ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಪಾಕ್ ಟಿ20 ವಿಶ್ವಕಪ್‌ ಮುಖಾಮುಖಿಯ ಬಗ್ಗೆ ಗಂಭೀರ ಹೇಳಿಕೆ ನೀಡಿದ ಶೋಯೆಬ್ ಅಖ್ತರ್!

Shoaib Akhtar makes bold prediction for T20 World Cup final

ಕರಾಚಿ: ಟಿ20 ವಿಶ್ವಕಪ್ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್‌(ಯುಎಇ)ನಲ್ಲಿ ಅಕ್ಟೋಬರ್‌ನಲ್ಲಿ ಆರಂಭಗೊಳ್ಳಲಿದೆ. ಅಸಲಿಗೆ ಈ ಟೂರ್ನಿ ಭಾರತದಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್-19 ಭೀತಿಯ ಕಾರಣ ಭಾರತದಲ್ಲಿ ನಡೆಯಬೇಕಿದ್ದ ಟೂರ್ನಿ ಯುಎಇಗೆ ಸ್ಥಳಾಂತರಗೊಂಡಿದೆ. ಅಕ್ಟೋಬರ್‌ 17ರಿಂದ ಟಿ20 ವಿಶ್ವಕಪ್‌ ಟೂರ್ನಿ ಆರಂಭಗೊಳ್ಳಲಿದೆ. ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

ಅದ್ಭುತ ಕ್ಯಾಚ್‌ನೊಂದಿಗೆ ರಾಜಪಕ್ಸ ವಿಕೆಟ್‌ ಮುರಿದ ಕೆ ಗೌತಮ್: ವಿಡಿಯೋಅದ್ಭುತ ಕ್ಯಾಚ್‌ನೊಂದಿಗೆ ರಾಜಪಕ್ಸ ವಿಕೆಟ್‌ ಮುರಿದ ಕೆ ಗೌತಮ್: ವಿಡಿಯೋ

ಭಾರತ-ಪಾಕಿಸ್ತಾನ ತಂಡಗಳು ವಿಶ್ವಕಪ್‌ ಟಿ20ಯಲ್ಲಿ ಒಂದೇ ಗ್ರೂಪ್‌ನಲ್ಲಿವೆ. ಹೀಗಾಗಿ ಸುಮಾರು 5 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಟಿ20ಐನಲ್ಲಿ ಕಾದಾಡಲಿವೆ.

ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯ

ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯ

ಭಾರತ ಮತ್ತು ಪಾಕಿಸ್ತಾನ ತಂಡಗಳು ಕ್ರೀಡೆಯಲ್ಲಿ ಮುಖಾಮುಖಿಯಾಗುತ್ತಿದೆ ಅಂದರೆ ಅಲ್ಲಿ ಹೆಚ್ಚಿನ ಕುತೂಹಲ ಮನೆ ಮಾಡಿರತ್ತೆ. ಅದರಲ್ಲೂ ಕ್ರಿಕೆಟ್‌ನಲ್ಲಿ ಇತ್ತಂಡಗಳ ಮುಖಾಮುಖಿ ಇತ್ತೀಚೆಗೆ ತೀರಾ ಅಪರೂಪವಾದ್ದರಿಂದ ಕ್ರಿಕೆಟ್ ಪ್ರೇಮಿಗಳು ಎರಡೂ ತಂಡಗಳ ಕದನಕ್ಕಾಗಿ ಕಾದು ಕುಳಿದುಕೊಳ್ಳೋದಿದೆ. ಟಿ20 ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಲ್ಲಿ ಏನಾಗಲಿದೆ ಎಂದು ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಹೇಳಿದ್ದಾರೆ.

ಭಾರತವನ್ನು ಪಾಕ್ ಸೋಲಿಸುತ್ತೆ

ಭಾರತವನ್ನು ಪಾಕ್ ಸೋಲಿಸುತ್ತೆ

ಸ್ಪೋರ್ಟ್ಸ್ ತಕ್‌ನಲ್ಲಿ ಮಾತನಾಡಿದ ಶೋಯೆಬ್ ಅಖ್ತರ್, "ನನಗನ್ನಿಸುತ್ತದೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಆಡುತ್ತವೆ. ಈ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋಲುತ್ತದೆ. ಯುಎಇಯಲ್ಲಿನ ಪರಿಸ್ಥಿತಿಗಳು ಎರಡೂ ತಂಡಗಳಿಗೂ ಚೆನ್ನಾಗಿ ಹೊಂದಾಣಿಕೆ ಆಗುತ್ತವೆ," ಎಂದಿದ್ದಾರೆ.

ಟಿ20 ವಿಶ್ವಕಪ್‌ ಗ್ರೂಪ್‌ಗಳು

ಟಿ20 ವಿಶ್ವಕಪ್‌ ಗ್ರೂಪ್‌ಗಳು

ಟಿ20 ವಿಶ್ವಕಪ್‌ ಟೂರ್ನಿ ಈ ವರ್ಷ ಅಕ್ಟೋಬರ್‌ 17ರಿಂದ ನವೆಂಬರ್‌ 14ರ ವರೆಗೆ ಯುಎಇಯಲ್ಲಿ ನಡೆಯಲಿದೆ. ಭಾರತ ತಂಡವಿರುವ ಗ್ರೂಪಿನಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳಿವೆ. ಭಾರತ ತಂಡ ಗ್ರೂಪ್ 2ರಲ್ಲಿದೆ. ಗ್ರೂಪ್ 1ರಲ್ಲಿ ಹಾಲಿ ಚಾಂಪಿಯನ್ಸ್ ವೆಸ್ಟ್‌ ಇಂಡೀಸ್, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿವೆ.

Story first published: Sunday, July 25, 2021, 1:09 [IST]
Other articles published on Jul 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X