ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್: ಈ ಸಾಧನೆ ಮಾಡಿದ ಭಾರತದ 16ನೇ ಪ್ಲೇಯರ್

Shreyas Iyer Maiden Test 100

ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ದಾಖಲಿಸುವ ಮೂಲಕ ದಾಖಲೆ ಬರೆದಿದ್ದಾರೆ. ಕಾನ್ಪುರದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತದ ಪರ 303ನೇ ಟೆಸ್ಟ್ ಕ್ರಿಕೆಟರ್ ಆಗಿ ಪದಾರ್ಪಣೆ ಮಾಡಿದ ಅಯ್ಯರ್ ಚೊಚ್ಚಲ ಪಂದ್ಯದಲ್ಲೇ ಮೂರಂಕಿ ದಾಟಿ ಹೆಗ್ಗುರುತು ಮೂಡಿಸಿದ್ದಾರೆ.

157 ಎಸೆತಗಳಲ್ಲಿ ಶತಕದ ಗಡಿ ಮುಟ್ಟಿದ ಶ್ರೇಯಸ್ ಅಯ್ಯರ್ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಟೀಂ ಇಂಡಿಯಾದ 16 ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ. ಕಾನ್ಪುರದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಎರಡನೇ ಭಾರತೀಯ ಆಟಗಾರರಾಗಿದ್ದಾರೆ. ಈ ಮೊದಲು ಕಾನ್ಪುರ ಪಿಚ್‌ನಲ್ಲಿ ಕರ್ನಾಟಕದ ಗುಂಡಪ್ಪ ವಿಶ್ವನಾಥ್ ಚೊಚ್ಚಲ ಶತಕ ದಾಖಲಿಸಿದ್ದರು.

ಮೊದಲ ದಿನದಾಟದಂತ್ಯಕ್ಕೆ 136 ಎಸೆತಗಳಲ್ಲಿ ಅಜೇಯ 75 ರನ್ ಸಿಡಿಸಿದ ಅಯ್ಯರ್ ಚೊಚ್ಚಲ ಅರ್ಧಶತಕ ದಾಖಲಿಸಿ ಶತಕದತ್ತ ಹೆಜ್ಜೆಯಿಟ್ಟಿದ್ದರು. ಇದೀಗ ಎರಡನೇ ದಿನದಾಟದ ಆರಂಭದಲ್ಲೇ ಅಯ್ಯರ್ ಈ ಸಾಧನೆ ಮಾಡಿದ್ದಾರೆ.ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್ ಈ ಸಾಧನೆ ಮಾಡಿದ ಟೀಂ ಇಂಡಿಯಾದ 16ನೇ ಆಟಗಾರ ಎಂಬ ಸಾಧನೆಯ ಜೊತೆಗೆ ನ್ಯೂಜಿಲೆಂಡ್ ವಿರುದ್ಧ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇನ್ನು ತನ್ನ ಅಗ್ರೆಸ್ಸಿವ್ ಆಟದ ಮೂಲಕ ಗುರುತಿಸಿಕೊಂಡ ಶ್ರೇಯಸ್ ಅಯ್ಯರ್ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್‌ ಸೇರಿವೆ. ಹೀಗಾಗಿ ಎದುರಿಸಿದ ಎಸೆತಗಳ ಹಿನ್ನೆಲೆಯಲ್ಲಿ ವೇಗವಾಗಿ ಚೊಚ್ಚಲ ಶತಕ ಸಿಡಿಸಿದ ನಾಲ್ಕನೇ ಬ್ಯಾಟ್ಸ್‌ ಆಗಿದ್ದು, ಭಾರತದ ನಾಲ್ಕನೇ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.

ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಭಾರತದಲ್ಲೇ ಶತಕ ದಾಖಲಿಸಿದ ಟೀಂ ಇಂಡಿಯಾ ಆಟಗಾರರು

ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಭಾರತದಲ್ಲೇ ಶತಕ ದಾಖಲಿಸಿದ ಟೀಂ ಇಂಡಿಯಾ ಆಟಗಾರರು

