ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ 'ಎ' vs ವೆಸ್ಟ್ ಇಂಡೀಸ್ 'ಎ': ಇತಿಹಾಸ ನಿರ್ಮಿಸಿದ ಶುಭ್‌ಮಾನ್‌ ಗಿಲ್

Shubman Gill creates history with double ton; against West Indies A

ತಾರೌಬಾ, ಆಗಸ್ಟ್ 9: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಅತೀ ಕಿರಿಯ ಭಾರತೀಯ ಆಟಗಾರ ಎಂಬ ದಾಖಲೆಗೆ ಶುಭ್‌ಮಾನ್‌ ಗಿಲ್ ಕಾರಣರಾಗಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ 'ಎ' ತಂಡ, ವೆಸ್ಟ್ ಇಂಡೀಸ್ 'ಎ' ವಿರುದ್ಧ ಆಡುತ್ತಿರುವ 3ನೇ ಅನಧಿಕೃತ ಟೆಸ್ಟ್ ನಲ್ಲಿ ಗಿಲ್ ಈ ಸಾಧನೆ ಮಾಡಿದ್ದಾರೆ.

ಭಾರತ vs ವಿಂಡೀಸ್: ಗೇಲ್ ಜೊತೆ ಸ್ಟೆಪ್ ಹಾಕಿದ ವಿರಾಟ್ ಕೊಹ್ಲಿ-ವಿಡಿಯೋಭಾರತ vs ವಿಂಡೀಸ್: ಗೇಲ್ ಜೊತೆ ಸ್ಟೆಪ್ ಹಾಕಿದ ವಿರಾಟ್ ಕೊಹ್ಲಿ-ವಿಡಿಯೋ

19ರ ಹರೆಯದ ಗಿಲ್, ಟ್ರಿನಿಡಾಡ್‌ನ ತಾರೌಬಾದಲ್ಲಿರುವ ಬ್ರಿಯಾನ್‌ ಲಾರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅನಧಿಕೃತ ಟೆಸ್ಟ್‌ನಲ್ಲಿ 250 ಎಸೆತಗಳಿಗೆ ಅಜೇಯ 204 ರನ್ ಗಳಿಸಿದರು. ಇದೇ ಪಂದ್ಯದಲ್ಲಿ ನಾಯಕ ಹನುಮ ವಿಹಾರಿ ಕೂಡ ಶತಕ ಬಾರಿಸಿದ್ದಾರೆ.

ಭಾರತ vs ದಕ್ಷಿಣ ಆಫ್ರಿಕಾ: ಕೊನೆಯೆರಡು ಟೆಸ್ಟ್‌ಗಳ ತಾಣ ಅದಲು-ಬದಲುಭಾರತ vs ದಕ್ಷಿಣ ಆಫ್ರಿಕಾ: ಕೊನೆಯೆರಡು ಟೆಸ್ಟ್‌ಗಳ ತಾಣ ಅದಲು-ಬದಲು

ಈ ಅನಧಿಕೃತ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿರುವ ಗಿಲ್, ಭಾರತದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಅವರ ದಾಖಲೆ ಮುರಿದಿದ್ದಾರೆ.

ಗಂಭೀರ್ ದಾಖಲೆ ಬದಿಗೆ

ಗಂಭೀರ್ ದಾಖಲೆ ಬದಿಗೆ

2002ರಲ್ಲಿ ಪ್ರವಾಸ ಪಂದ್ಯವೊಂದರಲ್ಲಿ ಗೌತಮ್ ಗಂಭೀರ್, ಜಿಂಬಾಬ್ವೆ ವಿರುದ್ಧ ಇಂಡಿಯಾ ಬೋರ್ಡ್ ಪ್ರೆಸಿಡೆಂಟ್ XI ಪರ 218 ರನ್ ಬಾರಿಸಿದ್ದರು. ಆಗ ಗಂಭೀರ್‌ಗೆ 20 ವರ್ಷ ವಯಸ್ಸಾಗಿತ್ತು. ಗಿಲ್ 19ರ ವಯಸ್ಸಿನಲ್ಲಿ ದ್ವಿಶತಕ ಬಾರಿಸಿರುವುದರಿಂದ 17 ವರ್ಷಗಳ ಬಳಿಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಅತೀ ಕಿರಿಯ ದಾಖಲೆಗೆ ಶುಭ್‌ಮಾನ್‌ ಕಾರಣರಾಗಿದ್ದಾರೆ.

