ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಖ್ತರ್ ವಿರುದ್ಧ ಅತ್ಯಾಚಾರ ಆರೋಪ: ಘಟನೆ ಬಗ್ಗೆ ತುಟಿ ಬಿಚ್ಚಿದ ಶೋಯೆಬ್!

Shoaib Akhtar makes shocking revelation from Pakistans tour of Australia in 2005

ಲಾಹೋರ್: ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಫಾಸ್ಟ್ ಬೌಲರ್‌ ಆಗಿ ಗಮನ ಸೆಳೆದಿದ್ದವರು ಪಾಕಿಸ್ತಾನದ ಶೋಯೆಬ್ ಅಖ್ತರ್. ರಾವಲ್ಪಿಂಡಿ ಎಕ್ಸ್‌ಪ್ರೆಸ್ ಎಂದು ಕರೆಯಲ್ಪಡುತ್ತಿದ್ದ ಅಖ್ತರ್ ಮೇಲೆ ಅತ್ಯಾಚಾರದ ಆರೋಪವಿತ್ತಂತೆ. ಹಲೋ ಆ್ಯಪ್ ಜೊತೆ ಮಾತನಾಡಿದ ಅಖ್ತರ್, ತನ್ನ ವಿರುದ್ಧ ಅತ್ಯಾಚಾರದ ಆರೋಪ ಮಾಡಲಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಪಾಕಿಸ್ತಾನ ತಂಡ ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಂಡಿದ್ದಾಗ ಕೆಟ್ಟ ಆರೋಪವೊಂದು ತನ್ನ ಬೆನ್ನಿಗಂಟಿತ್ತು ಎಂದಿರುವ ಅಖ್ತರ್ ಕುತೂಹಲಕಾರಿ ಸಂಗತಿ ಬಾಯ್ಬಿಟ್ಟಿದ್ದಾರೆ.

ಪಂದ್ಯ ಗೆಲ್ಲದಿದ್ದರೂ ಅಭಿಮಾನಿಗಳ ಹೃದಯ ಗೆದ್ದ 4 ಅದ್ಭುತ ಒಡಿಐ ಪ್ರದರ್ಶನಗಳುಪಂದ್ಯ ಗೆಲ್ಲದಿದ್ದರೂ ಅಭಿಮಾನಿಗಳ ಹೃದಯ ಗೆದ್ದ 4 ಅದ್ಭುತ ಒಡಿಐ ಪ್ರದರ್ಶನಗಳು

ತನ್ನ ತಂಡದ ಸಹ ಆಟಗಾರ ಹುಡುಗಿಯೊಬ್ಬಳ ಜೊತೆ ಅಪಾರ್ಥ ಮಾಡಿಕೊಂಡಿದ್ದ. ಹೀಗಾಗಿ ಮಹಿಳೆಯನ್ನು ಅತ್ಯಾಚಾರ ಮಾಡಿದ ಆರೋಪ ನನ್ನ ಮೇಲೆ ಬಂದಿತ್ತು ಎಂದು ಹಿಂದಿನ ಘಟನೆಯೊಂದನ್ನು ಸ್ಮರಿಸಿಕೊಂಡಿದ್ದಾರೆ.

ನೀಲಿಚಿತ್ರ ಲೋಕಕ್ಕೆ ಕಾಲಿಟ್ಟ ಮಹಿಳಾ 'ಸೂಪರ್ ಕಾರ್ ರೇಸರ್' ರಿನೀ ಗ್ರೇಸಿ!ನೀಲಿಚಿತ್ರ ಲೋಕಕ್ಕೆ ಕಾಲಿಟ್ಟ ಮಹಿಳಾ 'ಸೂಪರ್ ಕಾರ್ ರೇಸರ್' ರಿನೀ ಗ್ರೇಸಿ!

ಸುಮಾರು 15 ವರ್ಷಗಳ ಹಿಂದಿನ ಆ ಕೆಟ್ಟ ಘಟನೆ ನೆನೆದುಕೊಂಡು ಅಖ್ತರ್ ಹೇಳಿರುವ ಮಾತುಗಳು, ಕುತೂಹಲಕಾರಿ ವಿಚಾರಗಳು ಇಲ್ಲಿವೆ.

ಹೆಸರು ಬಹಿರಂಗಗೊಳಿಸಿಲ್ಲ

ಹೆಸರು ಬಹಿರಂಗಗೊಳಿಸಿಲ್ಲ

ತನ್ನ ಮೇಲೆ ಅತ್ಯಾಚಾರ ಆರೋಪ ಬರಲು ಕಾರಣವಾಗಿದ್ದ ತಂಡದ ಆ ಸಹ ಆಟಗಾರನ ಹೆಸರನ್ನು ಅಖ್ತರ್ ಬಹಿರಂಗಪಡಿಸಿಲ್ಲ. ಆದರೆ 2005ರಲ್ಲಿ ಪಾಕ್‌ ತಂಡ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದಾಗ, ತನ್ನ ತಂಡದ ಆಟಗಾರನೊಬ್ಬ ಹುಡುಗಿಯೊಬ್ಬಳ ಜೊತೆ ಅಪಾರ್ಥ ಮಾಡಿಕೊಂಡಿದ್ದ. ಹೀಗಾಗಿ ಹುಡುಗಿ ಮೇಲೆ ದೈಹಿಕ ದೌರ್ಜನ್ಯ ಮೆರೆದ ಆರೋಪ ವಿನಾಕಾರಣ ನನ್ನ ವಿರುದ್ಧ ಕೇಳಿಬಂದಿತ್ತು ಎಂದು ಅಖ್ತರ್ ಹೇಳಿಕೊಂಡಿದ್ದಾರೆ.

