ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ನಲ್ಲಿ ಶ್ರೇಯಸ್ ಅಯ್ಯರ್ ಸ್ಥಾನಕ್ಕೆ ಕಂಟಕ: ಕಾರಣ ಇಲ್ಲಿದೆ

Shreyas iyer

ಟೀಂ ಇಂಡಿಯಾದಲ್ಲಿ ಸಾಕಷ್ಟು ಸ್ಪರ್ಧೆ ಹೆಚ್ಚಾಗಿದ್ದು, ಮಂಬರುವ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲು ಸಾಕಷ್ಟು ಆಟಗಾರರು ಹಾತೊರೆಯುತ್ತಿದ್ದರೆ. ಇಂತಹ ಸಂದರ್ಭದಲ್ಲಿ ಭಾರತ ತಂಡದಿಂದ ಶ್ರೇಯಸ್ ಅಯ್ಯರ್ ಅವರನ್ನು ಕೈಬಿಡಲಾಗುತ್ತದೆ ಎಂದು ವರದಿಯಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಭಾರತ ತಂಡ ಗೆದ್ದುಕೊಂಡಿದೆ. 2ನೇ ಏಕದಿನ ಪಂದ್ಯವನ್ನು 2 ವಿಕೆಟ್ ಗಳಿಂದ ರೋಚಕ ಜಯ ಸಾಧಿಸಿದೆ.

ಶ್ರೇಯಸ್ ಅಯ್ಯರ್ ಅವರ ಫಾರ್ಮ್, ಸ್ವಲ್ಪ ಚಿಂತೆಗೀಡುಮಾಡಿದೆ. ಶ್ರೇಯಸ್ ಅಯ್ಯರ್ ಎರಡೂ ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧಶತಕಗಳನ್ನು ಗಳಿಸಿದರು. ಆದರೆ ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ 5 ಟಿ20 ಸರಣಿಯಲ್ಲಿ ಅವರಿಗೆ ಅವಕಾಶ ನೀಡುವುದಿಲ್ಲ ಎಂದು ಕಂಡುಬರುತ್ತಿದೆ. ಅಯ್ಯರ್ ಉತ್ತಮ ಫಾರ್ಮ್‌ನಲ್ಲಿದ್ದರೂ ಹೊರಗುಳಿಯಲು ಕಾರಣ ಏನು ಎಂಬುದನ್ನ ಈ ಕೆಳಗೆ ತಿಳಿಯಿರಿ.

ಶ್ರೇಯಸ್ ಅಯ್ಯರ್‌ ಅನ್ನು ಟೀಂ ಇಂಡಿಯಾದಿಂದ ಹೊರಗಿಡಲು ಕಾರಣವೇನು?

ಶ್ರೇಯಸ್ ಅಯ್ಯರ್‌ ಅನ್ನು ಟೀಂ ಇಂಡಿಯಾದಿಂದ ಹೊರಗಿಡಲು ಕಾರಣವೇನು?

ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ವೇಗದ ಬೌಲರ್‌ಗಳ ವಿರುದ್ಧ ಅಷ್ಟು ಉತ್ತಮವಾಗಿ ಆಡುವಲ್ಲಿ ಎಡವುತ್ತಿದ್ದಾರೆ. ವಿಶೇಷವಾಗಿ ಬೌನ್ಸರ್‌ಗಳನ್ನು ಹೇಗೆ ಎದುರಿಸಬೇಕೆಂದು ತಿಳಿಯದೆ ಔಟಾಗುತ್ತಿದ್ದಾರೆ. ಇತ್ತೀಚೆಗಷ್ಟೇ ನಡೆದ ಇಂಗ್ಲೆಂಡ್ ಸರಣಿಯಲ್ಲಿ ಬೌನ್ಸರ್ ಬೌಲ್ ಮಾಡುವುದಾಗಿ ಗೊತ್ತಿದ್ದರೂ ಅದನ್ನು ಆಡಲು ಸಾಧ್ಯವಾಗದೆ ಸತತ ವಿಕೆಟ್ ಉರುಳಿಸಿದ್ದರು. ವೆಸ್ಟ್ ಇಂಡೀಸ್ ಸರಣಿಯಲ್ಲಿ 2 ಅರ್ಧಶತಕಗಳನ್ನು ಗಳಿಸಿದ್ದರೂ, ಅದು ಹೆಚ್ಚಾಗಿ ಸ್ಪಿನ್ನರ್‌ಗಳ ವಿರುದ್ಧವಾಗಿತ್ತು. ಅವರು ವೇಗದ ಬೌಲರ್‌ಗಳ ಬೌನ್ಸರ್‌ಗಳನ್ನು ಎದುರಿಸುವಲ್ಲಿ ಮತ್ತೊಮ್ಮೆ ವಿಫಲರಾದರು.

