ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ಪ್ರವಾಸವನ್ನ ರದ್ದು ಮಾಡಬೇಕೆ? ಟೀಂ ಇಂಡಿಯಾ ಸ್ಥಿತಿ ಕಂಡು ಆಕಾಶ್ ಚೋಪ್ರಾ ಪ್ರಶ್ನೆ!

Aakash chopra

ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನವೇ ಸಾಕಷ್ಟು ಅಡೆತಡೆ ಎದುರಾಗಿದೆ. ಡಿಸೆಂಬರ್ 26ರಿಂದ ಪ್ರಾರಂಭಗೊಳ್ಳಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆಟಗಾರರನ್ನ ಘೋಷಿಸುವ ಮೊದಲೇ ಸಾಕಷ್ಟು ಆಟಗಾರರು ಗಾಯಗೊಂಡಿದ್ದರು. ಈ ಪಟ್ಟಿಗೆ ಇದೀಗ ಟೀಂ ಇಂಡಿಯಾ ಟೆಸ್ಟ್ ಫಾರ್ಮೆಟ್ ಉಪನಾಯಕ ರೋಹಿತ್ ಶರ್ಮಾ ಕೂಡ ಸೇರಿದ್ದಾರೆ.

ಹೌದು ರೋಹಿತ್ ಶರ್ಮಾ ಮುಂಬೈನಲ್ಲಿ ಕಳೆದ ಒಂದು ವಾರದಿಂದ ಅಭ್ಯಾಸ ನಡೆಸುತ್ತಿದ್ದ ವೇಳೆಯಲ್ಲಿ ಗಾಯಗೊಂಡಿರುವುದು ಬೆಳಕಿಗೆ ಬಂದಿದೆ. ಅವರು ಮೂರು ಪಂದ್ಯಗಳ ಏಕದಿನ ಸರಣಿಗೆ ಲಭ್ಯವಾಗುತ್ತಾರೆಯೇ ಅಥವಾ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದ್ರೆ ಟೆಸ್ಟ್ ಸರಣಿಯಲ್ಲಿ ಉಪನಾಯಕನಾಗಿ ಅಜಿಂಕ್ಯ ರಹಾನೆ ಅವರ ಬದಲಿಗೆ ಅನುಭವಿ ಆರಂಭಿಕ ಆಟಗಾರ ರೋಹಿತ್‌ರನ್ನ ನಾಯಕನಾಗಿ ಆಯ್ಕೆ ಮಾಡಲಾಗಿತ್ತು. ಆದ್ರೆ ರೋಹಿತ್ ಹ್ಯಾಮ್‌ಸ್ಟ್ರಿಂಗ್‌ನಿಂದಾಗಿ ಟೆಸ್ಟ್ ಸರಣಿಯಲ್ಲಿ ಭಾಗವಹಿಸುವುದೇ ಅನುಮಾನವಾಗಿದೆ. ರೋಹಿತ್ ಇತ್ತೀಚೆಗೆ ಟೆಸ್ಟ್ ತಂಡದ ಪ್ರಮುಖ ಆಟಗಾರನಾಗಿರುವುದರಿಂದ, ಅವರ ಅನುಪಸ್ಥಿತಿಯು ಭಾರತಕ್ಕೆ ದೊಡ್ಡ ಸವಾಲಾಗಬಹುದು.

