ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ಪ್ರವಾಸಕ್ಕೂ ಮುಂಚೆಯೇ ವರುಣ್ ಚಕ್ರವರ್ತಿಗೆ ಆಘಾತ!

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಏಕದಿನ, ಟಿ-ಟ್ವೆಂಟಿ ಹಾಗೂ ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟ ಮಾಡಲಾಗಿದೆ. ಐಪಿಎಲ್ 2020ರಲ್ಲಿ ಉತ್ತಮ ಪ್ರದರ್ಶನದ ನೀಡಿದ ಕೆಕೆಆರ್ ತಂಡದ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿಗೆ ಆಸ್ಟ್ರೇಲಿಯಾ ಪ್ರವಾಸದ ಟಿಕೆಟ್ ಲಭ್ಯವಾಗಿತ್ತು.

ಟಿ-ಟ್ವೆಂಟಿ ತಂಡಕ್ಕೆ ಆಯ್ಕೆಯಾಗಿದ್ದ ವರುಣ್ ಚಕ್ರವರ್ತಿ ಭಾರತ ಪರ ಮೊದಲ ಪಂದ್ಯವನ್ನಾಡಲು ಬಹಳ ಉತ್ಸುಕರಾಗಿದ್ದಾರೆ. ಆದ್ರೀಗ, ಆಸ್ಟ್ರೇಲಿಯಾ ಪ್ರವಾಸಕ್ಕೂ ಮುಂಚೆಯೇ ಆಘಾತ ಎದುರಾಗಿದೆ. ಸದ್ಯದ ಮಾಹಿತಿ ಪ್ರಕಾರ ವರುಣ್ ಚಕ್ರವರ್ತಿ ಗಾಯದ ಸಮಸ್ಯೆಗೆ ಸಿಲಿಕಿದ್ದು, ಆಸ್ಟ್ರೇಲಿಯಾ ವಿಮಾನ ಹತ್ತುವುದೇ ಅನುಮಾನ ಎನ್ನಲಾಗಿದೆ. ಮುಂದೆ ಓದಿ....

ಟೀಂ ಇಂಡಿಯಾದ ಹೊಸ ಮುಖ: ಆರ್ಕಿಟೆಕ್ಟ್ ವರುಣ್ ಚಕ್ರವರ್ತಿ ಟೀಂ ಇಂಡಿಯಾದ ಹೊಸ ಮುಖ: ಆರ್ಕಿಟೆಕ್ಟ್ ವರುಣ್ ಚಕ್ರವರ್ತಿ

ವರುಣ್ ಚಕ್ರವರ್ತಿಗೆ ಭುಜದ ಸಮಸ್ಯೆ

ವರುಣ್ ಚಕ್ರವರ್ತಿಗೆ ಭುಜದ ಸಮಸ್ಯೆ

ಚೊಚ್ಚಲ ಬಾರಿಗೆ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ವರುಣ್ ಚಕ್ರವರ್ತಿಗೆ ಸಿಕ್ಕಿದೆ. ಆದ್ರೆ, ಮೈದಾನಕ್ಕೆ ಇಳಿಯುವ ಮುನ್ನವೇ ಆ ಅವಕಾಶ ಕೈ ತಪ್ಪಿ ಹೋಗುತ್ತದೆ ಎಂಬ ಆತಂಕ ಕಾಡುತ್ತಿದೆ. ಇಂಡಿಯನ್ಸ್ ಎಕ್ಸ್‌ಪ್ರೆಸ್ ವರದಿ ಮಾಡಿರುವ ಪ್ರಕಾರ, 'ವರುಣ್‌ಗೆ ಭುಜ ಸಮಸ್ಯೆ ಎದುರಾಗಿದ್ದು, ಈ ಗಾಯದಿಂದ ಬೌಲಿಂಗ್ ಮೇಲೆ ಪರಿಣಾಮ ಬೀರುವುದಿಲ್ಲ ಆದರೆ ಥ್ರೋ ಎಸೆಯಲು ಕಷ್ಟವಾಗಲಿದೆ' ಎಂದು ಹೇಳಲಾಗಿದೆ.

