ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯ ಕ್ರಿಕೆಟ್‌ನ ಭವಿಷ್ಯ ಯಾರೆಂದು ಹೇಳಿದ ರೋಹಿತ್ ಶರ್ಮಾ

Shubman Gill is the future of Indian cricket, says Rohit Sharma

ಟೀಮ್ ಇಂಡಿಯಾ ಸೀಮಿತ ಓವರ್ಗಳ ಉಪನಾಯಕ ರೋಹಿತ್ ಶರ್ಮಾ ಇನ್ಸ್ಟಾಗ್ರಾಮ್‌ನಲ್ಲಿ ಮುಂಬೈ ತಂಡದ ಸಹ ಆಟಗಾರ ಹರ್ಭಜನ್ ಸಿಂಗ್ ಅವರ ಜೊತೆಗೆ ಸಂವಾದವನ್ನು ನಡೆಸಿದ್ರು. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಕ್ರಿಕೆಟ್ ಕುರಿತಾದ ಹಲವಾರು ವಿಚಾರಗಳ ಬಗ್ಗೆ ಮಾತುಗಳನ್ನಾಡಿದ್ದಾರೆ.

ಈ ನೇರ ಸಂವಾದ ಕಾರ್ಯಕ್ರಮದಲ್ಲಿ ಭಾರತೀಯ ಕ್ರಿಕೆಟ್‌ನ ಭವಿಷ್ಯದ ತಾರೆ ಯಾರು ಎಂಬುದನ್ನು ರೋಹಿತ್ ಶರ್ಮಾ ಹೇಳಿದ್ದಾರೆ. ಈ ಯುವ ಕ್ರಿಕೆಟಿಗ ಟೀಮ್ ಇಂಡಿಯಾದಲ್ಲಿ ಆದಷ್ಟು ಬೇಗನೆ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದ್ದಾರೆ ಎಂಬ ಭರವಸೆಯನ್ನು ರೋಹಿತ್ ಶರ್ಮಾ ವ್ಯಕ್ತಪಡಿಸಿದ್ದಾರೆ.

ಆಸಿಸ್ ಸರಣಿಯಲ್ಲಿ ಸವಾಲೆನಿಸಲಿರುವ ಸಂಗತಿಗಳನ್ನು ಹೇಳಿದ ರೋಹಿತ್ ಶರ್ಮಾಆಸಿಸ್ ಸರಣಿಯಲ್ಲಿ ಸವಾಲೆನಿಸಲಿರುವ ಸಂಗತಿಗಳನ್ನು ಹೇಳಿದ ರೋಹಿತ್ ಶರ್ಮಾ

ರೋಹಿತ್ ಶರ್ಮಾ ಹೇಳಿದ ಆ ಯುವ ಆಟಗಾರ ಬೇರೆ ಯಾರು ಅಲ್ಲ. ಅದು ಶುಭ್ಮನ್ ಗಿಲ್. ಅಂಡರ್19 ವಿಶ್ವಕಪ್‌ ಮೂಲಕ ಹೊರಬಂದ ಈ ಪ್ರತಿಭೆಗೆ ಟೀಮ್ ಇಂಡಿಯಾದ ಕದತಟ್ಟಿತ್ತಿದ್ದಾರೆ. ಆದರೆ ಆತ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಆದಷ್ಟು ಬೇಗನೆ ಸ್ಥಾನವನ್ನು ಖಾತ್ರಿ ಮಾಡಿಕೊಳ್ಳಲಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಇನ್ಸ್ಟಾಗ್ರಾಮ್ ಸಂವಾದದಲ್ಲಿ ಹರ್ಭಜನ್ ಸಿಂಗ್ ಮತ್ತು ರೋಹಿತ್ ಶರ್ಮಾ ಯುವ ಕ್ರಿಕೆಟಿಗರು ಕ್ರಿಕೆಟ್‌ನಲ್ಲಿ ಯಾವ ರೀತಿ ಮುಂದೆ ಬರಬೇಕು, ಅವರನ್ನು ಹಿರಿಯ ಆಟಗಾರರು ಯಾವ ರೀತಿ ಬೆಂಬಲಿಸಬೇಕು ಹಾಗೂ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲು ಯಾವ ರೀತಿ ತಯಾರಿ ನಡೆಸಬೇಕು ಎಂಬ ಕುರಿತಾಗಿ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.

ಬರ್ತ್‌ಡೇ ಬಾಯ್ ತೆಂಡೂಲ್ಕರ್ ಶತಕ ಬಾರಿಸಿ ಭಾರತ ಗೆಲ್ಲಿಸಿದ್ದ ದಿನವಿದುಬರ್ತ್‌ಡೇ ಬಾಯ್ ತೆಂಡೂಲ್ಕರ್ ಶತಕ ಬಾರಿಸಿ ಭಾರತ ಗೆಲ್ಲಿಸಿದ್ದ ದಿನವಿದು

ಶುಭ್ಮನ್ ಗಿಲ್ ಬಗ್ಗೆ ರೋಹಿತ್ ಶರ್ಮಾ ಮಾತನಾಡುತ್ತಾ ಆತ ಸರಾಗವಾಗಿ ಬ್ಯಾಟ್ ಮಾಡಬಲ್ಲ ಆಟಗಾರ ಎಂದು ಹೇಳಿದರು. ಆತ ಭಾರತದ ಭವಿಷ್ಯ, ಅವಕಾಶಗಳು ಸಿಕ್ಕಾಗ ಉತ್ತಮ ರನ್ ಗಳಿಸಿದರೆ ಆತ ಇನ್ನಷ್ಟು ವಿಶ್ವಾಸವನ್ನು ಪಡೆಯುತ್ತಾ, ಆದರೆ ಆತ ಭಾರತದ ಪರವಾಗಿ ಯಾವಾಗ ಆಡುತ್ತಾನೆ ಎಂಬುದು ಆತನಿಗೆ ತಿಳಿದಿಲ್ಲ, ದೇಸಿ ಕ್ರಿಕೆಟ್‌ನಲ್ಲಿ ಸದ್ಯ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾನೆ. ಬೇಗನೆ ಆತನನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

Story first published: Friday, April 24, 2020, 16:38 [IST]
Other articles published on Apr 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X