ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ಕೆ ಶೋಯೆಬ್ ಅಖ್ತರ್ ಮೆಚ್ಚುಗೆ

Shoaib Akhtar Praises Indian Prime Minister Narendra Modi

ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಕೊರೊನಾ ವೈರಸ್‌ನ ವಿರುದ್ಧ ಹೋರಾಟಕ್ಕೆ ಮೋದಿ ತೆಗೆದುಕೊಂಡಿರುವ ನಿರ್ಧಾರ ದಿಟ್ಟವಾದ ನಿರ್ಧಾರ ಅದನ್ನು ಶ್ಲಾಘಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಸಾಕಷ್ಟು ಭಿನ್ನ ಅಭಿಪ್ರಾಯಗಳಿರಬಹುದು. ಆದರೆ ಲಾಕ್ಡೌನ್ ಬಗ್ಗೆ ಮೋದಿ ತೆಗೆದುಕೊಂಡ ನಿರ್ಧಾರ ದಿಟ್ಟತನದ್ದು. ಜಗತ್ತೇ ಅವರನ್ನು ಮೆಚ್ಚಿದೆ. ಕರೋನದಿಂದ ಭಾರತಕ್ಕೆ ಆಗುವಷ್ಟು ನಷ್ಟ ಇನ್ಯಾವ ದೇಶಕ್ಕೂ ಆಗುತ್ತಿಲ್ಲ. ಆದರೆ ಮೋದಿ ಆರ್ಥಿಕ ವಿಚಾರಕ್ಕಿಂತ ಜನರ ಜೀವಕ್ಕೆ ಬೆಲೆ ಕೊಟ್ಟರು. ಮೋದಿಯ ಇಂತಹ ಅದ್ಭುತ ನಿರ್ಧಾರಕ್ಕೆ ನನ್ನದೊಂದು ಸಲಾಂ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಹೆಲೊ ಆ್ಯಪ್‌ನಲ್ಲಿ ಸಂವಾದ ನಡೆಸಿದ ಅಖ್ತರ್ ಭಾರತೀಯ ಕ್ರಿಕೆಟ್‌ನ ಬಗ್ಗೆಯೂ ಸಾಕಷ್ಟು ಮಾತನಾಡಿದ್ದಾರೆ.

ಬಿಸಿಸಿಐ ಅಧ್ಯಕ್ಷ ಗಂಗೂಲಿ ಬಗ್ಗೆ ಅಖ್ತರ್ ಹೇಳಿದ್ದಿಷ್ಟು

ಬಿಸಿಸಿಐ ಅಧ್ಯಕ್ಷ ಗಂಗೂಲಿ ಬಗ್ಗೆ ಅಖ್ತರ್ ಹೇಳಿದ್ದಿಷ್ಟು

ಭಾರತ ಕಂಡ ಅದ್ಭುತ ಕ್ರಿಕೆಟರ್ ಸೌರವ್ ಗಂಗೂಲಿ ಬಿಸಿಸಿಐನ ಚುಕ್ಕಾಣಿ ಹಿಡಿದಿದ್ದಾರೆ. ಗಂಗೂಲಿ ಸಾಮಾನ್ಯ ಮನುಷ್ಯನಲ್ಲ, ಭಾರತೀಯ ಕ್ರಿಕೆಟನ್ನು ಉತ್ತುಂಗಕ್ಕೆ ಅವರು ಕೊಂಡೊಯ್ಯಲಿದ್ದಾರೆ ಎಂದು ರಾವಲ್ಪಿಂಡಿ ಎಕ್ಸ್ಪ್ರೆಸ್ ಶೋಯಬ್ ಅಖ್ತರ್ ಸಂವಾದದ ವೇಳೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

2019ರ ವಿಶ್ವಕಪ್‌ನ ತಪ್ಪು ಪುನರಾವರ್ತನೆಯಾಗದು

2019ರ ವಿಶ್ವಕಪ್‌ನ ತಪ್ಪು ಪುನರಾವರ್ತನೆಯಾಗದು

ವಿಶ್ವಕಪ್‌ ಬಗ್ಗೆಯೂ ಈ ಸಂದರ್ಭದಲ್ಲಿ ಅಖ್ತರ್ ಮಾತನಾಡಿದ್ದಾರೆ. 2019ರ ವಿಶ್ವಕಪ್‌ನಲ್ಲಿ ಆಗಿರುವ ತಪ್ಪನ್ನು ಪುನರಾವರ್ತನೆ ಆಗಲು ಕೊಹ್ಲಿ ಬಿಡುವುದಿಲ್ಲ ಎಂದಿದ್ದಾರೆ. ಭಾರತೀಯ ಕ್ರಿಕೆಟ್‌ನಲ್ಲಿ ಕೊಹ್ಲಿ ಮತ್ತೆ ಇತಿಹಾಸ ಸೃಷ್ಟಿಸಲಿದ್ದಾರೆ ಎಂದು ಅಖ್ತರ್ ಭವಿಷ್ಯ ನುಡಿದಿದ್ದಾರೆ.

