ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಕ್ರಿಕೆಟ್ ಮತ್ತೆ ಆರಂಭವಾದಾಗ ಯಾವ ಹೊಸ ನಿರ್ಬಂಧಗಳನ್ನೂ ಬಯಸಲ್ಲ': ಶ್ರೇಯಸ್ ಅಯ್ಯರ್

Shreyas Iyer Says There Should Not Be Any Restrictions Once Cricket Resumes

ಯುವ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಇತ್ತೀಚೆಗೆ ಟೀಮ್ ಇಂಡಿಯಾದಲ್ಲಿ ಮಿಂಚುತ್ತಿರುವ ಬ್ಯಾಟ್ಸ್‌ಮನ್. ಅದರಲ್ಲೂ ಟೀಮ್ ಇಂಡಿಯಾಗೆ ತಲೆನೋವಾಗಿದ್ದ ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಉತ್ತಮ ಪ್ರದರ್ಶನವನ್ನು ನೀಡುತ್ತಿರುವುದು ಭಾರತದ ಪಾಲಿಗೆ ಆಶಾದಾಯಕ ಬೆಳವಣಿಗೆ. ಶ್ರೇಯಸ್ ಅಯ್ಯರ್ ಕೊನೆಯ ಮೂರು ಇನ್ನಿಂಗ್ಸ್‌ಗಳಲ್ಲಿ 103, 52 ಮತ್ತು62 ರನ್ ಬಾರಿಸಿ ಸ್ಥಿರ ಪ್ರದರ್ಶನವನ್ನು ಮುಂದುವರಿಸಿದ್ದರು.

ವಿರಾಟ್ ಕೊಹ್ಲಿ ಬದಲು ಬಾಬರ್ ಅಝಾಮ್ ಆರಿಸಿದ ಆದಿಲ್ ರಶೀದ್ವಿರಾಟ್ ಕೊಹ್ಲಿ ಬದಲು ಬಾಬರ್ ಅಝಾಮ್ ಆರಿಸಿದ ಆದಿಲ್ ರಶೀದ್

ಆದರೆ ಶ್ರೇಯಸ್ ಅಯ್ಯರ್ ತಾನು ಹಿಂದಿನ ಸಾಧನೆಯನ್ನು ನೋಡುತ್ತಾ ಕೂರುವುದಿಲ್ಲ ಎಂದಿದ್ದಾರೆ. ಮತ್ತೆ ಕ್ರಿಕೆಟ್ ಆರಂಭವಾದ ಸಂದರ್ಭದಲ್ಲಿ ಎಲ್ಲಿ ಕ್ರಿಕೆಟ್ ನಿಂತಿತ್ತೋ ಅಲ್ಲಿಂದ ಮತ್ತೆ ಆರಂಭಿಸುವ ಬಗ್ಗೆ ಯೋಚಿಸುತ್ತಿರುವುದಾಗಿ ಅಯ್ಯರ್ ಹೇಳಿದ್ದಾರೆ. ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರಿಸಿಕೊಂಡು ಹೋಗುವ ಬಗ್ಗೆ ಯೋಜನೆಗಳನ್ನು ಹಾಕಿಕೊಳ್ಳುತ್ತಿರುವುದಾಗಿ ಯುವ ಕ್ರಿಕೆಟಿಗ ಹೇಳಿದ್ದಾರೆ.

ಸಮಯ ಬೇಕಾಗುತ್ತದೆ

ಸಮಯ ಬೇಕಾಗುತ್ತದೆ

ಮತ್ತೆ ಕ್ರಿಕೆಟ್ ಆರಂಭಕ್ಕೂ ಮುನ್ನ ಖಂಡಿತವಾಗಿಗೂ ಒಂದಷ್ಟು ನೆಟ್ ಅಭ್ಯಾಸಗಳು ಅಗತ್ಯವಾಗಿರುತ್ತದೆ. 140 ಕಿ.ಮೀ ವೇಗದಲ್ಲಿ ಬೌಲರ್‌ಗಳು ಬೌಲಿಂಗ್ ಮಾಡುವಾಗ ಸುತ್ತಲೂ ಫೀಲ್ಡರ್‌ಗಳಿರುವಾಗ ಆ ವೇಗಕ್ಕೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಅದಕ್ಕೆ ಹೊಂದಿಕೊಳ್ಳುವುದು ಅಷ್ಟು ಸುಲಭವಲ್ಲ. ಒಂದಷ್ಟು ತರಬೇತಿ ಹಾಗೂ ಮಾನಸಿಕ ಸಿದ್ಧತೆಗಳೂ ಅವಶ್ಯಕವಿರುತ್ತದೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

