ಸೆಹ್ವಾಗ್ ಹೇಳಿದ 2003ರ ವಿಶ್ವಕಪ್‌ನ ಆ ಘಟನೆ ನಡೆದೇ ಇಲ್ಲ ಎಂದ ಶೋಯೆಬ್ ಅಖ್ತರ್

ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಪಂದ್ಯವವೆಂದರೆ ಅದು ಕ್ರಿಕೆಟ್ ಅಭಿಮಾನಿಗಳಿಗೆ ಸ್ಮರಣೀಯ. ಅದರಲ್ಲೂ 2003ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವನ್ನು ಭರ್ಜರಿಯಾಗಿ ಮಣಿಸಿ ಮುಂದಿನ ಹಂತಕ್ಕೇರಿದ ರೀತಿ ರೋಮಾಂಚಕ. ಈ ಪಂದ್ಯದ ಬಗ್ಗೆ ಮಾತನಾಡುತ್ತಾ ವಿರೇಂದ್ರ ಸೆಹ್ವಾಗ್ ಒಂದು ಕುತೂಹಲಕಾರಿ ಅಂಶವನ್ನು ಬಹಿರಂಗ ಪಡಿಸಿದ್ದರು.

ಬೌಲಿಂಗ್ ಮಾಡುವ ಸಮಯದಲ್ಲಿ ಪಾಕಿಸ್ತಾನದ ವೇಗಿ ಶೋಯೆಬ್ ಅಖ್ತರ್ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅವರನ್ನು ಕೆಣಕುವ ಯತ್ನವನ್ನು ಮಾಡಿದ್ದಕ್ಕೆ ಪ್ರತ್ಯುತ್ತರವನ್ನು ನೀಡಿದ ಸಂಗತಿಯನ್ನು ಹಂಚಿಕೊಂಡಿದ್ದರು. ಆದರೆ ಸೆಹ್ವಾಗ್ ಹೇಳಿದ ಈ ಘಟನೆ ಅಂದಿನ ಪಂದ್ಯದಲ್ಲಿ ನಡೆದೇ ಇಲ್ಲ ಎಂದು ಶೋಯೆಬ್ ಅಖ್ತರ್ ವಾದಿಸಿದ್ದಾರೆ.

ಅಕ್ಟೋಬರ್‌ನಲ್ಲಿ ಭಾರತೀಯ ಕ್ರಿಕೆಟನ್ನು ಕೊರೊನಾ ಹೆಚ್ಚು ಕಾಡಲಿದೆ: ದ್ರಾವಿಡ್

ಸೆಹ್ವಾಗ್‌ಗೆ ಅಖ್ತರ್ ಸವಾಲು

ಸೆಹ್ವಾಗ್‌ಗೆ ಅಖ್ತರ್ ಸವಾಲು

ಬೌಲಿಂಗ್ ವೇಳೆಯಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ಬಳಿ ಬಂದ ಶೊಯೆಬ್ ಅಖ್ತರ್ ತನ್ನ ಎಸೆತಕ್ಕೆ ಸವಾಲೊಂದನ್ನು ಹಾಕಿದ್ದರಂತೆ. ಅದಕ್ಕೆ ವೀರೇಂದ್ರ ಸೆಹ್ವಾಗ್ ಸ್ಟ್ರೈಕ್‌ನಲ್ಲಿ ಬ್ಯಾಟಿಂಗ್‌ನಲ್ಲಿದ್ದ ಸಚಿನ್‌ ತೋರಿಸಿ ಅಲ್ಲಿ ನಿನ್ನ ತಂದೆ ನಿಂದಿದ್ದಾರೆ, ನಿನ್ನ ಎಸೆತಕ್ಕೆ ಆತ ಬಾರಿಸಿ ತೋರಿಸುತ್ತಾರೆ ಎಂದು ಉತ್ತರಿಸಿದ್ದಾಗಿ ಹೇಳಿದ್ದರು. ಅದಾದ ಬಳಿಕ ಸಚಿನ್ ಅಖ್ತರ್ ಎಸೆತಕ್ಕೆ ಬಾರಿಸಿದ ಹೊಡೆವನ್ನು ಉದ್ದೇಶಿಸಿ ಅಖ್ತರ್‌ಗೆ 'ತಂದೆ ತಂದೆಯೇ ಮಗ ಮಗನೇ' ಎಂದು ಹೇಳಿದ್ದ ವಿಚಾರವನ್ನು ಹಂಚಿಕೊಂಡಿದ್ದರು.

