ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಶ್ರೇಯಸ್‌ ಅಯ್ಯರ್: ಐಸಿಸಿಯಿಂದ ಅಭಿನಂದನೆ

Shreyas iyer test debut
Shreyas Iyer ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ವಿಶೇಷ ಕ್ಷಣಗಳು | Oneindia Kannada

ಕಾನ್ಪುರದಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ. ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿರುವ ಟೀಂ ಇಂಡಿಯಾ ಪರ ಶ್ರೇಯಸ್ ಅಯ್ಯರ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ.

ಭಾರತದ ಪರ 303ನೇ ಟೆಸ್ಟ್ ಪ್ಲೇಯರ್ ಆಗಿ ದೀರ್ಘಾವಧಿ ಸ್ವರೂಪದ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಶ್ರೇಯಸ್ ಅಯ್ಯರ್‌ಗೆ , ಮಾಜಿ ಟೀಂ ಇಂಡಿಯಾ ನಾಯಕ ಲೆಜೆಂಡರಿ ಸುನಿಲ್ ಗವಾಸ್ಕರ್ ಕ್ಯಾಪ್ ಹಸ್ತಾಂತರಿಸಿದರು. ಸುನಿಲ್ ಗವಾಸ್ಕರ್‌ರಿಂದ ಟೆಸ್ಟ್ ಕ್ಯಾಪ್ ಸ್ವೀಕರಿಸಿದ ಶ್ರೇಯಸ್‌ ಅ್ಯ್ಯರ್ ಕ್ಯಾಪ್‌ಗೆ ಮುತ್ತಿಟ್ಟು ಭಾವುಕರಾದರು.

ಶ್ರೇಯಸ್ ಅಯ್ಯರ್, 2003 ರಲ್ಲಿ ಯುವರಾಜ್ ಸಿಂಗ್ ನಂತರ ನ್ಯೂಜಿಲೆಂಡ್ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಮೊದಲ ಆಟಗಾರ.

ಶ್ರೇಯಸ್‌ ಅಯ್ಯರ್‌ಗೆ ಅಭಿನಂದನೆ ತಿಳಿಸಿದ ಐಸಿಸಿ

ಲಿಟ್ಲ್‌ ಮಾಸ್ಟರ್ ಸುನಿಲ್ ಗವಾಸ್ಕರ್‌ರಿಂದ ಟೆಸ್ಟ್ ಕ್ಯಾಪ್ ಸ್ವೀಕರಿಸಿ ಚೊಚ್ಚಲ ಟೆಸ್ಟ್ ಪಂದ್ಯಕ್ಕೆ ಕಾಲಿಟ್ಟ ಶ್ರೇಯಸ್ ಅಯ್ಯರ್‌ ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಅಭಿನಂದನೆ ತಿಳಿಸಿದೆ. ಈ ಕುರಿತು ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಶುಭಾಶಯ ತಿಳಿಸಿದೆ.

ಲೆಜೆಂಡರಿ ಬ್ಯಾಟ್ಸ್‌ಮನ್, ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಕೂಡ ಶ್ರೇಯಸ್‌ ಅಯ್ಯರ್‌ಗೆ ಶುಭಾಶಯ ತಿಳಿಸಿದ್ದು, ನಿಮ್ಮ ಸಾಧನೆ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಕ್ರಿಕೆಟ್ ದಿಗ್ಗಜರಿಂದ ಕ್ಯಾಪ್ ಸ್ವೀಕರಿಸುವ ಸಂಸ್ಕೃತಿ

ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗಿ ಆಯ್ಕೆ ಆದ ಬಳಿಕ ಭಾರತಕ್ಕೆ ಪದಾರ್ಪಣೆ ಮಾಡುತ್ತಿರುವ ಎರಡನೇ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಆಗಿದ್ದಾರೆ. ಈ ಮೊದಲು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಚುಟುಕು ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆ ವೇಳೆ ಮಾಜಿ ಬೌಲರ್ ಅಜಿತ್ ಅಗರ್ಕರ್‌ರಿಂದ ಅಯ್ಯರ್ ಟೀಂ ಇಂಡಿಯಾ ಕ್ಯಾಪ್ ಸ್ವೀಕರಿಸಿದ್ರು.

ಇದೀಗ ಟೆಸ್ಟ್ ಕ್ರಿಕೆಟ್‌ಗೆ ಶ್ರೇಯಸ್ ಅಯ್ಯರ್ ಎಂಟ್ರಿ ಕೊಟ್ಟಿದ್ದು, ಗವಾಸ್ಕರ್‌ರಿಂದ ಕ್ಯಾಪ್ ಪಡೆದಿದ್ದಾರೆ. ಈ ಮೂಲಕ ಟೀಂ ಇಂಡಿಯಾಕ್ಕೆ ಕಾಲಿಡುವ ಯುವ ಕ್ರಿಕೆಟಿಗರಿಗೆ ದಿಗ್ಗಜ ಕ್ರಿಕೆಟಿಗರಿಂದ ಹಾರೈಕೆ ಸಿಗಲಿದೆ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತಮ ರೆಕಾರ್ಡ್‌

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತಮ ರೆಕಾರ್ಡ್‌

ಟೀಂ ಇಂಡಿಯಾ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ 303ನೇ ಆಟಗಾರನಾಗಿ ಕಣಕ್ಕಿಳಿದ ಶ್ರೇಯಸ್ ಅಯ್ಯರ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತಮ ರೆಕಾರ್ಡ್‌ ಹೊಂದಿದ್ದಾರೆ. 54 ಪಂದ್ಯಗಳಲ್ಲಿ 52.18 ಸರಾಸರಿಯಲ್ಲಿ 4592 ಪ್ರಥಮ ದರ್ಜೆ ರನ್‌ಗಳನ್ನು ಸಿಡಿಸಿರುವ ಶ್ರೇಯಸ್ ಅಯ್ಯರ್ ಗರಿಷ್ಠ ಅಜೇಯ 202 ರನ್‌ ಗಳಿಸಿದ್ದಾರೆ. 12 ಶತಕ ಹಾಗೂ 23 ಅರ್ಧಶತಕಗಳು ಇವರ ಹೆಸರಲ್ಲಿದೆ.

