ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಲ್ಕನೇ ಕ್ರಮಾಂಕದ ಚರ್ಚೆ ಅಂತ್ಯ: ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಹೇಳಿಕೆ

Shreyas Iyer Has Done Enough To Settle Indias Number 4 Debate: Batting Coach

ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಟೀಮ್ ಇಂಡಿಯಾದೊಳಗಿನ ಹಲವು ವಿಚಾರಗಳ ಕುರಿತಾಗಿ ಮಾತನಾಡಿದ್ದಾರೆ. ಟೀಮ್ ಇಂಟಿಯಾದಲ್ಲಿ ಸಾಕಷ್ಟು ಚರ್ಚೆಯಾಗಿದ್ದ ನಾಲ್ಕನೇ ಕ್ರಮಾಂಕ, ರಿಷಬ್ ಪಂತ್ ಬ್ಯಾಟಿಂಗ್ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ರಾಥೋರ್ ಹೇಳಿಕೊಂಡಿದ್ದಾರೆ.

ಟೀಮ್ ಇಂಡಿಯಾದ ನಾಲ್ಕನೇ ಕ್ರಮಾಂಕದ ಚರ್ಚೆಗೆ ಶ್ರೇಯಸ್ ಅಯ್ಯರ್ ಸ್ಪಷ್ಟ ಉತ್ತರ ಎಂದು ವಿಕ್ರಮ್ ರಾಥೋರ್ ಹೇಳಿದ್ದಾರೆ. ಈ ಬಗ್ಗೆ ಇದ್ದ ಸುದೀರ್ಘ ಚರ್ಚೆಗೆ ಅಯ್ಯರ್ ಅಂತ್ಯವನ್ನು ಹೇಳಿದ್ದಾರೆ. ಸೀಮಿತ ಓವರ್‌ಗಳಲ್ಲಿ ಅವರು ನಾಲ್ಕನೇ ಕ್ರಮಾಂಕದಲ್ಲಿ ಅತ್ಯುತ್ತಮವಾಗಿ ಪ್ರದರ್ಶನವನ್ನು ನಿಡುತ್ತಿದ್ದಾರೆ ಎಂದು ರಾಥೋರ್ ಹೇಳಿದ್ದಾರೆ.

ಪಾಕ್ ನಾಯಕ ಬಾಬರ್ ಅಝಮ್‌ಗೆ ಸಾನಿಯಾ ಮಿರ್ಜಾ ಬೆದರಿಕೆ ಹಾಕಿದ್ದೇಕೆ?ಪಾಕ್ ನಾಯಕ ಬಾಬರ್ ಅಝಮ್‌ಗೆ ಸಾನಿಯಾ ಮಿರ್ಜಾ ಬೆದರಿಕೆ ಹಾಕಿದ್ದೇಕೆ?

ಮಾಜಿ ವಿಕೆಟ್ ಕೀಪರ್ ಆಗಿರುವ ರಾಥೋರ್ ಸದ್ಯ ತಂಡದಲ್ಲಿ ಸಾಕಷ್ಟು ಪ್ರತಿಭೆಗಳು ಇದ್ದಾರೆ. ಹೆಚ್ಚಿನ ಪ್ರತಿಭೆಗಳಿಗೆ ಹಒರಗೆ ಹುಡುಕಾಟವನ್ನು ನಡೆಸುವ ಅಗತ್ಯವೇ ಇಲ್ಲ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡಿಗ ಆಟಗಾರ ಮನೀಶ್ ಪಾಂಡೆ ಬಗ್ಗೆಯೂ ಪ್ರಶಂಸಿದ್ದಾರೆ. ಸಿಕ್ಕ ಸೀಮಿತ ಅವಕಾಶದಲ್ಲಿ ಮನೀಶ್ ಪಾಂಡೆ ಅದ್ಭುತವಾದ ಆಟವನ್ನು ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ ಎಂದು ರಾಥೋರ್ ಹೇಳಿದರು.

ಇನ್ನು ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಬಗ್ಗೆ ಮಾತನಾಡಿದ ವಿಕ್ರಮ್ ರಾಥೋರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಳೆದ ವರ್ಷ ಉತ್ತಮ ಆಟವನ್ನು ಪಂತ್ ಪ್ರದರ್ಶಿಸಿಲ್ಲ. ಆದರೆ ಆತನೋರ್ವ ವಿಶೇಷ ಆಟಗಾರ ಎಂದು ನಾವು ನಂಬಿಕೊಂಡಿದ್ದೇವೆ. ಅದಕ್ಕಾಗಿ ಆತನ ಬೆಂಬಲಕ್ಕೆ ಮ್ಯಾನೆಜ್‌ಮೆಂಟ್ ನಿಂತಿದೆ ಎಂದು ಹೇಳಿದ್ದಾರೆ.

ಟೀಮ್ ಇಂಡಿಯಾಗೆ ಹೊಸ ಕಿಟ್ ಪ್ರಾಯೋಜಕತ್ವ? : ನೈಕಿ ಜೊತೆಗಿನ ಒಪ್ಪಂದ ಅಂತ್ಯ ಸಾಧ್ಯತೆಟೀಮ್ ಇಂಡಿಯಾಗೆ ಹೊಸ ಕಿಟ್ ಪ್ರಾಯೋಜಕತ್ವ? : ನೈಕಿ ಜೊತೆಗಿನ ಒಪ್ಪಂದ ಅಂತ್ಯ ಸಾಧ್ಯತೆ

ಇನ್ನು ಇದೇ ಸಂದರ್ಭದಲ್ಲಿ ವಿಕ್ರಮ್ ರಾಥೋರ್ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿಯಷ್ಟು ಕಠಿಣ ಪರಿಶ್ರಮ ಪಡುವ ಮತ್ತೋರ್ವ ಕ್ರಿಕೆಟಿಗನನ್ನು ನಾನು ಈವರೆಗೆ ಕಂಡಿಲ್ಲ, ಆಟದ ಬಗ್ಗೆ ಆತನಿಗಿರುವ ಬದ್ಧತೆಯೇ ಆತನ ಶ್ರೇಷ್ಠತೆ ಎಂದು ವಿಕ್ರಮ್ ರಾಥೋರ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಹೇಳಿದ್ದಾರೆ.

Story first published: Monday, June 29, 2020, 10:29 [IST]
Other articles published on Jun 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X