ಈತ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರ: ರೋಹನ್ ಗವಾಸ್ಕರ್

ಭಾರತದ ಮಾಜಿ ಕ್ರಿಕೆಟಿಗ ರೋಹನ್ ಗವಾಸ್ಕರ್ ಅವರು ಯುವ ಆರಂಭಿಕ ಆಟಗಾರ ಶುಭ್‌ಮನ್ ಗಿಲ್ ಅವರನ್ನು ಆಲ್ ಫಾರ್ಮ್ಯಾಟ್ ಆಟಗಾರ ಎಂದು ಗುರುತಿಸಿದ್ದಾರೆ. ಬಲಗೈ ಬ್ಯಾಟರ್ ರಾಷ್ಟ್ರೀಯ ತಂಡದಲ್ಲಿ ಸ್ಥಿರವಾದ ರನ್ ಗಳಿಸಲು ಅರ್ಹರು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್ ಅಟ್ಯಾಕಿಂಗ್ ಕ್ರಿಕೆಟ್‌ ಕುರಿತು ಆಕ್ರೋಶಗೊಂಡ ಮೋಯಿನ್ ಅಲಿ: ಪಾಕ್ ವಿರುದ್ಧ ಮತ್ತೆ ಸೋಲುಇಂಗ್ಲೆಂಡ್ ಅಟ್ಯಾಕಿಂಗ್ ಕ್ರಿಕೆಟ್‌ ಕುರಿತು ಆಕ್ರೋಶಗೊಂಡ ಮೋಯಿನ್ ಅಲಿ: ಪಾಕ್ ವಿರುದ್ಧ ಮತ್ತೆ ಸೋಲು

2019 ರ ಫೆಬ್ರವರಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಶುಭ್‌ಮನ್ ಗಿಲ್, ಭಾರತಕ್ಕಾಗಿ ಇನ್ನೂ ಟಿ20 ಕ್ರಿಕೆಟ್ ಆಡಿಲ್ಲ. ಆದಾಗ್ಯೂ, 23 ವರ್ಷ ವಯಸ್ಸಿನ ಯುವ ಆಟಗಾರ ಶುಭ್‌ಮನ್ ಗಿಲ್‌ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಕ್ರಿಕೆಟ್‌ನಲ್ಲಿ ಕ್ರಮವಾಗಿ 30.47 ಮತ್ತು 71.29 ರ ಸರಾಸರಿಯಲ್ಲಿ ಭರವಸೆಯ ಅಂಕಿಅಂಶವನ್ನು ಹೊಂದಿದ್ದಾರೆ. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಕೂಡ ಅವರನ್ನು ಇನ್ನೂ ಟಿ20 ತಂಡಕ್ಕೆ ಆಯ್ಕೆ ಮಾಡಿಲ್ಲ. ಕಳೆದ ಐಪಿಎಲ್ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರವಾಗಿ ಆಡಿದ್ದರು.

ಯುವ ಆಟಗಾರ ಶುಭ್‌ಮನ್‌ ಗಿಲ್‌ಗೆ ಸರಿಯಾದ ಅವಕಾಶಗಳನ್ನು ನೀಡಿದರೆ ಎಲ್ಲಾ ಸ್ವರೂಪದ ಕ್ರಿಕೆಟ್‌ನಲ್ಲಿ ಉತ್ತಮ ಬ್ಯಾಟರ್ ಆಗುವ ಎಲ್ಲಾ ಲಕ್ಷಣಗಳಿವೆ ಎಂದು ರೊಹನ್ ಗವಾಸ್ಕರ್ ಹೇಳಿದ್ದಾರೆ.

 ಆತನಿಗೆ ಇನ್ನೂ ಉತ್ತಮ ಅವಕಾಶ ಸಿಗಬೇಕು

ಆತನಿಗೆ ಇನ್ನೂ ಉತ್ತಮ ಅವಕಾಶ ಸಿಗಬೇಕು

"ಅವರು ಆಲ್-ಫಾರ್ಮ್ಯಾಟ್ ಆಟಗಾರರಾಗುವವರಲ್ಲಿ ಒಬ್ಬರು. ಅವರು ಅದೇ ರೀತಿ ಪ್ರದರ್ಶನ ನೀಡುತ್ತಿದ್ದಾರೆ. ಅವರು ಸೀಮಿತ ಓವರ್ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಸಾಮರ್ಥ್ಯವನ್ನು ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ, ಅವರ ಸಂಖ್ಯೆಗಳು ಆಶ್ಚರ್ಯಕರವಾಗಿವೆ." ಎಂದು ರೋಹನ್ ಗವಾಸ್ಕರ್ ಹೇಳಿದ್ದಾರೆ.