ಹಾಗೆ ಹೇಳಿದ್ದರೆ ಉಳಿಯುತ್ತಿದ್ದನಾ?

ಹಾಗೆ ಹೇಳಿದ್ದರೆ ಉಳಿಯುತ್ತಿದ್ದನಾ?

ಆದರೆ ಇತ್ತೀಚೆಗೆ ಪಾಕಿಸ್ತಾನಿ ಪತ್ರಕರ್ತನೋರ್ವನ ಜೊತೆಗೆ ನಡೆಸಿದ ಸಂದರ್ಶನದಲ್ಲಿ ಅಖ್ತರ್ ಬಳಿ ಈ ಬಗ್ಗೆ ಪ್ರಶ್ನೆಯನ್ನು ಕೇಳಲಾಯಿತು,. ಆಗ ಅಖ್ತರ್ ಅಂದಿನ ಪಂದ್ಯದಲ್ಲಿ ಆ ರೀತಿ ಘಟನೆಯೇ ನಡೆದಿಲ್ಲ ಎಂದು ಹೇಳಿದ್ದಾರೆ. ಹಾಗೆ ಹೇಳಿದ್ದರೆ ಆತ ಅಲ್ಲಿ ಉಳಿಯುತ್ತಿದ್ದನಾ? ನಾನು ಆತನನ್ನು ಬಿಡುತ್ತಿದ್ದೆನಾ? ಎಂದು ಪ್ರಶ್ನಿಸಿದ್ದಾರೆ.

ಶತಕದಂಚಿನಲ್ಲಿ ಎಡವಿದ್ದ ಸಚಿನ್

ಶತಕದಂಚಿನಲ್ಲಿ ಎಡವಿದ್ದ ಸಚಿನ್

ಸಚಿನ್ ತೆಂಡೂಲ್ಕರ್ 98 ರನ್‌ಗಳ ಸ್ಪೋಟಕ ಬ್ಯಾಟಿಂಗ್‌ನಿಂದಾಗಿ ಆ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಮಣಿಸಿತ್ತು. ಆದರೆ ಶತಕದಂಚಿನಲ್ಲಿ ಸಚಿನ್ ಎಡವಿ ಅಖ್ತರ್‌ಗೆ ವಿಕೆಟ್ ಒಪ್ಪಿಸಿದ್ದರು. ಆರಂಭಿಕನಾಗಿ ಸಚಿನ್ ಜೊತೆಗೆ ಕಣಕ್ಕಿಳಿದಿದ್ದ ಸೆಹ್ವಾಗ್ ಸ್ಪೋಟಕ ಆರಂಭ ಪ್ರದರ್ಶಿಸಿ ಮೊದಲ 6 ಓವರ್‌ಗಳಲ್ಲಿ 53 ರನ್‌ಗಳ ಭರ್ಜರಿ ಜೊತೆಯಾಟವನ್ನು ನೀಡಿದ್ದರು.

ಭರ್ಜರಿ ಗೆಲುವು

ಭರ್ಜರಿ ಗೆಲುವು

ಈ ಪಂದ್ಯದಲ್ಲಿ ಪಾಕಿಸ್ತಾನ ಸಯೀದ್ ಅನ್ವರ್ ಶತಕದ ಸಹಾಯದಿಂದ 7 ವಿಕೆಟ್ ಕಳೆದುಕೊಂಡು 273 ರನ್ ಬಾರಿಸಿತ್ತು, ಇದನ್ನು ಬೆನ್ನಟ್ಟಿದ ಭಾರತ 4 ವಿಕೆಟ್ ಕಳೆದುಕೊಂಡು 45.5 ಓವರ್‌ಗಳಲ್ಲೇ ಗುರಿ ತಲುಪಿತ್ತು. ಅಂತಿಮವಾಗಿ ಯುವರಾಜ್ ಸಿಂಗ್ ಅಜೇಯ 50 ಹಾಗೂ ರಾಹುಲ್ ದ್ರಾವಿಡ್ ಅಜೇಯ 44 ರನ್ ಬಾರಿಸಿ ಗೆಲುವನ್ನು ಸುಲಭವಾಗಿಸಿದರು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, August 2, 2020, 11:53 [IST]
Other articles published on Aug 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X