಾರ್ಚ್ 17: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ (ಬಿಸಿಸಿಐ) ಅಧ್ಯಕ್ಷ, ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿಯನ್ನು ಉಲ್ಲೇಖಿಸಿ, ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಖ್ತರ್, ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ (ಪಿಸಿಬಿ) ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

'ಪಿಎಸ್‌ಎಲ್ ಬಿಡುವ ಮೊದಲೇ ಅಲೆಕ್ಸ್ ಹೇಲ್ಸ್‌ಗೆ ಕೋವಿಡ್-19 ಇದ್ದಿರಬಹುದು!''ಪಿಎಸ್‌ಎಲ್ ಬಿಡುವ ಮೊದಲೇ ಅಲೆಕ್ಸ್ ಹೇಲ್ಸ್‌ಗೆ ಕೋವಿಡ್-19 ಇದ್ದಿರಬಹುದು!'

ಭಾರತವೂ ಸೇರಿದಂತೆ ಇತರ ದೇಶಗಳು ಅಲ್ಲಿನ ಕ್ರಿಕೆಟ್‌ ಪ್ರತಿಭೆಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿದೆ. ಆದರೆ ಪಾಕಿಸ್ತಾನ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಬರೀ ಟಿವಿಯ ಮುಂದೆ ಕುಳಿತುಕೊಳ್ಳುವುದಷ್ಟೇ ನನ್ನ ಕೆಲಸವಲ್ಲ ಎಂದಿರುವ ರಾವಲ್ಪಿಂಡಿ ಎಕ್ಸ್‌ಪ್ರೆಸ್ ಅಖ್ತರ್, ಪಿಸಿಬಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿ20ಯಲ್ಲಿ ಡಬಲ್ ಸೆಂಚುರಿ ಹೊಡೆಯಬಲ್ಲ ವಿಶ್ವದ ಏಕೈಕ ಕ್ರಿಕೆಟಿಗಟಿ20ಯಲ್ಲಿ ಡಬಲ್ ಸೆಂಚುರಿ ಹೊಡೆಯಬಲ್ಲ ವಿಶ್ವದ ಏಕೈಕ ಕ್ರಿಕೆಟಿಗ

ಆಗಾಗ ತನ್ನದೇ ಯೂಟ್ಯೂಬ್‌ ಚಾನೆಲ್ ಮೂಲಕ ಕಾಣಿಸಿಕೊಳ್ಳುವ ಅಖ್ತರ್, ಪಾಕ್‌ ಕ್ರಿಕೆಟ್‌ ದುರ್ಬಲಗೊಳ್ಳುತ್ತಿದೆ ಎಂದೂ ಕಳವಳ ತೋರಿಕೊಂಡಿದ್ದಾರೆ.

ಪಿಸಿಬಿ ಇದನ್ನು ಅನುಸರಿಸುತ್ತಿಲ್ಲ

ಪಿಸಿಬಿ ಇದನ್ನು ಅನುಸರಿಸುತ್ತಿಲ್ಲ

ಇತರ ಎಲ್ಲಾ ಕ್ರಿಕೆಟ್ ಬೋರ್ಡ್‌ಗಳು ತಮ್ಮಲ್ಲಿನ ಮಾಜಿ ಕ್ರಿಕೆಟಿಗರನ್ನು ದೇಶಿ ಕ್ರಿಕೆಟ್‌ಗೆ ಸಂಬಂಧಿಸಿದ ಹುದ್ದೆಗಳಿಗೆ ಬಳಸಿಕೊಳ್ಳುತ್ತವೆ. ಆದರೆ ಇದನ್ನು ಪಿಸಿಬಿ ಅನುಸರಿಸುತ್ತಿಲ್ಲ. ಇದೇ ಕಾರಣಕ್ಕೆ ಪಾಕಿಸ್ತಾನದಲ್ಲಿ ಕ್ರಿಕೆಟ್‌ ಬಳಲುತ್ತಿದೆ ಎಂದು ಶೋಯೆಬ್ ಹೇಳಿಕೊಂಡಿದ್ದಾರೆ.

