ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್ ಜೊತೆ ವಿರಾಟ್ ಕೊಹ್ಲಿ ಹೋಲಿಸುವುದನ್ನು ಮೊದಲು ನಿಲ್ಲಿಸಿ ಎಂದ ಶೋಯೆಬ್ ಅಖ್ತರ್

Shoaib Akhtar Strongly Urges people To Stop Comparing Virat Kohli To Sachin Tendulkar

ವಿರಾಟ್ ಕೊಹ್ಲಿ ಶತಕದ ಮೇಲೆ ಶತಕ ಬಾರಿಸುತ್ತಾ ವೇಗದ ರನ್ ದಾಖಲೆಗಳನ್ನು ನಿರ್ಮಿಸುತ್ತಾ ಸಾಗಿದಂತೆ ಅವರನ್ನು ಈ ಹಿಂದೆ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಆದ ಮೈಲಿಗಲ್ಲುಗಳನ್ನು ನೆಟ್ಟಿರುವ ಹಿರಿಯ ಲೆಜೆಂಡರಿ ಕ್ರಿಕೆಟಿಗರ ಜೊತೆ ಹೋಲಿಸಲು ಕ್ರೀಡಾಭಿಮಾನಿಗಳು ಆರಂಭಿಸಿದರು.

ಅಷ್ಟೇ ಅಲ್ಲದೆ ವಿವಿಧ ದೇಶಗಳ ಹಲವಾರು ಕ್ರಿಕೆಟ್ ಲೆಜೆಂಡ್ಸ್ ವಿರಾಟ್ ಕೊಹ್ಲಿ ಆಟವನ್ನು ಕೊಂಡಾಡಿದ್ದಾರೆ. ಕ್ರಿಕೆಟ್ ಜಗತ್ತಿನ ಕಿಂಗ್ ಎಂದರೆ ಅದು ವಿರಾಟ್ ಕೊಹ್ಲಿ ಮಾತ್ರ ಎಂದು ಹಲವಾರು ಮಾಜಿ ಕ್ರಿಕೆಟಿಗರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಆಡಿರುವ ಅತ್ಯಮೋಘ ಆಟದಿಂದಾಗಿಯೇ ಅವರನ್ನು ಜಗತ್ಪ್ರಸಿದ್ಧ ಲೆಜೆಂಡರಿ ಕ್ರಿಕೆಟ್ ಆಟಗಾರರ ಜೊತೆ ಆಗಾಗ ಹೋಲಿಕೆಯನ್ನು ಮಾಡಲಾಗುತ್ತದೆ. ಅದರಲ್ಲಿಯೂ ಸಾಮಾಜಿಕ ಜಾಲತಾಣಗಳಲ್ಲಿ ವಿರಾಟ್ ಕೊಹ್ಲಿಯವರನ್ನು ಹಿರಿಯ ಲೆಜೆಂಡರಿ ಕ್ರಿಕೆಟಿಗರುಗಳ ಜತೆ ಹೆಚ್ಚಾಗಿ ಹೋಲಿಕೆ ಮಾಡಿ ಚರ್ಚೆಗಳನ್ನು ಮಾಡಲಾಗುತ್ತದೆ.

ಈ ಕುರಿತು ಈಗಾಗಲೇ ಸಾಕಷ್ಟು ಮಂದಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಇಬ್ಬರ ನಡುವೆ ಹೋಲಿಕೆ ಮಾಡುವುದು ತಪ್ಪು, ಸಚಿನ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ತಮ್ಮದೇ ಆದ ಯುಗದ ಅತ್ಯದ್ಭುತ ಆಟಗಾರರು ಆದರೆ ಇಬ್ಬರ ನಡುವೆ ಹೋಲಿಸಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಇದೀಗ ಈ ಕುರಿತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಪ್ರತಿಕ್ರಿಯಿಸಿದ್ದು ವಿರಾಟ್ ಕೊಹ್ಲಿ ಜೊತೆ ಸಚಿನ್ ತೆಂಡೂಲ್ಕರ್ ಹೋಲಿಕೆ ಮಾಡುವುದನ್ನು ಮೊದಲು ನಿಲ್ಲಿಸಿ ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ಸಚಿನ್ ಯುಗದ ಆಟಗಾರನಲ್ಲ

