ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

10 ಸಾವಿರ ಜೀವರಕ್ಷಕ, ಇಂಡೋ-ಪಾಕ್ ಸರಣಿ : ಭಾರತದ ಬಳಿ ಅಖ್ತರ್ ಮನವಿ

shoaib-akhtar-requests-india-to-provide-10-000-ventilators-for-struggling-pakistan

ವಿಶ್ವಾದ್ಯಂತ ಕೊರೊನಾ ವೈರಸ್ ಭೀತಿ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಭಾರತದಲ್ಲೂ ಕೊರೊನಾ ವೈರಸ್‌ನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ. ನಿಯಂತ್ರಣಕ್ಕೆ ಸಾಕಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಂಡ ಹೊರತಾಗಿಯೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಾ ಭೀತಿಯನ್ನು ಹೆಚ್ಚಿಸುತ್ತಿದೆ.

ಇನ್ನು ಪಕ್ಕದ ಪಾಕಿಸ್ತಾನದಲ್ಲೂ ಇದರ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಪಾಕಿಸ್ತಾನ ಸರ್ಕಾರವಂತೂ ಈ ವೈರಸ್‌ ವಿರುದ್ಧದ ಹೋರಾಟಕ್ಕೆ ಹೆಣಗಾಡುತ್ತಿದೆ. ಈ ಮಧ್ಯೆ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಭಾರತ ಪಾಕಿಸ್ತಾನ ಎರಡೂ ರಾಷ್ಟ್ರಗಳು ಒಂದಾಗಿ ಕೊರೊನಾ ವೈರಸ್ ವಿರುದ್ಧ ಹೋರಾಡಬೇಕು ಎಂದು ಹೇಳಿಕೊಂಡಿದ್ದಾರೆ.

ಕೊರೊನಾ ವೈರಸ್ ವಿರುದ್ಧ ಎರಡೂ ರಾಷ್ಟ್ರಗಳು ತಮ್ಮ ಧಾರ್ಮಿಕ ಮತ್ತು ತಾತ್ವಿಕ ಭಿನ್ನತೆಗಳನ್ನು ಪಕ್ಕದಲ್ಲಿಟ್ಟು ಹೋರಾಡುವಂತೆ ಸಲಹೆಯನ್ನು ನೀಡಿದ್ದಾರೆ.

10 ಸಾವಿರ ವೆಂಟಿಲೇಟರ್ ನೀಡಿ, ಪಾಕ್ ಯಾವಾಗಲೂ ಸ್ಮರಿಸುತ್ತದೆ!

10 ಸಾವಿರ ವೆಂಟಿಲೇಟರ್ ನೀಡಿ, ಪಾಕ್ ಯಾವಾಗಲೂ ಸ್ಮರಿಸುತ್ತದೆ!

ಪಿಟಿಐ ಸುದ್ಧಿ ಸಂಸ್ಥೆಯ ಜೊತೆಗೆ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಮಾತಮಾಡಿದ್ದಾರೆ. ಈ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ 10 ಸಾವಿರ ವೆಂಟಿಲೇಟರ್‌ಗಳನ್ನು ನೀಡುವಂತೆ ಅಖ್ತರ್ ಕೇಳಿಕೊಂಡಿದ್ದಾರೆ. ಈ ಸಹಾಯವನ್ನು ಭಾರತ ಮಾಡಿದರೆ ಭಾರತವನ್ನು ಪಾಕಿಸ್ತಾನ ಯಾವಾಗಲೂ ಸ್ಮರಿಸಿಕೊಳ್ಳುತ್ತದೆ ಎಂದು ಅಖ್ತರ್ ಹೇಳಿದ್ದಾರೆ.

ಎರಡೂ ರಾಷ್ಟ್ರಗಳು ಜತೆಯಾಗಿ ಹೋರಾಡಬೇಕು

ಎರಡೂ ರಾಷ್ಟ್ರಗಳು ಜತೆಯಾಗಿ ಹೋರಾಡಬೇಕು

ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳು ಈ ಸಂದರ್ಭದಲ್ಲಿ ಜೊತೆಯಾಗಿ ಹೋರಾಡಬೇಕು ಎಂದಿದ್ದಾರೆ ಶೋಯೆಬ್ ಅಖ್ತರ್. ಎರಡೂ ರಾಷ್ಟ್ರಗಳು ಈ ಮಾರಕ ಸಾಂಕ್ರಾಮಿಕ ರೊಗದ ವಿರುದ್ಧ ಜೊತೆಯಾಗಿ ಹೋರಾಡಿದಾಗ ಮಾತ್ರವೇ ಸೋಲಿಸಲು ಸಾಧ್ಯ ಎಂದು ಹೇಳಿದ್ದಾರೆ.