ವಿಹಾರಿ ಶತಕದಾಟ

ವಿಹಾರಿ ಶತಕದಾಟ

ಶುಭ್‌ಮಾನ್ ದ್ವಿಶತಕ ಬಾರಿಸಿದ್ದು ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ. ಇದೇ ಇನ್ನಿಂಗ್ಸ್‌ ವೇಳೆ ತಂಡದ ನಾಯಕ ಹನುಮ ವಿಹಾರಿ ಕೂಡ 219 ಎಸೆತಗಳಿಗೆ 118 ರನ್ ಗಳಿಸಿದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ 90 ಓವರ್‌ಗೆ 4 ವಿಕೆಟ್‌ ನಷ್ಟದಲ್ಲಿ 365 ರನ್ ಮಾಡಿತು. ವೆಸ್ಟ್ ಇಂಡೀಸ್ ಎ ದ್ವಿತೀಯ ಇನ್ನಿಂಗ್ಸ್‌ ಆಡುತ್ತಿದೆ. 15 ಓವರ್‌ಗೆ ವಿಕೆಟ್ ನಷ್ಟವಿಲ್ಲದೆ 37 ರನ್ ಗಳಿಸಿದೆ.

ಪ್ರಥಮ ಇನ್ನಿಂಗ್ಸ್‌ನಲ್ಲಿ ಸಾಧಾರಣ ರನ್

ಪ್ರಥಮ ಇನ್ನಿಂಗ್ಸ್‌ನಲ್ಲಿ ಸಾಧಾರಣ ರನ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಎ, ಆರಂಭಿಕ ಇನ್ನಿಂಗ್ಸ್‌ನಲ್ಲಿ 67.5 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು 210 ರನ್ ಪೇರಿಸಿತ್ತು. ಮಯಾಂಕ್ ಅಗರ್ವಾಲ್ 33, ಹನುಮ ವಿಹಾರಿ 55, ವೃದ್ಧಿಮಾನ್ ಸಾಹ 62, ಶಿವಂ ದೂಬೆ 26, ಪ್ರಿಯಾಂಕ್ ಪಾಂಚಲ್ 11 ರನ್ ಮಾತ್ರ ಗಮನಾರ್ಹವೆನಿಸಿತ್ತು.

ವಿಂಡೀಸ್‌ಗೆ 'ಎ'ಗೆ ಜೆರೆಮಿ ಬಲ

ವಿಂಡೀಸ್‌ಗೆ 'ಎ'ಗೆ ಜೆರೆಮಿ ಬಲ

ವೆಸ್ಟ್ ಇಂಡೀಸ್ 'ಎ' ಕೂಡ ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ರನ್ ಗಳಿಸಲಿಲ್ಲ. ಆದರೆ ಆರಂಭಿಕ ಬ್ಯಾಟ್ಸ್ಮನ್ ಜೆರೆಮಿ ಸೊಲೊಜಾನೊ ಮತ್ತು ಸುನಿಲ್ ಆ್ಯಂಬ್ರಿಸ್ ಕೊಂಚ ಬಲ ತುಂಬಿದರು. ಜೆರೆಮಿ 69, ಆ್ಯಂಬ್ರಿಸ್ 43 ರನ್ ಕೊಡುಗೆ ಗಮನಾರ್ಹವೆನಿಸಿತು. ವಿಂಡೀಸ್ 72.4 ಓವರ್‌ಗೆ 194 ರನ್ ಮಾಡಿತ್ತು. ವಿಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಕೃಷ್ಣಪ್ಪ ಗೌತಮ್ 67 ರನ್‌ಗೆ 6 ವಿಕೆಟ್ ಪಡೆದು ಮಿಂಚಿದರು.

Story first published: Friday, August 9, 2019, 13:24 [IST]
Other articles published on Aug 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X