ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಪಿನ್ ಬೌಲಿಂಗ್ ಎದುರಿಸುವುದರಲ್ಲಿ ಸ್ಮಿತ್‌ಗಿಂತ ಮಲಿಕ್ ಉತ್ತಮ: ಚಾಹಲ್

Shoaib Malik Better Than Steve Smith When Playing Spin - Chahal

ಟೀಮ್ ಇಂಡಿಯಾದ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಪಾಕಿಸ್ತಾನದ ಅನುಭವಿ ಬ್ಯಾಟ್ಸ್‌ಮನ್ ಶೋಯೆಬ್ ಮಲಿಕ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸ್ಪಿನ್ ಬೌಲಿಮಗ್ ಎದುರಿಸುವುದರಲ್ಲಿ ಸಾಕಷ್ಟು ಪರಿಣತಿಯನ್ನು ಮಲಿಕ್ ಪಡೆದುಕೊಂಡಿದ್ದಾರೆ ಎಂದು ಚಾಹಲ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಶೋಯೆಬ್ ಮಲಿಕ್ ಬ್ಯಾಟಿಂಗನ್ನು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಅವರೊಂದಿಗೆ ಚಾಹಲ್ ಹೋಲಿಕೆ ಮಾಡಿದರು. ಸ್ಟೀವ್ ಸ್ಮಿತ್ ಗೆ ಹೋಲಿಸಿದರೆ ಶೋಯೆಬ್ ಮಲಿಕ್ ಸ್ಪಿನ್ ಬೌಲಿಂಗನ್ನುಅದ್ಭುತವಾಗಿ ಎದುರಿಸುತ್ತಾರೆ. ಸ್ಪಿನ್ ಎದುರಿಸಲು ಮಲಿಕ್ ಉಪಯೋಗಿಸುವ ತಂತ್ರಗಳು ಸ್ಮಿತ್‌ಗಿಂತ ಪರಿಣಾಮಕಾರಿ ಎಂದಿದ್ದಾರೆ.

ಪಾಕ್‌ ಮಾಜಿ ಕ್ರಿಕೆಟರ್ ಶೋಯೆಬ್ ಅಖ್ತರ್ ವಿರುದ್ಧ ಮಾನನಷ್ಟ ಮೊಕದ್ದಮೆಪಾಕ್‌ ಮಾಜಿ ಕ್ರಿಕೆಟರ್ ಶೋಯೆಬ್ ಅಖ್ತರ್ ವಿರುದ್ಧ ಮಾನನಷ್ಟ ಮೊಕದ್ದಮೆ

2018ರ ಏಷ್ಯಾಕಪ್‌ನಲ್ಲಿ ಯುಜುವೇಂದ್ರ ಚಾಹಲ್ ಶೋಯೆಬ್ ಮಲಿಕ್‌ಗೆ ಬೌಲಿಂಗ್ ಮಾಡಿದ್ದರು. "2018ರ ಏಷ್ಯಾಕಪ್‌ನಲ್ಲಿ ನಾನು ಮಲಿಕ್‌ಗೆ ಬೌಲಿಂಗ್ ಮಾಡಿದ್ದೆ, ಉತ್ತಮ ಎಸತಗಳಿಗೆ ಒಂಟಿ ರನ್ ತೆಗೆಯುತ್ತಿದ್ದ ರೀತಿ ಇಷ್ಟವಾಯಿತು. ಆಗಲೇ ನನಗೆ ಅನಿಸಿತ್ತು ಈತನಿಗೆ ಸಾಕಷ್ಟು ಅನುಭವ ಇದೆ, ಸ್ಮಿತ್‌ಗಿಂತ ಚೆನ್ನಾಗಿ ಸ್ಪಿನ್ ಬಾಲ್ ಎದುರಿಸುತ್ತಾನೆ' ಎಂದು ಯುಜುವೇಂದ್ರ ಚಾಹಲ್ ಹೇಳಿದ್ದಾರೆ. ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ಚಾಹಲ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಯುಜುವೇಂದ್ರ ಚಾಹಲ್ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಬಗ್ಗೆಯೂ ಮಾತನಾಡಿದರು. ಸ್ಪಿನ್ ಬೌಲಿಂಗ್ ಎದುರಿಸುವ ವಿಚಾರದಲ್ಲಿ ರೋಹಿತ್ ಮತ್ತು ವಿರಾಟ್ ಸಾಕಷ್ಟು ಅನುಭವವನ್ನು ಪಡೆದುಕೊಂಡಿರುವ ಆಟಗಾರರಾಗಿದ್ದಾರೆ ಎಂದಿದ್ದಾರೆ.

33ನೇ ವರ್ಷಕ್ಕೆ ಕಾಲಿಟ್ಟ 3 ದ್ವಿಶತಕ ವೀರ: ರೋಹಿತ್ ಸಿಡಿಸಿದ ದ್ವಿಶತಕಗಳ ನೆನಪು33ನೇ ವರ್ಷಕ್ಕೆ ಕಾಲಿಟ್ಟ 3 ದ್ವಿಶತಕ ವೀರ: ರೋಹಿತ್ ಸಿಡಿಸಿದ ದ್ವಿಶತಕಗಳ ನೆನಪು

ಇದೇ ಸಂದರ್ಭದಲ್ಲಿ ನ್ಯೂಜಿಲೆಂಡ್ ನಾಯಕ ವಿಲಿಯಮ್ಸನ್ ಬಗ್ಗೆಯೂ ಚಾಹಲ್ ಮಾತನಾಡಿದರು. ಸ್ಪಿನ್ ಬೌಲರ್‌ಗಳಿಗೆ ಕೀವಿಸ್ ನಾಯಕನೂ ಕೂಡ ಕಠಿಣ ಸವಾಲಾಗುತ್ತಾರೆ, ವಿಲಿಯಮ್ಸನ್ ತಡವಾಗಿ ಬಾಲನ್ನು ಎದುರಿಸುತ್ತಾರೆ, ಅದರಲ್ಲೂ ಪಿಚ್ ಸ್ಲೋ ಇದ್ದಾಗ ಸಾಕಷ್ಟು ನಿಧಾನವಾಗಿ ಆಡುವ ಮೂಲಕ ಬೌಲರ್‌ಗಳಿಗೆ ಕಂಟಕವಾಗುತ್ತಾರೆ ಎಂದು ಚಾಹಲ್ ಹೇಳಿದ್ದಾರೆ

Story first published: Thursday, April 30, 2020, 14:15 [IST]
Other articles published on Apr 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X