ಅದೊಂದೇ ಬಾರಿ ಉದ್ದೇಶಪೂರ್ವಕವಾಗಿ ಆ ತಪ್ಪನ್ನು ಮಾಡಿದ್ದೆ: ಧೋನಿಯನ್ನು ಉದ್ದೇಶಿಸಿ ಅಖ್ತರ್ ಹೇಳಿಕೆ

ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ತಾನು ಉದ್ದೇಶ ಪೂರ್ವಕವಾಗಿ ಬೀಮರ್ ಎಸೆತವನ್ನು ಧೋನಿಗೆ ಎಸೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಮಾತ್ರವಲ್ಲ ತಾನು ಆ ರೀತಿ ಮಾಡಬಾರದಾಗಿತ್ತು. ಹತಾಶೆಯಿಂದ ಆ ರೀತಿ ಮಾಡಿದ್ದೆ ಎಂದು ಶೊಯೆಬ್ ಅಖ್ತರ್ ಹೇಳಿಕೊಂಡಿದ್ದಾರೆ.

ಶೋಯೆಬ್ ಅಖ್ತರ್ ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಜೊತೆಗೆ ಮಾತನಾಡುತ್ತಾ ಈ ಘಟನೆಯ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದಾರೆ. ಆ ದಿನ ಮೊಣ ಕಾಲು ನೋವಿನಿಂದ ನರಳುತ್ತಿದ್ದು ಧೋನಿ ಮೈದಾನದ ತುಂಬೆಲ್ಲಾ ಚೆಂಡನ್ನು ಬಾರಿಸುತ್ತಿದ್ದ ರೀತಿ ನನ್ನಲ್ಲಿ ಹತಾಶೆಯನ್ನು ಹೆಚ್ಚಿಸಿತ್ತು ಎಂದು ಅಖ್ತರ್ ಹೇಳಿದ್ದಾರೆ.

ಐಪಿಎಲ್ 2020: ನೀವು ತಿಳಿದುಕೊಳ್ಳಲೇ ಬೇಕಿರುವ ಐಪಿಎಲ್‌ನ 5 ಬ್ಯಾಟಿಂಗ್ ದಾಖಲೆಗಳು

ಅಂದಿನ ಪಂದ್ಯದಲ್ಲಿ ಏನೆಲ್ಲಾ ನಡೆದಿತ್ತು. ಅಖ್ತರ್ ಆ ರೀತಿ ವರ್ತಿಸಲು ಕಾರಣವೇನು ಎಂಬುದನ್ನು ಅವರು ವಿವರಿಸಿದ್ದಾರೆ. ಮುಂದೆ ಓದಿ

2006ರಲ್ಲಿ ನಡೆದಿದ್ದ ಪಂದ್ಯ

2006ರಲ್ಲಿ ನಡೆದಿದ್ದ ಪಂದ್ಯ

ಶೋಯೆಬ್ ಅಖ್ತರ್ ಹೇಳಿದ ಆ ಪಂದ್ಯ 2006ರಲ್ಲಿ ನಡೆದಿತ್ತು. ಅಂದು ಭಾರತ ಪಾಕಿಸ್ತಾನಕ್ಕೆ ಸರಣಿಯನ್ನಾಡಲು ತೆರಳಿತ್ತು. ಫೈಸಲಾಬಾದ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಧೋನಿ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ್ದರು. ಈ ಸಂದರ್ಭದಲ್ಲಿ ಮೊಣಕಾಲು ಸಾಕಷ್ಟು ನೋಯುತ್ತಿದ್ದು ಅದೆಲ್ಲಾ ಕಾರಣದಿಂದಾಗಿ ಹತಾಶೆಗೊಂಡು ಧೋನಿಗೆ ಭೀಮರ್ ಎಸೆದಿದ್ದೆ ಅಖ್ತರ್ ಹೇಳಿಕೊಂಡಿದ್ದಾರೆ.

