ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ವಿಸ್ಡನ್ಸ್ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹೆಸರಿಲ್ಲದ್ದು ನೋಡಿ ಅಚ್ಚರಿಯಾಯ್ತು!'

Shocked and surprised to not see Rohit in Wisdens list: Laxman

ಮುಂಬೈ, ಏಪ್ರಿಲ್ 11: 'ವಿಸ್ಡನ್ಸ್ ಕ್ರಿಕೆಟರ್ಸ್ ಆಫ್‌ ದ ಇಯರ್ 2019' ಪ್ರಶಸ್ತಿ ಪ್ರಕಟಗೊಂಡಾಗ 'ಫೈವ್ ಕ್ರಿಕೆಟರ್ಸ್ ಆಫ್‌ ದ ಇಯರ್ 2019' ಪಟ್ಟಿಯಲ್ಲಿ ಟೀಮ್ ಇಂಡಿಯಾದ ಏಕದಿನ ಉಪನಾಯಕ, ಹಿಟ್‌ಮ್ಯಾನ್ ರೋಹಿತ್ ಶರ್ಮಾ ಹೆಸರಿಲ್ಲದ್ದು ನೋಡಿ ಅಚ್ಚರಿ ಮತ್ತು ಆಘಾತವಾಯ್ತು ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ವೆರಿವೆರಿ ಸ್ಪೆಷಲ್ ಲಕ್ಷ್ಮಣ್ ಹೇಳಿದ್ದಾರೆ. ಲಕ್ಷ್ಮಣ್ ಹೀಗೆ ಹೇಳಿರುವುದಕ್ಕೆ ಕಾರಣವೂ ಇದೆ. ರೋಹಿತ್ ಹೆಸರು ಪ್ರಶಸ್ತಿ ಪಟ್ಟಿಯಲ್ಲಿ ಇರಲೇಬೇಕಿತ್ತು ಯಾಕೆಂಬುದಕ್ಕೆ ವಿವಿಎಸ್ ವಿವರಣೆ ಕೂಡ ನೀಡಿದ್ದಾರೆ.

ಜೊತೆಯಾಗಿ ಕ್ರಿಕೆಟ್ ಆಡಿ ಅಚ್ಚರಿ ಮೂಡಿಸಿದ್ದ 10 ಅವಳಿ ಸಹೋದರರು!ಜೊತೆಯಾಗಿ ಕ್ರಿಕೆಟ್ ಆಡಿ ಅಚ್ಚರಿ ಮೂಡಿಸಿದ್ದ 10 ಅವಳಿ ಸಹೋದರರು!

ಐಸಿಸಿ ಕ್ರಿಕೆಟ್ ವಿಶ್ವಕಪ್‌ 2019ರಲ್ಲಿ ಒಟ್ಟಿಗೆ ಐದು ಶತಕಗಳೊಂದಿಗೆ ವಿಶ್ವದಾಖಲೆ ನಿರ್ಮಿಸಿದ್ದ ಭಾರತದ ರೋಹಿತ್ ಶರ್ಮಾ 2019ರ ಸ್ಪೋರ್ಟ್ಸ್ ಕ್ಯಾಲೆಂಡರ್ ಉದ್ದಕ್ಕೂ ಅದ್ಭುತ ಫಾರ್ಮ್ ತೋರಿಕೊಂಡಿದ್ದರು. ಹಲವಾರು ದಾಖಲೆಗಳನ್ನೂ ನಿರ್ಮಿಸಿದ್ದರು.

ವಿಸ್ಡನ್ ಕ್ರಿಕೆಟರ್ಸ್ ಆಫ್‌ ದ ಇಯರ್ 2019: ವಿಜೇತರ ಸಂಪೂರ್ಣ ಪಟ್ಟಿವಿಸ್ಡನ್ ಕ್ರಿಕೆಟರ್ಸ್ ಆಫ್‌ ದ ಇಯರ್ 2019: ವಿಜೇತರ ಸಂಪೂರ್ಣ ಪಟ್ಟಿ

2019ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಸಹಜವಾಗೇ ವಿಸ್ಟನ್ಸ್ ಪ್ರಶಸ್ತಿ ಪಟ್ಟಿಯಲ್ಲಿ ರೋಹಿತ್ ಹೆಸರನ್ನು ಬಹುತೇಕ ಕ್ರಿಕೆಟ್‌ ಪ್ರೇಮಿಗಳು ನಿರೀಕ್ಷಿಸಿದ್ದರು.

ಆ್ಯಷಸ್‌ಗಿಂತ ವಿಶ್ವಕಪ್ ದೊಡ್ಡದು

ಆ್ಯಷಸ್‌ಗಿಂತ ವಿಶ್ವಕಪ್ ದೊಡ್ಡದು

'ನನ್ನ ಪ್ರಕಾರ, ಕ್ರಿಕೆಟನ್ನು ನಿಯಮಿತವಾಗಿ ನೋಡುವ ಎಲ್ಲರಿಗೂ ವಿಸ್ಡನ್ಸ್ ವರ್ಷದ ಐದು ಕ್ರಿಕೆಟಿಗರು ಪಟ್ಟಿಯಲ್ಲಿ ರೋಹಿತ್ ಹೆಸರು ಕಾಣದಾಗ ಅಚ್ಚರಿ ಮತ್ತು ಆಘಾತ ಮೂಡಿಸಿರುತ್ತದೆ. ಆ್ಯಷಸ್ ಒಂದು ಪ್ರಮುಖ ಸರಣಿ ಹೌದು. ಆದರೆ ವಿಶ್ವಕಪ್ ಅದಕ್ಕಿಂತಲೂ ದೊಡ್ಡ ಟೂರ್ನಿ,' ಎಂದು ಲಕ್ಷ್ಮಣ್ ಅಭಿಪ್ರಾಯಿಸಿದ್ದಾರೆ.

