ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಕೊಹ್ಲಿ ಬದಲು ರೋಹಿತ್ ನಾಯಕನಾಗಬೇಕೆ?' ಪ್ರಶ್ನೆಗೆ ಉತ್ತರಿಸಿದ ಅಖ್ತರ್

Should Rohit replace Kohli as India captain? Shoaib Akhtar gives answer

ಇಸ್ಲಮಾಬಾದ್, ಆಗಸ್ಟ್ 1: ಟೀಮ್ ಇಂಡಿಯಾದ ನಾಯಕತ್ವದಲ್ಲಿ ಬದಲಾವಣೆಯಾಗಬೇಕು, ವಿರಾಟ್ ಕೊಹ್ಲಿ ಬದಲು ರೋಹಿತ್ ಶರ್ಮಾ ತಂಡದ ನಾಯಕತ್ವ ವಹಿಸಿಕೊಳ್ಳಬೇಕು ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿಬಂದಿದ್ದವು. ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತ ಬಳಿಕ ಈ ವಿಚಾರ ಹೆಚ್ಚು ಸುದ್ದಿಯಾಗಿತ್ತು.

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ XIವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ XI

ಇದೇ ಪ್ರಶ್ನೆಯನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರಲ್ಲಿ ಕೇಳಿದಾಗ ಅಖ್ತರ್ ಬದಲಾವಣೆಯ ಅಗತ್ಯವಿಲ್ಲ ಎಂದಿದ್ದಾರೆ. ಟೀಮ್ ಇಂಡಿಯಾ ನಾಯಕನಾಗಿ ವಿರಾಟ್ ಕೊಹ್ಲಿ ಅವರೇ ಮುಂದುವರೆಯಲಿ ಎಂಬ ನೇರ ಅಭಿಪ್ರಾಯವನ್ನು ಅಖ್ತರ್ ವ್ಯಕ್ತಪಡಿಸಿದ್ದಾರೆ.

ಟ್ವಿಟರ್‌ನಲ್ಲಿ ಅಕೀಲ್ ರಾಜ ಎಂಬವರು, ಕೊಹ್ಲಿ ಬದಲು ಟೀಮ್ ಇಂಡಿಯಾ ನಾಯಕನ ಸ್ಥಾನಕ್ಕೆ ರೋಹಿತ್ ಶರ್ಮಾ ಅವರನ್ನು ತರಬೇಕಾ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಅಖ್ತರ್ 'ಅಗತ್ಯವಿಲ್ಲ,' ಎಂದು ಎರಡೇ ಪದಗಳಲ್ಲಿ ಉತ್ತರಿಸಿದ್ದಾರೆ.

ವಿಜಿ ಸಿದ್ಧಾರ್ಥ ಸಾವಿನ ಬಳಿಕ ಭಾವನಾತ್ಮಕ ಸಂದೇಶ ಬರೆದ ಆರ್ ಅಶ್ವಿನ್ವಿಜಿ ಸಿದ್ಧಾರ್ಥ ಸಾವಿನ ಬಳಿಕ ಭಾವನಾತ್ಮಕ ಸಂದೇಶ ಬರೆದ ಆರ್ ಅಶ್ವಿನ್

ಶಾನ್ ಎಂಬವರು, ಕೊಹ್ಲಿ ಅಥವಾ ರೋಹಿತ್ ಇವರಲ್ಲಿ ಯಾರು ಬೇಕು ಎಂದು ಪ್ರಶ್ನಿಸಿದ್ದಕ್ಕೆ ಅಖ್ತರ್, 'ಕೊಹ್ಲಿ,' ಎಂದು ಪ್ರತಿಕ್ರಿಯಿಸಿದ್ದಾರೆ. ರೋಹಿತ್-ಕೊಹ್ಲಿ ಇಬ್ಬರೂ ಶ್ರೇಷ್ಠ ಆಟಗಾರರೆ. ಇಬ್ಬರೂ ಇತರ ದೇಶೀಯ ಆಟಗಾರರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇಬ್ಬರೂ ಸರಳತೆಗೆ ಗುರುತಿಸಿಕೊಂಡ ಆಟಗಾರರು. ಹೀಗಾಗಿ ಅಖ್ತರ್‌ಗೆ ಈಗಿನ ನಾಯಕ ಕೊಹ್ಲಿಯನ್ನು ಬಿಟ್ಟುಕೊಡುವ ಮನಸಾಗಿಲ್ಲ.

Story first published: Thursday, August 1, 2019, 18:58 [IST]
Other articles published on Aug 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X