ಹುಡುಗನ ತಪ್ಪು ಮರೆಮಾಚಲಾಗಿತ್ತು

ಹುಡುಗನ ತಪ್ಪು ಮರೆಮಾಚಲಾಗಿತ್ತು

ಘಟನೆ ಸ್ಮರಿಸಿ ಮಾತನಾಡಿದ ಅಖ್ತರ್, 'ಆವತ್ತು ನನ್ನ ವಿರುದ್ಧ ಅತ್ಯಾಚಾರದ ಆರೋಪ ಮಾಡಲಾಗಿತ್ತು. ಪಾಕಿಸ್ತಾನ ತಂಡದಲ್ಲಿದ್ದ ಬೇರೊಬ್ಬ ಆಟಗಾರ ಹುಡುಗಿಯೊಬ್ಬಳ ಜೊತೆ ಅಪಾರ್ಥ ಮಾಡಿಕೊಂಡಿದ್ದ. ಪಾಕಿಸ್ತಾನ ಟೀಮ್ ಮ್ಯಾನೇಜ್ಮೆಂಟ್ ಹುಡುಗ ಮಾಡಿದ್ದನ್ನು ಮರೆಮಾಚಿತ್ತು. ಹೀಗಾಗಿ ಎಲ್ಲರೂ ನನ್ನನ್ನು ತಪ್ಪಿತಸ್ಥ ಅಂದುಕೊಂಡಿದ್ದರು,' ಎಂದರು.

ಹೆಸರು ಬಹಿರಂಗಪಡಿಸದಂತೆ ಹೇಳಿದ್ದೆ

ಹೆಸರು ಬಹಿರಂಗಪಡಿಸದಂತೆ ಹೇಳಿದ್ದೆ

'ಆ ಬಳಿಕ, ಹುಡುಗನ ಹೆಸರು ಬಹಿರಂಗಪಡಿಸದಂತೆ ನಾನು ಕ್ರಿಕೆಟ್ ಬೋರ್ಡ್‌ನಲ್ಲಿ ಕೇಳಿಕೊಂಡೆ. ಘಟನೆ ನಡೆಯುವಾಗ ಆ ಜಾಗದಲ್ಲಿ ಶೋಯೆಬ್ ಅಖ್ತರ್ ಇರಲಿಲ್ಲ ಎಂದು ಘೋಷಿಸುವಂತೆ ಬೋರ್ಡ್ ಜೊತೆ ಹೇಳಿದೆ. ಯಾಕೆಂದರೆ ಘಟನೆ ನಡೆದಾಗ ಎಲ್ಲರೂ ನನ್ನನ್ನೇ ತಪ್ಪಿತಸ್ಥನೆನ್ನುವಂತೆ ನೋಡುತ್ತಿದ್ದರು,' ಎಂದು ಅಖ್ತರ್ ಘಟನೆ ವಿವರಿಸಿದ್ದಾರೆ.

ಉರಿಯೋ ಬೆಂಕಿಗೆ ತುಪ್ಪ

ಉರಿಯೋ ಬೆಂಕಿಗೆ ತುಪ್ಪ

ಘಟನೆ ಸಮಯದಲ್ಲೇ ಆಸ್ಟ್ರೇಲಿಯಾ ಪ್ರವಾಸದ ಅರ್ಧದಿಂದಲೇ ಅಖ್ತರ್ ಅವರನ್ನು ಪಾಕ್‌ಗೆ ವಾಪಸ್‌ ಕರೆಸಿಕೊಳ್ಳಲಾಗಿತ್ತು. ಇದು ಉರಿಯೋ ಬೆಂಕಿಗೆ ತುಪ್ಪ ಸುರಿದಂತೆ ಆಗಿತ್ತು. ಮುಂಬರಲಿರುವ ಭಾರತದ ಪ್ರವಾಸ ಸರಣಿಗೆ ಫುಲ್ ಫಿಟ್ನೆಸ್ ಕಾಯ್ದುಕೊಳ್ಳುವುದಕ್ಕೋಸ್ಕರ ಅಖ್ತರ್ ಅವರನ್ನು ಪಾಕ್‌ಗೆ ವಾಪಸ್ ಕರೆಸಿಕೊಳ್ಳಲಾಗಿದೆ ಎಂದು ಆನಂತರ ಪಾಕ್ ಕ್ರಿಕೆಟ್ ಬೋರ್ಡ್ ಎಂದು ಸ್ಪಷ್ಟನೆ ನೀಡಬೇಕಾಗಿ ಬಂದಿತ್ತು ಎಂದು ಅಖ್ತರ್ ಹೇಳಿಕೊಂಡಿದ್ದಾರೆ.

Story first published: Tuesday, June 9, 2020, 19:45 [IST]
Other articles published on Jun 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X