"ಅವನನ್ನು ನಾನು ಪೋಷಿಸಿದ್ದೇನೆ, ಅವನಿಗೆ ಸರಿಯಾದ ಅವಕಾಶಗಳನ್ನು ನೀಡಬೇಕು, ಏಕೆಂದರೆ ಅವನು ಸಾಮರ್ಥ್ಯ ಹೊಂದಿದ್ದಾನೆ ಮತ್ತು ಅದರಲ್ಲಿ ಯಾವುದೇ ಅನುಮಾನವಿಲ್ಲ." ಎಂದು ರೋಹನ್ ಗವಾಸ್ಕರ್ ಯುವ ಆಟಗಾರನ ಪರವಾಗಿ ಬ್ಯಾಟ್ ಬೀಸಿದ್ದಾರೆ.

Ind Vs SA T20: ಟಾಸ್‌ ಗೆದ್ದಿದ್ದು ನಮಗೆ ತುಂಬಾ ಪ್ರಯೋಜನಕಾರಿಯಾಯಿತು ಎಂದ ಅರ್ಶ್‌ದೀಪ್ ಸಿಂಗ್

ಜಿಂಬಾಬ್ವೆ ವಿರುದ್ಧ ಸರಣಿಯಲ್ಲಿ ಮಿಂಚಿದ ಗಿಲ್

ಜಿಂಬಾಬ್ವೆ ವಿರುದ್ಧ ಸರಣಿಯಲ್ಲಿ ಮಿಂಚಿದ ಗಿಲ್

ಏಷ್ಯಾಕಪ್ ಆರಂಭಕ್ಕೂ ಮುನ್ನ ಭಾರತ ಜಿಂಬಾಬ್ವೆ ಪ್ರವಾಸದ ಸಂದರ್ಭದಲ್ಲಿ ಶುಭ್‌ಮನ್ ಗಿಲ್ ಉತ್ತಮ ಪ್ರದರ್ಶನ ನೀಡಿದ್ದರು. ಅವರು ಮೂರು ಏಕದಿನ ಪಂದ್ಯಗಳಲ್ಲಿ 122.50 ಸರಾಸರಿಯಲ್ಲಿ 245 ರನ್ ಗಳಿಸಿದರು. 11 ಟೆಸ್ಟ್ ಪಂದ್ಯಗಳನ್ನಾಡಿರುವ ಗಿಲ್ 30.47 ಸರಾಸರಿಯಲ್ಲಿ 579 ರನ್ ಗಳಿಸಿದ್ದಾರೆ. 9 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿರುವ ಶುಭ್‌ಮನ್ ಗಿಲ್ 71.29 ಸರಾಸರಿಯಲ್ಲಿ 499 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕ, ಒಂದು ಶತಕ ಸೇರಿದೆ.

2022ರ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪರವಾಗಿ ಆಡಿದ್ದ ಗಿಲ್‌ ಪ್ರಮುಖ ಬ್ಯಾಟರ್ ಆಗಿದ್ದರು. 16 ಪಂದ್ಯಗಳನ್ನಾಡಿರುವ ಅವರು 34.50 ಸರಾಸರಿಯಲ್ಲಿ 483 ರನ್ ಗಳಿಸುವ ಮೂಲಕ ಗುಜರಾತ್ ಟೈಟಾನ್ಸ್ ಐಪಿಎಲ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅಮೋಲ್ ಮುಜುಂದಾರ್ ಭವಿಷ್ಯ ನಿಜವಾಗಿದೆ

ಅಮೋಲ್ ಮುಜುಂದಾರ್ ಭವಿಷ್ಯ ನಿಜವಾಗಿದೆ

ಮಾಜಿ ದೇಶೀಯ ಕ್ರಿಕೆಟಿಗ ಅಮೋಲ್ ಮುಜುಂದಾರ್ ಎನ್‌ಸಿಎಯಲ್ಲಿ ಗಿಲ್ ಅವರನ್ನು ಗುರುತಿಸಿದ್ದಾರೆ ಮತ್ತು ಅವರು ಭಾರತಕ್ಕಾಗಿ ಆಡುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ ಎಂದು ಮಾಜಿ ಭಾರತೀಯ ಆಲ್‌ರೌಂಡರ್ ರೋಹನ್ ಗವಾಸ್ಕರ್ ನೆನಪಿಸಿಕೊಂಡರು.