ಮೂರು ಸ್ವರೂಪಗಳನ್ನು ಆಡುವುದು ಕಷ್ಟ; ನಿವೃತ್ತಿಯ ಸುಳಿವು ನೀಡಿದ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗ?

ಆಸ್ಟ್ರೇಲಿಯಾ ಪಿಚ್ ಬೌಲರ್‌ಗಳಿಗೆ ಹೆಚ್ಚು ನೆರವಾಗುವುದು

ಆಸ್ಟ್ರೇಲಿಯಾ ಪಿಚ್ ಬೌಲರ್‌ಗಳಿಗೆ ಹೆಚ್ಚು ನೆರವಾಗುವುದು

ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ಆತಿಥ್ಯ ವಹಿಸಲಿದೆ. ಹೀಗಾಗಿ ಇಲ್ಲಿನ ಪಿಚ್‌ಗಳು ವೇಗದ ಬೌಲರ್‌ಗಳಿಗೆ (ಬೌನ್ಸರ್‌ಗಳು) ನೆರವಾಗುವುದು. ಹೀಗಾಗಿ ಶ್ರೇಯಸ್ ಅಯ್ಯರ್ ಇಲ್ಲಿ ಚೆಂಡನ್ನ ಎದುರಿಸುವುದು ಕಷ್ಟವಾಗಬಹುದು. ಹಾಗಾಗಿ ಕೋಚ್ ರಾಹುಲ್‌ ದ್ರಾವಿಡ್‌ ಮೇಲ್ನೋಟಕ್ಕೆ, ತನ್ನ ಪ್ಲಾನ್ ನಿಂದ ಶ್ರೇಯಸ್ ಅವರನ್ನು ಕೈಬಿಟ್ಟಂತೆ ಕಾಣುತ್ತಿದೆ. ಇದರಿಂದಾಗಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಅವರನ್ನು ಸೇರಿಸಿಕೊಳ್ಳುವುದಿಲ್ಲ ಎಂದು ತೋರುತ್ತದೆ.

ದೀಪಕ್ ಹೂಡಾಗೆ ಹೆಚ್ಚಿನ ಅವಕಾಶ ಸಿಗಲಿದೆ!

ದೀಪಕ್ ಹೂಡಾಗೆ ಹೆಚ್ಚಿನ ಅವಕಾಶ ಸಿಗಲಿದೆ!

ಶ್ರೇಯಸ್ ಅಯ್ಯರ್ ಬದಲಿಗೆ ದೀಪಕ್ ಹೂಡಾ ಅವಕಾಶ ಪಡೆಯಲಿದ್ದಾರೆ. ಅಗ್ರ ಕ್ರಮಾಂಕ ಹಾಗೂ ಮಧ್ಯಮ ಕ್ರಮಾಂಕ ಎರಡರಲ್ಲೂ ಉತ್ತಮ ಆಟವಾಡುತ್ತಿರುವ ದೀಪಕ್ ಹೂಡಾ ಸದ್ಯ ಉತ್ತಮ ಫಾರ್ಮ್ ನಲ್ಲಿದ್ದಾರೆ. ಅಂತೆಯೇ ಅಗ್ರ ಕ್ರಮಾಂಕದಲ್ಲಿ ಹೆಚ್ಚುವರಿ ಬೌಲರ್ ಆಗಿ ನೆರವಾಗಲಿರುವ ಈ ಆಲ್‌ರೌಂಡರ್‌ಗೆ ದ್ರಾವಿಡ್ ಹೆಚ್ಚಿನ ಅವಕಾಶ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಬ್ಯಾಟಿಂಗ್‌ನಲ್ಲಿ ಅಷ್ಟೇ ಅಲ್ಲದೆ ಕೆಲವು ಓವರ್‌ಗಳು ಬೌಲಿಂಗ್ ಮಾಡುವ ಸಾಮರ್ಥ್ಯ ಹೂಡಾಗಿರುವ ಕಾರಣ, ಆತನಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.

