ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಈತನಿಗೆ ಅವಕಾಶ ಕೊಡದೆ ಅನ್ಯಾಯ ಮಾಡಬೇಡಿ

ರಿಷಬ್‌ ಪಂತ್‌ಗೆ ಪ್ರದರ್ಶನ ನೀಡಲು ಸಾಕಷ್ಟು ಅವಕಾಶಗಳನ್ನು ನೀಡಲಾಗಿದೆ. ರಿಷಬ್ ಪಂತ್ ಅವರನ್ನು ಕಡೆಗಣಿಸಿ ದಿನೇಶ್ ಕಾರ್ತಿಕ್‌ರನ್ನು ಆಯ್ಕೆ ಮಾಡಬೇಕು ಎಂದು ಮಾಜಿ ಕ್ರಿಕೆಟರ್ ರೀತೀಂದರ್ ಸೋಧಿ ಅಭಿಪ್ರಾಯಪಟ್ಟಿದ್ದಾರೆ

ಟಿ20 ವಿಶ್ವಕಪ್‌ 2022 ಆರಂಭಕ್ಕೆ ಇನ್ನು ಒಂದು ತಿಂಗಳಷ್ಟೇ ಬಾಕಿ ಇದೆ. ಎಲ್ಲಾ ತಂಡಗಳು ಈಗಾಗಲೇ ವಿಶ್ವಕಪ್‌ಗಾಗಿ ಭರ್ಜರಿಯಾಗಿ ಸಿದ್ಧತೆ ನಡೆಸುತ್ತಿವೆ. ಭಾರತ ತಂಡ ಈಗಾಗಲೇ ವಿಶ್ವಕಪ್ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ವಿಶ್ವಕಪ್ ಆಡುವ ಬಳಗದಲ್ಲಿ ಯಾರೆಲ್ಲಾ ಇರಬೇಕು ಎನ್ನುವುದು ಕುರಿತಂತೆ ಮಾಜಿ ಕ್ರಿಕೆಟಿಗರು ಈಗಾಗಲೇ ತಮ್ಮ ಸಲಹೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಶಾಹಿದ್ ಅಫ್ರಿದಿ ನಂತರ, ವಿರಾಟ್ ಕೊಹ್ಲಿ ನಿವೃತ್ತಿ ಕುರಿತು ಮತ್ತೊಬ್ಬ ಪಾಕ್ ಕ್ರಿಕೆಟಿಗ ಭವಿಷ್ಯ!ಶಾಹಿದ್ ಅಫ್ರಿದಿ ನಂತರ, ವಿರಾಟ್ ಕೊಹ್ಲಿ ನಿವೃತ್ತಿ ಕುರಿತು ಮತ್ತೊಬ್ಬ ಪಾಕ್ ಕ್ರಿಕೆಟಿಗ ಭವಿಷ್ಯ!

ಈಗ ಭಾರತದ ಮಾಜಿ ಕ್ರಿಕೆಟಿಗ ರೀತೀಂದರ್ ಸೋಧಿ ಕೂಡ ಈ ಬಗ್ಗೆ ಮಾತನಾಡಿದ್ದು, ರಿಷಬ್‌ ಪಂತ್‌ ಬದಲಿಗೆ ದಿನೇಶ್‌ ಕಾರ್ತಿಕ್‌ಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ವಿಶ್ವಕಪ್‌ನಲ್ಲಿ ಆಡುವ ತಂಡದಲ್ಲಿ ದಿನೇಶ್‌ ಕಾರ್ತಿಕ್‌ ಮೊದಲ ಆಯ್ಕೆಯಾಗಬೇಕು ಎಂದು ಹೇಳಿದ್ದಾರೆ.

ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಅತಿಯಾದ ಪ್ರಯೋಗಗಳನ್ನು ಮಾಡಿದ್ದೇ ಟೀಂ ಇಂಡಿಯಾ ಸೋಲಿಗೆ ಕಾರಣ ಎಂದು ಹೇಳಿದ್ದಾರೆ. ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಅವರ ಸೂಪರ್ 4 ಪಂದ್ಯಗಳಲ್ಲಿ ಭಾರತ ಸೋಲನುಭವಿಸಿತ್ತು.

 ಉತ್ತಮ ಪ್ರದರ್ಶನ ನೀಡದ ಪಂತ್

ಉತ್ತಮ ಪ್ರದರ್ಶನ ನೀಡದ ಪಂತ್

ಏಷ್ಯಾಕಪ್‌ ಸೂಪರ್ 4 ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ಬದಲಿಗೆ ರಿಷಬ್ ಪಂತ್‌ಗೆ ಅವಕಾಶ ನೀಡಿದರು. ಅದನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ರಿಷಬ್ ಪಂತ್ ವಿಫಲರಾದರು. ಅದರಲ್ಲೂ ಮುಖ್ಯವಾದ ಪಂದ್ಯಗಳಲ್ಲಿ ಪಂತ್‌ರಿಂದ ಉತ್ತಮ ಪ್ರದರ್ಶನ ಬಂದಿಲ್ಲ ಎಂದು ಹೇಳಿದರು.

ಮತ್ತೊಂದೆಡೆ, ಅನುಭವಿ ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್, ಅವಕಾಶ ಸಿಕ್ಕಾಗಲೆಲ್ಲಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ದಿನೇಶ್ ಕಾರ್ತಿಕ್‌ರನ್ನು ಕೂರಿಸಿದರೆ ಆತನಿಗೆ ಅನ್ಯಾಯ ಮಾಡಿದಂತೆ ಎಂದು ಸೋಧಿ ಹೇಳಿದ್ದಾರೆ.

ಕಾರ್ತಿಕ್ ಬೇಡ, ಪಂತ್ ಓಕೆ: ಟಿ20 ವಿಶ್ವಕಪ್‌ಗಾಗಿ ಮಾಜಿ ಕ್ರಿಕೆಟಿಗನ ಆಯ್ಕೆಯ ಆಡುವ 11ರ ಬಳಗ

 ಈಗ ಪರಿಸ್ಥಿತಿ ಬದಲಾಗಿದೆ

ಈಗ ಪರಿಸ್ಥಿತಿ ಬದಲಾಗಿದೆ

ರಿಷಬ್ ಪಂತ್ ಅಥವಾ ದಿನೇಶ್ ಕಾರ್ತಿಕ್‌ ಯಾರು ಮೊದಲ ಆಯ್ಕೆ ಎನ್ನುವ ಗೊಂದಲದ ಬಗ್ಗೆ ಉತ್ತರ ನೀಡಿದರ ಅವರು, "ಏಷ್ಯಾ ಕಪ್‌ಗೆ ಮೊದಲು, ನನಗೆ ಯಾವಾಗಲೂ ರಿಷಭ್ ಪಂತ್ ಮೊದಲ ಆಯ್ಕೆಯಾಗಿದ್ದರು. ಆದರೆ ಈಗ ತಂಡವು ದಿನೇಶ್ ಕಾರ್ತಿಕ್‌ಗೆ ಬೆಂಬಲ ನೀಡಬೇಕೆಂದು ನಾನು ಭಾವಿಸುತ್ತೇನೆ." ಎಂದು ಹೇಳಿದ್ದಾರೆ.

ರಿಷಬ್‌ ಪಂತ್ ಕೂಡ ಸಿಕ್ಸರ್ ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಅವರಿಗೆ ಈಗಾಗಲೇ ಸಾಕಷ್ಟು ಅವಕಾಶಗಳನ್ನು ನೀಡಲಾಗಿದೆ. ಆದರೂ ಅವರು ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಸ್ಥಿರವಾದ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಸೋಧಿ ಹೇಳಿದ್ದಾರೆ.