ಅಮೋಲ್ ಮುಜುಂದಾರ್ ಶುಭ್‌ಮನ್ ಗಿಲ್ ಅವರನ್ನು ಮೊದಲು ನನಗೆ ಪರಿಚಯಿಸಿದರು. ಏಕೆಂದರೆ ಅವರು ಅಮೋಲ್ ಅವರನ್ನು ಎನ್‌ಸಿಎಯಲ್ಲಿ ನೋಡಿದ್ದಾರೆ. ಅವರು ಹೋಗಿ ಎನ್‌ಸಿಎಗೆ ತರಬೇತಿ ನೀಡುತ್ತಿದ್ದರು. ಅವರು ನನ್ನ ಬಳಿಗೆ ಬಂದು ಹೇಳಿದರು, 'ರೋಹನ್, ನಾನು ನೋಡಿದ್ದೇನೆ ಒಬ್ಬ ಸಂಪೂರ್ಣ ಸೂಪರ್‌ಸ್ಟಾರ್! ಅವರು ಖಂಡಿತವಾಗಿಯೂ ಭಾರತಕ್ಕಾಗಿ ಆಡುವ ವ್ಯಕ್ತಿ. ನನಗೆ ಅದರಲ್ಲಿ ಯಾವುದೇ ಸಂದೇಹವಿಲ್ಲ.' ಎಂದು ಹೇಳಿದ್ದರು ಎಂದು ನೆನಪಿಸಿಕೊಂಡರು.

ಕೌಂಟಿ ಕ್ರಿಕೆಟ್‌ ಗ್ಲಾಮೊರ್ಗಾನ್‌ ತಂಡಕ್ಕೆ ಆಡುತ್ತಿರುವ ಗಿಲ್

ಕೌಂಟಿ ಕ್ರಿಕೆಟ್‌ ಗ್ಲಾಮೊರ್ಗಾನ್‌ ತಂಡಕ್ಕೆ ಆಡುತ್ತಿರುವ ಗಿಲ್

ಶುಭ್‌ಮನ್ ಗಿಲ್ ಪ್ರಸ್ತುತ ಇಂಗ್ಲೆಂಡ್‌ನಲ್ಲಿದ್ದಾರೆ. ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಗ್ಲಾಮೊರ್ಗಾನ್‌ ಪರವಾಗಿ ಆಡುತ್ತಿದ್ದಾರೆ. ಕೌಂಟಿ ಕ್ರಿಕೆಟ್‌ನಲ್ಲೂ ಗಿಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸೆಪ್ಟೆಂಬರ್ 27 ರಂದು ಸಸೆಕ್ಸ್ ವಿರುದ್ಧದ ಪಂದ್ಯದಲ್ಲಿ ಕೌಂಟಿ ಕ್ರಿಕೆಟ್‌ನಲ್ಲಿ ತಮ್ಮ ಮೊದಲನೇ ಶತಕವನ್ನು ದಾಖಲಿಸಿದ್ದಾರೆ.

ಸಸೆಕ್ಸ್ ವಿರುದ್ಧದ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 139 ಎಸೆತಗಳಲ್ಲಿ 16 ಬೌಂಡರಿ ಮತ್ತು 2 ಭರ್ಜರಿ ಸಿಕ್ಸರ್ ನೆರವಿನಿಂದ 119 ರನ್ ಗಳಿಸಿದರು. ಭಾರತ ತಂಡದ ಭವಿಷ್ಯದ ದೃಷ್ಟಿಯಿಂದ ಗಿಲ್ ಪ್ರಮುಖ ಆಟಗಾರನಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 29, 2022, 15:44 [IST]
Other articles published on Sep 29, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X