ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ ಬಳಿಕ ಮುಖ್ಯ ಕೋಚ್ ರವಿಶಾಸ್ತ್ರಿ ಅವಧಿ ಅಂತ್ಯ: ದ್ರಾವಿಡ್ ಹೆಗಲೇರುತ್ತಾ ಜವಾಬ್ಧಾರಿ?

Should Rahul Dravid succeed Ravi Shastri as Indias head coach! here is Kapil Dev reaction

ಟೀಮ್ ಇಂಡಿಯಾ ಕೋಚ್ ವಿಚಾರ ಈಗ ಸಾಕಷ್ಟು ಚರ್ಚೆಯ ಸಂಗತಿಯಾಗಿದೆ. ಮುಖ್ಯ ಕೋಚ್ ಆಗಿರುವ ರವಿ ಶಾಸ್ತ್ರಿ ಅವಧಿ ಮುಂದಿನ ವಿಶ್ವಕಪ್‌ ಬಳಿಕ ಅಂತ್ಯವಾಗಲಿದೆ. ಆನಂತರ ರಾಹುಲ್ ದ್ರಾವಿಡ್ ಕೋಚ್ ಹುದ್ದೆಯನ್ನು ಅಲಂಕರಿಸಬೇಕು ಎಂಬ ಚರ್ಚೆಗಳು ಜೋರಾಗಿದೆ.

Ravi Shastri ಅವಧಿ ಮುಕ್ತಾಯ Rahul Dravid ಆಗ್ತಾರಾ ಟೀಂ ಇಂಡಿಯಾ ಗುರು | Oneindia Kannada

ಈ ವಿಚಾರವಾಗಿ ಮಾಜಿ ಕ್ರಿಕೆಟಿಗ ಕಪಿಲ್‌ದೇವ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರಾಹುಲ್ ದ್ರಾವಿಡ್ ಅವರನ್ನು ಮುಂದಿನ ಕೋಚ್ ಆಗಿ ನೋಡುವುದರಲ್ಲಿ ತಪ್ಪೇನಿಲ್ಲ. ಆದರೆ ರವಿ ಶಾಸ್ತ್ರಿ ಆ ಹುದ್ದೆಯಲ್ಲಿ ಮುಂದುವರಿಯುವವರೆಗೆ ಈ ಚರ್ಚೆಯಲ್ಲಿ ಅರ್ಥವಿಲ್ಲ. ಇಂತಾ ಚರ್ಚೆಗಳು ಕೋಚ್ ಹಾಗೂ ಆಟಗಾರರ ಮೇಲೆ ಅನಗತ್ಯವಾದ ಒತ್ತಡವನ್ನು ಸೃಷ್ಟಿಸುತ್ತದೆ ಎಂದು ಕಪಿಲ್ ದೇವ್ ಹೇಳಿದ್ದಾರೆ.

ಟೀಮ್ ಇಂಡಿಯಾ ಇಂಗ್ಲೆಂಡ್ ತಂಡಕ್ಕೂ ತವರಿನಲ್ಲಿ ಸೋಲುಣಿಸಲಿದೆ: ಇಯಾನ್ ಚಾಪೆಲ್ಟೀಮ್ ಇಂಡಿಯಾ ಇಂಗ್ಲೆಂಡ್ ತಂಡಕ್ಕೂ ತವರಿನಲ್ಲಿ ಸೋಲುಣಿಸಲಿದೆ: ಇಯಾನ್ ಚಾಪೆಲ್