ಗಂಗೂಲಿ, ದ್ರಾವಿಡ್‌ಗೆ ಒಳ್ಳೆ ಸ್ಥಾನ

ಗಂಗೂಲಿ, ದ್ರಾವಿಡ್‌ಗೆ ಒಳ್ಳೆ ಸ್ಥಾನ

'ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ, ರಾಹುಲ್ ದ್ರಾವಿಡ್ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿದ್ದಾರೆ. ಗ್ರೇಮ್ ಸ್ಮಿತ್ ಕ್ರಿಕೆಟ್ ಸೌತ್ ಆಫ್ರಿಕಾದ ಮುಖ್ಯಸ್ಥ, ಮಾರ್ಕ್ ಬೌಚರ್ ಮುಖ್ಯ ಕೋಚ್. ಇವೆಕ್ಕೆಲ್ಲ ವಿರುದ್ಧ ಅನ್ನಿಸುವಂತದ್ದು ಪಾಕಿಸ್ತಾನದಲ್ಲಿ ನಡೆಯುತ್ತಿದೆ,' ಎಂದು ಮಾಧ್ಯಮವೊಂದರಲ್ಲಿ ಮಾತನಾಡುತ್ತ ಅಖ್ತರ್ ಹೇಳಿದ್ದಾರೆ.

ಟಿವಿ ಶೋ ಮುಂದೆ ಕೂರೋದಷ್ಟೇ ಅಲ್ಲ

ಟಿವಿ ಶೋ ಮುಂದೆ ಕೂರೋದಷ್ಟೇ ಅಲ್ಲ

ಮಾತು ಮುಂದುವರೆಸಿದ ಅಖ್ತರ್, 'ಕ್ರಿಕೆಟ್‌ನ ಅನುಭವ ಹೊಂದಿರುವ ನನ್ನನ್ನು ಪಾಕಿಸ್ತಾನ ಯಾವತ್ತೂ ಸರಿಯಾಗಿ ಬಳಸಿಕೊಂಡಿಲ್ಲ. ನನ್ನ ಕೆಲಸ ಬರೀ ಟಿವಿ ಶೋಗಳ ಮುಂದೆ ಕೂರುವುದಷ್ಟೇ ಅಲ್ಲ. ಪಾಕ್ ನನಗೆ ಕ್ರಿಕೆಟ್‌ ನಡೆಸಲು ಅವಕಾಶ ಮಾಡಿಕೊಡಬೇಕು,' ಎಂದಿದ್ದಾರೆ.

ಪಿಎಸ್‌ಎಲ್ ಬಗ್ಗೆಯೂ ಗರಂ

ಪಿಎಸ್‌ಎಲ್ ಬಗ್ಗೆಯೂ ಗರಂ

'ನನ್ನ ಕೋಪಕ್ಕೆ ಪಿಎಸ್‌ಎಲ್ ಕೂಡ ಕಾರಣ. ಪಾಕಿಸ್ತಾನಕ್ಕೆ ಎಷ್ಟೋ ವರ್ಷಗಳ ಬಳಿಕ ಕ್ರಿಕೆಟ್‌ ಬಂದಿದೆ. ಆದರೆ ನಮ್ಮ ದೇಶದಲ್ಲಿ ಪಿಎಸ್‌ಎಲ್ ಆರಂಭವಾಗಿದ್ದು ಇದೇ ಮೊದಲಬಾರಿ. ಇದೀಗ ಅದೂ ಕೂಡ ತೊಂದರೆಯಲ್ಲಿದೆ. ಕದ ಮುಚ್ಚಿದ ಮೈದಾನದಲ್ಲಿ ಟೂರ್ನಿ ನಡೆಯುವಂತಾಗಿದೆ,' ಎಂದು ಅಖ್ತರ್ ಹೇಳಿದ್ದಾರೆ.

Story first published: Wednesday, March 18, 2020, 13:22 [IST]
Other articles published on Mar 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X