ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಣಕಿದ ಭಾರತೀಯನಿಗೆ ಭಾವನಾತ್ಮಕವಾಗಿ ಉತ್ತರಿಸಿದ ಶೋಯೆಬ್ ಅಖ್ತರ್!

Shoaib Akhtar wins over heart with his response after a user questions his message for Amitabh Bachchan

ಬೆಂಗಳೂರು: ಖ್ಯಾತ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮತ್ತವರ ಕುಟುಂಬ ಮಾರಕ ಕೊರೊನಾವೈರಸ್‌ಗೆ ತುತ್ತಾಗಿದೆ. ಅಮಿತಾಬ್ ಬಚ್ಚನ್, ಅವರ ಮಗ ಅಭಿಷೇಕ್ ಬಚ್ಚನ್, ಅಭಿಷೇಕ್ ಪತ್ನಿ ಐಶ್ವರ್ಯ ರೈ ಮತ್ತು ಪುತ್ರಿ ಆರಾಧ್ಯ ಬಚ್ಚನ್‌ಗೆ ಕೂಡ ಕೋವಿಡ್-19 ಸೋಂಕು ತಗುಲಿದೆ. ಅಮಿತಾಬ್ ಬಚ್ಚನ್ ತನಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿರುವುದನ್ನು ಟ್ವಿಟರ್ ಮೂಲಕ ತಿಳಿಸಿದ್ದರು. ಕೊರೊನಾದಿಂದ ಬೇಗ ಗುಣಮುಖರಾಗುವಂತೆ ಅಮಿತಾಬ್ ಮತ್ತವರ ಕುಟುಂಬಕ್ಕೆ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಹಾರೈಸಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ದಾಖಲೆಯ 5 ಬ್ಯಾಟ್ಸ್‌ಮನ್‌ಗಳುಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ದಾಖಲೆಯ 5 ಬ್ಯಾಟ್ಸ್‌ಮನ್‌ಗಳು

ಮುಂಬೈಯ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದ ಬಚ್ಚನ್ ಮತ್ತವರ ಪುತ್ರ ಅಭಿಷೇಕ್‌ಗೆ ಶುಭ ಹಾರೈಸಿದವರಲ್ಲಿ ಚಿತ್ರರಂಗದ, ಕ್ರೀಡಾರಂಗದ ಅನೇಕ ಖ್ಯಾತರಿದ್ದರು. ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಕೂಡ ಬಚ್ಚನ್ ಕುಟುಂಬಸ್ಥರು ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸಿದ್ದರು.

ಮುಲ್ತಾನ್‌ ಟೆಸ್ಟ್‌ನಲ್ಲಿ ಸಚಿನ್ 194 ರನ್ ಗಳಿಸಿದ್ದಾಗ ದ್ರಾವಿಡ್ ಡಿಕ್ಲೇರ್ ಕೊಟ್ಟಿದ್ದೇಕೆ ಗೊತ್ತಾ!?ಮುಲ್ತಾನ್‌ ಟೆಸ್ಟ್‌ನಲ್ಲಿ ಸಚಿನ್ 194 ರನ್ ಗಳಿಸಿದ್ದಾಗ ದ್ರಾವಿಡ್ ಡಿಕ್ಲೇರ್ ಕೊಟ್ಟಿದ್ದೇಕೆ ಗೊತ್ತಾ!?

ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರೂ ಬಚ್ಚನ್‌ ಆರೋಗ್ಯ ಸುಧಾರಿಸಲು ಪ್ರಾರ್ಥಿಸಿದ್ದರು. ಈ ವಿಚಾರವಾಗಿ ಅಖ್ತರ್ ಅವರನ್ನು ಭಾರತೀಯನೊಬ್ಬ ಕೆಣಕಿದ್ದ.

ಶೋಯೆಬ್ ಅಖ್ತರ್ ಟ್ವೀಟ್

ಶೋಯೆಬ್ ಅಖ್ತರ್ ಟ್ವೀಟ್

ಅಮಿತಾಬ್‌ ಬಚ್ಚನ್ ಗುಣಮುಖರಾಗಲು ಶುಭ ಹಾರೈಸಿದ್ದ ಶೋಯೆಬ್ ಅಖ್ತರ್ ಟ್ವಿಟರ್‌ನಲ್ಲಿ, 'ಬೇಗ ಗುಣಮುಖರಾಗಿ ಅಮಿತ್ ಜೀ. ನೀವು ಶೀಘ್ರ ಸುಧಾರಿಸಲು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ,' ಎಂದು ಬರೆದುಕೊಂಡಿದ್ದರು. ಅಖ್ತರ್ ಇಲ್ಲಿ ಅಮಿತಾಬ್‌ಗೋಸ್ಕರ ಪ್ರಾರ್ಥಿಸಿದ್ದರ ಹಿಂದೆ ದುರುದ್ದೇಶವಿರದೆ ಒಳ್ಳೆಯ ಉದ್ದೇಶವೇ ಇತ್ತು.

