ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ದಶಕದ ಪ್ರಶಸ್ತಿಗಳು: ಐಸಿಸಿ ವಿರುದ್ಧ ಶೋಯೆಬ್ ಅಖ್ತರ್ ಕಿಡಿ

Shoaib Akhtar Slams ICC for neglecting Pakistan in Decade of awards

ಇಸ್ಲಮಾಬಾದ್: 2000ನೇ ದಶಕ ಕೊನೆಗೊಳ್ಳುತ್ತಿದೆ. ಹೀಗಾಗಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಭಾನುವಾರ ಬೇರೆ ಬೇರೆ ವಿಭಾಗಗಳ ದಶಕದ ಪ್ರಶಸ್ತಿಗಳನ್ನು ಘೋಷಿಸಿದೆ. ಆದರೆ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಐಸಿಸಿ ವಿರುದ್ಧ ಕಿಡಿ ಕಾರಿದ್ದಾರೆ. ಪ್ರಶಸ್ತಿಗಳನ್ನು, ದಶಕದ ತಂಡಗಳನ್ನು ಘೋಷಿಸುವಾಗ ಐಸಿಸಿಯು ಪಾಕಿಸ್ತಾನ ತಂಡವನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಅಖ್ತರ್ ಅಸಮಾಧಾನ ಹೊರ ಹಾಕಿದ್ದಾರೆ.

ಚೆಕ್‌ ಮಾಡದ ಹೊರತು ನೀವು ನಂಬಲಾಗದ ಕ್ರಿಕೆಟ್‌ನ 5 ಸತ್ಯ ಸಂಗತಿಗಳು!ಚೆಕ್‌ ಮಾಡದ ಹೊರತು ನೀವು ನಂಬಲಾಗದ ಕ್ರಿಕೆಟ್‌ನ 5 ಸತ್ಯ ಸಂಗತಿಗಳು!

ಐಸಿಸಿ ಇತ್ತೀಚೆಗೆ ದಶಕದ ಏಕದಿನ, ಟಿ20 ಮತ್ತು ಟೆಸ್ಟ್ ತಂಡಗಳನ್ನು ಘೋಷಿಸಿತ್ತು. ದುರದೃಷ್ಟವಶಾತ್, ಹೆಸರಿಸಲ್ಪಟ್ಟ ತಂಡಗಳಲ್ಲಿ ಒಬ್ಬನೇ ಒಬ್ಬ ಪಾಕಿಸ್ತಾನಿ ಆಟಗಾರನಿರಲಿಲ್ಲ. ಹೀಗಾಗಿಯೇ ಅಖ್ತರ್ ಬೇರಸ ವ್ಯಕ್ತಪಡಿಸಿದ್ದಾರೆ.

ಐಸಿಸಿ ಟಿ20 ದಶಕದ ತಂಡದಲ್ಲಿ 4 ಭಾರತೀಯರು, 4 ಎಂಐ ಆಟಗಾರರು!ಐಸಿಸಿ ಟಿ20 ದಶಕದ ತಂಡದಲ್ಲಿ 4 ಭಾರತೀಯರು, 4 ಎಂಐ ಆಟಗಾರರು!

ಪಾಕಿಸ್ತಾನದ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ ಬಾಬರ್ ಅಝಾಮ್ ಕಡೆಗಣಿಸಿರುವುದರ ಬಗ್ಗೆಯೂ ಅಖ್ತರ್ ಖಾರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಖ್ತರ್‌ಗೆ ಬೇಸರವೇಕೆ?

ಅಖ್ತರ್‌ಗೆ ಬೇಸರವೇಕೆ?

ಇತ್ತೀಚಿನವರೆಗೂ ಐಸಿಸಿ ಟಿ20ಐ ರ್‍ಯಾಂಕಿಂಗ್‌ನಲ್ಲಿ ಪಾಕಿಸ್ತಾನದ ಬಾಬರ್ ಅಝಾಮ್ ನಂ.1 ಸ್ಥಾನದಲ್ಲಿದ್ದರು. ಪಾಕ್ ತಂಡ ಕೂಡ ನಂ.1 ಸ್ಥಾನದಲ್ಲಿತ್ತು. ತೀರಾ ಇತ್ತೀಚೆಗಷ್ಟೇ ನಂ.1 ಸ್ಥಾನವನ್ನು ಇಂಗ್ಲೆಂಡ್‌ನ ಡೇವಿಡ್ ಮಲಾನ್ ಆವರಿಸಿಕೊಂಡಿದ್ದಾರೆ. ತಂಡಗಳ ರ್‍ಯಾಂಕಿಂಗ್‌ನಲ್ಲೂ ಪಾಕ್ 4ನೇ ಸ್ಥಾನಕ್ಕೆ ಕುಸಿದಿದೆ. ಆದರೆ ಬಹುಕಾಲ ನಂ.1 ಸ್ಥಾನದಲ್ಲಿ ಬಾಬರ್ ಮತ್ತು ಪಾಕ್ ತಂಡವಿದ್ದಿದ್ದು ನಿಜ.

