ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಇತಿಹಾಸದ ಅತೀ ಚಿಕ್ಕ ಪಂದ್ಯ, 7 ರನ್‌ಗೆ ತಂಡ ಆಲ್ ಔಟ್!

Shortest match in cricket history, Team all out for just 7 runs

ಲಂಡನ್: ಟಿ20 ಕ್ರಿಕೆಟ್‌ ಅನ್ನು ಕ್ರಿಕೆಟ್ ಮಾದರಿಗಳಲ್ಲಿ ಅತೀ ಚುಟುಕು ಕ್ರಿಕೆಟ್ ಮಾದರಿ ಎನ್ನಲಾಗುತ್ತಿದೆ. ಆದರೆ ಟಿ10 ಇನ್ನೂ ಚುಟುಕಾಗಿ ಮುಗಿದು ಹೋಗುತ್ತದೆ. ಅದರಲ್ಲೂ ಇಲ್ಲೊಂದು ಕ್ರಿಕೆಟ್ ಪಂದ್ಯ ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಮುಗಿದು ಹೋಗಿದ್ದು, ಈ ಪಂದ್ಯದ ಸಂಗತಿಗಳು ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. ಈ ಪಂದ್ಯ ಕ್ರಿಕೆಟ್‌ ಜಗತ್ತಿನ ಅತೀ ಚಿಕ್ಕ ಪಂದ್ಯವಾಗಿ ಗುರುತಿಸಿಕೊಂಡಿದೆ (ಸಾಂದರ್ಭಿಕ ಚಿತ್ರ).

ಸ್ಫೋಟಕ ಬ್ಯಾಟಿಂಗ್‌ನೊಂದಿಗೆ ವಿಶ್ವದಾಖಲೆ ಬರೆದ ಕ್ರಿಸ್ ಗೇಲ್!ಸ್ಫೋಟಕ ಬ್ಯಾಟಿಂಗ್‌ನೊಂದಿಗೆ ವಿಶ್ವದಾಖಲೆ ಬರೆದ ಕ್ರಿಸ್ ಗೇಲ್!

ಈ ಪಂದ್ಯ ನಡೆದಿದ್ದು ಇಂಗ್ಲೆಂಡ್‌ನಲ್ಲಿ. ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಯಾರ್ಕ್‌ಶೈರ್ ಪ್ರೀಮಿಯರ್ ಲೀಗ್‌ನ ಡಿವಿಶನ್ ಫೋರ್ ಪಂದ್ಯದಲ್ಲಿ ಈಸ್ಟರ್ಟನ್ ಕ್ಲಬ್ ಮತ್ತು ಹಿಲಮ್ & ಮಾಂಕ್ ಫ್ರಿಸ್ಟನ್ ಕ್ರಿಕೆಟ್ ಕ್ಲಬ್ ನಡುವಿನ ಪಂದ್ಯ ಕ್ರಿಕೆಟ್ ಇತಿಹಾಸದ ಅತೀ ಚಿಕ್ಕ ಪಂದ್ಯ ಎಂಬ ದಾಖಲೆಗೆ ಕಾರಣವಾಗಿದೆ.

ಪಟ ಪಟನೆ ಉದುರಿದ ವಿಕೆಟ್‌ಗಳು

ಪಟ ಪಟನೆ ಉದುರಿದ ವಿಕೆಟ್‌ಗಳು

ಪಂದ್ಯದಲ್ಲಿ ಹಿಲಮ್ & ಮಾಂಕ್ ಫ್ರಿಸ್ಟನ್ ಕ್ರಿಕೆಟ್ ಕ್ಲಬ್ ಮೊದಲು ಬ್ಯಾಟಿಂಗ್‌ಗೆ ಬಂದಿತ್ತು. ಹಾಗೆ ಬ್ಯಾಟಿಂಗ್‌ಗೆ ಬಂದ ಹಿಲಮ್ & ಮಾಂಕ್ ಫ್ರಿಸ್ಟನ್ ಕ್ರಿಕೆಟ್ ಕ್ಲಬ್ ನ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ನಿಲ್ಲಲೇಯಿಲ್ಲ. ಬದಲಿಗೆ ಬಂದವರೇ ವಿಕೆಟ್ ಒಪ್ಪಿಸಿ ನಡೆಯತೊಡಗಿದರು. ಅಸಲಿಗೆ ಪಂದ್ಯ 8 ಓವರ್‌ಗಳದ್ದಾಗಿತ್ತಾದರೂ ಯಾರೂ ಅಷ್ಟರವರೆಗೆ ನಿಲ್ಲಲಿಲ್ಲ.