ಜೀವನದಲ್ಲಿ ಏಕೈಕ ಬಾರಿ ಹಾಗೆ ಮಾಡಿದ್ದೆ

ಜೀವನದಲ್ಲಿ ಏಕೈಕ ಬಾರಿ ಹಾಗೆ ಮಾಡಿದ್ದೆ

ಉದ್ದೇಶ ಪೂರ್ವಕವಾಗಿ ಭೀಮರ್ ಎಸೆಯುವುದು ತಪ್ಪು ನಾನು ಆ ತಪ್ಪನ್ನು ಅಂದು ಮಾಡಿದ್ದೆ. ಅದಕ್ಕಾಗಿ ಧೋನಿ ಬಳಿ ಕ್ಷಮೆಯನ್ನೂ ಕೇಳಿದ್ದೆ. ಜೀವನದಲ್ಲಿ ಅದೊಂದೇ ಬಾರಿ ನಾನು ಉದ್ದೇಶ ಪೂರ್ವಕವಾಗಿ ಬೀಮರ್ ಎಸೆದಿದ್ದೆ. ಅದಾದ ಬಳಿಕ ನಾನು ಆ ರೀತಿ ಮಾಡಬಾರದಿತ್ತೆಂದು ಸಾಕಷ್ಟು ನೊಂದುಕೊಂಡೆ ಎಂದು ಶೋಯೆಬ್ ಅಖ್ತರ್ ಆಕಾಸ್ ಚೋಪ್ರಾ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.

ಕೊನೆಯ ಪಂದ್ಯವೆಂದು ಆಡಿದ್ದೆ

ಕೊನೆಯ ಪಂದ್ಯವೆಂದು ಆಡಿದ್ದೆ

1997ರಲ್ಲಿ ಮೊಣಕಾಲಿನ ನೋವಿಗೆ ತುತ್ತಾಗಿದ್ದೆ. ಅದಾದ ನಂತರ ಅದು ನನ್ನನ್ನು ನಿರಂತರವಾಗಿ ಕಾಡಿತ್ತು. ಭಾರತ ಪಾಕಿಸ್ತಾನಕ್ಕೆ ಪ್ರವಾಸ ಆಗಮಿಸಿದ್ದಾಗ ನನ್ನ ಮೊಣ ಕಾಲಿನ ಮೂಳೆ ಮುರಿತಕ್ಕೊಳಗಾಗಿತ್ತು. ನಾನು ಇಂಜೆಕ್ಷನ್‌ಗಳ ಸಹಾಯದಿಂದ ಅಂದಿನ ಪಂದ್ಯವನ್ನು ಆಡಿದ್ದೆ. ಸಾಕಷ್ಟು ನೀವು ಇದ್ದ ಕಾರಣ ಅದೇ ನನ್ನ ಕೊನೆಯ ಪಂದ್ಯವೆಂದು ಭಾವಿಸಿದ್ದೆ. ಫೈಸಲಾಬಾದ್ ಟೆಸ್ಟ್‌ನಲ್ಲಿ ಧೋನಿ ಬಹಳ ಅದ್ಭುತವಾಗಿ ಆಡಿದ್ದರು ಎಂದು ಅಖ್ತರ್ ಹೇಳಿದ್ದಾರೆ.

ಧೋನಿ ಭರ್ಜರಿ ಆಟ

ಧೋನಿ ಭರ್ಜರಿ ಆಟ

2006ರ ಫೈಸಲಾಬಾದ್ ಪಂದ್ಯದಲ್ಲಿ ಧೋನಿ 153 ಎಸೆತಗಳಲ್ಲಿ 148 ರನ್‌ ಬಾರಿಸಿದ್ದರು. ಇದರಲ್ಲಿ 19 ಬೌಂಡರಿ ಹಾಗೂ 4 ಸಿಕ್ಸರ್ ಒಳಗೊಂಡಿತ್ತು. ಇರ್ಫಾನ್ ಪಠಾಣ್ ಜೊತೆಗೆ ಸೆರಿ ಆರನೇ ವಿಕೆಟ್‌ಗೆ 201 ರನ್‌ಗಳ ಜೊತೆಯಾಟವನ್ನು ನೀಡಿದ್ದರು. ಈ ಪಂದ್ಯ ಡ್ರಾದೊಂದಿಗೆ ಅಂತ್ಯವಾಗಿತ್ತು. ಆದರೆ ಮುಂದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಪಾಕಿಸ್ತಾನಕ್ಕೆ ಸೋಲುವ ಮೂಲಕ 3 ಪಂದ್ಯಗಳ ಸರಣಿಯನ್ನು 0-1 ಅಂತರದಿಂದ ಕಳೆದುಕೊಂಡಿತ್ತು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, August 8, 2020, 16:01 [IST]
Other articles published on Aug 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X