ಫಿಟ್ನೆಸ್ ಪಾಸ್ ಆಗಿದ್ದ ವರುಣ್

ಫಿಟ್ನೆಸ್ ಪಾಸ್ ಆಗಿದ್ದ ವರುಣ್

ವರುಣ್ ಚಕ್ರವರ್ತಿ ಅಲ್ಪ ಮಟ್ಟದಲ್ಲಿ ಈ ಸಮಸ್ಯೆ ಇತ್ತು. ಆದ್ರೆ, ಐಪಿಎಲ್ ಟೂರ್ನಿಯಲ್ಲಿ ಮುಂದುವರಿದ ಕಾರಣ ಇದು ಉಲ್ಬಣಗೊಂಡಿದೆಯಂತೆ. ಮತ್ತೊಂದೆಡೆ ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಗೆ ತಂಡ ಪ್ರಕಟ ಮಾಡುವುದಕ್ಕು ಮೊದಲು ವರುಣ್ ಚಕ್ರವರ್ತಿ ಫಿಟ್ ಆಗಿದ್ದಾರೆ ಎಂದು ಭಾರತೀಯ ತಂಡದ ನಿತಿನ್ ಪಟೇಲ್ ಫಿಟ್‌ನೆಸ್ ಪ್ರಮಾಣಪತ್ರ ನೀಡಿದ್ದಾರೆ. ಸಮಸ್ಯೆ ಈಗ ತಿಳಿದಿದ್ದು, ಆಯ್ಕೆಗಾರರ ಮೇಲೆ ಮುಂದಿನ ತೀರ್ಮಾನ ನಿಂತಿದೆ.

ಆಸ್ಟ್ರೇಲಿಯಾ ಪ್ರವಾಸ ಸರಣಿಗೆ ರೋಹಿತ್ ಶರ್ಮಾ ಸೇರ್ಪಡೆ ಸಾಧ್ಯತೆ

ಬಿಸಿಸಿಐ ನಿರ್ಣಯವೇನು?

ಬಿಸಿಸಿಐ ನಿರ್ಣಯವೇನು?

''ವರುಣ್ ಚಕ್ರವರ್ತಿ ಅವರ ಗಾಯದ ಬಗ್ಗೆ ಆಯ್ಕೆಗಾರರಿಗೆ ತಿಳಿಸಲಾಗಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ವರುಣ್ ಚಕ್ರವರ್ತಿಯನ್ನು ಆಯ್ಕೆ ಮಾಡುವುದು ಬಿಡುವುದು ಆಯ್ಕೆಗಾರರ ಮೇಲಿದೆ. ಇದು ಸೆಲೆಕ್ಟರ್ಸ್ ಕರೆ ಆಗಿರುತ್ತದೆ" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್ ಪ್ರೆಸ್ ಮಾಹಿತಿ ನೀಡಿದ್ದಾರೆ.

ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ

ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ

ಭುಜದ ಸಮಸ್ಯೆ ಇದ್ದ ಕಾರಣವೇ ವರುಣ್ ಚಕ್ರವರ್ತಿ ಐಪಿಎಲ್ ಪಂದ್ಯಗಳಲ್ಲಿ ಹೆಚ್ಚಾಗಿ 30 Yard ವೃತ್ತದಲ್ಲಿ ಫಿಲ್ಡಿಂಗ್ ಮಾಡಬೇಕಾಯಿತು. 29 ವರ್ಷದ ತಮಿಳುನಾಡು ಸ್ಪಿನ್ನರ್ ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 17 ವಿಕೆಟ್ ಪಡೆದು ಮಿಂಚಿದರು. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 20 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. 6.84 ಎಕಾನಮಿ ಕಾಪಾಡಿಕೊಂಡಿದ್ದರು.

Story first published: Monday, November 9, 2020, 19:06 [IST]
Other articles published on Nov 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X