ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್; ಭಾರತ vs ಪಾಕಿಸ್ತಾನ ಹೈವೋಲ್ಟೆಜ್ ಪಂದ್ಯದಲ್ಲಿ ಈ ತಂಡಕ್ಕೆ ಒತ್ತಡ ಜಾಸ್ತಿ; ಶೋಯೆಬ್ ಅಖ್ತರ್

Shoaib Akhtars Big Statement On India- Pakistan T20 World Cup Clash At Melbourne Cricket Ground

ಅಕ್ಟೋಬರ್ 23ರಂದು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2022ರ ಟಿ20 ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡ ಹೈವೋಲ್ಟೇಜ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಕಳೆದ ವರ್ಷ ದುಬೈನಲ್ಲಿ ನಡೆದ ಟಿ20 ವಿಶ್ವಕಪ್ ಸೂಪರ್ 12 ಪಂದ್ಯದಲ್ಲಿ ಎರಡು ತಂಡಗಳ ಹಿಂದಿನ ಪಂದ್ಯದಲ್ಲಿ ಪಾಕಿಸ್ತಾನವು 10 ವಿಕೆಟ್‌ಗಳಿಂದ ಭಾರತ ವಿರುದ್ಧ ಗೆಲುವು ಸಾಧಿಸಿತ್ತು. ಆ ಮೂಲಕ ವಿಶ್ವಕಪ್‌ನಲ್ಲಿ ಭಾರತದ ಅಜೇಯ ಓಟವನ್ನು ಮುರಿಯಿತು.

"ಭಾರತ ಮತ್ತು ಪಾಕಿಸ್ತಾನ ತಂಡಗಳು 2022ರ ಟಿ20 ವಿಶ್ವಕಪ್ ಪಂದ್ಯವನ್ನು 1,00,000ಕ್ಕೂ ಅಧಿಕ ಪ್ರೇಕ್ಷಕರಿಂದ ತುಂಬಿದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಡಲಿದೆ ಮತ್ತು ಹೆಚ್ಚಿನ ಪ್ರೇಕ್ಷಕರು ಈ ಬಾರಿ ಟೀಮ್ ಇಂಡಿಯಾವನ್ನು ಹುರಿದುಂಬಿಸಿ, ಬಾಬರ್ ಅಜಮ್ ನೇತೃತ್ವದ ತಂಡದ ಮೇಲೆ ಒತ್ತಡವನ್ನು ಹೇರಲಿದ್ದಾರೆ," ಎಂದು ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.

Shoaib Akhtars Big Statement On India- Pakistan T20 World Cup Clash At Melbourne Cricket Ground

"ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿನ ವಿಕೆಟ್ ರಾತ್ರಿಯಲ್ಲಿ ಬೌಲಿಂಗ್‌ಗೆ ಸಹಕರಿಸುತ್ತದೆ. ಭಾರತದ ವಿರುದ್ಧದ ಪಂದ್ಯವನ್ನು ಗೆಲ್ಲಲು ಪಾಕಿಸ್ತಾನಕ್ಕೆ ಎರಡನೇ ಬೌಲಿಂಗ್ ಸೂಕ್ತವಾಗಿದೆ. ಅಲ್ಲಿ 1,00,000 ಪ್ರೇಕ್ಷಕರು ಇರುತ್ತಾರೆ, ಅದರಲ್ಲಿ 70,000 ಜನರು ಭಾರತವನ್ನು ಬೆಂಬಲಿಸುತ್ತಾರೆ. ಆದ್ದರಿಂದ ಒತ್ತಡವು ಪಾಕಿಸ್ತಾನದ ಮೇಲೆ ಇರುತ್ತದೆ," ಎಂದು ಶೋಯೆಬ್ ಅಖ್ತರ್ ಸ್ಪೋರ್ಟ್ಸ್‌ಕೀಡಾ ಕ್ರಿಕೆಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಭಾರತವು ಸರಿಯಾದ ತಂಡವನ್ನು ಆಯ್ಕೆ ಮಾಡಿದರೆ ಪಂದ್ಯವನ್ನು ಗೆಲ್ಲುವ ಉತ್ತಮ ಅವಕಾಶವಿದೆ ಎಂದು ಹೇಳಿದ ಶೋಯೆಬ್ ಅಖ್ತರ್, ಈ ಬಾರಿ ಪಾಕಿಸ್ತಾನಕ್ಕೆ ಆಟವು ಮೈದಾನದ ಸುತ್ತ ನಡೆಯುವುದಿಲ್ಲ ಎಂದು ತಿಳಿಸಿದರು.

Shoaib Akhtars Big Statement On India- Pakistan T20 World Cup Clash At Melbourne Cricket Ground

"ಭಾರತವು ತಮ್ಮ ಪಾತ್ರಗಳನ್ನು ವ್ಯಾಖ್ಯಾನಿಸದೆ ಪಾಕಿಸ್ತಾನದ ವಿರುದ್ಧ ದುರ್ಬಲ ತಂಡವನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಮ್ಯಾನೇಜ್ಮೆಂಟ್ ಭಾರತ ತಂಡವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು ಮತ್ತು ಅದು ಘನ ತಂಡವಾಗಿರುತ್ತದೆ ಎಂದು ನಾನು ಸಂಪೂರ್ಣವಾಗಿ ನಂಬುತ್ತೇನೆ. ಇದು ಈ ಬಾರಿ ಪಾಕಿಸ್ತಾನಕ್ಕೆ ಗೆಲುವು ಕಷ್ಟ," ಎಂದು ಶೋಯೆಬ್ ಅಖ್ತರ್ ಭವಿಷ್ಯ ನುಡಿದಿದ್ದಾರೆ.

"ಭಾರತವು ಟಿ20 ವಿಶ್ವಕಪ್ ಪಂದ್ಯಾವಳಿಗೆ ಸರಿಯಾದ ತಂಡವನ್ನು ಆರಿಸಿದರೆ ಪಾಕಿಸ್ತಾನವನ್ನು ಸೋಲಿಸಲು ಅವರಿಗೆ ಉತ್ತಮ ಅವಕಾಶವಿದೆ. ಸದ್ಯ ಸಮಯದಲ್ಲಿ ಎರಡು ತಂಡಗಳು ಸಂಪೂರ್ಣವಾಗಿ ಸಮವಾಗಿವೆ. ಆದ್ದರಿಂದ ಫಲಿತಾಂಶವನ್ನು ಊಹಿಸಲು ತುಂಬಾ ಕಷ್ಟ," ಶೋಯೆಬ್ ಅಖ್ತರ್ ವಿವರಿಸಿದರು.

Story first published: Sunday, June 5, 2022, 15:30 [IST]
Other articles published on Jun 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X