ಇಬ್ಬರಿಗೆ 10 ವಿಕೆಟ್ ಪತನ

ಇಬ್ಬರಿಗೆ 10 ವಿಕೆಟ್ ಪತನ

ಎದುರಾಳಿ ತಂಡದ ಇಬ್ಬರೇ ಬೌಲರ್‌ಗಳು ಹಿಲಮ್ & ಮಾಂಕ್ ಫ್ರಿಸ್ಟನ್ ಕ್ರಿಕೆಟ್ ಕ್ಲಬ್‌ನ 10 ವಿಕೆಟ್‌ಗಳನ್ನು ಕೆಡವಿದರು. ಆಗ ಸ್ಕೋರ್‌ ಬೋರ್ಡ್‌ನಲ್ಲಿ 7 ರನ್‌ಗಳು ದಾಖಲಾಗಿದ್ದವು. ಇದರಲ್ಲಿ ಇಬ್ಬರು ಬ್ಯಾಟ್ಸ್‌ಮನ್‌ಗಳು 2+2 ರನ್ ಗಳಿಸಿದ್ದರೆ, ಇನ್ನು 3 ರನ್ ಎಕ್ಸ್‌ಟ್ರಾ ಆಗಿತ್ತು. ಈಸ್ಟರ್ಟನ್ ಕ್ಲಬ್‌ನ ಬೌಲರ್ ನಾಥನ್ ಕ್ರೀಗರ್ ಒಬ್ಬರೇ 7 ಬ್ಯಾಟ್ಸ್‌ಮನ್‌ಗಳನ್ನು 4 ಓವರ್‌ಗಳಲ್ಲಿ ಕೇವಲ 3 ರನ್‌ಗೆ ಔಟ್ ಮಾಡಿದ್ದರು.

ಬಿಡುಗಡೆಯಾಯ್ತು ಉಮಾಪತಿ ಮತ್ತು ಅರುಣಾಕುಮಾರಿ ವಾಟ್ಸಾಪ್ ಮೆಸೇಜ್ | Oneindia Kannada
ಗೆಲ್ಲಿಸಿದ್ದು ಒಬ್ಬನೇ ಬ್ಯಾಟ್ಸ್‌ಮನ್‌

ಗೆಲ್ಲಿಸಿದ್ದು ಒಬ್ಬನೇ ಬ್ಯಾಟ್ಸ್‌ಮನ್‌

ಮುಂದೇನು ಕತೆ? ಈಸ್ಟರ್ಟನ್ ಕ್ಲಬ್ ತಂಡ 1.2ನೇ ಓವರ್‌ಗೆ 8 ರನ್‌ಗಳಿಸಿ ಸುಲಭ ಗೆಲುವನ್ನಾಚರಿಸಿತು. ಅಂದರೆ 8 ಎಸೆತಗಳಿಗೆ 8 ರನ್ ಬಾರಿಸಿದ ಈಸ್ಟರ್ಟನ್ ಕ್ಲಬ್ ತಂಡ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಜೇಮ್ಸ್ ಕೆಂಡ್ರ ಎನ್ನುವ ಒಬ್ಬ ಬ್ಯಾಟ್ಸ್‌ಮನ್‌ ಒಬ್ಬನೇ 8 ಎಸೆತಗಳನ್ನು ಎದುರಿಸಿ 8 ರನ್ ಗಳಿಸಿದರು.

Story first published: Wednesday, July 14, 2021, 8:04 [IST]
Other articles published on Jul 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X