ಟೀಂ ಇಂಡಿಯಾಗೆ ದುರ್ಬಲಗೊಳ್ಳಬಹುದು: ಆಕಾಶ್ ಚೋಪ್ರಾ

ಟೀಂ ಇಂಡಿಯಾಗೆ ದುರ್ಬಲಗೊಳ್ಳಬಹುದು: ಆಕಾಶ್ ಚೋಪ್ರಾ

ರೋಹಿತ್ ಶರ್ಮಾ ಇಂಜ್ಯುರಿ ಬಗ್ಗೆ ಮಾತನಾಡಿರುವ ಆಕಾಶ್ ಚೋಪ್ರಾ, ರೋಹಿತ್ ಅವರ ಗಾಯದ ಬಲವಂತದ ಅನುಪಸ್ಥಿತಿಯು ಭಾರತ ತಂಡವನ್ನು ಗಮನಾರ್ಹವಾಗಿ ದುರ್ಬಲಗೊಳಿಸಿದೆ ಎಂದು ವಿವರಿಸಿದ್ದಾರೆ. ಗಮನಾರ್ಹವಾಗಿ, ದಕ್ಷಿಣ ಆಫ್ರಿಕಾದ ಟ್ರ್ಯಾಕ್‌ಗಳು ಸಾಕಷ್ಟು ಬೌನ್ಸ್ ಅನ್ನು ನೀಡುತ್ತವೆ. ಆದ್ದರಿಂದ, ಅಲ್ಲಿಗೆ ಭೇಟಿ ನೀಡುವ ಬ್ಯಾಟ್ಸ್‌ಮನ್‌ಗಳು, ವಿಶೇಷವಾಗಿ ಏಷ್ಯಾದ ಪರಿಸ್ಥಿತಿಗಳಿಂದ ಬಂದವರು ದಕ್ಷಿಣ ಆಫ್ರಿಕಾದಲ್ಲಿ ಸ್ಕೋರ್ ಮಾಡಲು ಹೆಣಗಾಡುತ್ತಾರೆ. ಇದಲ್ಲದೆ, ಪ್ರೋಟೀಸ್ ತಂಡದಲ್ಲಿ ಮಾರಕ ಬೌಲರ್‌ಗಳಾದ ಕಗಿಸೊ ರಬಾಡ, ಆನ್ರಿಚ್ ನಾರ್ಟ್ಜೆ ಮತ್ತು ಲುಂಗಿ ಎನ್‌ಗಿಡಿ ಅವರ ಬಲವನ್ನ ಹೊಂದಿದೆ. ಹೀಗಾಗಿ ರೋಹಿತ್ ಅನುಪಸ್ಥಿತಿಯು ಟೀಂ ಇಂಡಿಯಾವನ್ನ ದುರ್ಬಲಗೊಳಿಸಬಹುದು.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿರುವ ವಿರಾಟ್ ಕೊಹ್ಲಿ: ವರದಿ

ದಕ್ಷಿಣ ಆಫ್ರಿಕಾ ಸರಣಿಯನ್ನು ರದ್ದುಗೊಳಿಸಬೇಕಾಗಬಹುದು!

ದಕ್ಷಿಣ ಆಫ್ರಿಕಾ ಸರಣಿಯನ್ನು ರದ್ದುಗೊಳಿಸಬೇಕಾಗಬಹುದು!

ಗಾಯಗಳಿಂದಾಗಿ ಈ ಬಾರಿ ಟೆಸ್ಟ್ ಸರಣಿಯನ್ನು ಕಳೆದುಕೊಂಡಿರುವ ಭಾರತೀಯ ಆಟಗಾರರಲ್ಲಿ ರೋಹಿತ್ ಶರ್ಮಾ ಮೊದಲೇನಲ್ಲ. ಈಗಾಗಲೇ ಇಂಜ್ಯುರಿಯಿಂದ ಬಳಲಿರುವ ಭಾರತದ ಆಟಗಾರರ ಲಿಸ್ಟ್‌ಗೆ ರೋಹಿತ್ ಸೇರ್ಪಡೆಯಾಗಿದ್ದಾರೆ. ಈ ಎಲ್ಲಾ ಅಂಶಗಳನ್ನು ಎತ್ತಿ ಹಿಡಿದ ಚೋಪ್ರಾ, ಭಾರತವು ದಕ್ಷಿಣ ಆಫ್ರಿಕಾವನ್ನು ರದ್ದುಗೊಳಿಸಬೇಕು , ಇಲ್ಲವೆ ಅವರು ಎರಡನೇ ಶ್ರೇಣಿಯ ತಂಡವನ್ನು ಕಣಕ್ಕಿಳಿಸಬಹುದು ಎಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ.

ಟೀಂ ಇಂಡಿಯಾ ಏಕೆ ದುರ್ಬಲಗೊಂಡಿದೆ?

ಟೀಂ ಇಂಡಿಯಾ ಏಕೆ ದುರ್ಬಲಗೊಂಡಿದೆ?

ಆಕಾಶ್ ಚೋಪ್ರಾ ಅಭಿಪ್ರಾಯದಲ್ಲಿ ಟೀಂ ಇಂಡಿಯಾ ಏಕೆ ದುರ್ಬಲಗೊಂಡಿದೆ ಎಂಬುದನ್ನ ನೀವು ಮೊದಲು ತಿಳಿದುಕೊಳ್ಳಬೇಕು. ನಿಮ್ಮೆಲ್ಲಾ ಪ್ರಶ್ನೆಗಳಿಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಉತ್ತರವೇ ಇಲ್ಲಿದೆ

