ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶುಭ್ಮನ್ ಗಿಲ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಕಾರಣ ಏನು?

Shubman Gills first-class average to earn India Test cap

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪೃಥ್ವಿ ಶಾ ಬದಲು ಶುಭ್ಮನ್ ಗಿಲ್ ಕಣಕ್ಕಿಳಿಯಲಿ ಎಂಬ ಅಭಿಪ್ರಾಯ ಕೆಲ ಪ್ರಮುಖ ವಿಶ್ಲೇಷಕರಿಂದ ಕೇಳಿ ಬಂದಿತ್ತು. ಪೃಥ್ವಿ ಶಾ ಮೊದಲ ಟೆಸ್ಟ್ ಪಂದ್ಯದಲ್ಲಿ ವೈಫಲ್ಯವಾದ ಬಳಿಕವಂತೂ ಈ ಕೂಗು ಮತ್ತಷ್ಟು ಹೆಚ್ಚಾಯಿತು. ಈಗ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತದ ತಂಡವನ್ನು ಪ್ರಕಟಗೊಳಿಸಲಾಗಿದ್ದು ಶುಭ್ಮನ್ ಗಿಲ್ ಚೊಚ್ಚಲ ಬಾರಿಗೆ ಟೀಮ್ ಇಂಡಿಯಾವನ್ನು ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಲು ಸಜ್ಜಾಗಿದ್ದಾರೆ.

ಹಾಗಾದರೆ ಶುಭ್ಮನ್ ಗಿಲ್ ಟೆಸ್ಟ್ ತಂಡಕ್ಕೆ ಆಯ್ಕೆಯಾಗಲು ಹಾಗೂ ಮಾಜಿ ಕ್ರಿಕೆಟಿಗರು ಹಾಗೂ ಕ್ರೀಡಾ ವಿಶ್ಲೇಷಕರಿಂದ ಬೆಂಬಲವನ್ನು ಪಡೆಯಲು ಕಾರಣವೇನು? ಯುವ ಆಟಗಾರನ ಮೇಲೆ ಟಷ್ಟೋಂದುಭರವಸೆಗೆ ಕಾರಣವೇನು ಎಂಬುದು ನೋಡಲು ಹೋದರೆ ದೊರೆಯುವ ಉತ್ತರ ಶುಭ್ಮನ್ ಗಿಲ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನೀಡಿದ ಪ್ರದರ್ಶನ.

ಅಜಿಂಕ್ಯ ರಹಾನೆ ಹಂಗಾಮಿ ನಾಯಕ ಸ್ಥಾನಕ್ಕೆ ಸಮರ್ಥ: ಸಚಿನ್ ತೆಂಡೂಲ್ಕರ್ಅಜಿಂಕ್ಯ ರಹಾನೆ ಹಂಗಾಮಿ ನಾಯಕ ಸ್ಥಾನಕ್ಕೆ ಸಮರ್ಥ: ಸಚಿನ್ ತೆಂಡೂಲ್ಕರ್

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ

ಅಂಡರ್ 19 ತಂಡದ ಮೂಲಕ ಕ್ರಿಕೆಟ್‌ನಲ್ಲಿ ಮಿಂಚಲು ಆರಂಭಿಸಿದ ಶುಭ್ಮನ್ ಗಿಲ್ ಬಳಿಕ ದೇಶೀಯ ಕ್ರಿಕೆಟ್‌ನಲ್ಲಿ ಪಂಜಾಬ್ ತಂಡವನ್ನು ಪ್ರತಿನಿಧಿಸಲು ಆರಂಭಿಸಿದರು. ಇಲ್ಲಿ ಶುಭ್ಮನ್ ಗಿಲ್ ಶ್ರೇಷ್ಠ ಮಟ್ಟದ ಪ್ರದರ್ಶನವನ್ನು ನೀಡಲು ಆರಂಭಿಸಿದರು. ಈ ಮೂಲಕ ಅವರು ತಾನು ಭವಿಷ್ಯದ ತಾರೆ ಎಂಬುದನ್ನು ಸಾರಿದರು.

ಟೀಮ್ ಇಂಡಿಯಾ ಕದ ತಟ್ಟಿದ್ದ ಗಿಲ್

ಟೀಮ್ ಇಂಡಿಯಾ ಕದ ತಟ್ಟಿದ್ದ ಗಿಲ್

ಶುಭ್ಮನ್ ಗಿಲ್ ಈವರೆಗೆ 23 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 7 ಶತಕ ಹಾಗೂ 11 ಅರ್ಧ ಶತಕವನ್ನು ಬಾರಿಸಿ ಮಿಂಚಿದ್ದು 2270 ರನ್ ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗಿಲ್ 68.78ರ ಸರಾಸರಿಯಲ್ಲಿ ರನ್ ಗಳಿಸಿದ್ದು ಅಂತಾರಾಷ್ಟ್ರೀಯ ಟೆಸ್ಟ್‌ಗೆ ಪದಾರ್ಪಣೆಗೂ ಮುನ್ನ ಪ್ರಥಮ ದರ್ಜೆ ಕ್ರಿಕೆಟ್‌ನ ಎರಡನೇ ಅತಿ ಹೆಚ್ವಿನ ರನ್ ಸರಾಸರಿ ಹೊಂದಿದ ಆಟಗಾರ ಎನಿಸಿದ್ದಾರೆ. 88.37ರ ಸರಾಸರಿಯಲ್ಲಿ ವಿನೋದ್ ಕಾಂಬ್ಳಿ ಅಂತಾರಾಷ್ಟ್ರೀಯ ಟೆಸ್ಟ್‌ಗೆ ಪದಾರ್ಪಣೆ ಮಾಡುವ ಮುನ್ ರನ್ ಗಳಿಸಿರುವುದು ಈವರೆಗಿನ ದಾಖಲೆಯಾಗಿದೆ.

ಏಕದಿನದ ಬಳಿಕ ಟೆಸ್ಟ್‌ನಲ್ಲೂ ಸ್ಥಾನ

ಏಕದಿನದ ಬಳಿಕ ಟೆಸ್ಟ್‌ನಲ್ಲೂ ಸ್ಥಾನ

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿನ ಅದ್ಭುತ ಪ್ರದರ್ಶನದ ಕಾರಣದಿಂದಾಗಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಅವಕಾಶವನ್ನು ಗಿಲ್ ಗಿಟ್ಟಿಸಿಕೊಂಡಿದ್ದಾರೆ. ಟೀಮ್ ಇಂಡಿಯಾದಲ್ಲೂ ಅದ್ಭುತ ಪ್ರದರ್ಶನವನ್ನು ನೀಡುವ ಮೂಲಕ ಉತ್ತಮ ಆರಂಭವನ್ನು ನೀಡುವ ಗುರಿ ಗಿಲ್ ಮುಂದಿದೆ.

Story first published: Friday, December 25, 2020, 19:20 [IST]
Other articles published on Dec 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X