ಕ್ರಿಕೆಟ್‌ನ ಗುಣಮಟ್ಟ ಕುಸಿದಿದೆ

ಕ್ರಿಕೆಟ್‌ನ ಗುಣಮಟ್ಟ ಕುಸಿದಿದೆ

ಪ್ರಸಕ್ತ ಕಾಲದ ಕ್ರಿಕೆಟ್‌ನ ಗುಣಮಟ್ಟ ಸಾಕಷ್ಟು ಕುಸಿದಿದೆ ಎಂದು ಶೋಯೆಬ್ ಅಖ್ತರ್ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಉತ್ತಮ ಬೌಲರ್‌ಗಳು ಈಗ ಇಲ್ಲ, ಇಂತಾ ಸಮಯದಲ್ಲೇನಾದರೂ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಅವರು ಆಡುತ್ತಿದ್ದರೆ ಬೌಲರ್‌ಗಳನ್ನು ಹಿಗ್ಗಾಮುಗ್ಗ ಗೋಳುಹೊಯ್ದುಕೊಳ್ಳುತ್ತಿದ್ದರು ಎಂದು ಹೇಳಿದರು.

ರೋಹಿತ್ ಶರ್ಮಾ ಗುಣಗಾನ ಮಾಡಿದ ಅಖ್ತರ್

ರೋಹಿತ್ ಶರ್ಮಾ ಗುಣಗಾನ ಮಾಡಿದ ಅಖ್ತರ್

ಟೀಮ್ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಬಗ್ಗೆ ಈ ಸಂವಾದದಲ್ಲಿ ಅಖ್ತರ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅವರು ದಿ ಗ್ರೇಟ್ ರೋಹಿತ್ ಶರ್ಮಾ ಎಂದು ನಾನು 2014ರಲ್ಲಿ ಹೇಳಿದ್ದೆ. ಜಗತ್ತಿನ ಯಾವ ಬ್ಯಾಟ್ಸ್ಮನ್ ಬಳಿಯೂ ಇಲ್ಲದಷ್ಟು ಅತ್ಯದ್ಭುತ ಟೈಮಿಂಗ್ ರೋಹಿತ್ ಬಳಿಯಿದೆ. ಅವರ ಬ್ಯಾಟಿಂಗ್ ಶೈಲಿಯೇ ಸೊಗಸು. ರೋಹಿತನ್ನು ಔಟ್ ಮಾಡುವ ಬಗ್ಗೆ ಚಿಂತಿಸುವುದೇ ಇಲ್ಲ. 200 ರನ್ ಹೊಡೆದು ಪೆವಿಲಿಯನ್ ಹೋಗು ಎನ್ನುತ್ತೇನೆ. ಮನಸಿಗೆ ಬಂದಾಗ ಶತಕ, ದ್ವಿಶತಕ ಹೊಡೆಯುವ ಅಥವಾ ಔಟಾಗುವ ಆಟಗಾರ ಆತ ಎಂದಿದ್ದಾರೆ ಪಾಕಿಸ್ತಾನದ ಮಾಜಿ ವೇಗಿ.

ಅಖ್ತರ್ ಟಾಪ್ 5 ಬ್ಯಾಟ್ಸ್‌ಮನ್ಸ್

ಅಖ್ತರ್ ಟಾಪ್ 5 ಬ್ಯಾಟ್ಸ್‌ಮನ್ಸ್

ಹೆಲೋ ಆ್ಯಪ್‌ನ ಸಂವಾದದ ವೇಳೆ ಅಖ್ತರ್ ತಮ್ಮ ಟಾಪ್ 5 ಬ್ಯಾಟ್ಸ್‌ಮನ್‌ಗಳನ್ನು ಹೆಸರಿಸಿದರು. ಇದರಲ್ಲಿ ಇಬ್ಬರು ಭಾರತೀಯರು ಇದ್ದಾರೆ. ಪಾಕಿಸ್ತಾನದ ಯುವ ಕ್ರಿಕೆಟಿಗ ಬಾಬರ್ ಅಜಂ, ಭಾರತದ ನಾಯಕ ವಿರಾಟ್ ಕೊಹ್ಲಿಮ ಉಪನಾಯಕ ರೋಹಿತ್ ಶರ್ಮಾ, ಇಂಗ್ಲೆಂಡ್‌ನ ಜೋ ರೂಟ್, ಮತ್ತು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅಖ್ತರ್ ಹೆಸರಿಸಿದ ಪ್ರಸ್ತುತ ಟಾಬ್ ಬ್ಯಾಟ್ಸ್‌ಮನ್‌ಗಳು.

Story first published: Monday, April 27, 2020, 12:05 [IST]
Other articles published on Apr 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X