ಗಣನೀಯ, ಪ್ರಮುಖ ಶತಕಗಳು

ಗಣನೀಯ, ಪ್ರಮುಖ ಶತಕಗಳು

'ವಿಶ್ವಕಪ್‌ನಲ್ಲಿ ರೋಹಿತ್ ಐದು ಶತಕಗಳನ್ನು ಬಾರಿಸಿದ್ದರು. ಅದರಲ್ಲೂ ಸೌತಾಂಪ್ಟನ್‌ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಶತಕ ಗಣನೀಯವಾದ್ದು. ಯಾಕೆಂದರೆ ಅವತ್ತು ಬೇರ್ಯಾರೂ ಚೆನ್ನಾಗಿ ಆಡಿರಲಿಲ್ಲ. ಅಲ್ಲದೆ, ಪಾಕಿಸ್ತಾನ ವಿರುದ್ಧವೂ ಶರ್ಮಾ ಶತಕ ಬಾರಿಸಿದ್ದು ತಂಡದ ಗೆಲುವಿಗೆ ಕಾರಣವಾಗಿತ್ತು. ಹೀಗಾಗಿ ಪ್ರಶಸ್ತಿ ಪಟ್ಟಿ ನೋಡಿ ನನಗೆ ನಿಜಕ್ಕೂ ಶಾಕ್ ಆಯ್ತು,' ಎಂದು ವಿವಿಎಸ್ ನುಡಿದರು.

ಒಬ್ಬನೇ ಒಬ್ಬ ಭಾರತೀಯನಿರಲಿಲ್ಲ!

ಒಬ್ಬನೇ ಒಬ್ಬ ಭಾರತೀಯನಿರಲಿಲ್ಲ!

ಅಚ್ಚರಿಯ ಮತ್ತೊಂದು ವಿಚಾರವೆಂದರೆ 2019ರ ವಿಸ್ಡನ್ಸ್ ಕ್ರಿಕೆಟರ್ಸ್ ಆಫ್ ದ ಇಯರ್ ಪ್ರಶಸ್ತಿ ಪಟ್ಟಿಯಲ್ಲಿ ಒಬ್ಬನೇ ಒಬ್ಬ ಭಾರತೀಯನ ಹೆಸರಿರಲಿಲ್ಲ. ವಿಶ್ವಕಪ್‌ನಲ್ಲಿ, ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸರಣಿಗಳಲ್ಲಿ ಭಾರತ ತಂಡ ಉತ್ತಮ ಪ್ರದರ್ಶನವನ್ನೇ ನೀಡಿತ್ತು. ಆದರೆ ಪ್ರಶಸ್ತಿ ಪಟ್ಟಿಯಲ್ಲಿ ಒಬ್ಬನೂ ಭಾರತೀಯ ಕಾಣಿಸಿರಲಿಲ್ಲ.

ವಿಸ್ಡನ್ ಫೈವ್ ಕ್ರಿಕೆಟರ್ಸ್

ವಿಸ್ಡನ್ ಫೈವ್ ಕ್ರಿಕೆಟರ್ಸ್

2019ರ ವಿಸ್ಡನ್ ಕ್ರಿಕೆಟರ್ಸ್ ಆಫ್‌ ದ ಇಯರ್ ಪ್ರಶಸ್ತಿ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಮತ್ತು ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿಗೆ ಹೆಚ್ಚಿನ ಮಣೆ ನೀಡಲಾಗಿತ್ತು. ವಿಸ್ಡನ್ ಫೈವ್ ಕ್ರಿಕೆಟರ್ಸ್ ಆಫ್‌ ದ ಇಯರ್ ಪಟ್ಟಿಯಲ್ಲಿ ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ), ಎಲ್ಲಿಸ್ ಪೆರ್ರಿ (ಆಸ್ಟ್ರೇಲಿಯಾ), ಜೋಫ್ರಾ ಆರ್ಚರ್ (ಇಂಗ್ಲೆಂಡ್), ಸೈಮನ್ ಹಾರ್ಮರ್ (ದಕ್ಷಿಣ ಆಫ್ರಿಕಾ), ಮಾರ್ನಸ್ ಲ್ಯಾಬುಸ್ಚಾಗ್ನೆ (ಆಸ್ಟ್ರೇಲಿಯಾ) ಹೆಸರಿಸಲ್ಪಟ್ಟಿದ್ದರು.

Story first published: Saturday, April 11, 2020, 21:28 [IST]
Other articles published on Apr 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X