'ಐಪಿಎಲ್ ತಂಡಗಳನ್ನು ಘೋಷಿಸಿದೆ'

'ಐಪಿಎಲ್ ತಂಡಗಳನ್ನು ಘೋಷಿಸಿದೆ'

ಐಸಿಸಿ ದಶಕದ ತಂಡಗಳಾಗಿ ಘೋಷಿಸಿದ್ದು ವಿಶ್ವ ಕ್ರಿಕೆಟ್‌ನ ತಂಡಗಳನ್ನು ಅಲ್ಲ, ಐಪಿಎಲ್ ತಂಡಗಳನ್ನು ಎಂದು ಅಖ್ತರ್ ದೂರಿದ್ದಾರೆ. ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಅಖ್ತರ್, 'ಅವರು ಪಾಕಿಸ್ತಾನದ ಒಬ್ಬನೇ ಒಬ್ಬ ಆಟಗಾರನನ್ನು ಆರಿಸಲಿಲ್ಲ. ನಮಗೆ ನಿಮ್ಮ (ಐಸಿಸಿ) ದಶಕದ ಟಿ20 ತಂಡ ಎಂಬ ಬಿರುದು ಬೇಕಾಗಿಲ್ಲ. ಯಾಕಂದರೆ ನೀವು ಘೋಷಿಸಿದ್ದು ಐಪಿಎಲ್ ತಂಡಗಳನ್ನು, ವಿಶ್ವ ಕ್ರಿಕೆಟ್ ತಂಡಗಳನ್ನಲ್ಲ,' ಎಂದಿದ್ದಾರೆ.

ಐಸಿಸಿ ವಾಣಿಜ್ಯಮಯವಾಗುತ್ತಿದೆ

ಐಸಿಸಿ ವಾಣಿಜ್ಯಮಯವಾಗುತ್ತಿದೆ

'ಐಸಿಸಿ ಬರೀ ದುಡ್ಡು, ಪ್ರಾಯೋಜಕತ್ವ, ಟಿವಿ ಹಕ್ಕುಗಳ ಬಗ್ಗೆ ಮಾತ್ರ ಯೋಚಿಸುತ್ತದೆ. ಅದು ಏಕದಿನದಲ್ಲಿ ಹೊಸ ಚೆಂಡು, ಮೂರು ಪವರ್‌ಪ್ಲೇಗಳನ್ನು ಪರಿಚಯಿಸಿತು. ಪರಿಣಾಮ ಈಗ ಡೆನ್ನಿಸ್ ಲಿಲ್ಲಿ (ಆಸ್ಟ್ರೆಲಿಯಾ ಮಾಜಿ ಕ್ರಿಕೆಟರ್), ಜೆಫ್ ಥಾಮ್ಸನ್ (ಆಸ್ಟ್ರೇಲಿಯಾ), ವೆಸ್ಟ್ ಇಂಡೀಸ್‌ನ ಪ್ರಮುಖ 5 ಆಟಗಾರರು, ವಾಸಿಮ್ ಅಕ್ರಮ್ (ಪಾಕ್), ವಾಕರ್ ಯೂನಿಸ್ (ಪಾಕ್) ಈಗ ಎಲ್ಲಿದ್ದಾರೆ? ಅವರು ಐಸಿಸಿಯಿಂದ ದೂರ ಹೋಗಿದ್ದಾರೆ ಯಾಕೆಂದರೆ ಐಸಿಸಿ ವಾಣೀಜ್ಯೀಕರಣಗೊಳ್ಳುತ್ತಿದೆ,' ಎಂದು ಅಖ್ತರ್ ಹೇಳಿದ್ದಾರೆ.

ಐಸಿಸಿ ದಶಕದ ತಂಡಗಳು

ಐಸಿಸಿ ದಶಕದ ತಂಡಗಳು

* ಐಸಿಸಿ ಪುರುಷರ ಟಿ20ಐ ದಶಕದ ತಂಡ: ರೋಹಿತ್ ಶರ್ಮಾ, ಕ್ರಿಸ್ ಗೇಲ್, ಆ್ಯರನ್ ಫಿಂಚ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್ ವೆಲ್, ಎಂಎಸ್ ಧೋನಿ (ಸಿ, ಡಬ್ಲ್ಯೂಕೆ), ಕೀರನ್ ಪೊಲಾರ್ಡ್, ರಶೀದ್ ಖಾನ್, ಜಸ್ಪ್ರೀತ್ ಬೂಮ್ರಾ, ಲಸಿತ್ ಮಾಲಿಂಗ.
* ಐಸಿಸಿ ಪುರುಷರ ಏಕದಿನ ತಂಡ: ರೋಹಿತ್ ಶರ್ಮಾ, ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಶಕೀಬ್ ಅಲ್ ಹಸನ್, ಎಂಎಸ್ ಧೋನಿ (ಸಿ), ಬೆನ್ ಸ್ಟೋಕ್ಸ್, ಮಿಚೆಲ್ ಸ್ಟಾರ್ಕ್, ಟ್ರೆಂಟ್ ಬೌಲ್ಟ್, ಇಮ್ರಾನ್ ತಾಹಿರ್, ಲಸಿತ್ ಮಾಲಿಂಗ.
* ಐಸಿಸಿ ಪುರುಷರ ಟೆಸ್ಟ್ ತಂಡ: ಅಲಾಸ್ಟೇರ್ ಕುಕ್, ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ವಿರಾಟ್ ಕೊಹ್ಲಿ (ಸಿ), ಸ್ಟೀವ್ ಸ್ಮಿತ್, ಕುಮಾರ ಸಂಗಕ್ಕಾರ, ಬೆನ್ ಸ್ಟೋಕ್ಸ್, ಆರ್ ಅಶ್ವಿನ್, ಡೇಲ್ ಸ್ಟೇನ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್.

Story first published: Monday, December 28, 2020, 17:11 [IST]
Other articles published on Dec 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X