1) ಲಾಲಾ ಅಮರನಾಥ್ ಇಂಗ್ಲೆಂಡ್ ವಿರುದ್ಧ 1933ರಲ್ಲಿ ಮುಂಬೈನಲ್ಲಿ 118 ರನ್ ದಾಖಲೆ
2) ದೀಪಕ್ ಶೊಧನ್ ಪಾಕಿಸ್ತಾನ ವಿರುದ್ಧ 1952ರಲ್ಲಿ ಕೊಲ್ಕತ್ತಾದಲ್ಲಿ 110 ರನ್
3) ಎಜಿ ಕ್ರಿಪಾಲ್ ನ್ಯೂಜಿಲೆಂಡ್ ವಿರುದ್ಧ 1955ರಲ್ಲಿ ಹೈದ್ರಾಬಾದ್‌ನಲ್ಲಿ ಅಜೇಯ 100 ರನ್
4) ಹನುಮಂತ್ ಸಿಂಗ್ ಇಂಗ್ಲೆಂಡ್ ವಿರುದ್ಧ 1964ರಲ್ಲಿ ದೆಹಲಿಯಲ್ಲಿ 105 ರನ್
5) ಗುಂಡಪ್ಪ ವಿಶ್ವನಾಥ್ ಆಸ್ಟ್ರೇಲಿಯಾ ವಿರುದ್ಧ 1969ರಲ್ಲಿ ಕಾನ್ಪುರದಲ್ಲಿ 137 ರನ್
6) ಮೊಹಮ್ಮದ್ ಅಜರುದ್ದೀನ್ ಇಂಗ್ಲೆಂಡ್ ವಿರುದ್ಧ 1985ರಲ್ಲಿ ಕೊಲ್ಕತ್ತಾದಲ್ಲಿ 110 ರನ್
7) ಶಿಖರ್ ಧವನ್ ಆಸ್ಟ್ರೇಲಿಯಾ ವಿರುದ್ಧ 2013ರಲ್ಲಿ ಮೊಹಾಲಿಯಲ್ಲಿ 187 ರನ್
8) ರೋಹಿತ್ ಶರ್ಮಾ ವೆಸ್ಟ್‌ ಇಂಡೀಸ್ ವಿರುದ್ಧ ಕೊಲ್ಕತ್ತಾದಲ್ಲಿ 177 ರನ್
9) ಪೃಥ್ವಿ ಶಾ ವೆಸ್ಟ್ ಇಂಡೀಸ್ ವಿರುದ್ಧ 2018ರಲ್ಲಿ ಕೊಲ್ಕತ್ತಾದಲ್ಲಿ 134 ರನ್
10) ಶ್ರೇಯಸ್ ಅಯ್ಯರ್ ನ್ಯೂಜಿಲೆಂಡ್ ವಿರುದ್ಧ 2021ರಲ್ಲಿ ಕಾನ್ಪುರದಲ್ಲಿ ಅಜೇಯ 100 ರನ್

5 ಕ್ರಮಾಂಕದಲ್ಲಿ ಶತಕ ದಾಖಲಿಸಿದ ಮೂರನೇ ಬ್ಯಾಟ್ಸ್‌ಮನ್

5 ಕ್ರಮಾಂಕದಲ್ಲಿ ಶತಕ ದಾಖಲಿಸಿದ ಮೂರನೇ ಬ್ಯಾಟ್ಸ್‌ಮನ್

ಟೀಮ್ ಇಂಡಿಯಾ ಐದನೇ ಕ್ರಮಾಂಕದ ಬ್ಯಾಟ್ಸ್‌ಮನ್ ಶತಕ ಸಿಡಿಸಿದ ಮೂರನೇ ಆಟಗಾರನಾಗಿ ಶ್ರೇಯಸ್ ಅಯ್ಯರ್ ಹೊರಹೊಮ್ಮಿದ್ದಾರೆ. 2016ರಿಂದ ಟೀಮ್ ಇಂಡಿಯಾ ಪರ ಈ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ ಎರಡು ಶತಕ ದಾಖಲಿಸಿದ್ದು, ಕರುಣ್ ನಾಯರ್ ತ್ರಿಶಕದ ಸಾಧನೆ ಮಾಡಿದ್ದಾರೆ. ಆ ಬಳಿಕ ಶ್ರೇಯಸ್ ಅಯ್ಯರ್ 105 ರನ್ ಕಲೆಹಾಕಿದ್ದಾರೆ.

ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಎರಡನೇ ಮುಂಬೈ ಪ್ಲೇಯರ್

ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಎರಡನೇ ಮುಂಬೈ ಪ್ಲೇಯರ್

ಹೌದು ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಮುಂಬೈನಲ್ಲಿ ಜನಿಸಿದ ಎರಡನೇ ಆಟಗಾರನಾಗಿ ಶ್ರೇಯಸ್ ಅಯ್ಯರ್ ಈ ಹೆಗ್ಗಳಿಕೆ ಪಡೆದಿದ್ದಾರೆ. ಈ ಮೂದಲು ಪ್ರವೀಣ್ ಆಮ್ರೆ 1992ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ದಾಖಲಿಸಿದ್ರು. ಆ ಬಳಿಕ ಮುಂಬೈನಲ್ಲಿ ಜನಿಸಿದ ಎರಡನೇ ಆಟಗಾರ ಅಯ್ಯರ್ ಚೊಚ್ಚಲ ಪಂದ್ಯದಲ್ಲೇ ಶತಕ ದಾಖಲಿಸಿದ್ದಾರೆ.

105ರನ್‌ಗೆ ಇನ್ನಿಂಗ್ಸ್‌ ಮುಗಿಸಿದ ಅಯ್ಯರ್

105ರನ್‌ಗೆ ಇನ್ನಿಂಗ್ಸ್‌ ಮುಗಿಸಿದ ಅಯ್ಯರ್

ಮೊದಲ ಪಂದ್ಯದಲ್ಲೇ ಶತಕದ ಸಿಹಿ ನೀಡಿದ್ದ ಶ್ರೇಯಸ್ ಅಯ್ಯರ್ ಇನ್ನಿಂಗ್ಸ್‌ 105ರನ್‌ಗೆ ಮುಗಿದಿದೆ. ಟಿಮ್ ಸೌಥಿ ಬೌಲಿಂಗ್‌ನಲ್ಲಿ ವಿಲ್ ಯಂಗ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡಿದ್ದಾರೆ. 171 ಎಸೆತಗಳಲ್ಲಿ 105ರನ್ ಕಲೆಹಾಕಿದ ಅಯ್ಯರ್ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್‌ಗಳಿವೆ.

Shreyas Iyer ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ವಿಶೇಷ ಕ್ಷಣಗಳು | Oneindia Kannada

Story first published: Friday, November 26, 2021, 12:31 [IST]
Other articles published on Nov 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X