'' ರವೀಂದ್ರ ಜಡೇಜಾ ಅಲಭ್ಯ, ಅಕ್ಷರ್ ಪಟೇಲ್ ಅಲಭ್ಯ, ರಾಹುಲ್ ಚಾಹರ್ ಅಲಭ್ಯ, ಶುಭಮಾನ್ ಗಿಲ್ ಇಲ್ಲ ಮತ್ತು ಈಗ ರೋಹಿತ್ ಶರ್ಮಾ ಕೂಡ ಇಲ್ಲ ಎಂದು ಹೇಳುತ್ತಿದ್ದಾರೆ. ಟೀಂ ಇಂಡಿಯಾದಲ್ಲಿ ಏನಾಗುತ್ತಿದೆ? ನಾವು ದಕ್ಷಿಣ ಆಫ್ರಿಕಾ ಪ್ರವಾಸವನ್ನು ರದ್ದುಗೊಳಿಸಬೇಕೇ? '' ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಜೊತೆಗೆ ರೋಹಿತ್ ಶರ್ಮಾ ಟೀಂ ಇಂಡಿಯಾದಿಂದ ಮಿಸ್‌ ಆಗುವು ಪ್ರಮುಖ ಆಟಗಾರರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಏಕೆಂದರೆ 2021ರಲ್ಲಿ ಉತ್ತಮ ಟೆಸ್ಟ್‌ ಬ್ಯಾಟರ್‌ಗಳಲ್ಲಿ ಅವರು ಕೂಡ ಒಬ್ಬರು. ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಗೆಲುವಿನಲ್ಲಿ ರೋಹಿತ್ ಮತ್ತು ರಾಹುಲ್ ಜೊತೆಯಾಗಿದ್ದರು. ಆದ್ರೀಗ ಯಾರಿದ್ದಾರೆ ಎಂಬ ಪ್ರಶ್ನೆ ಹಾಕಿದ್ದಾರೆ.

ಕೊಹ್ಲಿ ಮಾತ್ರವಲ್ಲ ಸಚಿನ್, ದ್ರಾವಿಡ್ ಕೂಡ ಈ ಕೆಟ್ಟ ಸಮಯವನ್ನು ಎದುರಿಸಿದ್ದರು ಎಂದ ಸಂಜಯ್ ಬಂಗರ್

Virat Kohli ನಾಯಕತ್ವದಿಂದ ಕೆಳಗಿಯುತ್ತಿದ್ದಂತೆ ಶಾಕಿಂಗ್ ನ್ಯೂಸ್ ಕೊಟ್ಟ Ravindra Jadeja | Oneindia Kannada
ರಾಹುಲ್-ಮಯಾಂಕ್ ಓಕೆ, ಮೂರನೇ ಓಪನರ್ ಯಾರು?

ರಾಹುಲ್-ಮಯಾಂಕ್ ಓಕೆ, ಮೂರನೇ ಓಪನರ್ ಯಾರು?

ರೋಹಿತ್ ಶರ್ಮಾ ಮತ್ತು ಶುಭ್ಮನ್‌ ಗಿಲ್‌ ಗಾಯದಿಂದಾಗಿ ಅಲಭ್ಯರಾಗಿರುವುದರಿಂದ ಮಯಾಂಕ್ ಅಗರ್ವಾಲ್ ಮತ್ತು ಕೆ.ಎಲ್ ರಾಹುಲ್ ಭಾರತಕ್ಕೆ ಆರಂಭವನ್ನು ನೀಡಬೇಕಾಗುತ್ತದೆ. ಈ ಎರಡು ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡುತ್ತಾರೆ ಎಂದುಕೊಳ್ಳೋಣ. ಆದ್ರೆ ಬ್ಯಾಕ್ ಅಪ್‌ ಓಪನಿಂಗ್ ಬ್ಯಾಟ್ಸ್‌ಮನ್ ಯಾರು ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಈಗಾಗಲೇ ರೋಹಿತ್ ಶರ್ಮಾ ಬದಲಿಗೆ ಭಾರತ ಎ ತಂಡದ ಪ್ರಿಯಾಂಕ್ ಪಾಂಚಾಲ್ ಸ್ಥಾನ ಪಡೆದಿದ್ದಾರೆ.

ದಕ್ಷಿಣ ಆಫ್ರಿಕಾಕ್ಕೆ ಡಿಸೆಂಬರ್ 16ರಂದು ತೆರಳಲಿರುವ ಟೀಂ ಇಂಡಿಯಾ ಆಟಗಾರರು ಒಟ್ಟು 44 ದಿನಗಳ ಕಾಲ ಬಯೋ ಬಬಲ್‌ನಲ್ಲಿ ಉಳಿಯುತ್ತಾರೆ. ಇದಕ್ಕೂ ಮೊದಲು ಡಿಸೆಂಬರ್ 12 ರಿಂದಲೇ ಎಲ್ಲಾ ಆಟಗಾರರು ಮುಂಬೈನಲ್ಲಿ ನಾಲ್ಕು ದಿನಗಳ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಡಿಸೆಂಬರ್ 26ರಂದು ಸೆಂಚುರಿಯನ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.

Story first published: Tuesday, December 14, 2021, 13:02 [IST]
Other articles published on Dec 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X