ಪ್ರಾರ್ಥನೆ ಬೇಡ

ಪ್ರಾರ್ಥನೆ ಬೇಡ

ಶೋಯೆಬ್ ಟ್ವೀಟರ್‌ಗೆ ಆ್ಯಂಟ್ ಮ್ಯಾನ್ ಎಂಬ ಹೆಸರಿನ ಟ್ವಿಟರ್ ಖಾತೆಯಿಂದ ಪ್ರತಿಕ್ರಿಯೆ ಬಂದಿತ್ತು. 'ಬಾರ್ಡರ್‌ ತುಂಬಾ ಭಯೋತ್ಪಾದಕರಿರ್ತಾರೆ, ಬೇಗ ಗುಣಮುಖರಾಗಿ ಎನ್ನುವ ಪ್ರಾರ್ಥನೆ ಬೇಡ,' ಎಂಬರ್ಥದಲ್ಲಿ ಆ ವ್ಯಕ್ತಿ ಟ್ವೀಟ್ ಮಾಡಿದ್ದ. ಇದಕ್ಕೆ ಅಖ್ತರ್ ಕೂಡ ಸರಿಯಾಗಿ ಪ್ರತಿಕ್ರಿಯಿಸಿದ್ದಾರೆ.

ಅಖ್ತರ್ ಪ್ರತಿಕ್ರಿಯೆ

ಅಖ್ತರ್ ಪ್ರತಿಕ್ರಿಯೆ

ಕಾಲೆಳೆದು ಟ್ವೀಟ್ ಮಾಡಿದ್ದಾತನಿಗೆ ಪ್ರತಿಕ್ರಿಯಿಸಿದ್ದ ಅಖ್ತರ್, 'ನಮ್ಮ ಪ್ರಾರ್ಥನೆ ಆಲಿಸುವವನು ಮೇಲಿದ್ದಾನೆ. ದೇವರು ಯಾರು ಹೇಳಿದ್ದು ಕೇಳುತಾನೆ ಅಂತ ಯಾರಿಗೆ ಗೊತ್ತು, ಅದು ದೇವರಿಗೆ ಬಿಟ್ಟಿದ್ದು. ನಿಮ್ಮನ್ನ ಲೇಬಲ್ ಮಾಡುವುದರಿಂದ ಯಾರೂ ಲೇಬಲ್ ಆಗಲ್ಲ. ದೇವರು ನಿಮ್ಮನ್ನು ಕಾಪಾಡಲಿ' ಎಂದು ಬರೆದುಕೊಂಡಿದ್ದಾರೆ.

ಶೋಯೆಬ್ ಮತ್ತೊಂದು ಟ್ವೀಟ್

ಶೋಯೆಬ್ ಮತ್ತೊಂದು ಟ್ವೀಟ್

ಮರುದಿನ ಅಂದರೆ ಜುಲೈ 12ರ ಬೆಳಿಗ್ಗೆ ಅಖ್ತರ್ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಹಿಂದಿನ ದಿನದ ಟ್ವೀಟ್‌ಗೆ ಮತ್ತೊಂದು ಕುಟುಕಿನಂತೆ ತೋರುತ್ತದೆ. 'ಶ್ರೇಷ್ಠ ಮನಸ್ಸುಗಳು ವಿಚಾರಗಳನ್ನು ಚರ್ಚಿಸುತ್ತವೆ; ಸಾಧಾರಣ ಮನಸ್ಸುಗಳು ಸಂಗತಿಗಳನ್ನು ಚರ್ಚಿಸುತ್ತವೆ; ಸಣ್ಣ ವ್ಯಕ್ತಿಗಳು ಬೇರೆ ವ್ಯಕ್ತಿಗಳ ಬಗ್ಗೆ ಮಾತನಾಡುತ್ತಾರೆ. ಶುಭ ಮುಂಜಾನೆ' ಎಂದು ಅಖ್ತರ್ ಟ್ವೀಟ್‌ನಲ್ಲಿ ಬರೆದಿದ್ದಾರೆ.

Story first published: Monday, July 13, 2020, 22:05 [IST]
Other articles published on Jul 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X