ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೌರವ್ ಗಂಗೂಲಿಯನ್ನು ಫೇವರೀಟ್ ಕ್ಯಾಪ್ಟನ್ ಎಂದ ಶೋಯೆಬ್ ಅಖ್ತರ್

Shoaib Akhtar heaps praises on Sourav Ganguly

ಭಾರತ ಪಾಕಿಸ್ತಾನ ದ್ವಿಪಕ್ಷೀಯ ಸರಣಿಯಲ್ಲಿ ಸೌರವ್ ಗಂಗೂಲಿ ಮತ್ತು ಶೋಯೆಬ್ ಅಖ್ತರ್ ನಡುವಿನ ಕದನವೂ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಅಭಿಮಾನಿಗಳು ಇಬ್ಬರು ನಡುವಿನ ಹೋರಾಟವನ್ನು ನೊಡಲು ಎದುರು ನೋಡುತ್ತಿದ್ದರು. ಆದರೆ ಈಗ ಭಾರತ ತಂಡದಲ್ಲಿ ಸೌರವ್ ಗಂಗೂಲಿಯನ್ನು ಅಖ್ತರ್ ಫೇವರೀಟ್ ಕ್ಯಾಪ್ಟನ್ ಎಂದಿದ್ದಾರೆ.

ಭಾರತದ ಕ್ರಿಕೆಟ್‌ನಲ್ಲಿ ಸೌರವ್ ಗಂಗೂಲಿ ನಾಯಕನಾಗಿ ದೊಡ್ಡ ಬದಲಾವಣೆಗೆ ಕಾರಣರಾಗಿದ್ದರು. 2000ನೇ ಇಸವಿಯಲ್ಲಿ ಭಾರತ ಮ್ಯಾಚ್ ಫಿಕ್ಸಿಂಗ್ ಸುಳಿಗೆ ಸಿಲುಕಿದ ನಂತರ ಯುವ ತಂಡವನ್ನು ಕಟ್ಟಿಕೊಂಡು ಭಾರತದಲ್ಲಿ ಕ್ರಿಕೆಟ್ ಕ್ರಾಂತಿಯನ್ನೇ ಮಾಡಿದ್ದರು. ಅದನ್ನು ಉದ್ದೇಶಿಸಿ ಅಖ್ತರ್ ಮಾತನಾಡಿದ್ದಾರೆ.

'ಇಂಗ್ಲೆಂಡ್‌ನಲ್ಲಿ ನಾನೂ ವರ್ಣಭೇದ ಎದುರಿಸಿದ್ದೆ' ಎಂದ ಭಾರತೀಯ ಕ್ರಿಕೆಟರ್!'ಇಂಗ್ಲೆಂಡ್‌ನಲ್ಲಿ ನಾನೂ ವರ್ಣಭೇದ ಎದುರಿಸಿದ್ದೆ' ಎಂದ ಭಾರತೀಯ ಕ್ರಿಕೆಟರ್!

ಭಾರತದ ದೃಷ್ಟಿಯಿಂದ ನೋಡುವುದಾದರೆ ನನ್ನ ಫೇವರೀಟ್ ನಾಯಕ ಸೌರವ್ ಗಂಗೂಲಿ. ಆತನಿಗಿಂತ ಅತ್ಯುತ್ತಮ ನಾಯಕನಿದ್ದಾರೆ ಎಂಬ ಯಾವುದೇ ಅನುಮಾನಗಳೂ ನನಗಿಲ್ಲ. ಎಂಎಸ್ ಧೋನಿ ಕೂಡ ಅದ್ಭುತ ನಾಯಕನೇ. 1990ರ ಅವಧಿಯಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಗೆಲ್ಲುವ ತಂಡವಾಗಿರಲಿಲ್ಲ ಎಂದು ಅಖ್ತರ್ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಹೆಲೋ ಆಪ್‌ನಲ್ಲಿ ಅಭಿಮಾನಿಗಳೊಂದಿಗೆ ಸಂವಾದವನ್ನು ನಡೆಸಿದ ಅಖ್ತರ್ ಈ ಬಗ್ಗೆ ಮಾತನಾಡಿದ್ದಾರೆ. 2000ನೇ ಇಸವಿಯಲ್ಲಿ ಗಂಗೂಲಿ ಟೀಮ್ ಇಂಡಿಯಾ ನಾಯಕತ್ವವನ್ನು ವಹಿಸಿಕೊಂಡ ನಂತರ ಭಾರತ ಪಾಕಿಸ್ತಾನ ತಂಡವನ್ನು ಸೋಲಿಸುವ ಪ್ರತಿಭೆಗಳನ್ನು ಹೊಂದಿದೆ ಎಂದು ಭಾವಿಸಿದ್ದೆ. ಅಂದು ಅಂದುಕೊಂಡಂತೆಯೇ ನಡೆದಿತ್ತು ಎಂದಿದ್ದಾರೆ.

ಆಗಸ್ಟ್‌ನಲ್ಲಿ ಇಂಡಿಯಾ vs ಶ್ರೀಲಂಕಾ ಕ್ರಿಕೆಟ್ ಸರಣಿಗೆ ಒಪ್ಪಿಗೆ ಸೂಚಿಸಿದ ಬಿಸಿಸಿಐಆಗಸ್ಟ್‌ನಲ್ಲಿ ಇಂಡಿಯಾ vs ಶ್ರೀಲಂಕಾ ಕ್ರಿಕೆಟ್ ಸರಣಿಗೆ ಒಪ್ಪಿಗೆ ಸೂಚಿಸಿದ ಬಿಸಿಸಿಐ

ಶೋಯೆಬ್ ಅಖ್ತರ್ ಸೌರವ್ ಗಂಗೂಲಿ ನಾಯಕತ್ವದಲ್ಲೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಡಿದ್ದಾರೆ. ಐಪಿಎಲ್ ಉದ್ಘಾಟನಾ ಆವೃತ್ತಿಯಲ್ಲಿ ಅಖ್ತರ್ ಕೆಕೆಆರ್ ಪರವಾಗಿ ಕಣಕ್ಕಿಳಿದಿದ್ದರು. ಗಂಗೂಲಿಯೇ ಆ ತಂಡವನ್ನು ಮುನ್ನಡೆಸಿದ್ದರು.

Story first published: Thursday, June 11, 2020, 18:37 [IST]
Other articles published on Jun 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X