ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ನ್ಯೂಜಿಲೆಂಡ್: ಏಕದಿನ ಪಂದ್ಯದಲ್ಲಿ ಮೊದಲ ಶತಕ ಸಿಡಿಸಿ ಮಿಂಚಿದ ಶ್ರೇಯಸ್ ಅಯ್ಯರ್

 Shreyas Iyer Smashes Maiden Hundred In 1st ODI

ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಯುವ ಆಟಗಾರ ಶ್ರೇಯಸ್ ಅಯ್ಯರ್ ತಮ್ಮ ಉತ್ತಮ ಫಾರ್ಮ್ ಅನ್ನು ಏಕದಿನದಲ್ಲೂ ಮುಂದುವರಿಸಿದ್ದಾರೆ. ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಶ್ರೇಯಸ್ ಐಯ್ಯರ್ ಭರ್ಜರಿ ಶತಕವನ್ನು ಸಿಡಿಸಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಶತಕ ಸಿಡಿಸಿದ ಸಾಧನೆಯನ್ನು ಮಾಡಿದ್ದಾರೆ. ಹ್ಯಾಮಿಲ್ಟನ್‌ನ ಸೆಡಾನ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಯುವ ಆಟಗಾರ ಬೌಲರ್‌ಗಳ ಬೆವರಿಳಿಸಿದ್ದಾರೆ.

ಮುಂಬೈ ಮೂಲದ ಯುವ ಆಟಗಾರ ಕಳೆದ ಟಿ20 ಸರಣಿಯಲ್ಲೂ ಮಿಂಚಿದ್ದರು. 107 ಎಸತವನ್ನು ಎದುರಿಸಿದ ಐಯ್ಯರ್ 1032 ರನ್ ಸಿಡಿಸಿದರು. ಇದರಲ್ಲಿ 11 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿತ್ತು. 96.26 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ.

ಭಾರತ vs ನ್ಯೂಜಿಲೆಂಡ್ ಏಕದಿನ live ಸ್ಕೋರ್: 348 ರನ್‌ಗಳ ಬೃಹತ್ ಟಾರ್ಗೆಟ್ ನೀಡಿದ ಭಾರತಭಾರತ vs ನ್ಯೂಜಿಲೆಂಡ್ ಏಕದಿನ live ಸ್ಕೋರ್: 348 ರನ್‌ಗಳ ಬೃಹತ್ ಟಾರ್ಗೆಟ್ ನೀಡಿದ ಭಾರತ

ಟಿ20 ಸರಣಿಯಲ್ಲೂ ಶ್ರೇಯಸ್ ಅದ್ಭುತ ಪ್ರದರ್ಶನವನ್ನು ನೀಡಿದ್ದರು. ಒಂದು ಅರ್ಧ ಶತಕದ ಸಹಿತ ಟಿ20 ಸರಣಿಯಲ್ಲಿ ಶ್ರೇಯಸ್ ಅಯ್ಯರ್ 153 ರನ್ ಬಾರಿಸಿದ್ದಾರೆ. ಇದೇ ಫಾರ್ಮನ್ನು ಏಕದಿನ ಸರಣಿಯಲ್ಲೂ ಮುಂದುವರಿಸುವಲ್ಲಿ ಅಯ್ಯರ್ ಯಶಸ್ವಿಯಾಗಿದ್ದಾರೆ.

ಪಂದ್ಯದಲ್ಲಿ ಮತ್ತೋರ್ವ ಮಧ್ಯಮ ಕ್ರಮಾಂಕದ ಆಟಗಾರ ಕನ್ನಡಿಗ ಕೆಎಲ್ ರಾಹುಲ್ ಉತ್ತಮ ಆಟವನ್ನು ಪ್ರದರ್ಶಿಸಿದರು. ಈ ಪಂದ್ಯದಲ್ಲಿ ರಾಹುಲ್ 88 ರನ್‌ಗಳಿಸಿದ್ದಾರೆ. ರಾಹುಲ್ ಇದಕ್ಕಾಗಿ ಬಳಸಿದ್ದು ಕೇವಲ 64 ಎಸೆತಗಳನ್ನು ಮಾತ್ರ. ಈ ಭರ್ಜರಿ ಇನ್ನಿಂಗ್ಸ್‌ ಆರು ಸಿಕ್ಸರ್‌ಗಳು ಒಳಗೊಂಡಿದೆ.

ನ್ಯೂಜಿಲೆಂಡ್ ಪರವಾಗಿ ಅನುಭವಿ ವೇಗಿ ಟಿಮ್ ಸೌಥಿ ಎರಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ 10 ಓವರ್‌ಗಳಲ್ಲಿ 85 ರನ್‌ ನೀಡದ ಅವರು ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ. ಟ20 ಸರಣಿಯ ಅಂತಿಮ ಪಂದ್ಯದಲ್ಲಿ ಸೌಥಿ ನಾಯಕತ್ವವನ್ನು ವಹಿಸಿಕೊಂಡಿದ್ದರು.

Story first published: Wednesday, February 5, 2020, 12:27 [IST]
Other articles published on Feb 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X