ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತಕ್ಕೆ ಬೌಲಿಂಗ್ ಕೋಚ್ ಆಗಲು ರೆಡಿ: ಪಾಕ್ ವೇಗಿ ಶೋಯೆಬ್ ಅಖ್ತರ್

Shoaib Akhtar ready to take Indian bowling coaching job

ಕರಾಚಿ, ಮೇ 5: ಅವಕಾಶ ನೀಡಿದರೆ ನಾನು ಟೀಮ್ ಇಂಡಿಯಾಕ್ಕೆ ಬೌಲಿಂಗ್ ಕೋಚ್ ಆಗಲು ತಯಾರಿರುವುದಾಗಿ ಪಾಕಿಸ್ತಾನದ ಮಾಜಿ ಮಾರಕ ವೇಗಿ ಶೋಯೆಬ್ ಅಖ್ತರ್ ಹೇಳಿದ್ದಾರೆ. ನನ್ನ ಕೆಲಸ ಜ್ಞಾನವನ್ನು ಪಸರಿಸುವುದಾಗಿರುವುದರಿಂದ ಕೋಚಿಂಗ್ ಜಾಬ್‌ಗೆ ಆಫರ್ ಮಾಡಿದರೆ ನಾನದಕ್ಕೆ ಸಿದ್ಧವಿರುವುದಾಗಿ ಅಖ್ತರ್ ಹೇಳಿಕೊಂಡಿದ್ದಾರೆ.

ತೆಂಡೂಲ್ಕರ್, ಕೊಹ್ಲಿ ನಡುವಿನ ವ್ಯತ್ಯಾಸ ವಿವರಿಸಿದ ಸುರೇಶ್ ರೈನಾತೆಂಡೂಲ್ಕರ್, ಕೊಹ್ಲಿ ನಡುವಿನ ವ್ಯತ್ಯಾಸ ವಿವರಿಸಿದ ಸುರೇಶ್ ರೈನಾ

ಸಾಮಾಜಿಕ ಜಾಲತಾಣ 'ಹಲೋ' ಜೊತೆ ಮಾತನಾಡಿದ ಶೋಯೆಬ್ ಅಖ್ತರ್ ತನ್ನ ಬಯಕೆ ತೋರಿಕೊಂಡರು. ಭವಿಷ್ಯದಲ್ಲಿ ಭಾರತದ ಬೌಲಿಂಗ್ ಕೋಚ್ ಆಗುವ ಅವಕಾಶ ದೊರೆತರೆ ಆಗುತ್ತೀರಾ ಎಂಬ ಪ್ರಶ್ನೆಗೆ ಶೋಯೆಬ್ ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ.

ಆಲ್‌ಟೈಮ್ ಬೆಸ್ಟ್ ಟೆಸ್ಟ್ ತಂಡವನ್ನು ಹೆಸರಿಸಿದ ಗಂಭೀರ್: ಕುಂಬ್ಳೆ ಕ್ಯಾಪ್ಟನ್ಆಲ್‌ಟೈಮ್ ಬೆಸ್ಟ್ ಟೆಸ್ಟ್ ತಂಡವನ್ನು ಹೆಸರಿಸಿದ ಗಂಭೀರ್: ಕುಂಬ್ಳೆ ಕ್ಯಾಪ್ಟನ್

'ಖಂಡಿತವಾಗಿಯೂ. ನನ್ನ ಕೆಲಸವೇ ಜ್ಞಾನವನ್ನು ಪಸರಿಸೋದು. ನಾನೇನು ಕಲಿತಿದ್ದೇನೋ ಅದನ್ನು ಇತರರಿಗೆ ಹಂಚಲು ಬಯಸುತ್ತೇನೆ,' ಎಂದು ಪ್ರತಿಕ್ರಿಯಿಸಿದ್ದಾರೆ. ವಿಶ್ವದ ವೇಗಿಗಳಲ್ಲಿ ಗುರುತಿಸಿಕೊಂಡಿದ್ದ ಅಖ್ತರ್, 46 ಟೆಸ್ಟ್ ಪಂದ್ಯಗಳಲ್ಲಿ 178, 163 ಏಕದಿನ ಪಂದ್ಯಗಳಲ್ಲಿ 247, 15 ಟಿ20ಐ ಪಂದ್ಯಗಳಲ್ಲಿ 19 ವಿಕೆಟ್ ದಾಖಲೆ ಹೊಂದಿದ್ದಾರೆ.

ಆತನ ಬೌಲಿಂಗ್‌ಗೆ ಬೆದರಿ ನಿದ್ದೆಗೆಟ್ಟಿದ್ದೆ: ರೋಹಿತ್ ಶರ್ಮಾ ಕಂಗೆಡಿಸಿದ್ದ ಆಸಿಸ್ ಬೌಲರ್ಆತನ ಬೌಲಿಂಗ್‌ಗೆ ಬೆದರಿ ನಿದ್ದೆಗೆಟ್ಟಿದ್ದೆ: ರೋಹಿತ್ ಶರ್ಮಾ ಕಂಗೆಡಿಸಿದ್ದ ಆಸಿಸ್ ಬೌಲರ್

'ನಾನು ಹೆಚ್ಚು ಆಕ್ರಮಣಕಾರಿ, ವೇಗಿ ಮತ್ತು ಜಗತ್ತು ಹೆಚ್ಚು ಮಾತನಾಡುವ ಬೌಲರ್‌ಗಳನ್ನು ತಯಾರಿಸಬಲ್ಲೆ. ಈಗಿನ ಬ್ಯಾಟ್ಸ್‌ಮನ್‌ಗಳಿಗೆ ದಿಟ್ಟ ಬೌಲಿಂಗ್ ಮಾಡಬಲ್ಲ ಬೌಲರ್‌ಗಳನ್ನು ನಾನು ಸೃಷ್ಟಿಸಬಲ್ಲೆ. ನೀವು ಆ ಬೌಲರ್‌ಗಳ ಪ್ರದರ್ಶನವನ್ನು ಆನಂದಿಸುತ್ತೀರಿ ಕೂಡ,' ಎಂದು ಅಖ್ತರ್ ಹೇಳಿದ್ದಾರೆ.

ಆನ್‌ಲೈನ್ ಸಂಗೀತ ಕಛೇರಿಯಲ್ಲಿ ಪಾಲ್ಗೊಂಡ ವಿರಾಟ್, ರೋಹಿತ್, ಸಾನಿಯಾಆನ್‌ಲೈನ್ ಸಂಗೀತ ಕಛೇರಿಯಲ್ಲಿ ಪಾಲ್ಗೊಂಡ ವಿರಾಟ್, ರೋಹಿತ್, ಸಾನಿಯಾ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಗಳಲ್ಲೊಂದಾದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್)ಗೆ ಬೌಲಿಂಗ್ ಕೋಚ್ ಆಗಲೂ ತನಗೆ ಆಸೆಯಿರುವುದಾಗಿ ಶೋಯೆಬ್ ಹೇಳಿಕೊಂಡಿದ್ದಾರೆ. ಅದ್ದೂರಿ ಟಿ20 ಲೀಗ್ ಆರಂಭಗೊಂಡಾಗ ಅಖ್ತರ್, ಕೆಕೆಆರ್ ಪರ ಆಡಿದ್ದರು.

Story first published: Tuesday, May 5, 2020, 9:26 [IST]
Other articles published on May 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X