ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಕೆಕೆಆರ್ ತಂಡಕ್ಕೆ ಮತ್ತೊಂದು ಆಘಾತ, ಭಾರತದ ಈ ಸ್ಟಾರ್ ಆಟಗಾರ ಅಲಭ್ಯ ಸಾಧ್ಯತೆ

Shubman Gill is expected to be ruled out of the second phase of the IPL 2021 in the UAE

ಕೊರೊನಾವೈರಸ್‌ನಿಂದಾಗಿ ಸ್ಥಗಿತವಾಗಿದ್ದ ಐಪಿಎಲ್ 2021 ಆವೃತ್ತಿಯ ಉಳಿದ ಪಂದ್ಯಗಳಿಗೆ ದಿನಾಂಕ ಹಾಗೂ ಸ್ಥಳವನ್ನು ನಿಗದಿ ಪಡಿಸಲಾಗಿದೆ. ಸೆಪ್ಟೆಂಬರ್ 19ರಿಂದ ಐಪಿಎಲ್‌ನ ದ್ವಿತಿಯಾರ್ಧದ ಪಂದ್ಯಗಳು ನಡೆಯಲಿದ್ದು ಅಕ್ಟೋಬರ್ 15ರ ವರೆಗೆ ನಡೆಯಲಿದೆ. ಈ ಟೂರ್ನಿಗೆ ಇಂಗ್ಲೆಂಡ್ ಆಟಗಾರರ ಲಭ್ಯತೆಯ ಬಗ್ಗೆ ಇನ್ನೂ ಸ್ಪಷ್ಟನೆಗಳು ದೊರೆತಿಲ್ಲ. ಈ ಮಧ್ಯೆ ಭಾರತ ಕ್ರಿಕೆಟ್ ತಂಡದ ಯುವ ಸ್ಟಾರ್ ಆಟಗಾರ ಈ ಟೂರ್ನಿಯಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ.

ಆ ಸ್ಟಾರ್ ಆಟಗಾರ ಬೇರೆ ಯಾರೂ ಅಲ್ಲ ಶುಬ್ಮನ್ ಗಿಲ್. ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕ ಆಟಗಾರನಾಗಿರುವ ಶುಬ್ಮನ್ ಗಿಲ್ ಅದ್ಭುತ ಆರಂಭವನ್ನು ನೀಡುವ ಮೂಲಕ ತಂಡಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತಿದ್ದಾರೆ. ಆದರೆ ಇಂಗ್ಲೆಂಡ್ ಪ್ರವಾಸದಲ್ಲಿ ಗಾಯಗೊಂಡಿರುವ ಗಿಲ್ ಐಪಿಎಲ್‌ನಿಂದಲೂ ಹೊರಗುಳಿಯುವುದು ಬಹುತೇಕ ಖಚಿತ ಎನ್ನಲಾಗಿದೆ.

ಇಂಗ್ಲೆಂಡ್ vs ಪಾಕಿಸ್ತಾನ ಏಕದಿನ ಸರಣಿ: ಇಂಗ್ಲೆಂಡ್ ತಂಡದ 3 ಆಟಗಾರರಿಗೆ ಕೊರೊನಾವೈರಸ್ಇಂಗ್ಲೆಂಡ್ vs ಪಾಕಿಸ್ತಾನ ಏಕದಿನ ಸರಣಿ: ಇಂಗ್ಲೆಂಡ್ ತಂಡದ 3 ಆಟಗಾರರಿಗೆ ಕೊರೊನಾವೈರಸ್

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ಹಾಗೂ ಇಂಗ್ಲೆಂಡ್ ವಿರುದ್ಧದ ಪ್ರವಾಸಕ್ಕೆ ಆಯ್ಕೆಮಾಡಿದ್ದ 20 ಸದಸ್ಯರಲ್ಲಿ ಶುಬ್ಮನ್ ಗಿಲ್ ಕೂಡ ಒಬ್ಬರು. ಗಿಲ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿಯೂ ಆಡಿದ್ದರು. ಆದರೆ ಆ ಬಳಿಕ ಅವರು ಗಾಯಗೊಂಡಿದ್ದಾರೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಅವರು ಹೊರಗುಳಿಯುವುದು ಖಚಿತವಾಗಿದೆ.

ಈ ಮಧ್ಯೆ ಗಿಲ್ ಗಾಯದಿಂದ ಚೇತರಿಸಿಕೊಳ್ಳಲು ಮತ್ತಷ್ಟು ಕಾಲಾವಕಾಶ ಬೇಕಾಗಬಹುದು ಎನ್ನಲಾಗುತ್ತಿದ್ದು ಹೀಗಾಗಿ ಐಪಿಎಲ್‌ನಿಂದಲೂ ಹೊರಗುಳಿಯುವುದು ಅನುವಾರ್ಯ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಈವರೆಗೂ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾ ಬಲಿಷ್ಠ ಆಡುವ ಬಳಗ ಹೆಸರಿಸಿದ ಲಕ್ಷ್ಮಣ್ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾ ಬಲಿಷ್ಠ ಆಡುವ ಬಳಗ ಹೆಸರಿಸಿದ ಲಕ್ಷ್ಮಣ್

ಐಪಿಎಲ್‌ನ ಉಳಿದ ಪಂದ್ಯಗಳಿಗೆ ಕೆಕೆಆರ್ ತಂಡದ ನಾಯಕ ಇಯಾನ್ ಮಾರ್ಗನ್ ಹಾಗೂ ವೇಗಿ ಪ್ಯಾಟ್ ಕಮ್ಮಿನ್ಸ್ ಭಾಗವಹಿಸುವುದು ಅನುಮಾನವಾಗಿದೆ. ಈ ಮಧ್ಯೆ ಶುಬ್ಮನ್ ಗಿಲ್ ಐಪಿಎಲ್‌ನಿಂದ ಹೊರಬಿದ್ದರೆ ಕೆಕೆಆರ್ ತಂಡಕ್ಕೆ ದೊಡ್ಡ ಆಘಾತ ಉಂಟಾಗುವುದರಲ್ಲಿ ಅನುಮಾನವಿಲ್ಲ. ಈ ಬಾರಿಯ ಐಪಿಎಲ್‌ನ ಮೊದಲಾರ್ಧದ ಪಂದ್ಯದಲ್ಲಿ ಕೆಕೆಆರ್ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿದ್ದು 7 ಸ್ಥಾನಕ್ಕೆ ಕುಸಿದಿದೆ. ಆಡಿದ ಏಳು ಪಂದ್ಯಗಳಲ್ಲಿ ಕೆಕೆಆರ್ ಕೇವಲ 2 ಗೆಲುವನ್ನು ಮಾತ್ರವೇ ಕಂಡಿದೆ. ಈ ಮಧ್ಯೆ ಸ್ಟಾರ್ ಆಟಗಾರರ ಅಲಭ್ಯತೆ ತಂಡವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲಿದೆ.

Story first published: Tuesday, July 6, 2021, 16:54 [IST]
Other articles published on Jul 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X