ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನ ಪಾಕಿಸ್ತಾನ ಸೋಲಿಸಲಿದೆ: ಶೋಯೆಬ್ ಅಕ್ತರ್ ಭವಿಷ್ಯ

Shoaib akhtar

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮುಂಬರುವ ಟಿ20 ವಿಶ್ವಕಪ್‌ನ ಪಂದ್ಯದಲ್ಲಿ ಭಾರತವನ್ನ ಪಾಕಿಸ್ತಾನ ತಂಡ ಮಣಿಸಲಿದೆ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಕ್ತರ್ ಭವಿಷ್ಯ ನುಡಿದಿದ್ದಾರೆ.

ಕಳೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವು ಭಾರತವನ್ನ ಸುಲಭವಾಗಿ ಮಣಿಸಿ 10 ವಿಕೆಟ್‌ಗಳ ಐತಿಹಾಸಿಕ ಗೆಲುವನ್ನ ಸಾಧಿಸಿತ್ತು. ಇದೇ ರೀತಿಯಲ್ಲಿ ಮೆಲ್ಬರ್ನ್‌ ಮೈದಾನದಲ್ಲಿ ಇದೇ ವರ್ಷ ಅಕ್ಟೋಬರ್ 23ರಂದು ನಡೆಯಲಿರುವ ಪಂದ್ಯದಲ್ಲಿ ಪಾಕ್ ಭಾರತವನ್ನ ಸೋಲಿಸಲಿದೆ ಎಂದು ಹೇಳಿದ್ದಾರೆ.

2022ರ ಐಸಿಸಿ ಪುರುಷರ ಟಿ20 ವಿಶ್ವಕಪ್ ವೇಳಾಪಟ್ಟಿ ಈಗಾಗಲೇ ಬಿಡುಗಡೆಯಾಗಿದ್ದು, ಭಾರತಕ್ಕೆ ಪಾಕಿಸ್ತಾನವೇ ಮೊದಲ ಎದುರಾಳಿಯಾಗಿದೆ. ಅಕ್ಟೋಬರ್ 16ರಿಂದ ಆರಂಭವಾಗುವ ಟಿ20 ವಿಶ್ವಕಪ್ ನವೆಂಬರ್ 13ರವರೆಗೆ ನಡೆಯಲಿದೆ. ಟಾಪ್-8 ಟಿ20 ತಂಡಗಳು ನೇರವಾಗಿ ಸೂಪರ್-12 ಹಂತಕ್ಕೆ ಅರ್ಹತೆ ಪಡೆಯುತ್ತವೆ. ಎಂಟು ತಂಡಗಳು ಮೊದಲ ಸುತ್ತಿನಲ್ಲಿ ಪಾಲ್ಗೊಂಡು ಅಲ್ಲಿಂದ ನಾಲ್ಕು ತಂಡಗಳು ಸೂಪರ್-12 ಹಂತಕ್ಕೆ ಏರಲಿವೆ.

ಐಪಿಎಲ್ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆದ 10 ಆಟಗಾರರುಐಪಿಎಲ್ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆದ 10 ಆಟಗಾರರು

ಅಕ್ಟೋಬರ್ 16ರಂದು ಶ್ರೀಲಂಕಾ ಮತ್ತು ನಮೀಬಿಯಾ ನಡುವಿನ ಮೊದಲ ಸುತ್ತಿನ ಪಂದ್ಯದ ಮೂಲಕ ಟೂರ್ನಿ ಶುರುವಾಗುತ್ತದೆ.

ಸದ್ಯ ಟಿ20 ಕ್ರಿಕೆಟ್‌ನಲ್ಲಿ ಪಾಕಿಸ್ತಾನವೇ ಅತ್ಯಂತ ಬಲಿಷ್ಠ ತಂಡವೆಂದು ಹೇಳಿರುವ ಶೋಯೆಬ್ ಅಕ್ತರ್ ಭಾರತಕ್ಕೆ ಮತ್ತೊಂದು ಸೋಲು ಖಚಿತ ಎಂದು ಬಹಳ ಬೇಗನೆ ಭವಿಷ್ಯ ನುಡಿದಿದ್ದಾರೆ.

"ನಾವು ಮೆಲ್ಬೋರ್ನ್‌ನಲ್ಲಿ ಮತ್ತೆ ಭಾರತವನ್ನು ಸೋಲಿಸುತ್ತೇವೆ. ಟಿ20 ಕ್ರಿಕೆಟ್‌ನಲ್ಲಿ ಭಾರತಕ್ಕಿಂತ ಪಾಕಿಸ್ತಾನ ಉತ್ತಮ ತಂಡವಾಗಿದೆ. ನಾವು ಕ್ರಿಕೆಟ್‌ನಲ್ಲಿ ಎರಡೂ ದೇಶಗಳ ಮುಖಾಮುಖಿಯಾದಾಗಲೆಲ್ಲಾ ಭಾರತೀಯ ಮಾಧ್ಯಮಗಳು ತಮ್ಮ ತಂಡದ ಮೇಲೆ ಅನಗತ್ಯ ಒತ್ತಡವನ್ನು ಉಂಟುಮಾಡುತ್ತವೆ, ಭಾರತವು ಸೋಲುವುದು ಸಹಜ" ಎಂದು ಅವರು ಹೇಳಿದರು.

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಮುನ್ನಡೆಯುತ್ತಿರುವ ಮೊದಲ ಐಸಿಸಿ ಟೂರ್ನಿ ಇದಾಗಿದ್ದು, ಭಾರತದ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿವೆ.

ಅನೇಕ ಐಸಿಸಿ ವಿಶ್ವಕಪ್‌ಗಳ ಆತಿಥ್ಯ ವಹಿಸಿಕೊಂಡಿರುವ ಆಸ್ಟ್ರೇಲಿಯಾವು ಮತ್ತೊಂದು ವಿಶ್ವಕಪ್‌ಗೆ ನಡೆಸಿಕೊಡಲು ಈಗಿನಿಂದಲೇ ತಯಾರಿ ನಡೆಸಿದೆ. ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ ನಡೆಯುವ ವಿಶ್ವಕಪ್ ಪಂದ್ಯಗಳನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿರುವ ಏಳು ಆತಿಥೇಯ ನಗರಗಳನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಿಸಿದೆ.

Virat ವಿಕೆಟ್ ತೆಗೆದ ಸೌತ್ ಆಫ್ರಿಕಾ ಬೌಲರ್ ಬಾಯಲ್ಲಿ ಜೈ ಶ್ರೀರಾಮ್ ಜಪ | Oneindia Kannada

ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಆತಿಥ್ಯವನ್ನು ಅಡಿಲೇಡ್, ಬ್ರಿಸ್ಬೇನ್, ಗೀಲಾಂಗ್, ಹೊಬಾರ್ಟ್, ಮೆಲ್ಬೋರ್ನ್, ಪರ್ತ್ ಮತ್ತು ಸಿಡ್ನಿ ವಹಿಸಲಿದ್ದು, ಒಟ್ಟು 45 ಪಂದ್ಯಗಳನ್ನು ಆಯೋಜಿಸಲಿದೆ.

Story first published: Tuesday, January 25, 2022, 9:43 [IST]
Other articles published on Jan 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X