ಇಂಡೋ-ಪಾಕ್ ಸರಣಿ ಆಯೋಜನೆಗೆ ಮನವಿ

ಇಂಡೋ-ಪಾಕ್ ಸರಣಿ ಆಯೋಜನೆಗೆ ಮನವಿ

ಈ ಮಧ್ಯೆ ಕೊರೊನಾ ವೈರಸ್ ವಿರುದ್ಧ ಹೋರಾಟವನ್ನು ನಡೆಸಲಕು ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿಯನ್ನು ಆಯೋಜನೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ ಶೋಯೆಬ್ ಅಖ್ತರ್. ಆ ಮೂಲಕ ನಿಧಿ ಸಂಗ್ರಹಣೆ ಮಾಡಿ ಎರಡೂ ರಾಷ್ಟ್ರಗಳು ಬಳಸಿಕೊಳ್ಳಬಹುದು ಎಂಬ ಸಲಹೆ ನೀಡಿದ್ದಾರೆ.

ಮೂರು ಪಂದ್ಯಗಳ ಏಕದಿನ ಸರಣಿ

ಮೂರು ಪಂದ್ಯಗಳ ಏಕದಿನ ಸರಣಿ

ಕೊರೊನ ಆವೈರಸ್ ವಿರುದ್ಧದ ಹೋರಾಟಕ್ಕಾಗಿ ನಿಧಿ ಸಂಗ್ರಹಣೆಗಾಗಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಯೋಜನೆ ಮಾಡಲು ಎರಡೂ ರಾಷ್ಟ್ರಗಳು ಚಿಂತನೆ ನಡೆಸಬೇಕು ಎಂದಿದ್ದಾರೆ. ಈ ಪಂದ್ಯಗಳು ದುಬೈ ಅಥವಾ ಬೇರೆ ಯಾವುದೇ ತಟಸ್ಥ ಸ್ಥಳದಲ್ಲಿ ನಡೆಯಲಿ ಎಂದು ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ.

ಸೌಹಾರ್ದತೆ ಬಗ್ಗೆ ಹಲವು ಬಾರಿ ಮಾತು

ಸೌಹಾರ್ದತೆ ಬಗ್ಗೆ ಹಲವು ಬಾರಿ ಮಾತು

ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಭಾರತ ಮತ್ತು ಪಾಕಿಸ್ತಾನದ ಸೌಹಾರ್ದತೆಯ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷಾದ ಬಳಿಕ ಭಾರತ ಪಾಕ್ ಕ್ರಿಕೆಟ್ ಸಂಬಂಧದ ವೃದ್ಧಿಗೆ ಒಲವನ್ನು ವ್ಯಕ್ತಪಡಿಸಿದ್ದರು ಅಖ್ತರ್.

ಶೋಯೆಬ್‌ಗಿದ್ದಾರೆ ಭಾರತದಲ್ಲಿ ಅಪಾರ ಅಭಿಮಾನಿಗಳು

ಶೋಯೆಬ್‌ಗಿದ್ದಾರೆ ಭಾರತದಲ್ಲಿ ಅಪಾರ ಅಭಿಮಾನಿಗಳು

ಶೋಯೆಬ್ ಅಖ್ತರ್ ಹಲವು ಸಂದರ್ಭಗಳಲ್ಲಿ ಭಾರತದ ಪರವಹಿಸಿ ಮಾತನಾಡಿದ್ದಾರೆ. ಅದರಲ್ಲೂ ಬಿಸಿಸಿಐ ತೆಗೆದುಕೊಳ್ಳುತ್ತಿರುವ ನಿರ್ಧಾರದ ಬಗ್ಗೆ ಪ್ರಶಂಸೆಯನ್ನು ವ್ಯಕತಪಡಿಸುತ್ತಲೇ ಬಂದಿದ್ದಾರೆ. ಹೀಗಾಗಿ ಅಖ್ತರ್ ಸಾಕಷ್ಟು ಸಂಖ್ಯೆಯ ಅಭಿಮಾನಿಗಳನ್ನು ಭಾರತದಲ್ಲೂ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Story first published: Thursday, April 9, 2020, 14:41 [IST]
Other articles published on Apr 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X