ವಿರಾಟ್ ಕೊಹ್ಲಿ ಸಚಿನ್ ಯುಗದ ಆಟಗಾರನಲ್ಲ

ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ನಡುವೆ ಹೋಲಿಕೆ ಮಾಡಿ ಮಾತನ್ನಾಡುವವರ ಕುರಿತು ಪ್ರತಿಕ್ರಿಯಿಸಿರುವ ಶೋಯೆಬ್ ಅಖ್ತರ್ ವಿರಾಟ್ ಕೊಹ್ಲಿ ಈ ಯುಗದ ಆಟಗಾರ ಆತನ ಮತ್ತು ಸಚಿನ್ ತೆಂಡೂಲ್ಕರ್ ನಡುವೆ ಹೋಲಿಕೆ ಮಾಡಿ ಮಾತನಾಡುವುದು ತಪ್ಪು ಮೊದಲು ಅದನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.

ಸಚಿನ್ ದಾಖಲೆ ಮುರಿಯಲು ವಿರಾಟ್ ಕೊಹ್ಲಿಗೆ ಇನ್ನೂ ದೊಡ್ಡ ಸಮಯ ಬೇಕಿದೆ

ಸಚಿನ್ ದಾಖಲೆ ಮುರಿಯಲು ವಿರಾಟ್ ಕೊಹ್ಲಿಗೆ ಇನ್ನೂ ದೊಡ್ಡ ಸಮಯ ಬೇಕಿದೆ

ಕ್ರಿಕೆಟ್ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್ ತಮ್ಮದೇ ಆದ ದೊಡ್ಡ ದೊಡ್ಡ ದಾಖಲೆಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಅರ್ಧದಷ್ಟನ್ನು ಮಾತ್ರ ಇದೀಗ ವಿರಾಟ್ ಕೊಹ್ಲಿ ಮುರಿದಿದ್ದು ಇನ್ನೂ ಸಚಿನ್ ತೆಂಡೂಲ್ಕರ್ ಮಾಡಿರುವ ಹಲವಾರು ದಾಖಲೆಗಳನ್ನು ವಿರಾಟ್ ಕೊಹ್ಲಿ ಮುರಿಯಬೇಕಿದೆ. ಹೀಗಾಗಿ ವಿರಾಟ್ ಕೊಹ್ಲಿಯನ್ನು ಸಚಿನ್ ತೆಂಡೂಲ್ಕರ್ ಜೊತೆ ಹೋಲಿಕೆ ಮಾಡಿ ಮಾತನಾಡುವುದು ಅಷ್ಟು ಸರಿಯಲ್ಲ ಎಂದು ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.

Suryakumar Yadav ಈ ಸರಣಿಯ ಶ್ರೇಷ್ಠ ಆಟಗಾರ | Oneindia Kannada
ಕೊಹ್ಲಿ 110 ಶತಕ ಬಾರಿಸಲಿ

ಕೊಹ್ಲಿ 110 ಶತಕ ಬಾರಿಸಲಿ

ಇನ್ನೂ ಮುಂದುವರಿದು ಮಾತನಾಡಿದ ಶೋಯಬ್ ಅಖ್ತರ್ ಈಗಾಗಲೇ ವಿರಾಟ್ ಕೊಹ್ಲಿ 70 ಅಂತಾರಾಷ್ಟ್ರೀಯ ಶತಕಗಳನ್ನು ಸಿಡಿಸಿದ್ದಾರೆ, ಇದರ ಜತೆಗೆ ಮುಂದಿನ 5 ವರ್ಷಗಳಲ್ಲಿ ಕೊಹ್ಲಿ 40 ಶತಕಗಳನ್ನು ಸಿಡಿಸಿ ಒಟ್ಟು 110 ಶತಕಗಳನ್ನು ಬಾರಿಸಿ ದಾಖಲೆ ನಿರ್ಮಿಸಲಿ ಎಂದು ಶೋಯೆಬ್ ಅಖ್ತರ್ ಆಶಿಸಿದರು.

Story first published: Friday, July 23, 2021, 17:42 [IST]
Other articles published on Jul 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X