ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾದ 4ನೇ ಬ್ಯಾಟಿಂಗ್‌ ಕ್ರಮಾಂಕಕ್ಕೆ ಶ್ರೇಯಸ್ ಐಯ್ಯರ್ ಸೂಕ್ತ?

Shreyas Iyer said that..! I can’t demand number four spot.
Shreyas Iyer suggests India’s search for No.4 might be over

ನಾಗ್ಪುರ, ನವೆಂಬರ್ 11: ನಿಯಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತ ತಂಡದಲ್ಲಿ 4ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಸೂಕ್ತ ಬ್ಯಾಟ್ಸ್‌ಮನ್‌ಗಳ ಹುಡುಕಾಟ ಇನ್ನೂ ನಿಂತಿಲ್ಲ. ಆದರೆ ಯುವ ಬ್ಯಾಟ್ಸ್‌ಮನ್ ಶ್ರೇಯಸ್, ಈ ಪ್ರಭಾವಶಾಲಿ ಬ್ಯಾಟಿಂಗ್ ಕ್ರಮಾಂಕಕ್ಕೆ ಹೆಚ್ಚು ಸೂಕ್ತ ಎಂಬ ಮಾತುಗಳು ಸದ್ಯ ಕೇಳಿ ಬರುತ್ತಿವೆ.

ವೇಗಿ ಜಸ್‌ಪ್ರೀತ್‌ ಬೂಮ್ರಾ ಹಿಂದಿಕ್ಕಿ ದಾಖಲೆ ಬರೆದ ಯುಜುವೇಂದ್ರ ಚಾಹಲ್!ವೇಗಿ ಜಸ್‌ಪ್ರೀತ್‌ ಬೂಮ್ರಾ ಹಿಂದಿಕ್ಕಿ ದಾಖಲೆ ಬರೆದ ಯುಜುವೇಂದ್ರ ಚಾಹಲ್!

ಭಾನುವಾರ (ನವೆಂಬರ್ 10) ವಿದರ್ಭ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ 3ನೇ ಟಿ20 ಪಂದ್ಯದಲ್ಲಿ 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಐಯ್ಯರ್, ಟಿ20ಐ ಚೊಚ್ಚಲ ಮತ್ತು ಸ್ಫೋಟಕ ಅರ್ಧ ಶತಕ ಸಿಡಿಸಿದ್ದರು. ಶ್ರೇಯಸ್ ದಿಟ್ಟ ಬ್ಯಾಟಿಂಗ್‌, 4ನೇ ಕ್ರಮಾಂಕಕ್ಕೆ ಅವರು ಒಗ್ಗಿಕೊಳ್ಳಬಲ್ಲರು ಎಂಬ ಭರವಸೆ ಮೂಡಿಸುವಂತಿತ್ತು.

ಸಚಿನ್ ತೆಂಡೂಲ್ಕರ್ 30 ವರ್ಷಗಳ ದಾಖಲೆ ಮುರಿದ 15ರ ಹರೆಯದ ಶೆಫಾಲಿ!ಸಚಿನ್ ತೆಂಡೂಲ್ಕರ್ 30 ವರ್ಷಗಳ ದಾಖಲೆ ಮುರಿದ 15ರ ಹರೆಯದ ಶೆಫಾಲಿ!

33 ಎಸೆತಗಳಿಗೆ 62 ರನ್ ಬಾರಿಸಿದ ಶ್ರೇಯಸ್ ಐಯ್ಯರ್, ಬ್ಯಾಟಿಂಗ್‌ ವಿಭಾಗದಲ್ಲಿ ತಂಡವನ್ನು ಬೆಂಬಲಿಸಿದ್ದರು. ರೋಹಿತ್ ಶರ್ಮಾ, ಶಿಖರ್ ಧವನ್‌ರಂತ ಅನುಭವಿ ಆಟಗಾರರು ಬೇಗನೆ ವಿಕೆಟ್‌ ಒಪ್ಪಿಸಿದ್ದರಾದರೂ, ಶ್ರೇಯಸ್ ಮತ್ತು ಕೆಎಲ್ ರಾಹುಲ್ ಅರ್ಧ ಶತಕದಾಟ (52 ರನ್, 35 ಎಸೆತ) ತಂಡವನ್ನು ರನ್‌ ಕುಸಿತದಿಂದ ಪಾರು ಮಾಡಿತ್ತು.

ಮಿಂಚು ಹರಿಸಿದ ಚಹಾರ್, ಬಾಂಗ್ಲಾ ಟೈಗರ್ಸ್ ಬೇಟೆಯಾಡಿದ ಬ್ಲೂ ಬಾಯ್ಸ್!ಮಿಂಚು ಹರಿಸಿದ ಚಹಾರ್, ಬಾಂಗ್ಲಾ ಟೈಗರ್ಸ್ ಬೇಟೆಯಾಡಿದ ಬ್ಲೂ ಬಾಯ್ಸ್!

'ಖಂಡಿತವಾಗಿಯೂ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದಕ್ಕಾಗಿ ಸಾಕಷ್ಟು ಪೈಪೋಟಿ ನಡೆಯುತ್ತಿದೆ. ಆದರೆ ನಾನು ಇನ್ನೊಬ್ಬರ ಜೊತೆ ಸ್ಪರ್ಧೆಗಿಳಿಯುವ ಬದಲು ನನ್ನೊಂದಿಗೆ ನಾನೇ ಸ್ಪರ್ಧಿಸಲು ಬಯಸಿದ್ದೇನೆ,' ಎಂದು ನಾಗ್ಪುರ ಪಂದ್ಯದ ಮುಕ್ತಾಯದ ಬಳಿಕ ಶ್ರೇಯಸ್ ಪ್ರತಿಕ್ರಿಯಿಸಿದ್ದರು.

ಅಫ್ಘಾನಿಸ್ತಾನ ಸೋಲಿಸಿ 5 ವರ್ಷಗಳ ಕೆಟ್ಟ ದಾಖಲೆ ಕೊನೆಗೊಳಿಸಿದ ವಿಂಡೀಸ್!ಅಫ್ಘಾನಿಸ್ತಾನ ಸೋಲಿಸಿ 5 ವರ್ಷಗಳ ಕೆಟ್ಟ ದಾಖಲೆ ಕೊನೆಗೊಳಿಸಿದ ವಿಂಡೀಸ್!

ಏಕದಿನ ವಿಶ್ವಕಪ್‌ ವೇಳೆಯೂ ಭಾರತ 4ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಸೂಕ್ತ ಬ್ಯಾಟ್ಸ್‌ಮನ್ ಇಲ್ಲದೆ ಹೆಣಗಾಡಿದ್ದು ಕಂಡುಬಂದಿತ್ತು. ಆಲ್ ರೌಂಡರ್ ವಿಜಯ್ ಶಂಕರ್, ರಿಷಬ್ ಪಂತ್ ಮತ್ತು ಕೆಎಲ್ ರಾಹುಲ್ ಕೂಡ ಈ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಅದೃಷ್ಟ ಪರೀಕ್ಷೆ ಮಾಡಿದ್ದಿದೆ. ಅದರೆ ಸದ್ಯದ ಮಟ್ಟಿಗೆ ಶ್ರೇಯಸ್ ಈ ಕ್ರಮಾಂಕಕ್ಕೆ ಸೂಕ್ತರೆನಿಸಬಲ್ಲರು ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿವೆ.

Story first published: Monday, November 11, 2019, 13:51 [IST]
Other articles published on Nov 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X