 ಹಲವು ಪಂದ್ಯಗಳನ್ನು ಡಿಕೆ ಗೆಲ್ಲಿಸಿದ್ದಾರೆ

ಹಲವು ಪಂದ್ಯಗಳನ್ನು ಡಿಕೆ ಗೆಲ್ಲಿಸಿದ್ದಾರೆ

"ನಾವು ಸೋಲುತ್ತೇವೆ ಎಂದು ಭಾವಿಸಿದ ಕೆಲವು ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದ್ದರಿಂದ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ದಿನೇಶ್‌ ಕಾರ್ತಿಕ್‌ಗೆ ಎಲ್ಲಾ ಮೂರು ಪಂದ್ಯಗಳಲ್ಲಿ ಅವಕಾಶ ನೀಡುವ ಮೂಲಕ ಅವರ ಅರ್ಹತೆಯನ್ನು ಪರೀಕ್ಷಿಸಬೇಕು" ಎಂದು ರೀತೀಂದರ್ ಸೋಧಿ ಒತ್ತಾಯಿಸಿದ್ದಾರೆ.

ದಿನೇಶ್‌ ಕಾರ್ತಿಕ್‌ರನ್ನು ತಂಡಕ್ಕೆ ಆಯ್ಕೆ ಮಾಡಲು ಅವರಿಗೆ ಆಡಲು ಸೂಕ್ತ ಅವಕಾಶ ಕೊಡದಿದ್ದರೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.

 ಸ್ಪಿನ್ನರ್ ವಿರುದ್ಧ ಪಂತ್ ಕಳಪೆ ಪ್ರದರ್ಶನ

ಸ್ಪಿನ್ನರ್ ವಿರುದ್ಧ ಪಂತ್ ಕಳಪೆ ಪ್ರದರ್ಶನ

ಏಷ್ಯಾ ಕಪ್‌ನಲ್ಲಿ ಎಡಗೈ ಸ್ಪಿನ್ನರ್‌ಗಳ ವಿರುದ್ಧ ಪಂತ್ ಅವರನ್ನು ಕಳುಹಿಸುವ ಕ್ರಮವು ಹೇಗೆ ಕೆಲಸ ಮಾಡಲಿಲ್ಲ ಎಂಬುದರ ಕುರಿತು ಸೋಧಿ ಮಾತನಾಡಿದರು. ಪಂತ್ ಎಡಗೈ ಸ್ಪಿನ್ನರ್‌ಗಳ ವಿರುದ್ಧ ಸಾಕಷ್ಟು ಕಳಪೆ ದಾಖಲೆಯನ್ನು ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.

"ರಿಷಬ್ ಪಂತ್ ಎಡಗೈ ಸ್ಪಿನ್ನರ್‌ಗಳನ್ನು ಎದುರಿಸಬಹುದು. ಆದರೆ ಅದನ್ನು ಯಾವಾಗ ಮಾಡುತ್ತಾರೆ? ಅದಕ್ಕಾಗಿಯೇ ಅವರನ್ನು ತಂಡದಲ್ಲಿ ಆಡಿಸುತ್ತಿರುವುದು. ಮತ್ತೊಂದೆಡೆ ದಿನೇಶ್ ಕಾರ್ತಿಕ್ ವಿವಿಧ ಹೊಡೆತಗಳನ್ನು ಹೊಂದಿದ್ದಾರೆ ಮತ್ತು ಬೌಲರ್‌ಗಳ ಮೇಲೆ ಪ್ರಾಬಲ್ಯ ಸಾಧಿಸಬಹುದು. ಹಾಗಾಗಿ ಆಸ್ಟ್ರೇಲಿಯಾ ವಿರುದ್ಧದ ಭಾರತದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಪಂತ್ ಬದಲಿಗೆ ದಿನೇಶ್ ಕಾರ್ತಿಕ್‌ಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ,

Story first published: Thursday, September 15, 2022, 10:59 [IST]
Other articles published on Sep 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X