ಅಯ್ಯರ್ ಅಷ್ಟೇ ಅಲ್ಲದೆ ಈ ಮೂವರಿಗೆ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಸಿಗುವ ಸಾಧ್ಯತೆ ಕಡಿಮೆ

ಅಯ್ಯರ್ ಅಷ್ಟೇ ಅಲ್ಲದೆ ಈ ಮೂವರಿಗೆ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಸಿಗುವ ಸಾಧ್ಯತೆ ಕಡಿಮೆ

ಅಕ್ಷರ್ ಪಟೇಲ್
ಅಕ್ಷರ್ ಪಟೇಲ್ ರವೀಂದ್ರ ಜಡೇಜಾ ಬದಲಿಗೆ ಭಾರತ ತಂದ ಪ್ರಮುಖ ಸ್ಪಿನ್ ಆಲ್ ರೌಂಡರ್. ಅಕ್ಷರ್ ಅವರು ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗಾಗಿ ತಮ್ಮ ಅತ್ಯುತ್ತಮ ಪ್ರದರ್ಶನದೊಂದಿಗೆ ಭಾರತದ ವಿಶ್ವಕಪ್ ಯೋಜನೆಗಳ ಭಾಗವಾಗಿದ್ದರು. ಆದರೆ ಅಕ್ಷರ್ ಅವರ ಇತ್ತೀಚಿನ ಪ್ರದರ್ಶನ ನಿರಾಶಾದಾಯಕವಾಗಿದೆ. ಆಲ್ ರೌಂಡರ್ ಆಗಿರುವ ಅಕ್ಷರ್ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗದ ಕಾರಣ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ.

ರುತುರಾಜ್ ಗಾಯಕ್ವಾಡ್
ರುತುರಾಜ್ ಗಾಯಕ್ವಾಡ್ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗೆ ಮಿಂಚಿದ ನಂತರ ಭಾರತ ತಂಡಕ್ಕೆ ಬಂದ ಆರಂಭಿಕ ಆಟಗಾರ. ಭಾರತ ಟಿ20 ವಿಶ್ವಕಪ್‌ನಲ್ಲಿ ಬ್ಯಾಕ್‌ಅಪ್ ಓಪನರ್ ಆಗಿ ಪರಿಗಣಿಸಲ್ಪಟ್ಟಿದ್ದ ರುತುರಾಜ್, ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಯಲ್ಲಿ ಅವಕಾಶ ಸಿಕ್ಕಾಗಲೂ ಅವರು ದೊಡ್ಡ ಪ್ರದರ್ಶನ ನೀಡಲಿಲ್ಲ. ಐರ್ಲೆಂಡ್ ಪ್ರವಾಸಕ್ಕೂ ಮುನ್ನ ಅವರು ಗಾಯಗೊಂಡಿದ್ದರು. ಬ್ಯಾಕ್‌ಅಪ್‌ ಓಪನರ್‌ ಆಗಿ ಕೆಎಲ್‌ ರಾಹುಲ್‌ ಮತ್ತು ಇಶಾನ್‌ ಕಿಶನ್‌ ಮರಳಿರುವುದರಿಂದ ರುತುರಾಜ್‌ಗೆ ವಿಶ್ವಕಪ್‌ ಭರವಸೆ ಇಲ್ಲ ಎಂದೇ ಹೇಳಬಹುದು.

ಉಮ್ರಾನ್ ಮಲ್ಲಿಕ್
ಉಮ್ರಾನ್ ಮಲಿಕ್ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಬೆಳೆದ ವೇಗಿ. ಉಮ್ರಾನ್ ವೇಗಿಯಾಗಿ ಗಮನ ಸೆಳೆದರು. ಸತತ 150/kmph ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಉಮ್ರಾನ್ ವಿಶ್ವಕಪ್‌ನಲ್ಲಿ ತಂಡದಲ್ಲಿ ಅವಕಾಶ ಪಡೆಯಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಕಳೆದ ತಿಂಗಳು ಅವರ ಪ್ರದರ್ಶನದಿಂದ ಅವರ ಅವಕಾಶಗಳು ಕಡಿಮೆಯಾಗಿದೆ. ಅವಕಾಶ ಸಿಕ್ಕಾಗ ದುಬಾರಿ ರನ್ ನೀಡಲು ಹಿಂಜರಿಯದ ಉಮ್ರಾನ್ ಅವರನ್ನು ವಿಶ್ವಕಪ್ ಗೆ ಭಾರತ ಪರಿಗಣಿಸುವ ಸಾಧ್ಯತೆ ತೀರಾ ಕಡಿಮೆ ಎಂದೇ ಹೇಳಬಹುದು.

Story first published: Monday, July 25, 2022, 23:06 [IST]
Other articles published on Jul 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X