ಹೆಚ್ಚಿನ ಸಮಯ ತೆಗೆದುಕೊಳ್ಳಲಾರದು

ಹೆಚ್ಚಿನ ಸಮಯ ತೆಗೆದುಕೊಳ್ಳಲಾರದು

ಇದೆಲ್ಲಾ ಸುಲಭವಲ್ಲ, ಹಾಗಿದ್ದರೂ ನಾವೆಲ್ಲಾ ವೃತ್ತಿಪರರಾಗಿದ್ದೇವೆ, ಹಲವಾರು ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದೇವೆ. ಹಾಗಿ ಈ ಹಂತಕ್ಕೆ ತಲುಪಿದ್ದೇವೆ. ಹಾಗಾಗಿ ನಮಗೆ ಇದು ತುಂಬಾ ಸಮಯ ತೆಗೆದುಕೊಳ್ಳಲಾರದು. ನಮಗೂ ಇದೊಂದು ಉತ್ತಮ ಸವಾಲಾಗಿದೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

ಕ್ರೀಡಾಪಟುಗಳಿಗೆ ಕಠಿಣ ಸಂದರ್ಭ

ಕ್ರೀಡಾಪಟುಗಳಿಗೆ ಕಠಿಣ ಸಂದರ್ಭ

ಪ್ರತಿಯೊಬ್ಬರಿಗೂ ಇದು ಹೊಸ ರೀತಿಯ ಸವಾಲಾಗಿದೆ. ಕ್ರೀಡಾಪಟುವಾಗಿ ಇದೊಂದು ಕಠಿಣ ಸಂದರ್ಭ. ಈ ರೀತಿಯ ಸಂದರ್ಭ ಹಿಂದೆಂದೂ ಆಗಿರಲಿಲ್ಲ. ಕ್ರಿಕೆಟ್‌ನಿಂದ ನಾವು ಇಷ್ಟು ಸುದೀರ್ಘವಾಗಿ ಯಾವತ್ತೂ ದೂರವಿರಲಿಲ್ಲ. ಆದರೆ ದಿನಚರಿಯ ಜೊತೆಗೆ ಸ್ಪಷ್ಟ ಮನಸ್ಥಿತಿ ಹೊಂದಿದ್ದರೆ ಮತ್ತೆ ಸಾಮಾನ್ಯ ಆಟದ ಸ್ಥಿತಿಗೆ ಬರಲು ತುಂಬಾ ಸಮಯ ತೆಗದುಕೊಳ್ಳಲಾರದು ಎನಿಸುತ್ತಿದೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

ಹೇಗಿತ್ತೋ ಹಾಗೆಯೇ ಇರಲಿ

ಹೇಗಿತ್ತೋ ಹಾಗೆಯೇ ಇರಲಿ

ಮತ್ತೆ ಕ್ರಿಕೆಟ್ ಆರಂಭವಾದಾಗ ಯಾವುದೇ ಹೊಸ ಬದಲಾವಣೆಯನ್ನು ತಾನು ಬಯಸುವುದಿಲ್ಲ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ. ಹೊಸದಾಗಿ ಯಾವುದೇ ನಿರ್ಬಂಗಳನ್ನು ಹೊಂದುವುದು ಇಷ್ಟವಿಲ್ಲ. ಕೊರೊನ ವೈರಸ್‌ಗೂ ಮುನ್ನ ಕ್ರಿಕೆಟ್ ಹೇಗೆ ಇತ್ತೋ ಹಾಗೆಯೇ ಮುಂದುವರಿಯಲಿ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

Story first published: Friday, May 15, 2020, 18:27 [IST]
Other articles published on May 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X