"ನನ್ನ ಪ್ರಕಾರ ಈಗ ಈ ವಿಚಾರವಬಾಗಿ ಮಾತನಾಡುವ ಅಗತ್ಯವೇ ಇಲ್ಲ. ಶ್ರೀಲಂಕಾ ವಿರುದ್ಧದ ಸರಣಿ ಅಂತ್ಯವಾಗಲಿ. ಆಗ ನಮ್ಮ ತಂಡ ಯಾವ ರೀತಿಯ ಪ್ರದರ್ಶನವನ್ನು ನೀಡುತ್ತದೆ ಎಂದುದು ಅರಿವಾಗುತ್ತದೆ. ನೀವು ಹೊಸ ಕೋಚ್‌ಅನ್ನು ರೂಪಿಸಲು ಬಯಸುತ್ತೀರಾದರೆ ಅದರಲ್ಲಿ ತಪ್ಪೇನಿಲ್ಲ. ಮತ್ತೊಂದು ಸಂಗತಿಯೆಂದರೆ ರವಿ ಶಾಸ್ತ್ರಿ ಮುಂದುವರಿಯುತ್ತಾರಾದರೆ ಅವರನ್ನು ಆ ಹುದ್ದೆಯಿಂದ ಬಿಡುಗಡೆಗೊಳಿಸುವುದಕ್ಕೂ ಕಾರಣಗಳು ಇಲ್ಲ. ಎಲ್ಲವನ್ನೂ ಸಮಯವೇ ಹೇಳಲಿದೆ. ಆದರೆ ಈ ಚರ್ಚೆಗಳಿಂದಾಗಿ ಆಟಗಾರರು ಹಾಗೂ ಕೋಚ್ ಮೇಲೆ ಅನಗತ್ಯ ಒತ್ತಡಗಳನ್ನು ಉಂಟು ಮಾಡುತ್ತದೆ" ಎಂದು ಕಪಿಲ್‌ದೇವ್ ಪ್ರತಿಕ್ರಿಯೆ ನೀಡಿದ್ದಾರೆ.

ಗಮನಾರ್ಹ ಸಂಗತಿಯೆಂದರೆ ರಾಹುಲ್ ದ್ರಾವಿಡ್ ಹಾಗೂ ಕಪಿಲ್‌ದೇವ್ ಇಬ್ಬರೂ ಕೂಡ ಈಗ ಭಾರತ ಕ್ರಿಕೆಟ್‌ನ ಪ್ರತ್ಯೇಕ ತಂಡಗಳ ಕೋಚ್ ಆಗಿದ್ದಾರೆ. ಇಂಗ್ಲೆಂಡ್‌ನಲ್ಲಿರುವ ಭಾರತ ತಂಡದ ಕೋಚ್ ಆಗಿ ರವಿ ಶಾಸ್ತ್ರಿ ಕಾರ್ಯನಿರ್ವಹಿಸುತ್ತಿದ್ದರೆ ಶ್ರೀಲಂಕಾದಲ್ಲಿ ಸೀಮಿತ ಓವರ್‌ಗಳ ಸರಣಿಯನ್ನಾಡಲು ತೆರಳಿತುವ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಮಾರ್ಗದರ್ಶಕರಾಗಿದ್ದಾರೆ.

ರಾಹುಲ್ ದ್ರಾವಿಡ್ ಭಾರತ ಎ ಹಾಗೂ ಅಂಡರ್ 19 ತಂಡಕ್ಕೆ ಕೋಚ್ ಆಗಿ ಕರ್ತವ್ಯವನ್ನು ನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ. ಈಗ ಲಂಕಾಗೆ ತೆರಳಿರುವ ಭಾರತ ತಂಡಕ್ಕೂ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದಾಗಿ ವಿಶ್ವಕಪ್‌ ನಂತರ ರವಿ ಶಾಸ್ತ್ರಿ ಮುಖ್ಯ ಕೋಚ್ ಆಗಿ ಮುಂದಿವರಿಯದಿದ್ದರೆ ರಾಹುಲ್ ದ್ರಾವಿಡ್ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಲಿದ್ದಾರೆಯೇ ಎಂಬುದು ಕೂಡ ಪ್ರಶ್ನೆಯಾಗಿದೆ.

Story first published: Monday, July 5, 2021, 13:52 [IST]
Other articles published on Jul 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X