ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶೇಷ ಫೋಟೋ ಜೊತೆಗೆ ಸಚಿನ್ ಶೀಘ್ರ ಚೇತರಿಕೆಗೆ ಶುಭ ಹಾರೈಸಿದ ಅಖ್ತರ್

Shoaib Akhtar tweets old photo with Sachin Tendulkar to speedy recovery

ದಿಗ್ಗಜ ಆಟಗಾರ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕೊರೊನಾ ವೈರಸ್‌ಗೆ ತುತ್ತಾಗಿದ್ದು ಸದ್ಯ ಮನೆಯಲ್ಲಿಯೇ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ತೆಂಡೂಲ್ಕರ್‌ಗೆ ಸಣ್ಣ ಪ್ರಮಾಣದಲ್ಲಿ ಲಕ್ಷಣಗಳು ಮಾತ್ರವೇ ಕಾಣಿಸಿಕೊಂಡಿದ್ದರು ಅಭಿಮಾಮಿಗಳು ಆತಂಕಗೊಂಡಿದ್ದು ಶೀಘ್ರ ಚೇತರಿಕೆಗಾಗಿ ಹಾರೈಸುತ್ತಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಕೂಡ ಸಚಿನ್‌ ತೆಂಡೂಲ್ಕರ್‌ಗೆ ಶುಭಹಾರೈಸಿ ಟ್ವೀಟ್ ಮಾಡಿದ್ದಾರೆ.

1999-2000ನೇ ಇಸವಿಯ ಪಂದ್ಯವೊಂದರ ವಿಶೇಷ ಫೋಟೋವನ್ನು ಶೋಯೆಬ್ ಅಖ್ತರ್ ಹಂಚಿಕೊಂಡಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಶೀಘ್ರವಾಗಿ ಚೇತರಿಸಿಕೊಳ್ಳಿ ಎಂದು ಶೋಯೆಬ್ ಅಖ್ತರ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ವಹಿಸಿಕೊಳ್ಳುತ್ತಲೇ ಪಂತ್ ಹೆಸರಿಗೆ ದಾಖಲೆಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ವಹಿಸಿಕೊಳ್ಳುತ್ತಲೇ ಪಂತ್ ಹೆಸರಿಗೆ ದಾಖಲೆ

1999-2000ನೇ ಇಸವಿಯಲ್ಲಿನ ಭಾರತ-ಪಾಕಿಸ್ತಾನ-ಆಸ್ಟ್ರೇಲಿಯಾ ನಡುವಿನ ತ್ರಿಕೋನ ಸರಣಿಯ ಫೋಟೋ ಇದಾಗಿದೆ. ಸಚಿನ್ ಹಾಗೂ ಶೋಯೆಬ್ ಅಖ್ತರ್ ಮುಖಾಮುಖಿಯಾಗುವ ಚಿತ್ರ ಇದಾಗಿದೆ. ಇದರಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಶೋಯೆಬ್ ಅಖ್ತರ್ ' ಅಂಗಳದಲ್ಲಿ ನನ್ನ ನೆಚ್ಚಿನ ಎದುರಾಳಿಗಳಲ್ಲಿ ಒಬ್ಬರು" ಎಂದು ಬರೆದುಕೊಂಡಿದ್ದಾರೆ.

ಸಚಿನ್ ತೆಂಡೂಲ್ಕರ್ ಕಳೆದ ಭಾನುವಾರ ಕೊರೊನಾ ವೈರಸ್‌ಗೆ ತುತ್ತಾಗಿರುವುದು ದೃಢಪಟ್ಟಿತ್ತು. ಈ ಬಗ್ಗೆ ಸ್ವತಃ ಸಚಿನ್ ತೆಂಡೂಲ್ಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದರು. "ನಾನು ಪರೀಕ್ಷೆಗೆ ಒಳಪಟ್ಟಿತ್ತು ಕೊವಿಡ್‌ಅನ್ನು ದೂರವಿಡಲು ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಿದ್ದೇನೆ. ಹಾಗಿದ್ದರೂ ನನಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದ್ದು ಸಣ್ಣ ಪುಟ್ಟ ಲಕ್ಷಣಗಳು ಇವೆ. ಮನೆಯ ಉಳಿದವರದ್ದೂ ನೆಗೆಟಿವ್ ವರದಿ ಬಂದಿದೆ" ಎಂದು ಮಾಹಿತಿಯನ್ನು ಹಂಚಿಕೊಂಡಿದ್ದರು.

ರೋಹಿತ್, ಕೊಹ್ಲಿಯನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ರಿಷಭ್ ಪಂತ್!ರೋಹಿತ್, ಕೊಹ್ಲಿಯನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ರಿಷಭ್ ಪಂತ್!

ಸಚಿನ್ ತೆಂಡೂಲ್ಕರ್ ಬಳಿಕ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್, ಎಸ್ ಬದ್ರಿನಾಥ್, ಇರ್ಫಾನ್ ಪಠಾಣ್‌ಗೂ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಈ ಎಲ್ಲರೂ ಇತ್ತೀಚೆಗೆ ಅಂತ್ಯವಾದ "ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ನಲ್ಲಿ" ಇಂಡಿಯಾ ಲೆಜೆಂಡ್ಸ್ ತಂಡವನ್ನು ಪ್ರತಿನಿಧಿಸಿದ್ದರು.

Story first published: Wednesday, March 31, 2021, 11:42 [IST]
Other articles published on Mar 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X