IPL 2022: ಪಂಜಾಬ್‌ ತಂಡದಿಂದ ಹೊರಕ್ಕೆ, ಲಖನೌ ತಂಡವನ್ನ ಮುನ್ನೆಡೆಸಲಿದ್ದಾರೆ ಕೆ.ಎಲ್ ರಾಹುಲ್?

ಶ್ರೇಯಸ್ ಅಯ್ಯರ್ ಐಪಿಎಲ್ ಜರ್ನಿ

ಶ್ರೇಯಸ್ ಅಯ್ಯರ್ ಐಪಿಎಲ್ ಜರ್ನಿ

ಮುಂಬೈ ಮೂಲದ ಕ್ಲಾಸಿಕಲ್ ಬ್ಯಾಟ್ಸ್‌ಮನ್ ಶ್ರೇಯಸ್‌ ಅಯ್ಯರ್‌ ಆಕ್ರಮಣಕಾರಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದು, 2015 ರ ಐಪಿಎಲ್ ಹರಾಜಿನಲ್ಲಿ 2.6 ಕೋಟಿ ರೂಪಾಯಿಗೆ ಡೆಲ್ಲಿ ಡೇರ್‌ಡೆವಿಲ್ಸ್ ಪಾಲಾದರು. ಮೊದಲ ಸೀಸನ್‌ನಲ್ಲೇ ಈತ 14 ಪಂದ್ಯಗಳಿಂದ 439 ರನ್ ಗಳಿಸಿದ್ದಷ್ಟೇ ಅಲ್ಲದೆ ಐಪಿಎಲ್ ವರ್ಷದ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಗೆದ್ದರು.

2015-16ರ ಋತುವಿನ ಅಂತ್ಯದ ವೇಳೆಗೆ, ರಣಜಿ ಟ್ರೋಫಿಯಲ್ಲಿ ಅಯ್ಯರ್ ಅವರ ವೃತ್ತಿಜೀವನದ ಗ್ರಾಫ್ ಮತ್ತೊಂದು ಹಂತಕ್ಕೆ ಏರಿಕೆಯಾಯಿತು. ಇದರಿಂದಲೇ ಅವರನ್ನ ಬೇಗ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುವ ಮುನ್ಸೂಚನೆ ನೀಡಿತು. ರಣಜಿಯ ಫೈನಲ್‌ನಲ್ಲಿ ಶತಕ ಸೇರಿದಂತೆ 73.38 ಸರಾಸರಿಯಲ್ಲಿ ಬ್ಯಾಟ್ ಬೀಸಿದ ಅಯ್ಯರ್ 1321 ರನ್‌ಗಳನ್ನು ಗಳಿಸಿದರು. ಅಲ್ಲದೆ ಮುಂಬೈ ತಮ್ಮ 41 ನೇ ಪ್ರಶಸ್ತಿಯನ್ನು ಗೆಲ್ಲಲು ಪ್ರಮುಖ ಪಾತ್ರವಹಿಸಿದ್ರು.

2021ರ IPLನಲ್ಲಿ ಒಂದೂ ಪಂದ್ಯವಾಡಿಲ್ಲ, ಆದ್ರೂ 2022ರ ಹರಾಜಿನಲ್ಲಿ ಈ ಆಟಗಾರರಿಗೆ ಸಖತ್ ಡಿಮ್ಯಾಂಡ್!

2017ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ

2017ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ

ನ್ಯೂಜಿಲೆಂಡ್ ವಿರುದ್ಧ ನವೆಂಬರ್ 1, 2017ರಂದು ಶ್ರೇಯಸ್ ಅಯ್ಯರ್ ಚೊಚ್ಚಲ ಟಿ20 ಪಂದ್ಯವನ್ನಾಡುವ ಮೂಲಕ ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನವನ್ನ ಆರಂಭಿಸಿದ್ರು. ಅದೇ ವರ್ಷ ಶ್ರೀಲಂಕಾ ವಿರುದ್ಧ ಧರ್ಮಶಾಲಾದಲ್ಲಿ ಏಕದಿನ ಕ್ರಿಕೆಟ್‌ಗೂ ಕಾಲಿಟ್ಟ ಅಯ್ಯರ್ ಇದುವರೆಗೂ 22 ಪಂದ್ಯಗಳನ್ನ ಆಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 20 ಇನ್ನಿಂಗ್ಸ್‌ಗಳಲ್ಲಿ 42.78 ಬ್ಯಾಟಿಂಗ್ ಸರಾಸರಿಯಲ್ಲಿ 813ರನ್ ಸಿಡಿಸಿದ್ದಾರೆ. 1 ಶತಕ ಮತ್ತು 8 ಅರ್ಧಶತಕ ಇವರ ಹೆಸರಲ್ಲಿ ದಾಖಲಾಗಿದೆ.

ಇನ್ನು 32 ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ಅಯ್ಯರ್ 132.11 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದು 28 ಇನ್ನಿಂಗ್ಸ್‌ಗಳಿಂದ 580 ರನ್ ಸಿಡಿಸಿದ್ದು, ಮೂರು ಅರ್ಧಶತಕ ದಾಖಲಿಸಿದ್ದಾರೆ.

Story first published: Thursday, November 25, 2021, 15:22 [IST]
Other articles published on Nov 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X